ಶಿಯೋಮಿಯಿಂದ ಹೊಸ 2 ಇನ್‌ 1 ಲ್ಯಾಪ್‌ಟಾಪ್‌ ಬಿಡುಗಡೆ!

|

ಟೆಕ್‌ ವಲಯದ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಶಿಯೋಮಿ ಕಂಪೆನಿ ಕೂಡ ಒಂದು. ತನ್ನ ವಿಭಿನ್ನ ಹಾಗೂ ವಿಶೇಷ ಗ್ಯಾಜೆಟ್ಸ್‌ಗಳ ಮೂಲಕ ಗ್ರಾಹಕರು ಗಮನ ಸೆಳೆದಿದೆ. ವೈವಿಧ್ಯಮಯವಾದ ಸ್ಮಾರ್ಟ್‌ಫೋನ್‌ಗಳು, ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳು ಮಾತ್ರವಲ್ಲದೆ ಆಕರ್ಷಕವಾದ ಲ್ಯಾಪ್‌ಟಾಪ್‌ಗಳನ್ನು ಕೂಡ ಪರಿಚಯಿಸಿದೆ. ಇದಲ್ಲದೆ ಸ್ಮಾರ್ಟ್‌ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲಿ ಸಹ ತನ್ನ ಪ್ರಭಾವವನ್ನು ಬೀರಿದೆ. ಸದ್ಯ ಇದೀಗ ಶಿಯೋಮಿ ಕಂಪೆನಿ ವಿಂಡೋಸ್‌ 11 ಬೆಂಬಲಿಸುವ ಬುಕ್‌ S 12.4 ಟ್ಯಾಬ್‌ ಅನ್ನು ಲಾಂಚ್‌ ಮಾಡಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಟೆಕ್‌ ಮಾರುಕಟ್ಟೆಯಲ್ಲಿ ಶಿಯೋಮಿ ಬುಕ್‌ S 12.4 ಟ್ಯಾಬ್ಲೆಟ್‌ ಪರಿಚಯಿಸಿದೆ. ಇದು ಟು ಇನ್‌ ಒನ್‌ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಟ್ಯಾಬ್‌ ಹೈ ಎಂಡ್‌ ಆರ್ಮ್‌ ಟ್ಯಾಬ್ಲೆಟ್‌ ಆಗಿದ್ದು, ಉನ್ನತ ಮಟ್ಟದ ಆಯ್ಕೆಗಳಲ್ಲಿ ಒಂದಾಗಿದೆ. ಈ ಟ್ಯಾಬ್‌ ಅನ್ನು ಲ್ಯಾಪ್‌ಟಾಪ್‌ ಮಾದರಿಯಲ್ಲಿಯೂ ಕೂಡ ಬಳಸುವುದಕ್ಕೆ ಸಾದ್ಯವಾಗಲಿದೆ. ಜೊತೆಗೆ ಈ ಟ್ಯಾಬ್‌ ಶಿಯೋಮಿಯ ಸ್ಮಾರ್ಟ್‌ ಪೆನ್‌ ಅನ್ನು ಕೂಡ ಬೆಂಬಲಿಸಲಿದೆ.

ಶಿಯೋಮಿ

ಇನ್ನು ಶಿಯೋಮಿ ಬುಕ್‌ S 12.4 ಟ್ಯಾಬ್ಲೆಟ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8cx Gen 2 ಪ್ರೊಸೆಸರ್‌ ಬಲವನ್ನು ಹೊಂದಿದೆ. ಈ ಟ್ಯಾಬ್‌ 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಜೊತೆಗೆ 4,920mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 13 ಗಂಟೆ 24 ನಿಮಿಷಗಳವರೆಗೆ ಬ್ಯಾಟರಿ ಬಾಳಿಕೆ ನೀಡಲಿದೆ. ಇದಲ್ಲದೆ ಈ ಟ್ಯಾಬ್‌ 500 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲಿಸುವ ಡಿಸ್‌ಪ್ಲೇ ಕೂಡ ಒಳಗೊಂಡಿದೆ. ಇನ್ನುಳಿದಂತೆ ಈ ಟ್ಯಾಬ್ಲೆಟ್‌ ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ

ಶಿಯೋಮಿ ಬುಕ್‌ S 12.4 ಟ್ಯಾಬ್ಲೆಟ್‌ 2560 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 12.35 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 16:10 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಸಾಮಾನ್ಯ 16:9 ಪ್ಯಾನೆಲ್‌ಗಿಂತ ಸ್ವಲ್ಪ ಎತ್ತರವಾಗಿದೆ. ಇದಲ್ಲದೆ ಈ ಡಿಸ್‌ಪ್ಲೇ 500 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ ಮತ್ತು DCI-P3 ನ 100% ಅನ್ನು ಒಳಗೊಂಡಿದೆ. ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಕೂಡ ಒಳಗೊಂಡಿದೆ.

ಶಿಯೋಮಿ

ಈ ಟ್ಯಾಬ್ಲೆಟ್‌ ಶಿಯೋಮಿ ಸ್ಮಾರ್ಟ್ ಪೆನ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಶಿಯೋಮಿ ಪೆನ್‌ ಮೂಲಕ ಟ್ಯಾಬ್ಲೆಟ್‌ನಲ್ಲಿ ಹೆಚ್ಚು ನೈಸರ್ಗಿಕ ರೇಖಾಚಿತ್ರ ಮತ್ತು ಬರವಣಿಗೆಯ ಅನುಭವಕ್ಕಾಗಿ 4,096 ಹಂತದ ಒತ್ತಡದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ ಪೆನ್ ಬ್ಲೂಟೂತ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ ತ್ವರಿತ ಕ್ರಿಯೆಗಳಿಗಾಗಿ ಎರಡು ಬಟನ್‌ಗಳನ್ನು ಕೂಡ ಒಳಗೊಂಡಿದೆ.

ಶಿಯೋಮಿ

ಶಿಯೋಮಿ ಬುಕ್‌ S 12.4 ಟ್ಯಾಬ್ಲೆಟ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8cx Gen 2 ಪ್ರೊಸೆಸರ್ ಅನ್ನು ಹೊಂದಿದೆ. ಇದು ವಿಂಡೋಸ್ 11 ನ ARM ಆಧಾರಿತ ಆವೃತ್ತಿಯಲ್ಲಿ ರನ್ ಆಗುತ್ತದೆ. ಹಾಗೆಯೇ 8GB RAM ಮತ್ತು 256GB ಸ್ಟೋರೆಜ್‌ ಅನ್ನು ಹೊಂದಿದ್ದು, ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಟ್ಯಾಬ್ಲೆಟ್

ಶಿಯೋಮಿ ಟ್ಯಾಬ್ಲೆಟ್ 13ಮೆಗಾ ಪಿಕ್ಸೆಲ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಫ್ರಂಟ್-ಫೇಸಿಂಗ್ ವೆಬ್‌ಕ್ಯಾಮ್ ಅನ್ನು ಕೂಡ ಒಳಗೊಂಡಿದೆ. ಇದರ ಮೂಲಕ 1080p ಸಾಮರ್ಥ್ಯದ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ. ಹಾಗೆಯೇ ಈ ಟ್ಯಾಬ್‌ ಕ್ವಾಲ್ಕಾಮ್‌ ಅಕ್ಸ್ಟಿಕ್ ಟೆಕ್ನಾಲಜಿಗೆ ಸೆಟ್‌ ಆಗುವ ನಾಯ್ಸ್‌ ಕ್ಯಾನ್ಸಲ್‌ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ. ಸೌಂಡ್‌ಗಾಗಿ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ.

ಶಿಯೋಮಿ

ಶಿಯೋಮಿ ಬುಕ್‌ S 12.4 65W ವೇಗದ ಚಾರ್ಜಿಂಗ್‌ ಬೆಂಬಲಿಸುವ 4,920mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ USB-C ಪೋರ್ಟ್, ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೊ SD ಕಾರ್ಡ್ ರೀಡರ್ ಹಾಗೂ USB-C ಪೋರ್ಟ್ ಪವರ್ ಮತ್ತು ಡಿಸ್‌ಪ್ಲೇ ಔಟ್‌ಪುಟ್ ಅನ್ನು ಬೆಂಬಲಿಸುತ್ತದೆ. ಆದ್ದರಿಂದ ನೀವು ಇದನ್ನು ಡೆಸ್ಕ್‌ನಲ್ಲಿ ಬಳಸಲು ಬಯಸಿದರೆ ಡಾಕಿಂಗ್ ಸ್ಟೇಷನ್ ಅನ್ನು ಕೂಡ ಬಳಸಬಹುದಾಗಿದೆ.

ಟ್ಯಾಬ್ಲೆಟ್

ಈ ಟ್ಯಾಬ್ಲೆಟ್ ಅನ್ನು ಕೀಬೋರ್ಡ್ ಜೊತೆಗೆ ಸೇಲ್‌ ಮಾಡಲಾಗುತ್ತಿದೆ. ಇದರಿಂದ ಈ ಟ್ಯಾಬ್‌ ಅನ್ನು ನೀವು ಲ್ಯಾಪ್‌ಟಾಪ್‌ ಆಗಿ ಕೂಡ ಪರಿಚರ್ತಿಸಬಹುದಾಗಿದೆ. ಲ್ಯಾಪ್‌ಟಾಪ್‌ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಇದು ಸುಲಭವಾಗಿ ಅವಕಾಶ ನೀಡಲಿದೆ. ಇದನ್ನು ನೀವು ಸರ್ಫೇಸ್ ಪ್ರೊ 8 ನಂತಹ ಇತರ ಟ್ಯಾಬ್ಲೆಟ್‌ಗಳ ಮಾದರಿಯಲ್ಲಿಯೇ ಬಳಸುವುದಕ್ಕೆ ಈ ಟ್ಯಾಬ್ಲೆಟ್ ಇಂಟರ್‌ಬಿಲ್ಟ್‌ ಕಿಕ್‌ಸ್ಟ್ಯಾಂಡ್ ಅನ್ನು ಹೊಂದಿದೆ.

ಟು ಇನ್‌ ಒನ್‌ ಕಾರ್ಯ

ಟು ಇನ್‌ ಒನ್‌ ಕಾರ್ಯ

ಅಂದರೆ ಈ ಟ್ಯಾಬ್‌ ಅನ್ನು ನೀವು ನಿಮಗೆ ಬೇಕೆಂದಾಗ ಲ್ಯಾಪ್‌ಟಾಪ್‌ ಮಾದರಿಯಲ್ಲಿ ಬಳಸಬಹುದು. ನಿಮಗೆ ಅವಶ್ಯಕತೆ ಬಿದ್ದಾಗ ಟ್ಯಾಬ್‌ ಮಾದರಿಯಲ್ಲಿಯೇ ಬಳಸಬಹುದು. ಇದು ಎರಡು ರೀತಿಯಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಇದಕ್ಕೆ ಪೂರಕವಾದ ಕಿ ಬೋರ್ಡ್‌ ಅನ್ನು ಸಹ ಶಿಯೋಮಿ ಕಂಪೆನಿ ಪರಿಚಯಿಸಿದೆ. ಇದನ್ನು ಬಳಸಿಕೊಳ್ಳುವ ಮೂಲಕ ನೀವು ಲ್ಯಾಪ್‌ಟಾಪ್‌ನಲ್ಲಿ ನಿರ್ವಹಿಸಬೇಕಾದ ಕಾರ್ಯವನ್ನು ಮಾಡಬಹುದಾಗಿದೆ. ಇದರ ವೆಬ್‌ ಕ್ಯಾಮ್‌ ಬಳಸಿ ಮೀಟಿಂಗ್‌ ಅನ್ನು ಕೂಡ ನಡೆಸಬಹುದು. ಇದೇ ಕಾರಣಕ್ಕೆ ಈ ಟ್ಯಾಬ್‌ ಅನ್ನು ಟು ಇನ್‌ ಒನ್‌ ಮಾದರಿ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ಬುಕ್‌ S 12.4 ಟ್ಯಾಬ್‌ ಯುರೋಪ್‌ ಮಾರುಕಟ್ಟೆಯಲ್ಲಿ €699 ಬೆಲೆಯನ್ನು ಪಡೆದುಕೊಂಡಿದೆ. ಈ ಟ್ಯಾಬ್‌ ಈಗಾಗಲೇ ಜರ್ಮನಿಯಲ್ಲಿ ಖರೀದಿಗೆ ಲಭ್ಯವಿದೆ. ಜರ್ಮನಿಯಲ್ಲಿ ಈ ಟ್ಯಾಬ್‌ಗೆ ಪೂರಕವಾದ ಕೀಬೋರ್ಡ್ ಅನ್ನು ಉಚಿತವಾಗಿ ನೀಡಲಾಗ್ತಿದೆ. ಇದೇ ಮಾದರಿಯನ್ನು ಇತರೆ ಮಾರುಕಟ್ಟೆಗಳು ಕೂಡ ಅನುಸರಿಸುವ ಸಾಧ್ಯತೆಯಿದೆ. ಇನ್ನು ಈ ಟ್ಯಾಬ್‌ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ.

Best Mobiles in India

English summary
Xiaomi Book S 12.4 laptop has been launched in Europe. It is a two-in-one detachable laptop

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X