ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್‌!..ಈ ಐಫೋನ್‌ನಲ್ಲಿ ವಾಟ್ಸಾಪ್‌ ಇನ್ನು ಸ್ಥಗಿತ!

|

ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಾಪ್‌ ಇದೀಗ ಆಪಲ್‌ ಐಫೊನ್ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ. ಆಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ ಇದೇ ಅಕ್ಟೋಬರ್ 1, 2022 ರಿಂದ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಿದೆ.

ಶಾಶ್ವತವಾಗಿ

ಹೌದು, ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜ್‌ ದೈತ್ಯ ವಾಟ್ಸಾಪ್, ಅಕ್ಟೋಬರ್ 1 ರಿಂದ ಕೆಲವು ಹಳೆಯ ಐಫೋನ್‌ ಮಾದರಿಯ ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯ ನಿರ್ವಹಣೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ ಎಂದು WABetaInfo ವರದಿಯೊಂದರಿಂದ ತಿಳಿದುಬಂದಿದೆ ಇಂಡಿಯಾ ಟುಡೇ ವರದಿ ಮಾಡಿದೆ. ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸಾಪ್ ಈಗಾಗಲೇ ಎಚ್ಚರಿಕೆ ನೀಡಲು ಪ್ರಾರಂಭಿಸಿದೆ ಎಂದು ವರದಿ ಉಲ್ಲೇಖಿಸಿದೆ.

ನಿಲ್ಲಿಸುತ್ತದೆ

ವಾಟ್ಸಾಪ್‌ ಮೆಸೆಜ್‌ ಆಪ್‌ ಈ ಬಗ್ಗೆ ಈಗಾಗಲೇ ಬಳಕೆದಾರರಿಗೆ ಸೂಚನೆಯನ್ನು ಕಳುಹಿಸಿದ್ದು, ಅಪ್ಲಿಕೇಶನ್ ಶೀಘ್ರದಲ್ಲೇ ಅವರ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ನವೀಕರಿಸಬೇಕಾಗುತ್ತದೆ. ಹಾಗಾದರೇ ಯಾವೆಲ್ಲಾ ಐಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತವಾಗಲಿದೆ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ

ಅಪ್‌ಡೇಟ್‌ ಓಎಸ್‌ ಇದ್ದರೆ ಮಾತ್ರ, ವಾಟ್ಸಾಪ್‌ ಸಪೋರ್ಟ್‌

ಅಪ್‌ಡೇಟ್‌ ಓಎಸ್‌ ಇದ್ದರೆ ಮಾತ್ರ, ವಾಟ್ಸಾಪ್‌ ಸಪೋರ್ಟ್‌

ಆಪಲ್‌ ಐಓಎಸ್‌ 12 ಅಥವಾ ಅದಕ್ಕಿಂತ ಮುಂದಿನ ಓಎಸ್‌ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸಾಪ್‌ ಕಾರ್ಯನಿರ್ವಹಿಸಲಿದೆ. ಹಾಗೆಯೇ ಐಒಎಸ್ 10 ಮತ್ತು ಐಒಎಸ್ 11 ಓಎಸ್‌ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ಹೀಗೆ ಮಾಡಿ ಫೋನಿನಲ್ಲಿ ಸೆಟ್ಟಿಂಗ್‌ಗಳು (Settings ) > ಜನರೇಲ್‌ (General) ಹೋಗಬಹುದು, ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್‌ (Software Update) ಆಯ್ಕೆ ಟ್ಯಾಪ್ ಮಾಡಿ.

ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಅಧ್ಯಾಯ ಮುಗಿಯಲಿದೆ:

ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಅಧ್ಯಾಯ ಮುಗಿಯಲಿದೆ:

* ಐಫೋನ್‌ 5 (iPhone 5)
* ಐಫೋನ್‌ 5c (iPhone 5c)

ವಾಟ್ಸಾಪ್‌ನಲ್ಲಿ ಈ ಆಯ್ಕೆ ಬಳಕೆ ಮಾಡಿದ್ದೀರಾ?

ವಾಟ್ಸಾಪ್‌ನಲ್ಲಿ ಈ ಆಯ್ಕೆ ಬಳಕೆ ಮಾಡಿದ್ದೀರಾ?

ಟೆಕ್ಸ್ಟ್‌ ಸ್ವರೂಪಗಳು
ವಾಟ್ಸಾಪ್‌ನಲ್ಲಿ ಟೆಕ್ಸ್ಟ್ ದಪ್ಪ, ಇಟಾಲಿಕ್ ಅಥವಾ ಸ್ಟ್ರೈಕ್ಥ್ರೂ ಸೇರಿಸಬಹುದು. ಈ ವೈಶಿಷ್ಟ್ಯವನ್ನು ಬಳಸುವುದು ಸರಳವಾಗಿದೆ. ಬೋಲ್ಡ್ ಮಾಡಲು, ಪಠ್ಯದ ಮೊದಲು ಮತ್ತು ನಂತರ ನಕ್ಷತ್ರ ಚಿಹ್ನೆಯನ್ನು (*) ಸೇರಿಸಿ, ಮತ್ತು ಇಟಾಲಿಕ್ ಮಾಡಲು, ಅಂಡರ್‌ಸ್ಕೋರ್ (_) ಅನ್ನು ಅದೇ ರೀತಿಯಲ್ಲಿ ಸೇರಿಸಿ. ಮತ್ತು ಸ್ಟ್ರೈಕ್‌ ಥ್ರೂಗಾಗಿ, ಟ್ವಿಡಲ್ ಅನ್ನು ಸೇರಿಸಿ (~).

