ಸಿಹಿಸುದ್ದಿ!..ಮೊಬೈಲ್ ನಂಬರ್ ಜೋಡಿಸದ ಫೇಸ್‌ಬುಕ್ ಖಾತೆ ಡಿಲೀಟ್?!

|

ಕೋಟ್ಯಾಂತರ ನಕಲಿ ಫೇಸ್‌ಬುಕ್ ಖಾತೆಗಳನ್ನು ಕಿತ್ತೊಗೆಯಲು ಫೇಸ್‌ಬುಕ್ ಸಂಸ್ಥೆ ಕ್ರಮ ಕೈಗೊಳ್ಳುತ್ತಿದೆ ಎಂಬ ವಿಶೇಷ ಸುದ್ದಿ ಇದೀಗ ಹೊರಬಿದ್ದಿದೆ. ನಕಲಿ ಖಾತೆ ಮತ್ತು ಗ್ರಾಹಕರ ಮಾಹಿತಿ ಸುರಕ್ಷತೆಯ ಕಾರಣ ನೀಡಿ ಫೇಸ್‌ಬುಕ್ ಖಾತೆಯ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದ್ದು, ಇದಕ್ಕಾಗಿ, ಎರಡು ಹೊಸ ಮಾರ್ಗಗಳನ್ನು ಅನುಸರಿಸಲಿದೆ ಎಂದು ಹೇಳಲಾಗಿದೆ.

ಸಿಹಿಸುದ್ದಿ!..ಮೊಬೈಲ್ ನಂಬರ್ ಜೋಡಿಸದ ಫೇಸ್‌ಬುಕ್ ಖಾತೆ ಡಿಲೀಟ್?!

ಹೌದು, ಫೇಸ್‌ಬುಕ್‌ ಖಾತೆಗೆ ಇನ್ಮುಂದೆ ಮೊಬೈಲ್ ನಂಬರ್ ಜೋಡಣೆ ಮಾಡದಿದ್ದರೆ ಆ ಖಾತೆಯನ್ನು ನಕಲಿ ಎಂದು ಗುರುತಿಸಲಾಗುತ್ತದೆ ಎನ್ನಲಾಗಿದೆ. ಅನಾಮಧೇಯ ಖಾತೆಗಳಿಗೆ ಬ್ರೇಕ್ ಹಾಕಲು ಇಂತಹ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, ನಿಮ್ಮ ಫೋನ್‌ ನಂಬರ್‌ ಅನ್ನು ಫೇಸ್‌ಬುಕ್‌ ನೊಂದಿಗೆ ದೃಢಿಸಿಕೊಳ್ಳಲೇಬೇಕಾಗುತ್ತದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ತಿಳಿಸಿವೆ.

ಫೋನ್ ನಂಬರ್ ಮಾತ್ರವಲ್ಲದೇ, ಫೇಸ್‌ಬುಕ್ ಬಳಕೆದಾರರು ತಮ್ಮ ಪ್ರೊಫೈಲ್ ಪಿಕ್ಚರ್ ಅನ್ನು ಹಾಕಿಕೊಳ್ಳದಿದ್ದರೂ ಸಹ ಆ ಖಾತೆಯನ್ನು ನಕಲಿ ಎಂದು ಗುರುತಿಸಲಾಗುತ್ತದೆ ಎನ್ನಲಾಗಿದೆ. ಒಂದು ವೇಳೆ ಈ ಎರಡಕ್ಕೂ ನಿರಾಕರಿಸಿದರೆ ಫೇಸ್‌ಬುಕ್‌ ಬಳಸುವುದಕ್ಕೆ ನಿರ್ಬಂಧಿಸುತ್ತದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಫೇಸ್‌ಬುಕ್ ಸಂಸ್ಥೆ ಇನ್ನು ಖಚಿತಪಡಿಸಿಲ್ಲ.

ಸಿಹಿಸುದ್ದಿ!..ಮೊಬೈಲ್ ನಂಬರ್ ಜೋಡಿಸದ ಫೇಸ್‌ಬುಕ್ ಖಾತೆ ಡಿಲೀಟ್?!

ಈ ಮೊದಲು ಫೇಕ್ ಖಾತೆಗಳನ್ನು ತೆಗೆದುಹಾಕುವ ಯೋಚನೆ ಇಲ್ಲ ಎಂದು ಹೇಳಿದ್ದ ಫೇಸ್‌ಬುಕ್, ಇದೀಗ ಇಂತಹ ಕ್ರಮ ಕೈಗೊಳ್ಳಲು ಒಂದು ಕಾರಣ ಕೂಡ ಇದೆ. ನಕಲಿ ಖಾತೆಗಳು ಸೇರಿದಂತೆ ಒಟ್ಟು ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಜಾಹೀರಾತಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ದೂರಿನ ಬೆನ್ನಲ್ಲೇ ಈ ಕ್ರಮಕ್ಕೆ ಫೇಸ್‌ಬುಕ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಜಿಮೇಲ್‌ನಲ್ಲಿರುವ ತಲೆತಿರುಗಿಸುವ 8 ವಿಶೇಷ ಫೀಚರ್ಸ್!ಜಿಮೇಲ್‌ನಲ್ಲಿರುವ ತಲೆತಿರುಗಿಸುವ 8 ವಿಶೇಷ ಫೀಚರ್ಸ್!

ಕಳೆದ ಮೂರು ವರ್ಷಗಳಲ್ಲಿ ಫೇಸ್‌ಬುಕ್ ನಕಲಿ ಖಾತೆಗಳ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದ್ದು, ಒಟ್ಟು 25 ಕೋಟಿಯಷ್ಟು ನಕಲಿ ಖಾತೆಗಳಿವೆ ಎಂದು ಫೇಸ್‌ಬುಕ್ ಕಳೆದ ವರ್ಷ ತಿಳಿಸಿತ್ತು. ಕಂಪೆನಿ ನಿಯಮದಂತೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದುವಂತಿಲ್ಲ. ಹೊಂದಿದ್ದರೆ, ಅಂತಹ ಖಾತೆಗಳನ್ನು ನಕಲಿ ಅಥವಾ ಅನಪೇಕ್ಷಿತ ಖಾತೆ ಎಂದು ವರ್ಗೀಕರಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳು ಹೆಚ್ಚಾಗಿದ್ದು, ಅವುಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸುವುದು ದೊಡ್ಡ ಸವಾಲು ಎನ್ನಬಹುದು. ಆದರೆ, ಫೇಸ್‌ಬುಕ್‌ ಕೈಗೊಂಡಿರುವ ಈ ನಿರ್ಧಾರವು ನಕಲಿ ಖಾತೆಗಳನ್ನು ತಡೆಯಲು ರಾಮಬಾಣವಾಗಬಲ್ಲದು. ಇದು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಎಂಬ ರೋಗವನ್ನು ಸಹ ತಡೆಗಟ್ಟಬಲ್ಲದು ಎನ್ನುತ್ತಿದ್ದಾರೆ ಟೆಕ್ ತಜ್ಞರು.

Best Mobiles in India

English summary
Why am I being asked to add my phone number to my facebook account?to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X