ವಿಶ್ವದ ಮೊದಲ ಡಬ್ "ಮದುವೆ ಪ್ರಸ್ತಾಪ" ವೀಡಿಯೋ

By Varun
|
ವಿಶ್ವದ ಮೊದಲ ಡಬ್

ಮದುವೆಗೆ ಹುಡುಗಿನ ಒಪ್ಪಿಸೋಕೆ ಎಷ್ಟೆಲ್ಲಾ ಕಸರತ್ತು ಮಾಡಬೇಕು ಅಲ್ವಾ. ಹುಡ್ಗೀರು ಅಂದ್ರೆ ಸುಮ್ನೆನಾ. ಕೆಲವರು ಪ್ರೇಮ ಪತ್ರ ಕೊಟ್ಟು ಪ್ರಪೋಸ್ ಮಾಡ್ತಾರೆ. ಧೈರ್ಯ ಇಲ್ದೆ ಇರೋರು ಫ್ರೆಂಡ್ ಕೈಲಿ ಹೇಳಿಸ್ತಾರೆ, ಇನ್ನ ಕೆಲವರು ದೊಡ್ದವರನ್ನ ಮೊದಲು ಕೇಳೋಣ ಅಂತ ಅನ್ನಿಯನ್ ಸ್ಟೈಲ್ ಅಲ್ಲಿ ಹುಡುಗಿಯ ತಾಯಿಗೆ ವಿಷಯಾನ ಹೇಳ್ತಾರೆ.

ಆದರೆ ಅಮೆರಿಕಾದ ಪೋರ್ಟ್ ಲ್ಯಾಂಡ್ ಪ್ರಾಂತ್ಯದ ನಟ ಐಸಾಕ್ ಲ್ಯಾಂಬ್ ತನ್ನ ಗರ್ಲ್ ಫ್ರೆಂಡ್ ಅಮಿ ಫ್ರಾನ್ಕೆಲ್ ಗೆ ಮಾಡಿದ ಮದುವೆ ಪ್ರಸ್ತಾಪ ಈಗ ಯೂಟ್ಯೂಬ್ ನಲ್ಲಿ ಹುಚ್ಚಿಡಿಸಿದೆ.ವಿಶ್ವದ ಮೊದಲ ಹಾಡನ್ನು ಡಬ್ ಮಾಡಿದ ಮದುವೆ ಪ್ರಸ್ತಾಪದ ವೀಡಿಯೋಇದಾಗಿದ್ದು, ಈಗಾಗಲೇ 60 ಲಕ್ಷ ಹಿಟ್ಸ್ ಕಂಡಿದೆ.ಬಹಳ ಕ್ರಿಯಾಶೀಲವಾಗಿ ಮಾಡಿರುವ ಈ ಪ್ರಸ್ತಾಪದ ವೀಡಿಯೋ ನೋಡುಗನ ತಲೆಯಲ್ಲಿ ಹೊಸದೊಂದು ಮದುವೆ ಪ್ರಸ್ತಾಪದ ಐಡಿಯಾ ಬಂದರೂ ಆಶ್ಚರ್ಯವಿಲ್ಲ.

ಈ ವೀಡಿಯೋದ ಐಡಿಯಾನೆ ಸೂಪರ್ ಆಗಿದೆ. ಮೊದಲುಐಸಾಕ್, ತನ್ನ ಗರ್ಲ್ ಫ್ರೆಂಡ್ ಅನ್ನು ತನ್ನ ಮನೆಗೆ ಬಂದು , ತನ್ನ ತಂದೆ ತಾಯಿಯ ಹತ್ತಿರ ಒಮ್ಮೆ ಮಾತಾಡುವಂತೆ ಆಕೆಯನ್ನು ಕೇಳಿಕೊಳ್ಳುತ್ತಾನೆ. ಆಕೆಬಂದು ಕಾರಿನಿಂದ ಇಳಿದ ತಕ್ಷಣವೆ ಹಿಂಬದಿಯಲ್ಲಿ ಕೂರಿಸಿ ಐಸಾಕ್ ನ ಅಣ್ಣ ಆಕೆಗೆ ಹೆಡ್ ಫೋನ್ ಅನ್ನು ಕೊಟ್ಟು ಬ್ರುನೋ ಮಾರ್ಸ್ ಎಂಬ ಹಾಡುಗಾರನ ಫೇಮಸ್ ಹಾಡು "marry you" ಹಾಡನ್ನು ಕೇಳುವಂತೆ ಆಕೆಗೆ ಕೇಳಿಕೊಳ್ಳುತ್ತಾನೆ. ಅಲ್ಲಿಂದ ಶುರುವಾಗುತ್ತದೆ ನೋಡಿ ಈ ಪ್ರಸ್ತಾಪದ ಮಜಾ.