ಸ್ಟಾರ್ ಟೆಕ್ಸ್ಟ್‌

ಸ್ಟಾರ್ ಟೆಕ್ಸ್ಟ್‌

ಮುಖ್ಯ ಸಂದೇಶ, ಚಿತ್ರ, ಸಂಪರ್ಕ ಅಥವಾ ಲಿಂಕ್ ಅನ್ನು ಸಾಗಿಸುವ ಚಾಟ್‌ಗಳು. ಸ್ಟಾರ್ ಅನ್ನು ಸೇರಿಸುವ ಮೂಲಕ ನೀವು ಅವುಗಳನ್ನು ನಂತರ ಉಳಿಸಬಹುದು. ಹಾಗೆ ಮಾಡಲು, ಸಂದೇಶದ ಮೇಲೆ ದೀರ್ಘವಾಗಿ ಒತ್ತಿ ಮತ್ತು ಮೇಲ್ಭಾಗದಲ್ಲಿರುವ ನಕ್ಷತ್ರದ ಮೇಲೆ ಟ್ಯಾಪ್ ಮಾಡಿ. ನಿಮ್ಮ ಸ್ಟಾರ್ ಹಾಕಿದ ಸಂದೇಶಗಳಿಗೆ ಹಿಂತಿರುಗಲು, ಆಂಡ್ರಾಯ್ಡ್‌ನಲ್ಲಿ ಮೆನು ಬಾರ್ ಮತ್ತು ಐಫೋನ್‌ ನಲ್ಲಿ ಸೆಟ್ಟಿಂಗ್‌ಗಳಿಗೆ ಹೋಗಿ.

ಟೆಕ್ಸ್ಟ್‌ಗಳು ಕಣ್ಮರೆಯಾಗುವಂತೆ ಮಾಡಿ

ಟೆಕ್ಸ್ಟ್‌ಗಳು ಕಣ್ಮರೆಯಾಗುವಂತೆ ಮಾಡಿ

ಕೆಲವೊಮ್ಮೆ, ಕೆಲವು ಟೆಕ್ಸ್ಟ್‌ಗಳನ್ನು ಹಸ್ತಚಾಲಿತವಾಗಿ ಅಳಿಸದೆಯೇ ಸ್ವಯಂಚಾಲಿತವಾಗಿ ಕಣ್ಮರೆಯಾಗಬೇಕೆಂದು ನೀವು ಬಯಸಬಹುದು. ಸಂಪರ್ಕವನ್ನು ಟ್ಯಾಪ್ ಮಾಡುವ ಮೂಲಕ ನೀವು ಹಾಗೆ ಮಾಡಬಹುದು. ಮುಂದೆ, ಹೆಸರಿನ ಮೇಲೆ ಟ್ಯಾಪ್ ಮಾಡಿ, ನಂತರ ಕಣ್ಮರೆಯಾಗುತ್ತಿರುವ ಮೆಸೆಜ್‌ ಒತ್ತಿ ಮತ್ತು ಟೆಕ್ಸ್ಟ್‌ಗಳನ್ನು ಸ್ವಯಂಚಾಲಿತವಾಗಿ ಡಿಲೀಟ್‌ ಮಾಡಲು ನೀವು ಬಯಸುವ ಸಮಯವನ್ನು ಆಯ್ಕೆ ಮಾಡಿ.

ಚಾಟ್ ಅನ್ನು ಮ್ಯೂಟ್ ಮಾಡಿ

ಚಾಟ್ ಅನ್ನು ಮ್ಯೂಟ್ ಮಾಡಿ

ಸಭೆ ಅಥವಾ ಪ್ರಮುಖ ಈವೆಂಟ್‌ಗೆ ಹೋಗುತ್ತಿರುವಾಗ, ನೀವು ಚಾಟಿ ಗುಂಪು ಅಥವಾ ಸ್ನೇಹಿತರನ್ನು ಮ್ಯೂಟ್ ಮಾಡಲು ಬಯಸುತ್ತೀರಿ. ಹಾಗೆ ಮಾಡಲು ವಾಟ್ಸಾಪ್‌ ನಿಮಗೆ ಅನುಮತಿಸುತ್ತದೆ. ಆಂಡ್ರಾಯ್ಡ್ ಬಳಕೆದಾರರು ಕ್ರಾಸ್ ಔಟ್ ಸ್ಪೀಕರ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಚಾಟ್ ಅನ್ನು ದೀರ್ಘವಾಗಿ ಒತ್ತಿ ಹಿಡಿಯಬೇಕು. ಐಫೋನ್ ಬಳಕೆದಾರರು ಮ್ಯೂಟ್ ನಂತರ ಸಂಭಾಷಣೆಯನ್ನು ಎಡಕ್ಕೆ ಸ್ವೈಪ್ ಮಾಡುವ ಮೂಲಕ ಹಾಗೆ ಮಾಡಬಹುದು.

Best Mobiles in India

English summary
WhatsApp will stop working on select iPhones from October: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X