ವಾಟ್ಸಾಪ್‌ ಡೆಸ್ಕ್‌ಟಾಪ್‌ ಸೇರಿದ ಹೊಸ ಫೀಚರ್ಸ್‌! ಇದರಿಂದಾಗುವ ಉಪಯೋಗಗಳೇನು?

|

ವಾಟ್ಸಾಪ್‌ ಜಾಗತಿಕವಾಗಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿಯು ಕೂಡ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಬ್ಲರ್‌ ಟೂಲ್‌ ಅನ್ನು ಪರಿಚಯಿಸಿದೆ. ಇದು ಬಿಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿರಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಬ್ಲರ್‌ ಟೂಲ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾ ವರ್ಷನ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಇನ್ನು ಈ ಬ್ಲರ್‌ ಟೂಲ್‌ ಮೂಲಕ ಬಳಕೆದಾರರು ತಮ್ಮ ಇಮೇಜ್‌ಗಳನ್ನು ಬ್ಲರ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಅಂದರೆ ನೀವು ಇಮೇಜ್‌ಗಳನ್ನು ಶೇರ್‌ ಮಾಡುವಾಗ ಸೂಕ್ಷ್ಮ ಮಾಹಿತಿಯನ್ನು ಬ್ಲರ್‌ ಮಾಡಲು ಅನುವು ಮಾಡಿಕೊಡಲಿದೆ. ಹಾಗಾದ್ರೆ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಲಭ್ಯವಿರುವ ಹೊಸ ಬ್ಲರ್‌ ಟೂಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡೆಸ್ಕ್‌ಟಾಪ್‌

ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿ ಸೇರಿರುವ ಬ್ಲರ್ ಟೂಲ್‌ ಚಿತ್ರಗಳನ್ನು ಬ್ಲರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ವಾಟ್ಸಾಪ್‌ ಬ್ಲರ್‌ ಫೀಚರ್ಸ್‌ನಲ್ಲಿ ಎರಡು ರೀತಿಯ ಬ್ಲರ್‌ ಟೂಲ್‌ಗಳನ್ನು ಅಭಿವೃದ್ಧಿಪಡಿಸಿದೆ. ಆದ್ದರಿಂದ ನೀವು ಪರ್ಯಾಯ ಬ್ಲರ್‌ ಎಫೆಕ್ಟ್‌ ಅನ್ನು ಬಳಸಿಕೊಂಡು ನಿಮ್ಮ ಚಿತ್ರಗಳನ್ನು ಎಡಿಟ್‌ ಮಾಡಬಹುದು. ಇದಲ್ಲದೆ ಹೆಚ್ಚುವರಿಯಾಗಿ, ನೀವು ಬ್ಲರ್‌ ಗಾತ್ರವನ್ನು ಕೂಡ ಆಯ್ಕೆ ಮಾಡಬಹುದಾಗಿದೆ. ಅಂದರೆ ನೀವು ಬ್ಲರ್‌ ಮಾಡಲು ಬಯಸುವ ಇಮೇಜ್‌ನಲ್ಲಿನ ಹರಳಿನ ನಿಖರತೆಯೊಂದಿಗೆ ಎಫೆಕ್ಟ್‌ ಅನ್ನು ಅನ್ವಯಿಸಬಹುದು.

ವಾಟ್ಸಾಪ್‌ನಲ್ಲಿ

ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಫೋಟೋ ಅಥವಾ ಇಮೇಜ್‌ಗಳನ್ನು ಶೇರ್‌ ಮಾಡುವಾಗ ಕೆಲವು ಪ್ರಮುಖ ಭಾಗವನ್ನು ಮರೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಜನರು ಅಂತಹ ಭಾಗವನ್ನು ಕ್ರಾಪ್‌ ಮಾಡಿ ಸೆಂಡ್‌ ಮಾಡುತ್ತಾರೆ. ಆದರೆ ಇದೀಗ ಬ್ಲರ್‌ ಟೂಲ್‌ ಲಭ್ಯವಾಗುವುದರಿಂದ ನೀವು ಮರೆ ಮಾಡಲು ಬಯಸುವ ಸೂಕ್ಷ್ಮ ಮಾಹಿತಿಯನ್ನು ಬ್ಲರ್‌ ಮಾಡಬಹುದು. ಹೀಗೆ ಬ್ಲರ್‌ ಮಾಡಿದ ಇಮೇಜ್‌ ಅನ್ನು ಶೇರ್‌ ಮಾಡುವುದರಿಂದ ನಿಮ್ಮ ಸೂಕ್ಷ್ಮ ಮಾಹಿತಿಗೆ ಯಾವುದೇ ದಕ್ಕೆಯಾಗುವುದಿಲ್ಲ ಎನ್ನಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ಗಳಲ್ಲಿ ನಿಮ್ಮ ಆನ್‌ಲೈನ್ ಸ್ಟೇಟಸ್‌ ಹೈಡ್‌ ಮಾಡುವ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ಆನ್‌ಲೈನ್‌ ಸ್ಟೇಟಸ್‌ ಯಾರಿಗೂ ಕಾಣದಂತೆ ಹೈಡ್‌ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರಿಗೆ ನೀವು ಆನ್‌ಲೈನ್‌ ಸ್ಟೇಟಸ್‌ ಕಾಣದಂತೆ ಮರೆ ಮಾಡಬಹುದು. ಇದರಿಂದ ನೀವು ಆನ್‌ಲೈನ್‌ನಲ್ಲಿದ್ದರೂ ಕೂಡ ನಿಮ್ಮ ಆನ್‌ಲೈನ್‌ ಸ್ಟೇಸ್‌ ಯಾರಿಗೂ ಕಾಣವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ.

ವಾಟ್ಸಾಪ್‌ನಲ್ಲಿ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿರಿ.
ಹಂತ:3 ಇದೀಗ, ಸೆಟ್ಟಿಂಗ್ಸ್‌ >ಅಕೌಂಟ್‌> ಪ್ರೈವೆಸಿ ಆಯ್ಕೆಯನ್ನು ಟ್ಯಾಪ್ ಮಾಡಿರಿ.
ಹಂತ:4 ಇದರಲ್ಲಿ ನೀವು ಈಗ "ಲಾಸ್ಟ್‌ ಸೀನ್‌ ಆಂಡ್‌ ಆನ್‌ಲೈನ್" ಫೀಚರ್ಸ್‌ ಕಾಣಲಿದೆ.
ಇದರ ಮೇಲೆ ಟ್ಯಾಪ್ ಮಾಡಿ ನಂತರ Nobody ಮತ್ತು "Same as last seen" ಆಯ್ಕೆಯನ್ನು ಆರಿಸಿ. ಇದರಲ್ಲಿ ನೀವು "ಯಾರೂ ಇಲ್ಲ" ಅನ್ನು ಟ್ಯಾಪ್ ಮಾಡಿದಾಗ, ನೀವು ಪ್ರತಿಯೊಬ್ಬರಿಂದ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್‌ ಮಾಡಲು ಸಾಧ್ಯವಾಗಲಿದೆ. ನೀವು "My Contacts" ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು. ಇದರಿಂದ ನಂತರ ನಿಮ್ಮ ಆನ್‌ಲೈನ್ ಸ್ಟೇಟಸ್‌ ನಿಮ್ಮ ಕಂಟ್ಯಾಕ್ಟ್‌ಗಳಿಗೆ ಮಾತ್ರ ಲಭ್ಯವಾಗಲಿದೆ.

Best Mobiles in India

Read more about:
English summary
Whatsapp unveils image blur tool for desktop beta users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X