ಸದ್ಯದಲ್ಲೇ ವಾಟ್ಸಾಪ್‌ ಸೇರಲಿದೆ 'ಕಾಲ್‌ಲಿಂಕ್ಸ್‌' ಫೀಚರ್ಸ್‌! ಏನಿದರ ವಿಶೇಷತೆ?

|

ವಾಟ್ಸಾಪ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ವಾಟ್ಸಾಪ್‌ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಮೆಟಾ ಒಡೆತನದ ವಾಟ್ಸಾಪ್‌ ಒಂದಲ್ಲ ಒಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್‌ ಲಿಂಕ್ಸ್‌ ಎಂಬ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಸ್ವತಃ ಮೆಟಾ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಹ್‌ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದಾರೆ.

ಮೆಟಾ

ಹೌದು, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ವಾಟ್ಸಾಪ್‌ 'ಕಾಲ್ ಲಿಂಕ್ಸ್' ಎಂಬ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಹೊಸ ಫೀಚರ್ಸ್‌ ಹೆಸರೇ ಸೂಚಿಸುವಂತೆ, ಬಳಕೆದಾರರು ವಾಟ್ಸಾಪ್‌ ಕಾಲ್‌ ಲಿಂಕ್‌ ಅನ್ನು ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಈ ಲಿಂಕ್‌ ಮೂಲಕ ನೀವು ನಿಮ್ಮ ಕರೆಗೆ ಸೇರಿಸಲು ಬಯಸುವ ಬಳಕೆದಾರರಿಗೆ ಲಿಂಕ್‌ ಅನ್ನು ಶೇರ್‌ ಮಾಡಬಹುದಾಗಿದೆ. ಹಾಗಾದ್ರೆ ಕಾಲ್‌ಲಿಂಕ್ಸ್‌ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ ಮೂಲಕ ಕಾಲ್‌ ಮಾಡುವುದು ಸಾಮಾನ್ಯವಾಗಿದೆ. ವಾಟ್ಸಾಪ್‌ ವಾಯ್ಸ್‌ ಕಾಲ್‌ ವೀಡಿಯೋ ಕಾಲ್‌ ಮಾಡುವುದು ಸುಲಭವಾಗಿದೆ. ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲ್‌ಲಿಂಕ್ಸ್‌ ಫೀಚರ್ಸ್‌ ಸೇರ್ಪಡೆ ಮಾಡಲಾಗ್ತಿದೆ. ಕಾಲ್‌ ಲಿಂಕ್ಸ್‌ ಮೂಲಕ ವಾಟ್ಸಾಪ್‌ ಕಾಲ್‌ ಸೇರುವಂತೆ ಇತರರಿಗೆ ಇನ್ವೈಟ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಜೂಮ್‌

ಈಗಾಗಲೇ ಜೂಮ್‌ ಮತ್ತು ಗೂಗಲ್‌ ಮೀಟ್‌ನಂತಹ ಅಪ್ಲಿಕೇಶನ್‌ಗಳು ಕಾಲ್‌ ಲಿಂಕ್ಸ್‌ ಫೀಚರ್ಸ್‌ ಅನ್ನು ಒಳಗೊಂಡಿವೆ. ಇದೇ ಮಾದರಿಯ ಫೀಚರ್ಸ್‌ ವಾಟ್ಸಾಪ್‌ ಸೇರುವುದು ವಾಟ್ಸಾಪ್‌ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಕಾಲ್‌ ಲಿಂಕ್ಸ್‌ ಫೀಚರ್ಸ್‌ ವಾಟ್ಸಾಪ್‌ ಕಾಲ್‌ ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಬಳಕೆದಾರರು ಆಡಿಯೊ ಮತ್ತು ವೀಡಿಯೊ ಕಾಲ್‌ ಮಾಡುವುದಕ್ಕಾಗಿ ಕಾಲ್‌ ಲಿಂಕ್ಸ್‌ ಶೇರ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಈ ಕಾಲ್‌ ಲಿಂಕ್ಸ್‌ ಅನ್ನು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್‌ ಮಾಡಬಹುದಾಗಿದೆ. ಇನ್ನು ಈ ಲಿಂಕ್ಸ್‌ ಮೇಲೆ ಸಿಂಗಲ್‌ ಟ್ಯಾಪ್‌ ಮಾಡುವ ಮೂಲಕ ವಾಟ್ಸಾಪ್‌ ಕಾಲ್‌ಗಳನ್ನು ಸೇರುವುದಕ್ಕೆ ಅವಕಾಶ ಸಿಗಲಿದೆ.

