ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಸೋಲು: ನಂ 1 ಪಟ್ಟ ಶಿಯೋಮಿಗೆ..!

|

ಭಾರತದ ನಂಬರ್ 1 ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಕರ ಕಂಪನಿ ಶಿಯೋಮಿ, ದಕ್ಷಿಣ ಕೋರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್‌ಸಂಗ್‌ ಅನ್ನು ಹಿಂದಿಕ್ಕಿ ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ 1 ಸ್ಮಾರ್ಟ್‌ಫೋನ್ ಮಾರಾಟ ಕಂಪನಿ ಎನ್ನುವ ಪಟ್ಟವನ್ನು ಅಲಕಂಕರಿಸಿದೆ.

ಭಾರತದಲ್ಲಿ ಸ್ಯಾಮ್‌ಸಂಗ್‌ಗೆ ಸೋಲು: ನಂ 1 ಪಟ್ಟ ಶಿಯೋಮಿಗೆ..!

2015ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಶಿಯೋಮಿ ಅತೀ ಕಡಿಮೆ ಅವಧಿಯಲ್ಲಿ ಅತೀ ವೇಗದ ಬೆಳವಣಿಯನ್ನು ಸಾಧಿಸಿದ್ದು, ಹಂತ ಹಂತವಾಗಿ ಬೆಳವಣಿಗೆಯನ್ನು ಸಾಧಿಸಿರುವ ಶಿಯೋಮಿ, 2017ರ ಕೊನೆ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ ದೇಶದ ನಂಬರ್ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.

ಓದಿರಿ: ಎದೆ ಝಲ್ ಎನ್ನಿಸುವವ ವೈರಲ್ ವಿಡಿಯೋ.! ರೈಲಿನ ಮುಂದೆ ಸೆಲ್ಫಿ: ಸಾವಿನ ದವಡೆಯಲ್ಲಿ ಯುವಕ..!

ಶೇ.25 ರಷ್ಟು ಹಿಡಿತ:

ಶೇ.25 ರಷ್ಟು ಹಿಡಿತ:

ಶಿಯೋಮಿ ಭಾರತೀಯರ ನಾಡಿಮಿಡಿತವನ್ನು ಅರಿತು ಕೊಂಡಿದ್ದು, ಅದಕ್ಕಾಗಿಯೇ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೇ ಕಾರಣಕ್ಕಾಗಿ ಹೆಚ್ಚಿನ ಮಂದಿ ಶಿಯೋಮಿ ಫೋನ್‌ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಶೇ.25ರಷ್ಟು ಹಿಡಿತವನ್ನು ಸಾಧಿಸಿದೆ ಎನ್ನಲಾಗಿದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಬಜೆಟ್‌ ಫೋನ್‌ಗಳೇ ಶಿಯೋಮಿ ಅಸ್ಟ್ರ:

ಬಜೆಟ್‌ ಫೋನ್‌ಗಳೇ ಶಿಯೋಮಿ ಅಸ್ಟ್ರ:

ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಕಟ್ಟೆಗೆ ಬಿಡುಗಡೆ ಮಾಡುವ ಶಿಯೋಮಿ, ಕಡಿಮೆ ಬೆಲೆಯಲ್ಲಿ ಅತೀ ಹೆಚ್ಚಿನ ಆಯ್ಕೆಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದರಿಂದಾಗಿ ಹೆಚ್ಚಿನ ಜನರನ್ನು ಶಿಯೋಮಿ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

ಮುಂದೆಯೂ ಅಬ್ಬರ:

ಮುಂದೆಯೂ ಅಬ್ಬರ:

ಈಗಾಗಲೇ ಮಾರುಕಟ್ಟೆಗೆ ಶಿಯೋಮಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆದಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಶಿಯೋಮಿ ನೋಟ್ 4 ಸ್ಮಾರ್ಟ್‌ಫೋನ್ ಮುಂದಿನ ಅವರಣಿಕೆಯಾದ ಶಿಯೋಮಿ ನೋಟ್ 5 ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ. ಇದು ಇನ್ನು ಹೆಚ್ಚಿನ ಖ್ಯಾತಿಯನ್ನು ಪಡೆಯುವ ಸಾಧ್ಯತೆ ನೀಡಲಿದೆ.

ಸ್ಯಾಮ್‌ಸಂಗ್ ಎರಡನೇ ಸ್ಥಾನಕ್ಕೆ:

ಸ್ಯಾಮ್‌ಸಂಗ್ ಎರಡನೇ ಸ್ಥಾನಕ್ಕೆ:

ಕಳೆದ ಮೂರು ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಸ್ಯಾಮ್‌ಸಂಗ್ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ ಎನ್ನಲಾಗಿದೆ. ಸ್ಯಾಮ್‌ಸಂಗ್ ಹಿಂದಕ್ಕೆ ಹಾಕಿದ ಶಿಯೋಮಿ ನಂಬರ್ 1 ಪಟ್ಟವನ್ನು ಅಲಂಕರಿಸಿದೆ ಎನ್ನಲಾಗಿದೆ.

Best Mobiles in India

English summary
Xiaomi beats Samsung to be top phone company in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X