ಸಿಗಲಿದೆ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ನಾಲ್ಕು ಫೋನ್‌ಗಳಲ್ಲಿ ಬಳಸುವ ಅವಕಾಶ!

|

ಮೆಟಾ ಒಡೆತನದ ವಾಟ್ಸಾಪ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಅನುಕೂಲಮಾಡಿಕೊಟ್ಟಿದೆ. ಇದಲ್ಲದೆ ಬಳಕೆದಾರರಿಗೆ ಉಪಯೋಗವಾಗುವ ಹಲವು ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯ ಇದೀಗ ವಾಟ್ಸಾಪ್‌ ಕ್ಲೋನರ್ಸ್‌ ಎಂಡ್‌ ಮಾಡುವ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಅಂದರೆ ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಹೊಸ ಕಂಪ್ಯಾನಿಯನ್‌ ಮೋಡ್‌ ಫೀಚರ್ಸ್‌ ಲಭ್ಯವಾಗಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಕಂಪ್ಯಾನಿಯನ್ ಮೋಡ್ ಎಂಬ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಸುವುದಕ್ಕೆ ಅನುಮತಿಸಲಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಈ ಫೀಚರ್ಸ್‌ ಮೂಲಕ ನಿಮ್ಮ ವಾಟ್ಸಾಪ್‌ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು. ಕೇವಲ ಲ್ಯಾಪ್‌ಟಾಪ್‌, ಟ್ಯಾಬ್‌ ಮಾತ್ರವಲ್ಲ ಎಂಡು ಮೊಬೈಲ್‌ಗಳಲ್ಲಿ ಒಂದೇ ವಾಟ್ಸಾಪ್‌ ಅಕೌಂಟ್‌ ಬಳಸಲು ಸಾಧ್ಯವಾಗಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸ ಕಂಪ್ಯಾನಿಯನ್‌ ಮೋಡ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಮುಖೇನ ಒಂದೇ ವಾಟ್ಸಾಪ್‌ ಅಕೌಂಟ್‌ ಅನ್ನು ಏಕಕಾಲದಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಅವಕಶ ಸಿಗಲಿದೆ. ಇದರಲ್ಲಿ ನೀವು ಒಮ್ಮೆ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಎರಡನೇ ಸ್ಮಾರ್ಟ್‌ಫೋನ್‌ಗೆ ಲಿಂಕ್‌ ಮಾಡಿದರೆ, ನಿಮ್ಮ ದ್ವಿತೀಯ ಸಾಧನದಲ್ಲಿ ಎಲ್ಲಾ ಚಾಟ್‌ಗಳು ಮತ್ತು ಡೇಟಾವನ್ನು ಸಿಂಕ್ ಮಾಡಲಾಗುತ್ತದೆ. ಇದರಿಂದ ನೀವು ಎರಡು ಮೊಬೈಲ್‌ಗಳಲ್ಲಿಯೂ ನಿಮ್ಮ ವಾಟ್ಸಾಪ್‌ ಅನ್ನು ಬಳಸಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ನ ಕಂಪ್ಯಾನಿಯನ್ ಮೋಡ್ ನಿಮಗೆ ಒಂದೇ ಬಾರಿಗೆ ನಾಲ್ಕು ಫೋನ್‌ಗಳನ್ನು ಲಿಂಕ್ ಮಾಡಲು ಅನುಮತಿಸುತ್ತದೆ ಎನ್ನುವ ಮಾತು ಕೂಡ ಕೇಳಿಬದಿದೆ. ಸದ್ಯ ಈ ಹೊಸ ಕಂಪ್ಯಾನಿಯನ್ ಮೋಡ್ ಅನ್ನು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ v2.22.23.18 ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದೆ. ಆದರಿಂದ ಈ ಫೀಚರ್ಸ್‌ ಎರಡು ಅಥವಾ ಹೆಚ್ಚಿನ ಫೋನ್‌ಗಳಲ್ಲಿ ಒಂದೇ ವಾಟ್ಸಾಪ್‌ ಅಕೌಂಟ್‌ ಬಳಸಲು ಅವಕಾಶ ನೀಡಲಿದೆ ಎನ್ನಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ವಾಬೇಟಾ ಇನ್ಫೋ ಪ್ರಕಾರ ಎರಡನೇ ಡಿವೈಸ್‌ಗಳಲ್ಲಿ ನಿಮ್ಮ ಅಕೌಂಟ್‌ ಲಿಂಕ್‌ ಮಾಡಲು ಬಾರ್‌ಕೋಡ್‌ ಸ್ಕ್ಯಾನ್‌ ಮಾಡಲು ಅನುಮತಿಸಲಿದೆ. ಒಂದು ವೇಳೆ ನೀವು ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ವಾಟ್ಸಾಪ್‌ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ವಾಟ್ಸಾಪ್‌ ಚಾಟ್‌ಗಳು ಮತ್ತು ಡೇಟಾವನ್ನು ಸ್ವೀಕರಿಸಬಹುದಾಗಿದೆ. ಅಂದರೆ ಇದು ವಾಟ್ಸಾಪ್‌ ವೆಬ್‌ನಲ್ಲಿ ಹೇಗೆ ಇರುತ್ತದೆಯೋ ಅದೇ ರೀತಿ ಇರಲಿದೆ ಎಂದು ಹೇಳಲಾಗಿದೆ. ಇನ್ನು ಕಂಪ್ಯಾನಿಯನ್‌ ಮೋಡ್‌ ಮೂಲಕ ನಿಮ್ಮ ವಾಟ್ಸಾಪ್‌ ಅನ್ನು ಒಂದೇ ಬಾರಿ ಅಕೇಕ ಡಿವೈಸ್‌ಗಳಿಗೆ ಲಿಂಕ್‌ ಮಾಡಿದರೂ ಕೂಡ ವಾಟ್ಸಾಪ್‌ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಇನ್ನು ಕಾರ್ಯನಿರ್ವಹಿಸಲಿದೆ.

ಮೋಡ್

ಸದ್ಯ ಕಂಪ್ಯಾನಿಯನ್ ಮೋಡ್ ಆಂಡ್ರಾಯ್ಡ್‌ಗಾಗಿ ಬೀಟಾ ಬಿಲ್ಡ್‌ನಲ್ಲಿ ಮಾತ್ರ ಲಭ್ಯವಿದೆ. ಆದಾಗ್ಯೂ, ಇದು ಶೀಘ್ರದಲ್ಲೇ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಪರೀಕ್ಷಿಸಲ್ಪಡುವ ನಿರೀಕ್ಷೆಯಿದೆ. ಇದು ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಇದೇ ಮಾದರಿಯ ಫೀಚರ್ಸ್‌ ಈಗಾಗಲೇ ವಾಟ್ಸಾಪ್‌ ಪ್ರತಿಸ್ಫರ್ಧಿಯಾದ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಲಭ್ಯವಿದೆ. ಇದು ಹೊಸ ಮಾದರಿಯ ಫೀಚರ್ಸ್ ಏನಲ್ಲಾ ಆದರೆ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ಗೆ ಇದು ಹೊಸತಾಗಿದೆ. ಇದರಿಂದ ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ಹೇಗೆ ಉಪಯುಕ್ತವಾಗಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

Read more about:
English summary
WhatsApp will soon allow to use a single account on two or more devices at the same time

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X