Subscribe to Gizbot

ಎದೆ ಝಲ್ ಎನ್ನಿಸುವವ ವೈರಲ್ ವಿಡಿಯೋ.! ರೈಲಿನ ಮುಂದೆ ಸೆಲ್ಫಿ: ಸಾವಿನ ದವಡೆಯಲ್ಲಿ ಯುವಕ..!

Written By:

ದಿನೇ ದಿನೇ ಸೆಲ್ಪಿ ಹುಚ್ಚು ಹೆಚ್ಚಾಗುತ್ತಿದ್ದು, ಸೆಲ್ಫಿ ತೆಗೆಯಬೇಕು ಅಂತ ಹುಚ್ಚು ಸಾಹಸಗಳನ್ನ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರೋ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಹೈದ್ರಾಬಾದ್‌ನಲ್ಲಿ ಯುವಕನೋರ್ವ ಸೆಲ್ಫಿ ವಿಡಿಯೋ ಹೋಗಿ ಸಾವಿನ ಸನಿಹಕ್ಕೆ ಹೋಗಿ ಬಂದಿದ್ದಾನೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ.

ಎದೆ ಝಲ್ ಎನ್ನಿಸುವವ ವೈರಲ್ ವಿಡಿಯೋ.! ರೈಲಿನ ಮುಂದೆ ಸೆಲ್ಫಿ:


ರೈಲು ಬರುತ್ತಿದ್ದ ವೇಳೆಯಲ್ಲಿ ರೈಲ್ವೆ ಹಳಿಯ ಬಳಿ ತನ್ನ ಫೋನಿನಲ್ಲಿ ಹಿಡಿದು ಸೆಲ್ಫಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಸನಿಹಕ್ಕೆ ರೈಲು ಬಂದರೂ ತಿಳಿದಿಲ್ಲ. ಹಿಂದಿನಿಂದ ಒಬ್ಬರು ಕರೆದರು ಸಹ ಎಚ್ಚೆತ್ತು ಕೊಳ್ಳದೆ ಅಲ್ಲಿಯೇ ನಿಂತಿದ್ದಾನೆ. ರೈಲು ಬಂದು ಡಿಕ್ಕಿ ಹೊಡೆದಿದ್ದು, ಘಟನೆಯಿಂದ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಪ್ರಾಣಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಓದಿರಿ: ಮತ್ತೊಂದು ದಾಖಲೆ ನಿರ್ಮಿಸಿದ ಅಂಬಾನಿ: ಜಿಯೋ ಫೋನ್ ದೇಶದ ನಂ.1..!

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?

ರೈಲು ಬರುತ್ತಿರುವುದನ್ನು ತನ್ನ ಕೈ ನಲ್ಲಿ ತೋರಿಸುತ್ತಾ ವಿಡಿಯೋ ಮಾಡುತ್ತಾ ನಿಂದ್ದವನು ಎಂಜಿನ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾನೆ. ಇವೆಲ್ಲವೂ ಯುವಕನ ಸೆಲ್ಫಿ ವಿಡಿಯೋದಲ್ಲೇ ಸೆರೆಯಾಗಿದೆ. ರೈಲು ಯುವಕನಿಗೆ ಡಿಕ್ಕಿಯಾಗಿ ಆತ ಕೆಳಗೆ ಬೀಳುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. ನೀವು ಒಮ್ಮೆ ವಿಡಿಯೋ ನೋಡಿ. ಅಲ್ಲದೇ ಈ ಮಾದರಿಯ ಸಾಹಸವನ್ನು ಇನ್ನೆಂದು ಮಾಡಬೇಡಿ.

English summary
Selfie Video With Running Train Lands Hyderabad Youth In Hospital. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot