ಆನ್‌ಲೈನಿನಲ್ಲಿ ಶಾಪಿಂಗ್ ಮಾಡುವವರು ಈ ಕಥೆ ಕೇಳಿ ಮೂರ್ಚೆಹೋಗಬಹುದು!

|

ಆನ್‌ಲೈನ್ ತಾಣಗಳಲ್ಲಿ ಶಾಪಿಂಗ್ ಮಾಡಲು ಬಯಸುವವರು ತಾವು ಖರೀದಿಸಬೇಕೆಂದಿರುವ ವಸ್ತುಗಳ ರೀವ್ಹಿವ್ ನೋಡುತ್ತಾರೆ. ಗ್ಲೋಬಲ್ ಇನ್ಫರ್ಮೇಷನ್ ಮೇಜರ್ಮೆಂಟ್ ಕಂಪನಿ ನೀಲ್ಸನ್'ನ ವರದಿ ಅಂಕಿ ಅಂಶಗಳ ಪ್ರಕಾರ ವಿಶ್ವಾದ್ಯಂತ 68% ಜನರು ಕಣ್ಣು ಮುಚ್ಚಿ ಆನ್ನ್‌ಲೈನ್ ರಿವ್ಹೀವ್‌ಗಳನ್ನು ನಂಬುತ್ತಾರೆ.! ಆದರೆ, ಹೀಗೆ ಆನ್‌ಲೈನಿನಲ್ಲಿ ಯಾವುದೇ ವಸ್ತುಗಳ ರೀವ್ಹಿವ್ ನೋಡಿ ಖರೀದಿಸುವುದು ಅಥವಾ ಅವುಗಳನ್ನು ನಂಬುವುದು ಎಷ್ಟು ಸರಿ ಎಂಬುದನ್ನು ಈ ಒಂದು ನೈತಿಕ ಮೋಸಗಾರಿಕೆ ಘಟನೆ ಪ್ರಶ್ನಿಸುತ್ತಿದೆ.

ವೂಬಾ ಬಟ್ಲರ್ ಎಂಬ ವ್ಯಕ್ತಿ ಫೇಕ್ ರೀವ್ಹಿವ್'ಗಳ ಕಾಳ ಧಂದೆಯನ್ನು ಬೆತ್ತಲು ಮಾಡಿದ ಒಂದು ಘಟನೆ ಅಚ್ಚರಿದಾಯಕವಾಗಿದೆ. ಆನ್‌ಲೈನ್ ಪ್ರಪಂಚದಲ್ಲಿ ಇಂತಹದೊಂದು ಕರಾಳ ದಂದೆ ನಡೆಯುತ್ತಿದೆ ಎಂದುದನ್ನು ಒಂದ ಕಾಲದಲ್ಲಿ ರೆಸ್ಟೋರೆಂಟ್'ಗಳಿಗೆ ಫೇಕ್ ರೀವ್ಹಿವ್ ಬರೆಯುತ್ತಿದ್ದ ವೂಬಾ ಬಟ್ಲರ್ ಎಂಬುವವರೇ ಬೆತ್ತಲು ಮಾಡಿದ್ದಾರೆ. ಇಂತಹದೊಂದದು ಅನೈತಿಕ ಮೋಸಗಾರಿಕೆಯನ್ನು ಬಯಲಿಗೆಳೆಯಲು ಬಟ್ಲರ್ ಅನುಸರಿಸಿದ ವಿಧಾನಕ್ಕೆ ನಾವೆಲ್ಲರೂ ತಲೆದೂಗಬೇಕಿದೆ.

ಆನ್‌ಲೈನಿನಲ್ಲಿ ಶಾಪಿಂಗ್ ಮಾಡುವವರು ಈ ಕಥೆ ಕೇಳಿ ಮೂರ್ಚೆಹೋಗಬಹುದು!

