ಇನ್ಮುಂದೆ ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡಲ್ಲ!

|

ಹೊಸ ವರ್ಷಕ್ಕೂ ಮುನ್ನ ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ವಾಟ್ಸಾಪ್‌ ಬಿಗ್‌ ಶಾಕ್‌ ನೀಡಿದೆ. ಇನ್ಮುಂದೆ ಸ್ಯಾಮ್‌ಸಂಗ್‌ ಕಂಪೆನಿಯ ಈ ಏಳು ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಾಪ್‌ ಬೆಂಬಲಿಸುವುದಿಲ್ಲ ಎಂದು ಹೇಳಲಾಗಿದೆ. ಇದರಲ್ಲಿ 2011, 2012 ಮತ್ತು 2013 ರಲ್ಲಿ ಬಿಡುಗಡೆಯಾದ ಏಳು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿವೆ. ಈ ಮೂಲಕ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಬಳಸುವವರು ಶೀಘ್ರದಲ್ಲೇ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಹೌದು, ಸ್ಯಾಮ್‌ಸಂಗ್‌ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಬೆಂಬಲಿಸುವುದಿಲ್ಲ ಎಂದು ವರದಿಯಾಗಿದೆ. ಇನ್ನು ಈ ವಾಟ್ಸಾಪ್‌ ಕಂಪನಿಯು ಕನಿಷ್ಠ ಆಂಡ್ರಾಯ್ಡ್‌ 5.0 (Lollipop) ಅನ್ನು ಚಾಲನೆ ಮಾಡದ ಸ್ಮಾರ್ಟ್‌ಫೋನ್‌ಗಳನ್ನು ಬೆಂಬಲಿಸುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಕಂಪೆನಿಯ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ವಾಟ್ಸಾಪ್‌ ಬೆಂಬಲಿಸುವುದಿಲ್ಲ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ 2011, 2012 ಮತ್ತು 2013 ರಲ್ಲಿ ಬಿಡುಗಡೆಯಾದ ಏಳು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುದಿಲ್ಲ ಎನ್ನಲಾಗಿದೆ. ಇದರಲ್ಲಿ ಗ್ಯಾಲಕ್ಸಿ ಏಸ್‌ 2, ಗ್ಯಾಲಕ್ಸಿ ಕೋರ್‌, ಗ್ಯಾಲಕ್ಸಿ S2, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ ಟ್ರೆಂಡ್‌ II, ಗ್ಯಾಲಕ್ಸಿ ಟ್ರೆಂಡ್‌ ಲೈಟ್‌ ಮತ್ತು ಗ್ಯಾಲಕ್ಸಿ ಎಕ್ಸ್‌ಕವರ್‌ 2 ಫೋನ್‌ಗಳು ಸೇರಿವೆ. ಈ ಎಲ್ಲಾ ಡಿವೈಸ್‌ಗಳನ್ನು ಆಂಡ್ರಾಯ್ಡ್‌ 4.x ಗೆ ಅಪ್‌ಗ್ರೇಡ್ ಮಾಡಲಾಗಿದೆ. ನಂತರದ ದಿನಗಳಲ್ಲಿ ಈ ಫೋನ್‌ಗಳು ಯಾವುದೇ ಆಪರೇಟಿಂಗ್‌ ಸಿಸ್ಟಂ ಪಡೆದಿಲ್ಲ.

ವಾಟ್ಸಾಪ್‌

ಡಿಸೆಂಬರ್ 31, 2022 ನಂತರ ವಾಟ್ಸಾಪ್‌ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಬಳಸುವ ಬಳಕೆದಾರರು ಇನ್ಮುಂದೆ ಬೇರೆ ಸ್ಮಾರ್ಟ್‌ಫೋನ್‌ ಬಳಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇನ್ಮುಂದೆ ವಾಟ್ಸಾಪ್‌ ಬೆಂಬಲಿಸದ ಆಪಲ್‌, HTC, ಹುವಾವೇ, ಲೆನೊವೊ, ಎಲ್‌ಜಿ ಮತ್ತು ಸೋನಿ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಈ ಫೋನ್‌ಗಳು ಕೂಡ ಸೇರಿವೆ.

