ವಾಟ್ಸಾಪ್‌ ಬಳಕೆದಾರರಿಗೆ ಅಚ್ಚರಿಯ ಸುದ್ದಿ!..ಸದ್ಯದಲ್ಲೇ ಈ ಆಯ್ಕೆ ಬಳಕೆಗೆ ಲಭ್ಯ!

|

ಮೆಟಾ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಾಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ವಾಟ್ಸಾಪ್ ಈಗಾಗಲೇ ಸುರಕ್ಷತೆ ಮತ್ತು ಉಪಯುಕ್ತ ಫೀಚರ್ಸ್‌ಗಳಿಂದ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಇತ್ತೀಚಿಗೆ ವಿಡಿಯೋ ಕರೆ, ವಾಯಿಸ್‌ ಕರೆಯಲ್ಲಿಯೂ ಕೆಲವು ನೂತನ ಅಪ್‌ಡೇಟ್‌ಗಳನ್ನು ಪರಿಚಯಿಸಿದೆ. ಇದೀಗ ವಾಟ್ಸಾಪ್‌ (WhatsApp) ತನ್ನ ನೂತನ ಅಪ್‌ಡೇಟ್‌ನಲ್ಲಿ ಮತ್ತಷ್ಟು ಹೊಸ ಆಯ್ಕೆಗಳನ್ನು ಪರಿಚಯಿಸಲಿದ್ದು, ಆ ಪೈಕಿ ಗ್ರೂಪ್‌ ಸದಸ್ಯರ ಸಂಖ್ಯೆ ಹೆಚ್ಚಿಸಲಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ (WhatsApp) ಅಪ್ಲಿಕೇಶನ್‌ನಲ್ಲಿರುವ ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಅತ್ಯುತ್ತಮ ಅನಿಸಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸ ಆಯ್ಕೆ ಸೇರಿಕೊಳ್ಳಲಿದ್ದು, ಬಳಕೆದಾರರಿಗೆ ದೊಡ್ಡ ಗ್ರೂಪ್ ರಚಿಸಲು ಅವಕಾಶ ಲಭ್ಯವಾಗಲಿದೆ. ಮೊದಲು ವಾಟ್ಸಾಪ್‌ ಗ್ರೂಪ್‌ನಲ್ಲಿ 256 ಸದಸ್ಯರನ್ನು ಸೇರಿಸಲು ಅವಕಾಶ ಇತ್ತು, ಬಳಿಕ ವಾಟ್ಸಾಪ್‌ ಆ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಿದೆ. ಈಗ ಇನ್ನಷ್ಟು ಹೆಚ್ಚಿಸಲು ಮುಂದಾಗಿದ್ದು, ಈ ಸುದ್ದಿ ಗ್ರೂಪ್‌ ಅಡ್ಮಿನ್‌ಗಳಿಗೆ ಅಧಿಕ ಖುಷಿ ಎನಿಸಲಿದೆ. ಈ ಬ್ಗಗೆ ಇನ್ನಷ್ಟು ಮುಂದೆ ನೋಡೋಣ ಬನ್ನಿರಿ.

1024 ಸದಸ್ಯರ ಗ್ರೂಪ್‌ಗೆ ಅವಕಾಶ

1024 ಸದಸ್ಯರ ಗ್ರೂಪ್‌ಗೆ ಅವಕಾಶ

WaBetaInfo ನ ವರದಿಯ ಪ್ರಕಾರ, ವಾಟ್ಸಾಪ್‌ (WhatsApp) ಗ್ರೂಪ್‌ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ವರದಿ ಹೇಳುತ್ತದೆ. ಇನ್ನು ಮೊದಲು ವಾಟ್ಸಾಪ್‌ ಗ್ರೂಪ್‌ ಚಾಟ್‌ನಲ್ಲಿ 256 ಸದಸ್ಯರನ್ನು ಮಾತ್ರ ಸೇರಿಸಲು ಅವಕಾಶ ಇತ್ತು, ಆ ಬಳಿಕ ಆ ಮಿತಿಯನ್ನು 512 ಸದಸ್ಯರಿಗೆ ಹೆಚ್ಚಿಸಲಾಗಿದೆ. ಕೆಲ ತಿಂಗಳ ಹಿಂದೆ ವಾಟ್ಸಾಪ್‌ ವಾಯಿಸ್‌ ಕರೆಯಲ್ಲಿ 32 ಸದಸ್ಯರು ಭಾಗವಹಿಸುವ ಆಯ್ಕೆ ಸಹ ವಾಟ್ಸಾಪ್‌ ಸೇರಿಸಿದೆ.

ವಾಟ್ಸಾಪ್‌

ಹಾಗೆಯೇ ಮಾರ್ಕ್ ಜುಕರ್‌ಬರ್ಗ್ ವಾಟ್ಸಾಪ್‌ 'ಕಾಲ್ ಲಿಂಕ್ಸ್' (call links) ಎಂಬ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಹೊಸ ಫೀಚರ್ಸ್‌ ಹೆಸರೇ ಸೂಚಿಸುವಂತೆ, ಬಳಕೆದಾರರು ವಾಟ್ಸಾಪ್‌ ಕಾಲ್‌ ಲಿಂಕ್‌ ಅನ್ನು ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಈ ಲಿಂಕ್‌ ಮೂಲಕ ನೀವು ನಿಮ್ಮ ಕರೆಗೆ ಸೇರಿಸಲು ಬಯಸುವ ಬಳಕೆದಾರರಿಗೆ ಲಿಂಕ್‌ ಅನ್ನು ಶೇರ್‌ ಮಾಡಬಹುದಾಗಿದೆ.

ಕಾಲ್‌ ಲಿಂಕ್ಸ್‌

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ ಮೂಲಕ ಕಾಲ್‌ ಮಾಡುವುದು ಸಾಮಾನ್ಯವಾಗಿದೆ. ವಾಟ್ಸಾಪ್‌ ವಾಯ್ಸ್‌ ಕಾಲ್‌ ವೀಡಿಯೋ ಕಾಲ್‌ ಮಾಡುವುದು ಸುಲಭವಾಗಿದೆ. ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲ್‌ಲಿಂಕ್ಸ್‌ ಫೀಚರ್ಸ್‌ ಸೇರ್ಪಡೆ ಮಾಡಲಾಗ್ತಿದೆ. ಕಾಲ್‌ ಲಿಂಕ್ಸ್‌ (call links) ಮೂಲಕ ವಾಟ್ಸಾಪ್‌ ಕಾಲ್‌ ಸೇರುವಂತೆ ಇತರರಿಗೆ ಇನ್ವೈಟ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಗೂಗಲ್‌ ಮೀಟ್‌

ಈಗಾಗಲೇ ಜೂಮ್‌ ಮತ್ತು ಗೂಗಲ್‌ ಮೀಟ್‌ನಂತಹ ಅಪ್ಲಿಕೇಶನ್‌ಗಳು ಕಾಲ್‌ ಲಿಂಕ್ಸ್‌ (call links) ಫೀಚರ್ಸ್‌ ಅನ್ನು ಒಳಗೊಂಡಿವೆ. ಇದೇ ಮಾದರಿಯ ಫೀಚರ್ಸ್‌ ವಾಟ್ಸಾಪ್‌ ಸೇರುವುದು ವಾಟ್ಸಾಪ್‌ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಕಾಲ್‌ ಲಿಂಕ್ಸ್‌ ಫೀಚರ್ಸ್‌ ವಾಟ್ಸಾಪ್‌ ಕಾಲ್‌ ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಕಾಲ್‌ ಲಿಂಕ್ಸ್‌

ಇದರಿಂದ ಬಳಕೆದಾರರು ಆಡಿಯೊ ಮತ್ತು ವೀಡಿಯೊ ಕಾಲ್‌ ಮಾಡುವುದಕ್ಕಾಗಿ ಕಾಲ್‌ ಲಿಂಕ್ಸ್‌ ಶೇರ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಈ ಕಾಲ್‌ ಲಿಂಕ್ಸ್‌ (call links) ಅನ್ನು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್‌ ಮಾಡಬಹುದಾಗಿದೆ. ಇನ್ನು ಈ ಲಿಂಕ್ಸ್‌ ಮೇಲೆ ಸಿಂಗಲ್‌ ಟ್ಯಾಪ್‌ ಮಾಡುವ ಮೂಲಕ ವಾಟ್ಸಾಪ್‌ ಕಾಲ್‌ಗಳನ್ನು ಸೇರುವುದಕ್ಕೆ ಅವಕಾಶ ಸಿಗಲಿದೆ.

Best Mobiles in India

English summary
WaBetainfo informs that list of pending participants right within group info which will only be visible to group admins.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X