ಹೌದು, ವಾಸ್ತವಿಕವಾಗಿ ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟೊ೦ದನ್ನು ಜಾಲತಾಣಗಳಲ್ಲಿ ತೇಲಿ ಬಿಟ್ಟು ಇಡೀ ಲಂಡನ್ ನಗರದಲ್ಲೇ ನಂ 1 ಹೋಟೆಲ್ ಎಂದು ಕರೆಸಿಕೊಳ್ಳುವಂತೆ ಮಾಡಿದ ಬಟ್ಲರ್, ಫೇಕ್ ರೀವ್ಹಿವ್'ಗಳ ಕಾಳ ಧಂದೆಯನ್ನು ಬೆತ್ತಲೆ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಹೀಗೂ ಮೋಸ ಹೋಗಬಹುದು ಎಂಬುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ. ಅಂತಹದೊಂದು ನೈತಿಕ ಮೋಸಗಾರಿಕೆಯನ್ನು ಬಯಲಿಗೆಳೆದ ವೂಬಾ ಬಟ್ಲರ್ ಅವರ ಪ್ರಯೋಗ ಹೇಗಿತ್ತು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಫೇಕ್ ರೀವ್ಹಿವ್ ಮೇಲೆ ಬಟ್ಲರ್ ಟಾರ್ಗೆಟ್!

ಫೇಕ್ ರೀವ್ಹಿವ್ ಮೇಲೆ ಬಟ್ಲರ್ ಟಾರ್ಗೆಟ್!

ಆನ್‌ಲೈನಿನಲ್ಲಿ ವಸ್ತುಗಳ ರೀವ್ಹಿವ್ ನೋಡುವ ಬಹುತೇಕರು ಅವುಗಳನ್ನು ನಂಬುತ್ತಾರೆ. ಆದರೆ, ಅವುಗಳ ಸತ್ಯಾಸತ್ಯತೆ ಏನು ಎಂಬುದನ್ನು ತೋರಿಸಲು ಒಬ್ಬ ಫ್ರೀಲಾನ್ಸ್(ಸ್ವತಂತ್ರ) ಲೇಖಕನಾಗಿದ್ದ ಬಟ್ಲರ್ ಅವರು ಟಾರ್ಗೆಟ್ ಮಾಡುತ್ತಾರೆ. ಇದಕ್ಕಾಗಿ ವಾಸ್ತವಿಕವಾಗಿ ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟೊ೦ದನ್ನು ಜಾಲತಾಣಗಳಲ್ಲಿ ತೇಲಿ ಬಿಟ್ಟ. ಬಟ್ಲರ್ ತನ್ನದೇ ಮನೆಯ ವಿಳಾಸವನ್ನು ಬಳಸಿ "ದಿ ಶೆಡ್ ಐಟ್ ಡಲ್ವಿಚ್" ಎಂಬ ಫರ್ಜಿ ರೆಸ್ಟೋರೆಂಟ್ ಪ್ರಾರಂಭಿಸುತ್ತಾರೆ.

ಭಕ್ಷ ಭೋಜ್ಯಗಳ ನಕಲಿ ಫೋಟೋಗಳು!

ಭಕ್ಷ ಭೋಜ್ಯಗಳ ನಕಲಿ ಫೋಟೋಗಳು!

ವಾಸ್ತವಿಕವಾಗಿ ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್ "ದಿ ಶೆಡ್ ಐಟ್ ಡಲ್ವಿಚ್" ಈಗ ಆನ್‌ಲೈನಿಗೆ ಕಾಲಿಡುತ್ತದೆ. ಅಂದರೆ, ಬಟ್ಲರ್ ಅವರು ತನ್ನ ರೆಸ್ಟೋರೆಂಟ್ ಹೆಸರಿನಲ್ಲಿ ವೆಬ್ಸೈಟ್ ಸೃಷ್ಟಿಸಿ, ಅದರಲ್ಲಿ ಬಾಯಲ್ಲಿ ನೀರು ಬರಿಸುವ ಅನೇಕ ಭಕ್ಷ ಭೋಜ್ಯಗಳ ನಕಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ತನ್ನ ಹೊಟೆಲ್‌ನ ವೈಶಿಷ್ಟಗಳ ಕುರಿತು ಪ್ರಶಂಸಿಸುತ್ತಾ ಎಲ್ಲಾ ಗ್ರಾಹಕರ ಮೂಡ್‌ಗೆ ಅನುಗುಣವಾಗಿ ಅಲ್ಲಿ ಆಹಾರ ದೊರೆಯುವದೆಂದು ಹೇಳಿಕೊಳ್ಳುತ್ತಾರೆ.