ವಾಟ್ಸಾಪ್‌

ಸದ್ಯ ಹಳೆಯ ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಸುತ್ತರುವ ಬಳಕೆದಾರರಿಗೆ ವಾಟ್ಸಾಪ್‌ ಈಗಾಗಲೇ ಹಲವು ಸಂದೇಶಗಳನ್ನು ಕಳುಹಿಸಿದೆ. ಎಚ್ಚರಿಕೆ ಸಂದೇಶಗಳನ್ನು ನೀಡುವ ಮೂಲಕ ಕೂಡಲೇ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್‌ ಮಾಡಿಕೊಳ್ಳುವಂತೆ ಹೇಳಿದೆ. ಈ ರೀತಿಯ ಡಿವೈಸ್‌ಗಳಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಿಂದ ರಕ್ಷಿಸಲು ಅಗತ್ಯವಾದ ಸುರಕ್ಷತೆಗಾಗಿ ವಾಟ್ಸಾಪ್‌ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಆಪ್‌ ಬೆಂಬಲಿಸುವುದನ್ನು ನಿಲ್ಲಿಸುವ ಮೊದಲು ಅವರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

2023ರಲ್ಲಿ ವಾಟ್ಸಾಪ್‌ ಬೆಂಬಲಿಸದ ಐಫೋನ್‌ಗಳು

2023ರಲ್ಲಿ ವಾಟ್ಸಾಪ್‌ ಬೆಂಬಲಿಸದ ಐಫೋನ್‌ಗಳು

ಐಫೋನ್ 5
ಐಫೋನ್ 5c
ಆಪಲ್‌ ಐಫೋನ್ SE (16GB)
ಆಪಲ್‌ ಐಫೋನ್ SE (32GB)
ಆಪಲ್‌ ಐಫೋನ್ 6S (64GB)
ಆಪಲ್‌ ಐಫೋನ್6S ಪ್ಲಸ್‌ (128 GB)
ಆಪಲ್‌ ಐಫೋನ್ 6S ಪ್ಲಸ್‌ (16GB)
ಆಪಲ್‌ ಐಫೋನ್ 6S ಪ್ಲಸ್‌ (32GB)
ಆಪಲ್‌ ಐಫೋನ್ 6S ಪ್ಲಸ್‌ (64GB)
ಆಪಲ್‌ ಐಫೋನ್ SE (64GB)
ಆಪಲ್‌ ಐಫೋನ್6S (128 GB)
ಆಪಲ್‌ ಐಫೋನ್6s (16gb)
ಆಪಲ್‌ ಐಫೋನ್ 6S (32GB)

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಇನ್ನು ಅನೇಕ ಉಪಯುಕ್ತ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ವಾಟ್ಸಾಪ್‌ ತನ್ನ iOS 22.24.0.79 ಅಪ್‌ಡೇಟ್‌ನಲ್ಲಿ ಹೊಸ ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ ಪರಿಚಯಿಸಿದೆ. ಇದು ಐಒಎಸ್‌ ಬೀಟಾ ಪರೀಕ್ಷಕರು ಮಾತ್ರ ಪ್ರವೇಶಿಸಲು ಅವಕಾಶ ನೀಡಿದೆ. ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಈಗಾಗಲೇ ವೀಡಿಯೊ ಕಾಲ್‌ನಲ್ಲಿ ಅನೇಕ ಫೀಚರ್ಸ್‌ ಪರಿಚಯಿಸಿರುವ ವಾಟ್ಸಾಪ್‌ ಪಿಕ್ಚರ್‌ ಇನ್‌ ಪಿಕ್ಚರ್‌ ಮೋಡ್‌ ಮೂಲಕ ಇನ್ನಷ್ಟು ಉತ್ತಮ ಅನುಭವ ನೀಡಲು ಮುಂದಾಗಿದೆ.

Best Mobiles in India

English summary
WhatsApp will end support for a bunch of old Samsung phones: report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X