ಈ ಕೂಡಲೇ ನಿಮ್ಮ ವಾಟ್ಸಾಪ್‌ ಅನ್ನು ಅಪ್ಡೇಟ್‌ ಮಾಡಿರಿ!..ಕಾರಣ ಏನು?

|

ವಾಟ್ಸಾಪ್‌ ಅಪ್ಲಿಕೇಶನ್‌ ಬಳಸುವವರು ಈ ಸ್ಟೋರಿಯನ್ನು ಒದಲೇಬೇಕು. ಸ್ವತಃ ವಾಟ್ಸಾಪ್‌ ತನ್ನ ಬಳಕೆದಾರರಿಗೆ ತುರ್ತು ಸಂದೇಶ ನೀಡಿದ್ದು, ಈ ಸುದ್ದಿಯನ್ನು ನೀವು ಗಮನಿಸಲೇಬೇಕಿದೆ. ಮೆಟಾ-ಮಾಲೀಕತ್ವದ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ "ಕ್ರಿಟಿಕಲ್" ದುರ್ಬಲತೆಯ ವಿವರಗಳನ್ನು ಪ್ರಕಟಿಸಿದೆ. ಈ ದುರ್ಬಲತೆಗಳಿಗೆ ವಾಟ್ಸಾಪ್‌ನ ಹೊಸ ಆವೃತ್ತಿಯಲ್ಲಿ ಪ್ಯಾಚ್‌ ಮಾಡಲಾಗಿದ್ದು, ಹೊಸ ಆವೃತ್ತಿಯನ್ನು ಅಪ್ಡೇಟ್‌ ಮಾಡುವಂತೆ ಸೂಚಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನ ಹೊಸ ಆವೃತ್ತಿಯನ್ನು ನೀವು ಅಪ್ಡೇಟ್‌ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಏಕೆಂದರೆ ವಾಟ್ಸಾಪ್‌ ತನ್ನ ಹೊಸ ಆವೃತ್ತಿಯನ್ನು ಅಪ್ಡೇಟ್‌ ಮಾಡುವಂತೆ ಸೂಚಿಸಿದೆ. ಇದಕ್ಕೆ ತನ್ನ ಹಿಂದಿನ ಆವೃತ್ತಿಯಲ್ಲಿರುವ "ಕ್ರಿಟಿಕಲ್" ದುರ್ಬಲತೆಯ ವಿವರಗಳನ್ನು ಪ್ರಕಟಿಸಿದೆ. ಅಲ್ಲದೆ ಈ ದುರ್ಬಲತೆಗಳನ್ನು ಹೊಸ ಆವೃತ್ತಿಯಲ್ಲಿ ನವೀಕರಿಸಲಾಗಿದೆ ಎಂದು ಹೇಳಲಾಗಿದೆ. ಹಾಗಾದ್ರೆ ವಾಟ್ಸಾಪ್‌ ತುರ್ತಾಗಿ ಹೊಸ ಆವೃತ್ತಿಯನ್ನು ಅಪ್ಡೇಟ್‌ ಮಾಡಲು ಹೇಳಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಬಳಕೆದಾರರು ಇನ್ನು ಕೂಡ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರೆ ಹೊಸ ಆವೃತ್ತಿಗೆ ಅಪ್ಡೇಟ್‌ ಆಗಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದರೆ ನಿಮ್ಮ ಹಳೆಯ ಆವೃತ್ತಿಯಲ್ಲಿರುವ ದುರ್ಬಲತೆಯ ಕಾರಣದಿಂದ ಹ್ಯಾಕರ್‌ಗಳು ನಿಮ್ಮ ಅಕೌಂಟ್‌ ಹ್ಯಾಕ್‌ ಮಾಡುವ ಸಾದ್ಯತೆಯಿದೆ ಎಂದು ವಾಟ್ಸಾಪ್‌ ಹೇಳಿದೆ. ಅಲ್ಲದೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬಂದಿದ್ದ ದುರ್ಬಲತೆಗಳನ್ನು ಹೊಸ ಆವೃತ್ತಿಯಲ್ಲಿ ಪ್ಯಾಚ್‌ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

