ವಾಟ್ಸಾಪ್‌ ವೆಬ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌... ಇನ್ಮುಂದೆ ನಿಮ್ಮ ಗೌಪ್ಯತೆ ಬಗ್ಗೆ ಚಿಂತಿಸಬೇಡಿ

|

ವಾಟ್ಸಾಪ್‌ನಲ್ಲಿ ಈಗಾಗಲೇ ಹಲವಾರು ರೀತಿಯ ಫೀಚರ್ಸ್‌ ಗಳನ್ನು ನೀಡಲಾಗಿದೆ. ಈ ಕಾರಣಕ್ಕೆ ಜಗತ್ತಿನ ಹಲವರು ಈ ಪ್ಲಾಟ್‌ಫಾರ್ಮ್‌ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರ ನಡುವೆ ಕಾಲಕಾಲಕ್ಕೆ ತಕ್ಕಂತೆ ಭಿನ್ನ ವಿಭಿನ್ನ ಫೀಚರ್ಸ್‌ಗಳನ್ನು ಪರಿಚಯಿಸಿಕೊಂಡು ಬಂದಿರುವ ವಾಟ್ಸಾಪ್‌ ಇದೀಗ ವಾಟ್ಸಾಪ್‌ ವೆಬ್‌ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ.

ವಾಟ್ಸಾಪ್‌

ಹೌದು, ನೀವೇನಾದರೂ ವಾಟ್ಸಾಪ್‌ ವೆಬ್‌ ಬಳಕೆ ಮಾಡುತ್ತಿದ್ದರೆ ಈ ಹೊಸ ಫೀಚರ್ಸ್‌ ನಿಮಗೆ ಅಗತ್ಯವೆನಿಸಲಿದೆ. ಯಾಕೆಂದರೆ ಈ ಹಿಂದೆ ಆಫೀಸ್‌ ನಲ್ಲೋ ಅಥವಾ ಮನೆಯಲ್ಲೋ ಒಮ್ಮೆ ವಾಟ್ಸಾಪ್‌ ವೆಬ್‌ ಓಪನ್ ಮಾಡಿದ ನಂತರ ಅದು ಹಾಗೇ ಇರುತ್ತಿತ್ತು. ಅಕಸ್ಮಾತ್‌ ಬಳಕೆದಾರರು ಏನಾದರೂ ಆ ಡಿವೈಸ್‌ ಬಿಟ್ಟು ಕೆಲ ಸಮಯ ಹೊರಗೆ ಬಂದರೆ, ಬೇರೆಯವರು ವಾಟ್ಸಾಪ್‌ ಸಂದೇಶವನ್ನು ಓದಬಹುದಿತ್ತು. ಈ ಸಮಸ್ಯೆ ತಪ್ಪಿಸಲು ವಾಟ್ಸಾಪ್‌ ಶೀಘ್ರದಲ್ಲೇ ಸ್ಕ್ರೀನ್ ಲಾಕ್ ಫೀಚರ್ಸ್ ನೀಡುವ ಬಗ್ಗೆ ಘೋಷಣೆ ಮಾಡಿದೆ. ಹಾಗಿದ್ರೆ, ಇದು ಹೇಗೆಲ್ಲಾ ಕಾರ್ಯನಿರ್ವಹಿಸಲಿದೆ ಎಂಬುದನ್ನು ಈ ಲೇಖನದಲ್ಲಿ ಸವಿವರವಾಗಿ ವಿವರಿಸಲಾಗಿದೆ ಓದಿರಿ.

