ಬಳಕೆದಾರರಿಗೆ ಮತ್ತೊಂದು ಉಪಯುಕ್ತ ಆಯ್ಕೆ ಪರಿಚಯಿಸಿದ ವಾಟ್ಸಾಪ್‌! ವಿಶೇಷತೆ ಏನು?

|

ಮೆಟಾ ಒಡೆತನದ ವಾಟ್ಸಾಪ್‌ ಅಪ್ಲಿಕೇಶನ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ಸಂದೇಶ, ವೀಡಿಯೋ ಕಾಲ್‌, ವಾಯ್ಸ್‌ ಕಾಲ್‌ ಎಲ್ಲದಕ್ಕೂ ವಾಟ್ಸಾಪ್‌ ಅನ್ನು ಬಳಸುತ್ತಾರೆ. ಇನ್ನು ವಾಟ್ಸಾಪ್‌ ಕೂಡ ಬಳಕೆದಾರರ ಅನುಭವವನ್ನು ಉತ್ತಮಪಡಿಸುವುದಕ್ಕೆ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಅಪ್‌ಡೇಟ್‌ ಮಾಡಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ನಿರ್ದಿಷ್ಟ ಜನರಿಂದ ತಮ್ಮ ಕಂಟ್ಯಾಕ್ಟ್‌ಗಳನ್ನು ಹೈಡ್‌ ಮಾಡುವ ಅವಕಾಶ ಸಿಗಲಿದೆ. ಇದು ಬಳಕೆದಾರರು ತಾವು ಲಾಸ್ಟ್‌ ಸೀನ್‌ ಮತ್ತು ಸ್ಟೇಟಸ್‌ ಅಪ್ಡೇಟ್‌ಗಳನ್ನು ಇಷ್ಟಪಡದ ಜನರಿಂದ ಮರೆಮಾಡಲು ಸಾಧ್ಯವಾಗುತ್ತದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ನಿರ್ದಿಷ್ಟ ಜನರನ್ನು ಹೈಡ್‌ ಮಾಡುವ ಅವಕಾಶ ನೀಡಿದೆ. ನಿಮ್ಮ ಗೌಪ್ಯತೆಯನ್ನು ಆನ್‌ಲೈನ್‌ನಲ್ಲಿ ಇನ್ನಷ್ಟು ಸೆಕ್ಯುರ್‌ ಮಾಡುವುದಕ್ಕೆ ವಾಟ್ಸಾಪ್‌ ಮುಂದಾಗಿದೆ. ಇದಕ್ಕಾಗಿ ಹೊಸ ಪ್ರೈವೆಸಿ ಕಂಟ್ರೋಲ್‌ ಸೆಟ್ಟಿಂಗ್‌ಗಳಿಗೆ ಹೊಸ ಆಯ್ಕೆಗಳನ್ನು ಹೊರತರುತ್ತಿದ್ದೇವೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಇದರಿಂದ ನೀವು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಿಂದ ನಿಮ್ಮ ಪ್ರೊಫೈಲ್ ಫೋಟೋ ಮತ್ತು ಲಾಸ್ಟ್‌ ಸೀನ್‌ ಸ್ಟೇಟಸ್‌ ಅನ್ನು ಯಾರು ನೋಡಬಹುದು ಅನ್ನೊದನ್ನ ನೀವು ಆಯ್ಕೆ ಮಾಡಬಹುದು.