ವಾಟ್ಸಾಪ್‌

ವಾಟ್ಸಾಪ್‌ ಆಂಡ್ರಾಯ್ಡ್‌ನಲ್ಲಿ V2.22.16.12 ಗೆ ಮೊದಲು, ಆಂಡ್ರಾಯ್ಡ್‌ ಬ್ಯುಸಿನೆಸ್‌ ಆವೃತ್ತಿ v2.22.16.12 ಗೆ ಮೊದಲು, ಐಒಎಸ್‌ನಲ್ಲಿ v2.22.16.12 ಗೆ ಮೊದಲು, ಹಾಗೆಯೇ ಐಒಎಸ್‌ ಬ್ಯುಸಿನೆಸ್‌ ಆವೃತ್ತಿ v2.22.16.12 ಗೆ ಮೊದಲಿನ ಆವೃತ್ತಿ ಬಳಸುವವರು ಅಪ್ಡೇಟ್‌ ಆಗುವುದು ಅತಿ ಅವಶ್ಯಕವಾಗಿದೆ ಎನ್ನಲಾಗಿದೆ. ಯಾಕೆಂದರೆ ಹಿಂದಿನ ಆವೃತ್ತಿಯ ವಾಟ್ಸಾಪ್‌ನಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಶನ್‌ನಲ್ಲಿ, ಹ್ಯಾಕರ್‌ಗಳು ಯಾರೊಬ್ಬರ ಕಂಪ್ಯೂಟಿಂಗ್ ಡಿವೈಸ್‌ಗಳಿಗೆ ಪ್ರವೇಶಿಸುವುದಕ್ಕೆ ಅವಕಾಶವಿದೆ. ಇದರಿಂದ ಬಳಕೆದಾರರ ಎಲ್ಲಾ ವೈಯಕ್ತಿಕ ಡೇಟಾವನ್ನು ಪ್ರವೇಶಿಸಬಹುದಾಗಿದೆ ಎನ್ನಲಾಗಿದೆ.

ಆವೃತ್ತಿಯಲ್ಲಿರುವ

ಇನ್ನು ಈ ಹಿಂದಿನ ಆವೃತ್ತಿಯಲ್ಲಿರುವ ದುರ್ಬಲತೆಗಳನ್ನು ಹೊಸ ಆವೃತ್ತಿಯಲ್ಲಿ ಸರಿಪಡಿಸಿರುವುದಾಗಿ ವಾಟ್ಸಾಪ್‌ ಹೇಳಿದೆ. ಆದ್ದರಿಂದ, ಬಳಕೆದಾರರು ಅಪ್ಲಿಕೇಶನ್ ಅನ್ನು ತುರ್ತಾಗಿ ನವೀಕರಿಸಬೇಕು. ಇದಕ್ಕಾಗಿ ನೀವು ನಿಮ್ಮ ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ಆಟೋ ಅಪ್ಡೆಟ್‌ ಮಾಡಲು ಸಾಧ್ಯವಾಗದಿದ್ದರೆ ಪ್ಲೇ ಸ್ಟೋರ್‌ಗೆ ಹೋಗಿ ಅಪ್ಡೇಟ್‌ ಮಾಡುವುದು ಉತ್ತಮವಾಗಿದೆ. ವಾಟ್ಸಾಪ್‌ನಲ್ಲಿನ ದೊಷಗಳನ್ನು ಪರಿಹರಿಸುವುದಕ್ಕೆ ಇದು ಸೂಕ್ತವಾಗಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಸಾಮಾನ್ಯವಾಗಿ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಬಳಕೆದಾರರ ಮಾಹಿತಿ ಸುರಕ್ಷತೆಗಾಗಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಫೀಚರ್‌ ಹೊಂದಿದೆ. ಇದು ಬಳಕೆದಾರರು ಚಾಟ್ ಮಾಡುವಾಗ ಹೆಚ್ಚಿನ ಭದ್ರತೆ ನೀಡುತ್ತದೆ. ಇನ್ನು ವಾಟ್ಸಾಪ್‌ ಸಂಸ್ಥೆಯು ಬಳಕೆದಾರರು ಚಾಟ್‌ ಮಾಡುವಾಗ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಬಗ್ಗೆ ಹೈಲೈಟ್‌ ಮಾಡುತ್ತಲೇ ಸಾಗಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ಕಳುಹಿಸುವ ಎಲ್ಲ ಮೆಸೆಜ್‌ಗಳು ಎನ್‌ಕ್ರಿಪ್ಟ್ (encrypted) ಆಗಿರುತ್ತವೆ.