ಸಿಇಒ

ಇದಲ್ಲದೆ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್ ತಮ್ಮ ಪೋಸ್ಟ್‌ನಲ್ಲಿ ಮತ್ತೊಂದು ಫೀಚರ್ಸ್‌ ಬಗ್ಗೆ ವಿವರವ್ನು ನೀಡಿದ್ದಾರೆ. ಅದರಂತೆ ಇನ್ಮುಂದೆ ವಾಟ್ಸಾಪ್‌ 32 ಜನರಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ವೀಡಿಯೋ ಕರೆಗಳನ್ನು ಮಾಡುವುದಕ್ಕೆ ಅನುಮತಿಸಲಿದೆ. ಆದರೆ ಈ ಫೀಚರ್ಸ್‌ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಟೈಮ್‌ಲೈನ್‌ ಹಂಚಿಕೊಂಡಿಲ್ಲ. ಆದರೆ ವಾಟ್ಸಾಪ್‌ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಕಾಲ್‌ 32 ಬಳಕೆದಾರರನ್ನು ಬೆಂಬಲಿಸುತ್ತದೆ ಎಂದು ವಾಟ್ಸಾಪ್‌ನ FAQ ಪೇಜ್‌ ನಲ್ಲಿ ಈಗಾಗಲೇ ವಿವರಿಸಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಗ್ರೂಪ್‌ನ ಒಂದು ಗುಂಪು 32 ಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿದ್ದರೆ, ಗ್ರೂಪ್‌ ಕಾಲ್‌ ಕ್ರಿಯೆಟ್‌ ಮಾಡುವವರು ಕಾಲ್‌ಗೆ ಯಾರೆಲ್ಲಾ ಸೇರಿಸಬಹುದು ಎಂಬುದ್ನು ಆರಿಸಬೇಕಾಗುತ್ತದೆ. ಇದರಿಂದ 32ಕ್ಕಿಂತ ಹೆಚ್ಚಿನ ಜನರು ಇದ್ದಾಗ ನಿಮಗೆ ಅಗತ್ಯ ಎನಿಸಿದವರನ್ನು ಮಾತ್ರ ವಾಟ್ಸಾಪ್‌ ವೀಡಿಯೊ ಕರೆಗೆ ಸೇರಿಸಬಹುದಾಗಿದೆ. ಕಾಲ್‌ ಲಿಂಕ್ಸ್‌ ಮತ್ತು ವೀಡಿಯೊ ಕಾಲ್‌ಗೆ 32 ಜನರನ್ನು ಸೇರ್ಪಡೆ ಮಾಡುವ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ ಹೊಸದಾಗಿ ಆನ್‌ಲೈನ್‌ ಸ್ಟೇಟಸ್‌ ಹೈಡ್‌ ಮಾಡುವ ಆಯ್ಕೆ ನೀಡಲು ಮುಂದಾಗಿದೆ. ಈ ಆಯ್ಕೆಯನ್ನು ಗೂಗಲ್‌ ಪ್ಲೇ ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಿದ ಮತ್ತು ಆಂಡ್ರಾಯ್ಡ್‌ 2,22,20.9 ಬೀಟಾಗೆ ಅಪ್ಡೇಟ್‌ ಮಾಡಿದ ಬಳಕೆದಾರರಿಗೆ ಇದು ಲಭ್ಯವಿದೆ. ಇನ್ನು ಈ ಹೊಸ ಫೀಚರ್ಸ್‌ ಅನ್ನು ನೋಡುವುದಕ್ಕೆ ಬೀಟಾ ಪ್ರೋಗ್ರಾಂ ಬಳಕೆದಾರರು ವಾಟ್ಸಾಪ್‌ ಸೆಟ್ಟಿಂಗ್ಸ್‌ ತೆರೆದು 'ಅಕೌಂಟ್‌' ಅಡಿಯಲ್ಲಿ 'ಪ್ರೈವೆಸಿ' ವಿಭಾಗಕ್ಕೆ ಹೋಗಬೇಕಾಗುತ್ತದೆ. ಇದರಲ್ಲಿ 'ಲಾಸ್ಟ್ ಸೀನ್ ಅಂಡ್ ಆನ್‌ಲೈನ್' ಆಯ್ಕೆಯನ್ನು ಪರಿಶೀಲಿಸಬೇಕಾಗುತ್ತದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಪರೀಕ್ಷಿಸುತ್ತಿರುವ ಪ್ರಮುಖ ಫೀಚರ್‌ಗಳಲ್ಲಿ ಕೆಪ್ಟ್‌ ಮೆಸೇಜಸ್‌ ಎನ್ನುವ ಫೀಚರ್‌ ಕೂಡ ಸೇರಿದೆ. ಇದರಿಂದ ಡಿಸ್‌ಅಪಿಯರಿಂಗ್‌ ಮೆಸೇಜಸ್‌ ಫೀಚರ್‌ ಬಳಸುವವರಿಗೆ ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗಿದೆ. ಈ ಫೀಚರ್‌ ಮೂಲಕ ನೀವು ಡಿಸ್‌ಅಪಿಯರಿಂಗ್‌ ಸಂದೇಶಗಳನ್ನು ಕೂಡ ಉಳಿಸಿಕೊಳ್ಳುವುದಕ್ಕೆ ಸಾದ್ಯವಾಗಲಿದೆ ಎಂದು ವರದಿಯಾಗಿದೆ.

Best Mobiles in India

English summary
WhatsApp Call Links feature will soon let users join audio and video calls with a single tap and initiate video calls with up to 32 participants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X