ಬಟ್ಟೆ ಒಣಗಿಸಲು ಬಂತು ಹೊಸ ಸ್ಮಾರ್ಟ್‌ ಡಿವೈಸ್‌! ಏನಿದರ ವಿಶೇಷ!

|

ಟೆಕ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ವಿಶೇಷ ಸ್ಮಾರ್ಟ್‌ ಡಿವೈಸ್‌ಗಳನ್ನು ಪರಿಚಯಿಸುವ ಮೂಲಕ ಗ್ಯಾಜೆಟ್ಸ್‌ ಪ್ರಿಯರಿಗೆ ಇನ್ನಷ್ಟು ಹತ್ತಿರವಾಗಿದೆ. ಸದ್ಯ ಇದೀಗ ನಿಮ್ಮ ಜೀವನ ಶೈಲಿಯನ್ನು ಸರಳಗೊಳಿಸುವ ಹೊಸ ಸ್ಮಾರ್ಟ್‌ ಡಿವೈಸ್‌ ಅನ್ನು ಪರಿಚಯಿಸಿದೆ. ಇದನ್ನು ಸ್ಮಾರ್ಟ್‌ ಕ್ಲೋತ್ಸ್ ಡ್ರೈಯರ್ ಪ್ರೊ ಎಂದು ಹೆಸರಿಸಲಾಗಿದೆ. ಇದು ಬಟ್ಟೆ ಒಣಗಿಸುವ ಡಿವೈಸ್‌ ಆಗಿದ್ದು, ಸಾಕಷ್ಟು ಉಪಯುಕ್ತವಾಗಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಹೊಸ ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಪ್ರೊ ಎಂಬ ಬಟ್ಟೆ-ಒಣಗಿಸುವ ಯಂತ್ರವನ್ನು ಬಿಡುಗಡೆ ಮಾಡಿದೆ. ಇದನ್ನು MIJIA ಬ್ರ್ಯಾಂಡ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಹಿಂದೆ ಪರಿಚಯಿಸಲಾಗಿದ್ದ MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಮತ್ತು MIJIA ಕ್ಲೋತ್ಸ್ ಡ್ರೈಯರ್‌ನ ಅಪ್ಡೇಟ್‌ ಆವೃತ್ತಿಯಾಗಿದೆ. ಇನ್ನು ಈ ಹೊಸ ಬಟ್ಟೆ ಡ್ರೈಯರ್ 35 ಕೆಜಿ ಭಾರ ಹೊರುವ ಸಾಮರ್ಥ್ಯವನ್ನು ಪಡೆದಿದೆ. ಹಾಗಾದ್ರೆ ಈ ಹೊಸ ಕ್ಲೋತ್ಸ್‌ ಡ್ರೈಯರ್‌ ಡಿವೈಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮಳೆಗಾಲದ

ಮಳೆಗಾಲದ ಸಮಯದಲ್ಲಿ ಬಟ್ಟೆಯನ್ನು ಒಣಗಿಸುವುದು ತುಂಬಾನೆ ಕಷ್ಟಕರ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ನಿಮ್ಮ ಬಟ್ಟೆಯನ್ನು ಡ್ರೈ ಮಾಡುವುದಕ್ಕಾಗಿ ಶಿಯೋಮಿ ಹೊಸ ಸ್ಮಾರ್ಟ್ ಬಟ್ಟೆ ಡ್ರೈಯರ್ ಮೆಷಿನ್‌ ಅನ್ನು ಪರಿಚಯಿಸಿದೆ. ಇದು ಅಲ್ಟ್ರಾ-ತೆಳುವಾದ ವಿನ್ಯಾಸವನ್ನು ಹೊಂದಿದ್ದು, ನಿಮ್ಮ ಬಟ್ಟೆಯನ್ನು ಒಣಗಿಸಿಕೊಡಲಿದೆ. ಅಲ್ಲದೆ ನಿಮ್ಮ ಬಟ್ಟೆಯಲ್ಲಿ ಯಾವುದೇ ರೀತಿಯ ