ಇದೇ ಫೆ.1 ರಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಸೇವೆ ಇರಲ್ಲ!

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ವಾಟ್ಸಪ್ ಅಪ್ಲಿಕೇಶನ್ ಇತ್ತೀಚಿಗೆ ಹಲವು ಮಹತ್ತರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ನೂತನ ಅಪ್‌ಗ್ರೇಡ್ ಆವೃತ್ತಿಗಳನ್ನು ಕಂಡಿದೆ. ಆದ್ರೆ ಇದೀಗ ಸಂಸ್ಥೆಯು ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿ ಹೊರಹಾಕಿದ್ದು, ಇದೇ ಫೆಬ್ರುವರಿ 1 ರಿಂದ ಕೆಲವು ಆಂಡ್ರಾಯ್ಡ್‌ ಮತ್ತು ಐಫೋನ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಕಾರ್ಯಸ್ಥಗಿತವಾಗಲಿದೆ.

ಫೇಸ್‌ಬುಕ್ ಮಾಲೀಕತ್ವದ

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್, ಇದೇ ಫೆಬ್ರುವರಿ 1, 2020ರಿಂದ ಕೆಲವು ಹಳೆಯ ಓಎಸ್‌ ಆಧಾರಿತ ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ. ವಾಟ್ಸಪ್ ಬಳಕೆದಾರರ ಖಾಸಗಿತನದ ಸುರಕ್ಷತೆ ಹಾಗೂ ಮಾಹಿತಯ ಭದ್ರತೆಯ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಇದೇ ಜನವರಿ 1, 2020ರಿಂದ ವಿಂಡೊಸ್ ಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಸೇವೆ ನಿಲ್ಲಿಸಿದೆ.

ಜನವರಿ 31, 2020

ಇದೇ ಜನವರಿ 31, 2020 ಕೆಲವು ಹಳೆಯ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಸೇವೆಯ ಕೊನೆಯ ದಿನವಾಗಲಿದೆ. ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಂ 2.3.7 ಹಾಗೂ ಅದಕ್ಕಿಂತಲೂ ಹಿಂದಿನ ಓಎಸ್‌ ಆಧಾರಿತ ಆವೃತ್ತಿಗಳಲ್ಲಿ ವಾಟ್ಸಪ್ ಇನ್ಮುಂದೆ ಕೆಲಸ ಮಾಡುವುದಿಲ್ಲ. ಅದೇ ರೀತಿ ಐಓಎಸ್-IOS 8 ಹಾಗೂ ಅದಕ್ಕಿಂತಲೂ ಹಿಂದಿನ ಓಎಸ್‌ ಆಧಾರಿತ ಐಫೋನ್‌ಗಳಲ್ಲಿಯೂ ಸಹ ವಾಟ್ಸಪ್ ಆಪ್ ಸೇವೆ ಇಲ್ಲವಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ವಾಟ್ಸಪ್ ಖಾತೆ ತೆರೆಯಲು ಬೆಂಬಲ ಇರಲ್ಲ.

ಅತ್ಯುತ್ತಮ ಫೀಚರ್ಸ್‌

ಸರಳ ಕಾರ್ಯವೈಖರಿ, ಅತ್ಯುತ್ತಮ ಫೀಚರ್ಸ್‌ ಹಾಗೂ ಅಗತ್ಯ ಮಲ್ಟಿಮೀಡಿಯಾ ಸೌಲಭ್ಯ ಸೇರಿದಂತೆ ವಾಯಿಸ್‌ ಕಾಲ್, ಗ್ರೂಪ್ ಕಾಲ್‌ ಸೌಲಭ್ಯಗಳಿಂದ ವಾಟ್ಸಪ್ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದೆ. ಪ್ರಸ್ತುತ ಭಾರತದಲ್ಲಿ ಸುಮಾರು 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಬಳಕೆದಾರರ ಖಾಸಗಿ ಮಾಹಿತಿಗಳ ಸುರಕ್ಷತೆಯ ದೃಷ್ಠಿಯಿಂದ ಹಳೆಯ ಆವೃತ್ತಿಯಲ್ಲಿ ಸೇವೆ ನಿಲ್ಲಿಸಲಿದೆ.

ಮೈಕ್ರೋಸಾಫ್ಟ್ ಸ್ಟೋರ್‌

ಇದೇ ಜನವರಿ 1, 2020 ರಿಂದ ವಿಂಡೊಸ್ ಓಎಸ್‌ ಬೆಂಬಲಿತ ಫೋನ್‌ಗಳಲ್ಲಿ ವಾಟ್ಸಪ್ ಯುಗಾಂತ್ಯವಾಗಲಿದೆ ಎಂದು ಕಳೆದ ತಿಂಗಳು ಸಂಸ್ಥೆಯು ತಿಳಿಸಿತ್ತು. ಹಾಗೂ ಮೈಕ್ರೋಸಾಫ್ಟ್ ಸ್ಟೋರ್‌ನಿಂದ ವಾಟ್ಸಪ್‌ ಆಪ್‌ ಸಹ ತೆಗೆದುಹಾಕುವುದಾಗಿ ತಿಳಿಸಿತ್ತು. ಹೀಗಾಗಿ ವಿಂಡೊಸ್‌ ಓಎಸ್‌ನಲ್ಲಿಗ ವಾಟ್ಸಪ್ ಸಪೋರ್ಟ್‌ ಇಲ್ಲ. ಅದೇ ಹಾದಿಯಲ್ಲಿ ಈಗ ಕೆಲ ಹಳೆಯ ಆಂಡ್ರಾಯ್ಡ್‌ ಮತ್ತು ಐಓಎಸ್‌ ಫೋನ್‌ಗಳಿಗೂ ಬೆಂಬಲ ನಿಲ್ಲಿಸುವುದಾಗಿ ಹೇಳಿದೆ.

Most Read Articles
Best Mobiles in India

English summary
WhatsApp has already informed users in advance when its Android, iOS and Windows Phone WhatsApp app will stop working on older versions. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X