ವಾಟ್ಸಾಪ್‌ನಲ್ಲಿ

ಪ್ರಸ್ತುತ ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಲಾಸ್ಟ್‌ ಸೀನ್‌ ಮತ್ತು ಸ್ಟೇಟಸ್‌ ಅನ್ನು ನಿರ್ದಿಷ್ಟ ಜನರಿಂದ ಮರೆಮಾಡುವ ಆಯ್ಕೆಯನ್ನು ಹೊಂದಿರಲಿಲ್ಲ. ಬಳಕೆದಾರರು "ಎಲ್ಲರೂ", "ನನ್ನ ಸಂಪರ್ಕಗಳು" ಮತ್ತು "ಯಾರೂ ಇಲ್ಲ" ಎನ್ನುವ ಮೂರು ಆಯ್ಕೆಗಳನ್ನು ಮಾತ್ರ ಹೊಂದಿದ್ದರು. ಈಗ ಬಳಕೆದಾರರು "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಆಯ್ಕೆಯನ್ನು ಕೂಡ ಹೊಂದಿದ್ದಾರೆ. ಇದರಿಂದ ನೀವು ಬಯಸದ ನಿರ್ಧಿಚ್ಟ ಕಂಟ್ಯಾಕ್ಟ್‌ಗಳನ್ನು ನಿಮ್ಮ ಸ್ಟೇಟಸ್‌ ನೋಡದಂತೆ ತಡೆಯಬಹುದಾಗಿದೆ.

ವಾಟ್ಸಾಪ್‌

ಇದೀಗ ನೀವು ವಾಟ್ಸಾಪ್‌ ಸ್ಟೇಟಸ್‌ ಅನ್ನು ಪೋಸ್ಟ್ ಮಾಡುವ ಮೊದಲು "ಎಲ್ಲರೂ" ಆಯ್ಕೆಯನ್ನು ಆರಿಸಿದರೆ ನೀವು ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ ಅಥವಾ ಸ್ಟೇಟಸ್‌ ಅನ್ನು ಎಲ್ಲಾ ವಾಟ್ಸಾಪ್‌ ಬಳಕೆದಾರರು ನೋಡಬಹುದು.ಒಂದು ವೇಳೆ ನೀವು 'ಮೈ ಕಂಟ್ಯಾಕ್ಟ್ಸ್‌' ಅನ್ನು ಆಯ್ಕೆ ಮಾಡಿದರೆ, ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ ಅಥವಾ ಸ್ಟೇಟಸ್‌ ಅನ್ನು ನಿಮ್ಮ ಸಂಪರ್ಕಗಳಿಗೆ ಲಭ್ಯವಿರುತ್ತದೆ. ಅದೇ ರೀತಿ, ನೀವು 'ನನ್ನ ಸಂಪರ್ಕಗಳನ್ನು ಹೊರತುಪಡಿಸಿ, ಆಯ್ಕೆ ಮಾಡಿದರೆ ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ, ಅಥವಾ ಸ್ಟೇಟಸ್‌ ಅನ್ನು ನಿಮ್ಮ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಸಂಪರ್ಕಗಳಿಗೆ ಮಾತ್ರ ಲಭ್ಯವಿರುತ್ತದೆ. ಒಂದು ವೇಳೆ ನೀವು 'ಯಾರೂ ಇಲ್ಲ' ಆಯ್ಕೆ ಮಾಡಿದರೆ, ನಿಮ್ಮ ಲಾಸ್ಟ್‌ ಸೀನ್‌, ಪ್ರೊಫೈಲ್ ಫೋಟೋ, ಅಥವಾ ಸ್ಟೇಟಸ್‌ ಯಾರಿಗೂ ಕೂಡ ಕಾಣಿಸುವುದಿಲ್ಲ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಗ್ರೂಪ್‌ ಕಾಲ್‌ ಫೀಚರ್ಸ್‌ನಲ್ಲಿ ಹೊಸ ಅಪ್ಡೇಟ್‌ ಮಾಡಿದೆ. ಇದರಿಂದ ಗ್ರೂಪ್‌ ಕಾಲ್‌ ಹೋಸ್ಟ್‌ ಹೊಸ ಆಯ್ಕೆಯನ್ನು ಪಡೆಯಲಿದ್ದಾರೆ. ಗ್ರೂಪ್‌ ಕಾಲ್‌ ಹೋಸ್ಟ್ ಈಗ ತಮ್ಮನ್ನು ಮ್ಯೂಟ್ ಮಾಡಲು ಮರೆಯುವ ಜನರನ್ನು ಮ್ಯೂಟ್ ಮಾಡಲು ಸಾಧ್ಯವಾಗಲಿದೆ. ಈ ಹೊಸ ಅಪ್ಡೇಟ್‌ ಮೂಲಕ ವಾಟ್ಸಾಪ್‌ ಗ್ರೂಪ್‌ ಕಾಲ್‌ ಫೀಚರ್ಸ್‌ ಹೆಚ್ಚು ಉಪಯುಕ್ತವಾಗಲಿದೆ.