ಟ್ರಿಪ್ ಅಡ್ವೈಸರ್‌ನಲ್ಲಿ ನೋಂದಣಿ!

ಟ್ರಿಪ್ ಅಡ್ವೈಸರ್‌ನಲ್ಲಿ ನೋಂದಣಿ!

ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್ "ದಿ ಶೆಡ್ ಐಟ್ ಡಲ್ವಿಚ್" ಈಗ ಆನ್‌ಲೈನಿನಲ್ಲಿ ಭಕ್ಷ ಭೋಜ್ಯಗಳ ನಕಲಿ ಫೋಟೋಗಳಿಂದ ಕಂಗೊಳಿಸುತ್ತದೆ. ಇದಾದ ನಂತರ, ವೂಬಾ ಬಟ್ಲರ್ ಅವರು ಅಸ್ತಿತ್ವದಲ್ಲೇ ಇಲ್ಲದ ಈ ರೆಸ್ಟೋರೆಂಟ್ ಅನನ್ನು ಜನಪ್ರಿಯ ಜಾಲತಾಣ ಟ್ರಿಪ್ ಎಡ್ವೈಸರ್ನಲ್ಲಿ ತನ್ನದೇ ಫೋನ್ ನಂಬರ್ ನೀಡಿ ನೋಂದಾಯಿಸುತ್ತಾರೆ. ಕೆಲ ದಿನಗಳ ತರುವಾಯ ಟ್ರಿಪ್ ಎಡ್ವೈಸರ್ ತನ್ನ ರೆಸ್ಟೋರೆಂಟ್'ಗಳ ಪಟ್ಟಿಯಲ್ಲಿ ಇದನ್ನು ಪ್ರಕಟಿಸಿದ ನಂತರ ಫೇಕ್ ರೀವ್ಹಿವ್'ಗಳ ಕಾಳ ಧಂದೆ ಹೆಜ್ಜೆ ಕಾಣಿಸುತ್ತದೆ.

18190 ಸ್ಥಾನದಿಂದ 30ನೇ ಸ್ಥಾನಕ್ಕೆ!

18190 ಸ್ಥಾನದಿಂದ 30ನೇ ಸ್ಥಾನಕ್ಕೆ!

ಟ್ರಿಪ್ ಅಡ್ವೈಸರ್ ತನ್ನ ರೆಸ್ಟೋರೆಂಟ್'ಗಳ ಪಟ್ಟಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್ "ದಿ ಶೆಡ್ ಐಟ್ ಡಲ್ವಿಚ್" ಅನ್ನು ಪ್ರಕಟಿಸಿದಾಗ, ಟ್ರಿಪ್ ಎಡ್ವೈಸರ್'ನ ರ್ಯಾಂಕಿಂಗ್'ನಲ್ಲಿ ಈ ಹೋಟೆಲ್ 18190 ಸ್ಥಾನದಲ್ಲಿರುತ್ತದೆ. ಆದರೆ, ಮುಂದೆ ಬಟ್ಲರ್ ತನ್ನ ಸ್ನೇಹಿತರ ನೆರವಿನಿಂದ ಈ ಫರ್ಜಿ ರೆಸ್ಟೋರೆಂಟ್'ನ ವೈಶಿಷ್ಟ್ಯಗಳ ಕುರಿತು ಫೇಕ್ ರೀವ್ಹಿವ್ಗಳನ್ನು ಬರೆಸಿದ ನಂತರ ಕೆಲವೇ ದಿನಗಳಲ್ಲಿ 30ನೇ ಸ್ಥಾನಕ್ಕೆ ಏರುತ್ತದೆ. ನೆನಪಿರಲಿ ಇದು ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್.!

ನಕಲಿ ಪರೀಕ್ಷೆ ಮುಂದುವರಿಕೆ!

ನಕಲಿ ಪರೀಕ್ಷೆ ಮುಂದುವರಿಕೆ!

ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್ ಅಂತಹ ಜನಪ್ರಿಯ ಜಾಲತಾಣ ಟ್ರಿಪ್ ಅಡ್ವೈಸರ್‌ನಲ್ಲಿ 30ನೇ ಸ್ಥಾನ ಪಡೆದಾಗ ಈ ಫೇಕ್ ರೀವ್ಹಿವ್ ನಕಲಿ ಪರೀಕ್ಷೆ ಮುಂದುವರೆಸಲಾಗುತ್ತದೆ. ರೆಸ್ಟೋರೆಂಟ್ ಬುಕ್ ಮಾಡಲು ವೆಬ್ಸೈಟ್ನಲ್ಲಿ ಕೇವಲ ಮುಂಗಡವಾಗಿ ಕಾಯ್ದಿರಿಸಿದ ಗ್ರಾಹಕರಿಗೆ ಮಾತ್ರ ಮತ್ತು ಬುಕಿಂಗ್ ಕೇವಲ ಫೋನ್‌ನಿಂದ ಮಾತ್ರ ಎಂದು ಬರೆದಿರಲಾಗುತ್ತದೆ. ಗ್ರಾಹಕರು ರೆಸ್ಟೋರೆಂಟ್ ಬುಕ್ಕಿಂಗ್'ಗೆ ಫೋನ್ ಮಾಡಿದಾಗ ಪ್ರತಿ ಬಾರಿ ಅವರನ್ನು ವೇಟಿಂಗ್ ಲಿಸ್ಟ್ ನಲ್ಲಿಟ್ಟು ಕಾಯಿಸಲಾಗುತ್ತದೆ.

ಮೋಸದಲ್ಲೇ ಮೋಸದ ರೀವ್ಹಿವ್

ಮೋಸದಲ್ಲೇ ಮೋಸದ ರೀವ್ಹಿವ್

ಗ್ರಾಹಕರು ರೆಸ್ಟೋರೆಂಟ್ ಬುಕ್ಕಿಂಗ್'ಗೆ ಫೋನ್ ಮಾಡಿದಾಗ ಪ್ರತಿ ಬಾರಿ ಅವರನ್ನು ವೇಟಿಂಗ್ ಲಿಸ್ಟ್ ನಲ್ಲಿಟ್ಟು ಕಾಯಿಸುವುದರಿಂದ ಜನರಿಗೆ ಸಂಶಯ ಬಾರದಿರಲೆಂದು ಫೇಕ್ ರೀವ್ಹಿವ್ಗಳ ಸಹಾಯದಿಂದಲೇ ಜನರಿಗೆ ದಾರಿ ತಪ್ಪಿಸಲಾಗುತ್ತದೆ. 'ಎರಡು ವಾರಗಳ ಕಾದ ನಂತರ ಇಂತಹ ಅದ್ಭುತ ರೆಸ್ಟೋರೆಂಟ್ನಲ್ಲಿ ಊಟಮಾಡುವ ಸೌಭಾಗ್ಯ ಒದಗಿ ಬಂತು' ಎಂದು ಹೇಳುವಂತಹ ಆಕರ್ಷಣೀಯ (ಫೇಕ್) ರೀವ್ಹಿವ್ ಜನರನ್ನು ಮತ್ತಷ್ಟು ನಂಬುವಂತೆ ಮಾಡಲಾಗುತ್ತದೆ. ಇದರಿಂದ ಬುಕ್ಕಿಂಗ್ ಮಾಡುವವರ ಪ್ರಮಾಣ ಮತ್ತೆ ಹೆಚ್ಚಾಗುತ್ತದೆ.

ಜನಪ್ರಿಯವಾಯ್ತು ರೇಸ್ಟೋರೆಂಟ್!

ಜನಪ್ರಿಯವಾಯ್ತು ರೇಸ್ಟೋರೆಂಟ್!

ಹೀಗೆ ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್‌ನಲ್ಲಿ ಭೋಜನ ಸವಿಯಲು ಮುಂಗಡವಾಗಿ ಬುಕಿಂಗ್ ಮಾಡುವ ಸಂಖ್ಯೆ ಹೆಚ್ಚಾಗುತ್ತದೆ. ಆನ್‌ಲೈನಿನ ರೀವ್ಹಿವ್ ನೋಡುತ್ತಿದ್ದ ಜನ ಕನಿಷ್ಠ ಪಕ್ಷ ಎರಡರಿಂದ ಮೂರು ವಾರ ತಮ್ಮ ಸರದಿಗಾಗಿ ಕಾಯಬೇಕೆಂದು ತೀರ್ಮಾನಿಸುತ್ತಾರೆ. ಕನಿಷ್ಠ ಪಕ್ಷ ಎರಡರಿಂದ ಮೂರು ವಾರ ತಮ್ಮ ಸರದಿಗಾಗಿ ಕಾಯಬೇಕೆಂದು ತಿಳಿದೇ ಜನರು ಹೋಟೆಲ್ ಅನ್ನು ಬುಕ್ಕಿಂಗ್ ಮಾಡಲು ಪ್ರಾರಂಭಿಸುತ್ತಾರೆ. ಇದಕ್ಕೆ ಮೊದಲೇ ಹಣವನ್ನು ನೀಡಲು ಬಹುತೇಕರು ಒಪ್ಪಿಕೊಳ್ಳುತ್ತಾರೆ.

ಲಂಡನ್ನಿನ ನಂಬರ್ 1 ರೆಸ್ಟೋರೆಂಟ್!

ಲಂಡನ್ನಿನ ನಂಬರ್ 1 ರೆಸ್ಟೋರೆಂಟ್!

ಫೇಕ್ ರೀವ್ಹಿವ್ ಓದಿಕೊಂಡು, ಅಸ್ತಿತ್ವದಲ್ಲೇ ಇಲ್ಲದ ನಕಲಿ ರೆಸ್ಟೋರೆಂಟ್‌ನಲ್ಲಿ ಭೋಜನ ಸವಿಯಲು ಮುಂಗಡವಾಗಿ ಬುಕಿಂಗ್ ಮಾಡಿದವರು ತಮ್ಮ ಸರದಿಗಾಗಿ ಕಾದು ಕುಳಿತುಕೊಳ್ಳುತ್ತಾರೆ. ವಿಚಿತ್ರವೆಂದರೆ ಅಸಲಿಗೆ ಅಸ್ತಿತ್ವದಲ್ಲೇ ಇಲ್ಲದ ಅಸಲಿ ಅತಿಥಿಗಳ ಈ ನಕಲಿ ರೆಸ್ಟೋರೆಂಟ್ ಟ್ರಿಪ್ ಎಡ್ವೈಸರ್ನಲ್ಲಿ ನೊಂದಾಯಿಸಲ್ಪಟ್ಟ ಕೇವಲ ಏಳು ತಿಂಗಳಲ್ಲಿ ಲಂಡನ್ನಿನ ನಂಬರ್ 1 ರೆಸ್ಟೋರೆಂಟ್ ಆಗುತ್ತದೆ. ಫೇಕ್ ರೀವ್ಹಿವ್'ಗಳ ಕಾಳ ಧಂದೆಯನ್ನು ಬೆತ್ತಲೆ ಮಾಡಲು ಬಟ್ಲರ್ ಯಶಸ್ವಿಯೂ ಆಗುತ್ತಾರೆ. ಇದು ಒಂದು ಸ್ಯಾಂಪಲ್ ಅಷ್ಟೇ ಅಂತಲೂ ಹೇಳುತ್ತಾರೆ.!

Best Mobiles in India

English summary
With the help of fake reviews, I Made My Shed the Top Rated Restaurant On TripAdvisor! mystique and nonsense, I was going to do it: turn my shed into London's top-rated restaurant on TripAdvisor. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X