ವಾಟ್ಸಾಪ್‌ ವೆಬ್‌ನಲ್ಲಿ ಸ್ಕ್ರೀನ್ ಲಾಕ್ ಫೀಚರ್ಸ್‌

ವಾಟ್ಸಾಪ್‌ ವೆಬ್‌ನಲ್ಲಿ ಸ್ಕ್ರೀನ್ ಲಾಕ್ ಫೀಚರ್ಸ್‌

ಈ ಫೀಚರ್ಸ್ ‌ವಾಟ್ಸಾಪ್‌ ಸರಣಿಯಾಗಿ ನೀಡುತ್ತಿರುವ ಫೀಚರ್ಸ್‌ಗಳ ಒಂದು ಭಾಗವಾಗಿದ್ದು, ಈ ಮೂಲಕ ಬಳಕೆದಾರರು ಹೆಚ್ಚಿನ ಗೌಪ್ಯತೆ ಕಾಪಾಡಿಕೊಳ್ಳಬಹುದಾಗಿದೆ. ಬಳಕೆದಾರರು ಪ್ರತಿ ಬಾರಿಯೂ ಏನಾದರೂ ಟ್ಯಾಬ್ ಬದಲಾಯಿಸಿದಾಗ ವಾಟ್ಸಾಪ್‌ ವೆಬ್‌ನಲ್ಲಿನ ಸ್ಕ್ರೀನ್ ಲಾಕ್ ಟ್ರಿಗ್ಗರ್ ಆಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಫೀಚರ್ಸ್‌ ಅನ್ನು ಶೀಘ್ರದಲ್ಲೇ ಬಳಕೆದಾರರು ಪಡೆಯಬಹುದು ಎಂದು ವಾಟ್ಸಾಪ್‌ ಹೇಳಿದೆ.

ಯಾಕೆ ಈ ನಿರ್ಧಾರ ?

ಯಾಕೆ ಈ ನಿರ್ಧಾರ ?

ಪ್ರಮುಖವಾಗಿ ಹೆಚ್ಚಿನ ಜನರು ಈ ವಾಟ್ಸಾಪ್‌ ವೆಬ್‌‌ ಬಳಕೆ ಮಾಡುತ್ತಿದ್ದನ್ನು ಮನಗಂಡಿರುವ ವಾಟ್ಸಾಪ್‌ ಸಂಸ್ಥೆ ಅವರ ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಸ್ಕ್ರೀನ್ ಲಾಕ್ ಫೀಚರ್ಸ್‌ ವಾಟ್ಸಾಪ್‌ ವೆಬ್ ಟ್ಯಾಬ್‌ಗೆ ಪ್ರವೇಶವನ್ನು ನಿರ್ಬಂಧಿಸಲು ಪಾಸ್‌ವರ್ಡ್ ಅನ್ನು ಹೊಂದಿಸಬಹುದು ಎಂದು ತಿಳಿದುಬಂದಿದೆ.

ಯಾವಾಗಲಿಂದ ಈ ಸೇವೆ?

ಯಾವಾಗಲಿಂದ ಈ ಸೇವೆ?

ಈ ಫೀಚರ್ಸ್‌ ಬಳಕೆದಾರರಿಗೆ ಲಭ್ಯವಾದ ಮೇಲೆ ಯಾವುದೇ ಗೌಪ್ಯತೆ ಉಲ್ಲಂಘನೆಯ ಬಗ್ಗೆ ಬಳಕೆದಾರರು ಚಿಂತಿಸದೆ ಆರಾಮವಾಗಿ ತಮ್ಮ ಇತರೆ ಕೆಲಸದಲ್ಲಿ ನಿರತರಾಗಬಹುದು. ಈ ಫೀಚರ್ಸ್‌ ಅನ್ನು ಈಗಾಗಲೇ ಅಭಿವೃದ್ಧಿ ಹಂತದಲ್ಲಿ ಇರಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬೀಟಾ ಪರೀಕ್ಷಕರಿಗೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಕಾರ್ಯನಿರ್ವಹಣೆ ಹೇಗೆ ?

ಕಾರ್ಯನಿರ್ವಹಣೆ ಹೇಗೆ ?

ಇನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ವೆಬ್ ಸ್ಕ್ರೀನ್ ಲಾಕ್ ಅನ್ನು ಆಟೋಮ್ಯಾಟಿಕ್‌ ಆಗಿ ಸಕ್ರಿಯವಾಗುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಯಾಕೆಂದರೆ ಇದು ಆಯ್ಕೆಯ ವಿಷಯವಾಗಿದೆ. ಪರಿಣಾಮ ನಿಮಗೆ ಬೇಕೆಂದರೆ ಇದನ್ನು ಬಳಕೆ ಮಾಡಬಹುದು, ಇಲ್ಲವಾದರೆ ಹಳೆಯ ಆವೃತ್ತಿಯನ್ನೇ ಬಳಸಬಹುದು. ಇನ್ನು ನೀವು ಹಸ್ತಚಾಲಿತವಾಗಿ ಇದನ್ನು ಸಕ್ರಿಯಗೊಳಿಸಿದ ಮೇಲೆ ಪಾಸ್‌ವರ್ಡ್‌ ರಚಿಸುವುದು ಕಡ್ಡಾಯವಾಗಿದೆ.

ಪಾಸ್‌ವರ್ಡ್‌ ಮರೆಯಬೇಡಿ..

ಪಾಸ್‌ವರ್ಡ್‌ ಮರೆಯಬೇಡಿ..

ನೀವು ಈ ಪ್ರಕ್ರಿಯೆಯಲ್ಲಿ ಒಮ್ಮೆ ಸೆಟ್‌ ಮಾಡಿದ ಪಾಸ್‌ವರ್ಡ್‌ ಅನ್ನು ಮರೆತರೆ ಮತ್ತೆ ತ್ರಾಸದ ಕೆಲಸ ಮಾಡಬೇಕಿದೆ. ಯಾಕೆಂದರೆ ವಾಟ್ಸಾಪ್‌ನಲ್ಲಿ ಮತ್ತೆ ಹೊಸದಾಗಿ ಲಾಗ್‌ ಇನ್‌ ಪ್ರಕ್ರಿಯೆಗಳನ್ನು ಶುರು ಮಾಡಬೇಕಾಗುತ್ತದೆ. ಅಂದರೆ, ಲಾಗ್ ಇನ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿನ ಆಪ್‌ ಅನ್ನು ಬಳಸಿಕೊಂಡು ಅಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ತಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿ ಬಾರಿ ಟ್ಯಾಬ್‌ಗಳನ್ನು ಬದಲಾಯಿಸಿದಾಗ ಅಥವಾ ಹಸ್ತಚಾಲಿತವಾಗಿ ಲಾಕ್ ಮಾಡಿದಾಗ ಈ ಫೀಚರ್ಸ್‌ ಕಾರ್ಯನಿರ್ವಹಿಸುತ್ತದ್ದಯೇ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಯಾರೂ ಸಹ ನಿಮ್ಮ ವಾಟ್ಸಾಪ್‌ ವೆಬ್‌ ಓಪನ್‌ ಮಾಡಲು ಸಾಧ್ಯವಿಲ್ಲ

ಯಾರೂ ಸಹ ನಿಮ್ಮ ವಾಟ್ಸಾಪ್‌ ವೆಬ್‌ ಓಪನ್‌ ಮಾಡಲು ಸಾಧ್ಯವಿಲ್ಲ

ಹೌದು, ಈ ಫೀಚರ್ಸ್‌ನಿಂದ ಪ್ರಮುಖವಾಗಿ ಆಗುವ ಲಾಭ ಇದು. ನೀವು ಒಮ್ಮೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್‌ ಓಪನ್‌ ಮಾಡಿ ಎಲ್ಲೋ ಹೊರಗೆ ಹೋಗಿದ್ದರೆ ಕೆಲವರು ಕುತೂಹಲಕ್ಕಾದರೂ ನಿಮ್ಮ ವಾಟ್ಸಾಪ್‌ ಓಪನ್‌ ಮಾಡಲು ಮುಂದಾಗುತ್ತಾರೆ. ಇಂತಹ ವ್ಯವಸ್ಥೆಗಳಿಗೆ ಇನ್ಮುಂದೆ ಕಡಿವಾಣ ಬೀಳಲಿದೆ.

Best Mobiles in India

English summary
WhatsApp Web may get soon screen lock feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X