Subscribe to Gizbot

ಬಂದಿದೆ ಶಿಯೋಮಿ ಬ್ಲ್ಯಾಕ್ಶಾರ್ಕ್ ನ ಟೀಸರ್; ಇದರಲ್ಲಿದೆ ಸ್ನ್ಯಾಪ್ಡ್ರಾಗನ್ 845 SoC

Posted By: Lekhaka

ಗೀಕ್ಬೆಂಚ್ ಮತ್ತು ಅಂಟುಟು ಬೆಂಚ್ಮಾರ್ಕಿಂಗ್ ಡೇಟಾಬೇಸ್ಗಳಲ್ಲಿ ಕಾಣಿಸಿದ ಬ್ಲ್ಯಾಕ್ಶಾರ್ಕ್ ಗೇಮಿಂಗ್ ಸ್ಮಾರ್ಟ್ಫೋನ್ ನಿಮಗೆ ನೆನಪಿದೆಯೇ? ಶಿಯೋಮಿ ಸಂಸ್ಥೆ ತಯಾರಿಸುತ್ತಿರುವ ಮೊದಲ ಗೇಮಿಂಗ್ ಸ್ಮಾರ್ಟ್ಫೋನ್ ಇದು. ಶಿಯೋಮಿ ಬ್ಲ್ಯಾಕ್ ಶಾರ್ಕ್ ಬ್ರ್ಯಾಂಡ್ ನಲ್ಲಿ 2017 ರಿಂದ ಹೂಡಿಕೆ ಪ್ರಾರಂಭಿಸಿದ್ದು ಈ ಸಾಧನವನ್ನು ಅದೇ ಬ್ರ್ಯಾಂಡ್ ನಲ್ಲಿ ಬಿಡುಗಡೆ ಮಾಡಲಿದೆಯಂತೆ.

ಬಂದಿದೆ ಶಿಯೋಮಿ ಬ್ಲ್ಯಾಕ್ಶಾರ್ಕ್ ನ ಟೀಸರ್

ಶಿಯೋಮಿ ಸಂಸ್ಥೆಯು ಬ್ಲ್ಯಾಕ್ಶಾರ್ಕ್ ಗೇಮಿಂಗ್ ಸ್ಮಾರ್ಟ್ಫೋನ್ ನ ಅಸ್ತಿತ್ವದ ಕುರಿತು ಯಾವುದೇ ಖಚಿತ ಮಾಹಿತಿ ನೀಡಿಲ್ಲವಾದರೂ ಬ್ಲ್ಯಾಕ್ ಶಾರ್ಕ್ ನ ಅಧಿಕೃತ ವೇಯ್ಬೋ ಪೇಜ್ ನಲ್ಲಿ ಈ ಸಾಧನದ ಕುರಿತು ಅಲ್ಪಸ್ವಲ್ಪ ಮಾಹಿತಿಯನ್ನೊಳಗೊಂಡ ಟೀಸರ್ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ಟೀಸರ್ ನಲ್ಲಿ ಕ್ವಾಲ್ಕಮ್ ನ ಹೆಸರು ಸೂಚಿಸಲಾಗಿದ್ದು ಸ್ನ್ಯಾಪ್ಡ್ರಾಗನ್ 845 SoC ಯ ಬಳಕೆ ಕುರಿತು ಇಲ್ಲಿ ಸುಳಿವು ನೀಡಲಾಗಿದೆ. ಕ್ವಾಲ್ಕಮ್ ಚೈನಾ ಕೂಡ ಈ ಮಾಹಿತಿಯನ್ನು ಅನುಮೋದಿಸಿದೆ. ಈ ಟೀಸರ್ ನಲ್ಲಿ ಶಿಯೋಮಿ ಯ ಉಲ್ಲೇಖನ ಇಲ್ಲದಿರುವುದು ಗಮನಾರ್ಹ ಸಂಗತಿಯಾಗಿದೆ.

ಈ ಹಿಂದೆ ಸೋರಿಕೆಯಾದ ಶಿಯೋಮಿ ಬ್ಲ್ಯಾಕ್ಶಾರ್ಕ್ ನ ಅಂಟುಟು ಬೆಂಚ್ಮಾರ್ಕ್ ಸ್ಕ್ರೀನ್ಶಾಟ್ ನ ಅನುಸಾರ ಈ ಸ್ಮಾರ್ಟ್ಫೋನ್ 32GB ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ. ಈ ವಿಷಯ ಶಿಯೋಮಿ ಪ್ರಿಯರಿಗೆ ತುಸು ನಿರಾಸೆಯನ್ನುಂಟು ಮಾಡಬಹುದಾದರೂ 64GB ಮತ್ತು 128GB ಸ್ಟೋರೇಜ್ ಸಾಮರ್ಥ್ಯವನ್ನೊಳಗೊಂಡ ಉನ್ನತ ಆವೃತ್ತಿಗಳು ಬರಬಹುದೆಂಬ ಆಶಾವಾದ ನಮ್ಮದು. ಸ್ನ್ಯಾಪ್ಡ್ರಾಗನ್ 845 SoC ಎಡ್ರೀನೋ 630GPU ಮತ್ತು 8GB RAM ನೊಂದಿಗೆ ಕಾರ್ಯನಿರ್ವಹಿಸಲಿದೆ.

ಕೆಲದಿನಗಳ ಹಿಂದೆ ಶಿಯೋಮಿ-ಬ್ಲ್ಯಾಕ್ಶಾರ್ಕ್ ಗೇಮಿಂಗ್ ಸ್ಮಾರ್ಟ್ಫೋನ್ ನ ಗೀಕ್ಬೆಂಚ್ ಲಿಸ್ಟಿಂಗ್ ಆನ್ಲೈನ್ ನಲ್ಲಿ ಕಂಡುಬಂದಿದ್ದು ಒಂದಿಷ್ಟು ಮಾಹಿತಿಯನ್ನು ಹೊರಗೆಡವಿದೆ. ಈ ಮಾಹಿತಿಯ ಅನುಸಾರ ಈ ಬ್ಲ್ಯಾಕ್ಶಾರ್ಕ್ ಸ್ಮಾರ್ಟ್ಫೋನ್ SKR-A0 ಎಂಬ ಮಾಡೆಲ್ ನಂಬರ್ ಹೊಂದಿರಲಿದ್ದು, ಆಂಡ್ರಾಯ್ಡ್ 8.0 ಓರಿಯೋ ಓಎಸ್ ಹೊಂದಿರಲಿದೆ. ಈ ಬೆಂಚ್ಮಾರ್ಕ್ ಲಿಸ್ಟಿಂಗ್ ನಲ್ಲೂ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 845 SoC ಮತ್ತು 8GB RAM ಹೊಂದಿರುವುದಾಗಿ ತಿಳಿಸಲಾಗಿದೆ.

ಶಿಯೋಮಿ ಸ್ಮಾರ್ಟ್ಫೋನ್ ಗಳ ಪೈಕಿ ಶಕ್ತಿಶಾಲಿ ಎಂದೇ ಹೇಳಲಾಗುತ್ತಿರುವ ಈ ಬ್ಲ್ಯಾಕ್ಶಾರ್ಕ್ ಗೇಮಿಂಗ್ ಸ್ಮಾರ್ಟ್ಫೋನ್ FHD+(2160X1080) ಡಿಸ್ಪ್ಲೇ ಮತ್ತು 18:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಶಿಯೋಮಿ ಗೇಮಿಂಗ್ ಸ್ಮಾರ್ಟ್ಫೋನ್ ನ ಅಂಟುಟು ಸ್ಕೋರ್ 270,680 ಪಾಯಿಂಟ್ಗಳಾಗಿದ್ದು, ಇದೇ ಸಾಧನ ಗೀಕ್ಬೆಂಚ್ ನ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಟೆಸ್ಟ್ ಗಳಲ್ಲಿ ಕ್ರಮವಾಗಿ 2452 ಮತ್ತು 8452 ಪಾಯಿಂಟ್ಗಳನ್ನು ಗಳಿಸಿದೆ.

ಮೊಬೈಲ್, ಟಿವಿ ಖರೀದಿಸುವವರಿಗೆ ಇಂದು ಲಾಸ್ಟ್ ಚಾನ್ಸ್!..ನಾಳೆಯಿಂದ ಬೆಲೆಗಳು ಹೆಚ್ಚು!!

ಶಿಯೋಮಿ ಬ್ಲ್ಯಾಕ್ಶಾರ್ಕ್ SKR-A0 ಇರುವುದು ನಿಜವೇ ಆಗಿದ್ದಲ್ಲಿ ಅದು ನವಂಬರ್ 2017ರಲ್ಲಿ ಬಿಡುಗಡೆಯಾದ ಗೇಮಿಂಗ್ ಸ್ಮಾರ್ಟ್ಫೋನ್ ರೇಝರ್ ಫೋನ್ ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. 120Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ ಮತ್ತು ರೇಝರ್ ಫೋನ್ ನಂತೆ ಅಧಿಕ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬ್ಲ್ಯಾಕ್ಶಾರ್ಕ್ ಲಾಂಚ್ ಆಗಬಹುದೆಂಬ ಅನಿಸಿಕೆ ನಮ್ಮದು.

Source

English summary
Xiaomi Blackshark gaming smartphone is said to be in the making with an octa-core Qualcomm Snapdragon 845 chipset and 8GB RAM. A teaser of the smartphone also confirms the use of the powerful chipset. The Blackshark smartphone has been spotted on the AnTuTu and Geekbench benchmarking databases in the past.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot