ಸ್ಯಾಮ್‌ಸಂಗ್‌ ಜಾಹೀರಾತಿನಲ್ಲಿ ಬರಾಕ್‌ ಒಬಾಮಾ!

Posted By: Staff

ಸ್ಮಾರ್ಟ್‌ಫೋನ್‌ಲ್ಲಿ ಮುಂದುಗಡೆ ಕ್ಯಾಮೆರಾ ಬಂದದ್ದೆ ತಡ ಈಗ ಸೆಲ್ಫಿ ಫೋಟೋ ತೆಗೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಬೇಸ್‌ಬಾಲ್‌‌  ಆಟಗಾರರೊಬ್ಬರು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಜೊತೆಗೆ ಸೆಲ್ಫಿ ಫೋಟೋ ಕ್ಲಿಕ್ಕಿಸಿದ್ದಾರೆ.

ಬೇಸ್‌ಬಾ‌ಲ್‌ ಆಟಗಾರ David Ortiz ಸಂತೋಷಕ್ಕಾಗಿ ಶ್ವೇತಭವನದಲ್ಲಿ ಒಬಾಮಾ ಜೊತೆಗೆ ಸೆಲ್ಫಿ ಫೋಟೋ ತೆಗೆದರೂ ಈಗ ವಿವಾದಕ್ಕೆ ಕಾರಣವಾಗಿದೆ.ಒಬಾಮಾ David Ortiz ಸ್ಯಾಮ್‌ಸಂಗ್‌‌ ಸ್ಮಾರ್ಟ್‌‌‌ಫೋನ್‌‌ನಿಂದ ಫೋಟೋ ತೆಗೆದಿದ್ದು ಸ್ಯಾಮ್‌ಸಂಗ್‌ ಮೊಬೈಲ್‌ ಯುಎಸ್‌ ಈ ಸೆಲ್ಫಿ ಫೋಟೋವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದೆ. ಸ್ಯಾಮ್‌‌ಸಂಗ್‌ ''Big Papi, Big Selfie. RT @DavidOrtiz What an honor! Thanks for the #selfie" ಎಂದು ಟ್ವೀಟ್‌ ಮಾಡಿದೆ.

ಸ್ಯಾಮ್‌ಸಂಗ್‌ ಅಮೆರಿಕದ ಈ ಟ್ವೀಟ್‌ ಶ್ವೇತಭವನದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಯಾವುದೇ ಕಂಪೆನಿ ತನ್ನ ಉತ್ಪನ್ನದ ಪ್ರಚಾರಕ್ಕಾಗಿ ಅಮೇರಿಕದ ಅಧ್ಯಕ್ಷರನ್ನು ತೋರಿಸುವುದು ಅಪರಾಧವಾಗಿರುವುದರಿಂದ ಶ್ವೇತಭವನದ ಅಧಿಕಾರಿಗಳು ಸ್ಯಾಮ್‌ಸಂಗ್‌‌ ನಡೆಯನ್ನು ಖಂಡಿಸಿದ್ದು, ಸ್ಯಾಮ್‌ಸಂಗ್‌ ವಿರುದ್ಧ ಕಾನೂನು ಕ್ರಮ ಜರುಗಿಸಲು ಚರ್ಚೆ‌ ನಡೆಸುತ್ತಿದ್ದಾರೆ.

 ಸ್ಯಾಮ್‌ಸಂಗ್‌ ಜಾಹೀರಾತಿನಲ್ಲಿ ಬರಾಕ್‌ ಒಬಾಮಾ!
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot