Just In
Don't Miss
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೆಬ್ರವರಿ 1, 2020ರ ನಂತರ ಈ ಫೋನ್‌ಗಳಲ್ಲಿ 'ವಾಟ್ಸ್ಆಪ್' ಕೆಲಸ ಮಾಡಲ್ಲ!
ದೀರ್ಘಕಾಲದವರೆಗೆ ಹೊಸ ಆಂಡ್ರಾಯ್ಸ್ ಆಪರೇಟಿಂಗ್ ಆವೃತ್ತಿಗೆ ಅಪ್‌ಗ್ರೇಡ್ ಮಾಡದ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಹಾಗೂ ಪ್ರಸ್ತುತ ಐಒಎಸ್ 8 ಬಳಸುತ್ತಿರುವ ಐಫೋನ್ ಬಳಕೆದಾರರಿಗೂ ವಾಟ್ಸ್ಆಪ್ ಸೇವೆ ಶೀಘ್ರವೇ ಸ್ಥಗಿತಗೊಳ್ಳುತ್ತಿದೆ. ಆಂಡ್ರಾಯ್ಡ್ ಆವೃತ್ತಿ 2.3.7 ಮತ್ತು ಅದಕ್ಕಿಂತ ಹಿಂದಿನ ಆವೃತ್ತಿ ಬಳಕೆದಾರರು ಹಾಗೂ ಐಒಎಸ್ 8 ಮತ್ತು ಅದಕ್ಕಿಂತಲೂ ಹಳೆಯ ಆವೃತ್ತಿ ಓಎಸ್ ಬಳಕೆದಾರರು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆಪ್ ತನ್ನ ಕೆಲಸವನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದೆ.

ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆಪ್ ನವೀಕರಣದ ಪ್ರಕಾರ, ಫೆಬ್ರವರಿ 1, 2020 ರವರೆಗೆ ಮಾತ್ರ ಈ ಫೋನ್‌ಗಳಲ್ಲಿ ವಾಟ್ಸ್ಆಪ್ ಬಳಸಲು ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಆವೃತ್ತಿ 2.3.7 ಮತ್ತು ಅದಕ್ಕಿಂತ ಹೆಚ್ಚಿನ ಹಳೆಯ ಬಳಕೆದಾರರು ಇನ್ನು ಮುಂದೆ ಹೊಸ ಖಾತೆಗಳನ್ನು ರಚಿಸಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸ್ಆಪ್ ಹೇಳಿದೆ. ಆದಾಗ್ಯೂ, ಫೆಬ್ರವರಿ 1, 2020 ರವರೆಗೆ ವಾಟ್ಸ್ಆಪ್ ಬಳಕೆಯನ್ನು ಮುಂದುವರಿಸಲು ಅವಕಾಶವನ್ನು ಮಾಡಿಕೊಟ್ಟಿದೆ.

"ಐಒಎಸ್ 8 ನಲ್ಲಿ, ನೀವು ಇನ್ನು ಮುಂದೆ ಹೊಸ ಖಾತೆಗಳನ್ನು ರಚಿಸಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ" ಎಂದು ವಾಟ್ಸ್ಆಪ್ ನವೀಕರಣ ಹೇಳಿದೆ. ಆದ್ದರಿಂದ ಐಫೋನ್ ಬಳಕೆದಾರರಿಗೆ ವಾಟ್ಸ್ಆಪ್ ಅನ್ನು ಚಲಾಯಿಸಲು ಐಒಎಸ್ 9 ಅಥವಾ ನಂತರದ ಅಗತ್ಯವಿದೆ. "ಉತ್ತಮ ಅನುಭವಕ್ಕಾಗಿ, ನಿಮ್ಮ ಫೋನ್‌ಗೆ ಲಭ್ಯವಿರುವ ಐಒಎಸ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ" ಎಂದು ವಾಟ್ಸ್ಆಪ್ ತನ್ನ ಇತ್ತೀಚಿನ ನವೀಕರಣದಲ್ಲಿ ಹೇಳಿದೆ.

ಜೈಲ್ ಬ್ರೋಕನ್ ಅಥವಾ ಅನ್‌ಲಾಕ್ ಮಾಡಲಾದ ಸಾಧನಗಳ ಬಳಕೆಯನ್ನು ನಾವು ಸ್ಪಷ್ಟವಾಗಿ ನಿರ್ಬಂಧಿಸುವುದಿಲ್ಲ. ಆದಾಗ್ಯೂ, ಈ ಮಾರ್ಪಾಡುಗಳು ನಿಮ್ಮ ಸಾಧನದ ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು, ಐಫೋನ್‌ನ ಆಪರೇಟಿಂಗ್ ಸಿಸ್ಟಂನ ಮಾರ್ಪಡಿಸಿದ ಆವೃತ್ತಿಗಳನ್ನು ಬಳಸುವ ಸಾಧನಗಳಿಗೆ ನಾವು ಬೆಂಬಲವನ್ನು ನೀಡಲು ಸಾಧ್ಯವಿಲ್ಲ ಎಂದು ವಾಟ್ಸ್ಆಪ್ ಹೇಳಿದೆ. ಒಂದು ವೇಳೆ ನೀವು ವಾಟ್ಸ್ಆಪ್ ಆಪ್ ಅನ್ನು ಬಳಸಲು ಪ್ರಯತ್ನಿಸಿದರೂ ಸಹ ಪ್ರಯೋಜನವಿಲ್ಲದಂತಾಗಲಿದೆ.

ಕಳೆದ ವರ್ಷ ಕೂಡ ವಾಟ್ಸ್ಆಪ್ ತನ್ನ ಸೇವೆಯನ್ನು ಸೀಮಿತ ಮೊಬೈಲ್‌ಗಳಿಗೆ ಸ್ಥಗಿತಗೊಳಿಸಿತ್ತು. ಆಂಡ್ರಾಯ್ಡ್ 2.1 ಹಾಗೂ ಆಡ್ರಾಯ್ಡ್ 2.2, ಬ್ಲ್ಯಾಕ್‌ಬೆರ್ರಿ ಆಪರೇಟಿಂಗ್ ಸಿಸ್ಟಮ್ ಹಾಗೂ ಬ್ಲ್ಯಾಕ್‌ಬೆರ್ರಿ 10, ವಿಂಡೋಸ್ ಫೋನ್ 7.1 ಮತ್ತು ಐಫೋನ್ 3ಜಿಎಸ್/ಐಒಎಸ್ 6 ಹೊಂದಿದ್ದ ಸಾಧನಗಳು 2018ರ ಜೂನ್ ತಿಂಗಳಿನಲ್ಲಿ ವಾಟ್ಸ್ಆಪ್ ಸೇವೆಯನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದವು. ಇದೀಗ ಆಂಡ್ರಾಯ್ಡ್ ಆವೃತ್ತಿ 2.3.7 ಮತ್ತು ಐಒಎಸ್ 8 ಆವೃತ್ತಿಗಳಿಗೆ ತನ್ನ ಬೆಂಬಲವನ್ನು ನಿಲ್ಲಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470