ಫೋಟೋಗಳು

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯಲ್ಲಿ ವಾಟ್ಸಾಪ್‌ನ ಎಲ್ಲಾ ಮೆಸೆಜ್‌ಗಳು, ಫೋಟೋಗಳು, ವಿಡಿಯೋಗಳು, ವಾಯಿಸ್‌ ನೋಟ್‌ಗಳು, ಡಾಕ್ಯುಮೆಂಟ್‌ಗಳು ಜೊತೆಗೆ ಸ್ಟೇಟಸ್ ಅಪ್‌ಡೇಟ್‌ಗಳು ಅಲ್ಲದೇ ವಾಯಿಸ್‌ ಮತ್ತು ವಿಡಿಯೋ ಕರೆಗಳು ಸುರಕ್ಷಿತವಾಗಿರುತ್ತವೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಲ್ಲಿ ಮೆಸೆಜ್‌ ಕಳುಹಿಸುವವರು ಮತ್ತು ಸ್ವೀಕರಿಸುವವರ ನಡುವೆ ಒಂದು ಚೈನ್‌ ವ್ಯವಸ್ಥೆ ನಿರ್ಮಾಣವಾಗಿರುತ್ತದೆ. ಇದ್ರಲ್ಲಿ ಇತರರು ಯಾವುದೇ ನಿರ್ದಿಷ್ಟ ಹಂತದಲ್ಲಿ ಎಂಟ್ರಿ ಕೊಡಲು ಸಾಧ್ಯವೇ ಇಲ್ಲ.

ಬಳಕೆದಾರರು

ಅಂದಹಾಗೇ ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯನ್ನು ಬಳಕೆದಾರರು ಆಕ್ಟಿವ್/ ಸಕ್ರಿಯ ಮಾಡುವ ಅಗತ್ಯ ಇರುವುದಿಲ್ಲ. ಬದಲಿಗೆ ವಾಟ್ಸಾಪ್‌ ಎಲ್ಲಾ ಖಾತೆಗಳಿಗೆ ಸ್ವಯಂ-ಸಕ್ರಿಯಗೊಳಿಸಿರುತ್ತದೆ. ಹೀಗಾಗಿ ಬಳಕೆದಾರರು ಮೆಸೆಜ್‌ ಸುರಕ್ಷತೆಗಾಗಿ ಯಾವುದೇ ಸೆಟ್ಟಿಂಗ್‌ ಮಾಡುವ ಅಗತ್ಯ ಇರುವುದಿಲ್ಲ. ಗಮನಿಸಬೇಕಾದ ಸಂಗತಿಯೆಂದರೆ, ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲು ಯಾವುದೇ ಮಾರ್ಗವಿಲ್ಲ. ಆದರಿಂದ ವಾಟ್ಸಾಪ್‌ನ ಹೊಸ ಆವೃತ್ತಿಯನ್ನು ಅಪ್ಡೇಟ್‌ ಆಗುವುದು ವಾಟ್ಸಾಪ್‌ ಬಳಕೆದಾರರಿಗೆ ಸುರಕ್ಷತೆಯ ದೃಷ್ಟಿಯಿಂದ ಒಳಿತಾಗಿದೆ.

Best Mobiles in India

English summary
WhatsApp users must immediately update the application

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X