ಹಾಡನ್ನು ಒಬ್ಬಬ್ಬರೇ ಹಾಡುತ್ತ, ಡ್ಯಾನ್ಸ್ ಮಾಡುತ್ತಾ ಇರುವಾಗಲೇ ಆಕೆ ಕೂತಿರುವ ಕಾರ್ ಚಲಿಸಲಾರಂಭಿಸುತ್ತದೆ. ಕಾರ್ ಹಾಗೆ ಮೆತ್ತಗೆ ಮುಂದೆ ಹೋಗುತ್ತೆ, ಹಾಗೆ ಹಾಡನ್ನು ಐಸಾಕ್ ನ ಅಣ್ಣ, ಹಾಗೇ ಸುಮಾರು ಜನ ಒಬ್ಬಬರಾಗಿ ಬಂದು "marry you" ಹಾಡನ್ನು ಹಾಡುತ್ತ, ಕುಣಿಯುತ್ತ ಇರುತ್ತಾರೆ.

ಅಮಿ ಆಶ್ಚರ್ಯಚಕಿತವಾಗಿ ಏನಾಗುತ್ತಿದೆ ಎಂದು ಅರ್ಥವಾಗದೆ ನಗುತ್ತ ಇರುತ್ತಾಳೆ. ಹಾಗೇ ಹಾಡು ಮುಂದುವರೆಯುತ್ತದೆ, ಸಾಕಷ್ಟು ಜನ ಸೇರಿಕೊಂಡು ಹಾಡು ಹೇಳುತ್ತಲೇ ಇರುತ್ತಾರೆ. ಇನ್ನೇನು ಹಾಡು ಮುಗಿಯಬೇಕು, ಆಗ ಐಸಾಕ್ ಲ್ಯಾಂಬ್ ಆ ಗುಂಪಿನ ಹಿಂದಿನಿಂದ ಮದುವೆ ಗಂಡಿನ ವೇಷದಲ್ಲಿ ಬಂದು ಗರ್ಲ್ ಫ್ರೆಂಡ್ ಅಮಿ ಫ್ರಾನ್ಕೆಲ್ ಅನ್ನು "will you marry me " ಎಂದು ಹಾಡು ಹೇಳುತ್ತಲೇ ತನ್ನ ತಂದೆ ತಾಯಿಯ ಸಮ್ಮುಖದಲ್ಲಿ ಪ್ರೊಪೋಸ್ ಮಾಡುತ್ತಾನೆ. ಹಾಡೆಲ್ಲ ಮುಗಿದ ಮೇಲೆ ಆಕೆಯ ಮುಂದೆ ಮಂಡಿಯೂರಿತನ್ನ ಪ್ರೇಮವನ್ನು ನಿವೇದಿಸಿಕೊಂಡು ಆಕೆಯನ್ನು ಚುಂಬಿಸುತ್ತಾನೆ.

ಡಬ್ಬಿಂಗ್ ಡಬ್ಬಿಂಗ್ ಅಂತ ಜಗಳ ಆಡುತ್ತಿರೋ ಸಮಯದಲ್ಲಿ ಡಬ್ಬಿಂಗ್ ಅನ್ನು ಹೇಗೆ ಕ್ರಿಯಾಶೀಲವಾಗಿ ಉಪಯೋಗಿಸಿಕೊಳ್ಳಬಹುದು ಅಂತ ಈ ವೀಡಿಯೋ ನೋಡಿ ಕಲೀಬೇಕು. ಹೀಗೆ ಲಿಪ್ ಸಿಂಕ್ ಮಾಡಿ ಮದುವೆ ಪ್ರಸ್ತಾಪ ಮಾಡಿದ ಐಸಾಕ್ ಲ್ಯಾಂಬ್ ಗೆ ನಮ್ಮ ಶುಭಾಷಯ ಹಾಗು ಅವನ ಕ್ರಿಯಾಶೀಲತೆಗೆ ನಮ್ಮ ಸಲಾಂ ಹೇಳೋಣ. ನೀವೂ ಏನಾದರೂ ಡಿಫರೆಂಟ್ ಅಂತ ಅನ್ನಿಸಿದರೆ ಈ ವೀಡಿಯೋ ನೋಡಿ ಮತ್ತಷ್ಟು ಪ್ರೇರಣೆ ಪಡೆಯಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X