ಮತ್ತೆ ಬಂತು ದೀಪಾವಳಿ ವಿಥ್ ಎಂಐ ಸೇಲ್‌..! ಡಿಸ್ಕೌಂಟ್‌ಗಳ ಮಹಾಪೂರ.!

By Gizbot Bureau
|

ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿ ಆಗಿರುವ ಶಿಯೋಮಿ ಭಾರತೀಯರಿಗಾಗಿ ವಿಶೇಷ ಕೊಡುಗೆಗಳನ್ನು ಹೊತ್ತು ಬರುತ್ತಿದೆ. ಹೌದು, ಅಕ್ಟೋಬರ್‌ನಲ್ಲಿರುವ ದೀಪಾವ ಹಬ್ಬದ ಸಂಭ್ರಮ ಹೆಚ್ಚಿಸಲು ಶಿಯೋಮಿ ದಿವಾಳಿ ವಿಥ್ ಎಂಐ ಸೇಲ್‌ ಘೋಷಿಸಿದೆ. ಈ ಮಾರಾಟವನ್ನು ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಿ ಅಕ್ಟೋಬರ್ 4 ರವರೆಗೆ ಆಯೋಜಿಸಲಾಗಿದೆ. ಇದೇ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ ಮತ್ತು ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕೂಡ ಆಯೋಜನೆಗೊಂಡಿದೆ. ಈ ಮಾರಾಟ Mi.com ನಲ್ಲಿ ನಡೆಯಲಿದ್ದು, ಫೋನ್‌ಗಳಲ್ಲಿನ ಬೆಲೆ ಕಡಿತ ಮತ್ತು ವ್ಯವಹಾರಗಳು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಿಗೂ ಸ್ಪರ್ಧೆ ನೀಡಲಿವೆ.

ಹೆಚ್‌ಡಿಎಫ್‌ಸಿ ಆಫರ್‌

ಹೆಚ್‌ಡಿಎಫ್‌ಸಿ ಆಫರ್‌

ಹೆಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಇಎಂಐ ವಹಿವಾಟಿನಲ್ಲಿ ಕಾರ್ಡ್ ಬಳಕೆದಾರರಿಗೆ ಶೇ.10 ರಷ್ಟು ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ರೆಡ್‌ಮಿ ನೋಟ್ 7 ಪ್ರೊ, ರೆಡ್‌ಮಿ 7 ಎ, ರೆಡ್‌ಮಿ ವೈ 3, ಎಂಐ ಬ್ಯಾಂಡ್ 3, ಪವರ್ ಬ್ಯಾಂಕ್‌ಗಳು ಮತ್ತು ಹೆಚ್ಚಿನ ಫೋನ್‌ಗಳು ಭಾರೀ ಡಿಸ್ಕೌಂಟ್‌ನೊಂದಿಗೆ ಬರಲಿವೆ.

ಮೊಬೈಲ್‌ಗಳ ಮೇಲೆ ರಿಯಾಯಿತಿ

ಮೊಬೈಲ್‌ಗಳ ಮೇಲೆ ರಿಯಾಯಿತಿ

ರೆಡ್‌ಮಿ ನೋಟ್ 7 ಪ್ರೊ 2,000 ರೂ. ಬೆಲೆ ಕಡಿತದೊಂದಿಗೆ 11,999 ರೂ.ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್ ಕೂಡ ಇದೇ ಕೊಡುಗೆಯನ್ನು ನೀಡಿದ್ದು, ಹಳೆಯ ಫೋನ್‌ಗಳ ವಿನಿಮಯದ ಮೇಲೆ ಹೆಚ್ಚುವರಿ 1,000 ರೂ. ರಿಯಾಯಿತಿ ನೀಡಲಾಗಿದೆ. ರೆಡ್‌ಮಿ 7 ಎ ಶೇ.10 ರಷ್ಟು ಹೆಚ್‌ಡಿಎಫ್‌ಸಿ ಬ್ಯಾಂಕ್ ರಿಯಾಯಿತಿಯೊಂದಿಗೆ 4,999 ರೂ. ಸಿಗಲಿದೆ. ಫ್ಲಿಪ್‌ಕಾರ್ಟ್ ಕೂಡ ಇದೇ ಆಫರ್‌ ನೀಡಿದ್ದು, ಅಮೆಜಾನ್ ತನ್ನ ರಿಯಾಯಿತಿಯನ್ನು ಇನ್ನೂ ಘೋಷಿಸಿಲ್ಲ. ಇನ್ನು, ರೆಡ್‌ಮಿ ವೈ 3 ಸಹ ಬೆಲೆ ಕಡಿತ ಕಂಡಿದ್ದು, 3GB ಮತ್ತು 4GB RAM ಆಯ್ಕೆಗಳನ್ನು mi.comನಲ್ಲಿ ಬೆಲೆ ಕಡಿತದೊಂದಿಗೆ ಪಟ್ಟಿ ಮಾಡಬೇಕಾಗಿದೆ. ರೆಡ್‌ಮಿ ಕೆ 20 ಪ್ರೊ 24,999 ರೂ. ಮತ್ತು ರೆಡ್‌ಮಿ ನೋಟ್ 7 ಎಸ್ 8,999 ರೂ.ಗೆ ಮಾರಾಟವಾಗಲಿದೆ.

ಟಿವಿಗಳ ಮೇಲೆ ಭಾರೀ ಡಿಸ್ಕೌಂಟ್‌

ಟಿವಿಗಳ ಮೇಲೆ ಭಾರೀ ಡಿಸ್ಕೌಂಟ್‌

ಹಳೆಯ ಎಂಐ ಟಿವಿಗಳು ಭಾರೀ ಪ್ರಮಾಣದಲ್ಲಿ ಬೆಲೆ ಕಡಿತವನ್ನು ಹೊಂದಿವೆ. ಎಂಐ ಎಲ್ಇಡಿ ಟಿವಿ 4 ಎ ಪ್ರೊ 32 ಇಂಚು, ಎಂಐ ಎಲ್ಇಡಿ ಟಿವಿ 4 ಸಿ ಪ್ರೊ 32-ಇಂಚು, ಎಂಐ ಎಲ್ಇಡಿ ಟಿವಿ 4 ಎ ಪ್ರೊ 43-ಇಂಚು, ಮತ್ತು ಎಂಐ ಎಲ್ಇಡಿ ಟಿವಿ 4 ಎಕ್ಸ್ ಪ್ರೊ 55-ಇಂಚಿನ ಮಾದರಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಿಗಲಿವೆ. ಎಂಐ ಪಾಕೆಟ್ ಸ್ಪೀಕರ್, ಎಂಐ ಟ್ರಾವೆಲ್ ಬ್ಯಾಕ್‌ಪ್ಯಾಕ್ ಮತ್ತು ಇತರ ಪರಿಕರಗಳ ಮೇಲೆ ಶೇ.80ರಷ್ಟು ರಿಯಾಯಿತಿ ದೊರೆಯುವ ಸಾಧ್ಯತೆಯಿದೆ. ಈ ಡೀಲ್‌ಗಳು ಮಾರಾಟದ ಅವಧಿಯ ಪ್ರತಿದಿನ ಬೆಳಿಗ್ಗೆ 10 ಮತ್ತು ಸಂಜೆ 6 ಗಂಟೆಗೆ ಗ್ರಾಹಕರಿಗೆ ಲಭ್ಯವಾಗಲಿವೆ.

ಅಕ್ಸೆಸರಿಸ್‌ ಮೇಲೂ ಆಫರ್‌

ಅಕ್ಸೆಸರಿಸ್‌ ಮೇಲೂ ಆಫರ್‌

ಎಂಐ ಇಯರ್‌ಫೋನ್‌ಗಳನ್ನು ಶೇ.50 ರಷ್ಟು ರಿಯಾಯಿತಿಯೊಂದಿಗೆ ನೀಡಲಾಗುತ್ತಿದ್ದು, 49 ರೂ. ನಿಂದ ಮೊಬೈಲ್ ಪರಿಕರಗಳು ದೊರೆಯಲಿವೆ. 10,000mAh Mi ಪವರ್ ಬ್ಯಾಂಕ್ 2i ಮತ್ತು Mi ಬ್ಯಾಂಡ್ 3 ಕೂಡ ಡಿಸ್ಕೌಂಟ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ನು, ಎಂಐ ಪ್ರೊಟೆಕ್ಟ್ 399 ರೂ. ರಿಂದ ಪ್ರಾರಂಭವಾದರೆ, ಎಂಐ ಸ್ಕ್ರೀನ್ ಪ್ರೊಟೆಕ್ಟ್ 299 ರೂ. ನಿಂದ ಆರಂಭವಾಗುತ್ತಿದೆ. ಎಂಐ ಟಿವಿಗಳಿಗಾಗಿ ಎಂಐ ವಾರಂಟಿ ವಿಸ್ತರಣೆ 399 ರೂ. ರಿಂದ ಶುರುವಾಗುತ್ತದೆ.

1 ರೂ. ಫ್ಲಾಷ್‌ ಮಾರಾಟ

1 ರೂ. ಫ್ಲಾಷ್‌ ಮಾರಾಟ

ದೀಪಾವಳಿ ವಿಥ್ ಎಂಐ ಸೇಲ್‌ನೊಂದಿಗೆ 1 ರೂ. ಫ್ಲ್ಯಾಷ್ ಮಾರಾಟವು ಪುನರಾಗಮನವಾಗಿದೆ. ದೈನಂದಿನ ಮಾರಾಟವು ಸಂಜೆ 4 ಗಂಟೆಗೆ ಆಯೋಜನೆಯಾಗಿದ್ದು, ಈ ಸಲದ ಫ್ಲ್ಯಾಷ್ ಮಾರಾಟದಲ್ಲಿ ರೆಡ್‌ಮಿ ಕೆ 20, ಮೈ ಸ್ಮಾರ್ಟ್ ಬ್ಯಾಂಡ್ 4, ಮತ್ತು ಹೆಚ್ಚಿನವುಗಳನ್ನು 1 ರೂ,ಗೆ ಮಾರಾಟ ಮಾಡಲಾಗುತ್ತಿದೆ.

ಶಿಯೋಮಿ ಕೂಪನ್‌

ಶಿಯೋಮಿ ಕೂಪನ್‌

ಮಾರಾಟದ ಸಮಯದಲ್ಲಿ ಖರೀದಿಸಿದ ಉತ್ಪನ್ನಗಳಿಗೆ ಕೂಪನ್‌ಗಳನ್ನು ಶಿಯೋಮಿ ನೀಡುತ್ತಿದೆ. ಹೊಟೇಲ್‌ ಬುಕ್ಕಿಂಗ್‌ನಲ್ಲಿ 501 ರೂ. ರಿಯಾಯಿತಿ, ಪೇಟಿಎಂ ಫ್ಲೈಟ್ ಮೂಲಕ ರೌಂಡ್ ಟ್ರಿಪ್ ಫ್ಲೈಟ್ ಬುಕ್ಕಿಂಗ್‌ನಲ್ಲಿ 700 ರೂ. ಕಡಿತ. ಹಾಗೂ, ಜೂಮ್‌ಕಾರ್ ಬುಕ್ಕಿಂಗ್‌ನಲ್ಲಿ ಶೇ.20 ರಷ್ಟು (1,800 ರೂ.ವರೆಗೆ) ರಿಯಾಯಿತಿಯನ್ನು ಶಿಯೋಮಿ ನೀಡುತ್ತದೆ.

ಮತ್ತಿತರ ಕೊಡುಗೆಗಳು

ಮತ್ತಿತರ ಕೊಡುಗೆಗಳು

ಪ್ಲೇ ಸ್ಟೋರ್‌ನಿಂದ ಗೋಲ್ಡ್‌ ರಶ್ ಆಟವನ್ನು ಡೌನ್‌ಲೋಡ್ ಮಾಡಿಕೊಂಡು 2 ಕೋಟಿ ರೂ. ಗೆಲ್ಲಲು ಗ್ರಾಹಕರಿಗೆ ಶಿಯೋಮಿ ಪ್ರೇರೆಪಿಸುತ್ತಿದೆ. ಕಳೆದ ವಾರ ಬಿಡುಗಡೆಯಾದ ಎಂಐ ಟಿವಿ ದೀಪಾವಳಿ ಮಾರಾಟದ ಸಮಯದಲ್ಲಿ ದೈನಂದಿನ ಫ್ಲ್ಯಾಷ್ ಮಾರಾಟದಲ್ಲಿ ಲಭ್ಯವಿರುತ್ತದೆ. ಸೆಪ್ಟೆಂಬರ್ 29 ಮಧ್ಯರಾತ್ರಿ 12 ಗಂಟೆಗೆ ಎಂಐ ಎಲ್ಇಡಿ ಟಿವಿ 4 ಎ 40-ಇಂಚು, ಎಂಐ ಎಲ್ಇಡಿ ಟಿವಿ 4 ಎಕ್ಸ್ 50-ಇಂಚು, ಎಂಐ ಎಲ್ಇಡಿ ಟಿವಿ 4 ಎಕ್ಸ್ 65-ಇಂಚು, ಎಂಐ ಎಲ್ಇಡಿ ಟಿವಿ 4 ಎಕ್ಸ್ 43-ಇಂಚು ಗ್ರಾಹಕರಿಗೆ ಫ್ಲಾಷ್‌ ಸೇಲ್‌ನಲ್ಲಿ ಸಿಗಲಿದೆ. ಇನ್ನು, ಎಂಐ ಎಲ್ಇಡಿ ಟಿವಿ 4 ಎ 40-ಇಂಚು, ಎಂಐ ಎಲ್ಇಡಿ ಟಿವಿ 4 ಎಕ್ಸ್ 65-ಇಂಚು, ಎಂಐ ಎಲ್ಇಡಿ ಟಿವಿ 4 ಎಕ್ಸ್ 43-ಇಂಚು ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಲಭ್ಯವಿರಲಿವೆ. ಎಂಐ ಎಲ್ಇಡಿ ಟಿವಿ 4 ಎಕ್ಸ್ 50 ಇಂಚು ಮತ್ತು ಎಂಐ ಸ್ಮಾರ್ಟ್ ಬ್ಯಾಂಡ್ 4 ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ದೊರೆಯುತ್ತದೆ.

Best Mobiles in India

English summary
Xiaomi Diwali Sale Offers On Redmi And Mi Phones With Rs. 2,000 Price Cut

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X