ಮ್ಯೂಟ್

ಇದರ ಮೂಲಕ ನಿರ್ದಿಷ್ಟ ಜನರನ್ನು ಗ್ರೂಪ್‌ ಕಾಲ್‌ನಲ್ಲಿ ಮ್ಯೂಟ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಆದರೆ ಮ್ಯೂಟ್ ಮಾಡುವ ಆಯ್ಕೆಯನ್ನು ಗ್ರೂಪ್ ಅಡ್ಮಿನ್‌ಗೆ ಮಾತ್ರ ನೀಡಲಾಗುತ್ತದೆಯೇ ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಇದರಿಂದ ನಿಮಗೆ ಗ್ರೂಪ್‌ ಕಾಲ್‌ ಸಮಯದಲ್ಲಿ ಮ್ಯೂಟ್‌ ಮಾಡದೆ ಕಿರಕಿರಿ ನೀಡುವವರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಗ್ರೂಪ್‌ ಕಾಲ್‌ನ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವುದಕ್ಕೆ ಇದು ಸಹಾಯಕವಾಗಲಿದೆ.

ವಾಟ್ಸಾಪ್‌

ಇನ್ನು ಮೆಟಾ ಒಡೆತನದ ವಾಟ್ಸಾಪ್‌ ಈ ಹಿಂದೆ ಕೇವಲ 8 ಮಂದಿಗೆ ಮಾತ್ರ ಗ್ರೂಪ್‌ಕಾಲ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ಗ್ರೂಪ್‌ ಕಾಲ್‌ನಲ್ಲಿ 32 ಸದಸ್ಯರನ್ನು ಸೇರಿಸುವ ಅವಕಾಶವನ್ನು ನೀಡಿದೆ. ಇದರಿಂದ ಹೆಚ್ಚಿನ ಮಂದಿ ಗ್ರೂಪ್‌ಕಾಲ್‌ನಲ್ಲಿ ಸೇರಿದಾಗ ಮ್ಯೂಟ್‌ ಮಾಡದೆ ಶಬ್ದ ಮಾಡುವುದರಿಂದ ಬೇರೆಯವರು ಮಾತನಾಡಲು ಸಾದ್ಯವಾಗುವುದಿಲ್ಲ. ಆದರಿಂದ ಮ್ಯೂಟ್‌ ಆಯ್ಕೆಯನ್ನು ವಾಟ್ಸಾಪ್‌ ನೀಡಿದೆ. ಇನ್ನು ಗ್ರೂಪ್‌ ಕಾಲ್‌ ಹಿಸ್ಟರಿ ಕಾಲ್ಸ್‌ ಟ್ಯಾಬ್‌ನಲ್ಲಿ ಕಾಣಿಸಲಿದೆ. ಕರೆಯಿಂದ ಪ್ರತ್ಯೇಕವಾಗಿ ಭಾಗವಹಿಸುವವರನ್ನು ವೀಕ್ಷಿಸಲು ನೀವು ಕಾಲ್‌ ಹಿಸ್ಟರಿ ಮೂಲಕ ಟ್ಯಾಪ್‌ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಗ್ರೂಪ್‌ ಕಾಲ್‌ ಮಾಡುವುದಕ್ಕೆ ಹೀಗೆ ಮಾಡಿ:

ಹಂತ:1 ಮೊದಲಿಗೆ ನೀವು ಗ್ರೂಪ್‌ ಕಾಲ್‌ ಮಾಡಲು ಬಯಸುವ ಗ್ರೂಪ್‌ ಚಾಟ್ ತೆರೆಯಿರಿ.
ಹಂತ:2 ನಿಮ್ಮ ಗ್ರೂಪ್‌ನಲ್ಲಿ 32 ಕ್ಕಿಂತ ಹೆಚ್ಚು ಭಾಗವಹಿಸುವವರನ್ನು ಹೊಂದಿದ್ದರೆ ನೀವು ಗ್ರೂಪ್‌ ಕಾಲ್‌ ಆಯ್ಕೆಯನ್ನು ಟ್ಯಾಪ್ ಮಾಡಬಹುದು
ಹಂತ:3 ಇದರಲ್ಲಿ 33 ಕ್ಕಿಂತ ಹೆಚ್ಚು ಭಾಗವಹಿಸುವವರು ಇದ್ದರೆ, ಕರೆಗೆ ಮೊದಲು ಉತ್ತರಿಸುವ ಏಳು ಜನರು ಕರೆಗೆ ಸೇರಬಹುದು.
ಹಂತ:4 ನೀವು ಕರೆಗೆ ಸೇರಿಸಲು ಬಯಸುವ ಸಂಪರ್ಕಗಳನ್ನು ಸಹ ನೀವು ಕಾಣಬಹುದು, ಇದರಲ್ಲಿ ವಾಯ್ಸ್‌ಕಾಲ್‌ ಟ್ಯಾಪ್ ಮಾಡಬೇಕಾಗುತ್ತದೆ.

ವಾಟ್ಸಾಪ್‌

ಇದಲ್ಲದೆ ಇತ್ತೀಚಿಗೆ ವಾಟ್ಸಾಪ್‌ ಗ್ರೂಪ್‌ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ವಾಟ್ಸಾಪ್‌ ಗ್ರೂಪ್‌ ಅಡ್ಮೀನ್‌ ಒಂದು ಗುಂಪಿಗೆ 512 ರ ವರೆಗೆ ಭಾಗವಹಿಸುವವರನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಈಗಾಗಲೇ ಆಂಡ್ರಾಯ್ಡ್‌, iOS ಮತ್ತು ಡೆಸ್ಕ್‌ಟಾಪ್ ಆಧಾರಿತ ಅಪ್ಲಿಕೇಶನ್‌ಗಳ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಒಂದು ತಿಂಗಳು ಕಳೆದ ನಂತರ, ಈ ಆಯ್ಕೆಯನ್ನು ಜಗತ್ತಿನಾದ್ಯಂತ ತನ್ನ ಎಲ್ಲಾ ಬಳಕೆದಾರರಿಗೆ ಹೊರತರಲಾಗುವುದು ಎಂದು ಹೇಳಲಾಗಿದೆ. ನೀವು ಕೂಡ ನಿಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಹೊಸ ಆಯ್ಕೆಯನ್ನು ಪರಿಶೀಲಿಸಲು ನ್ಯೂ ಗ್ರೂಪ್‌ ಕ್ರಿಯೆಟ್‌ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರಿಂದ ಹೊಸ ಗ್ರೂಪ್‌ ಕ್ರಿಯೆಟ್‌ ಮಾಡಲು ಹೋದಾಗ ನೀವು ಗ್ರೂಪಿಗೆ ಎಷ್ಟು ಮಂದಿಯನ್ನು ಸೇರಿಸಬಹುದು ಎನ್ನುವ ಆಯ್ಕೆ ಕಾಣಲಿದೆ. ಒಂದು ವೇಳೆ ನೀವು 512 ಸದಸ್ಯರನ್ನು ಸೇರಿಸಬಹುದು ಎನ್ನುವ ಆಯ್ಕೆಯನ್ನು ನೋಡಿದರೆ, ಹೊಸ ಅಪ್ಡೇಟ್‌ ಅನ್ನು ನೀವು ಸ್ವೀಕರಿಸಿದ್ದೀರಿ ಎಂದರ್ಥ.

Best Mobiles in India

English summary
WhatsApp was spotted working on a feature to hide last seen from specific contacts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X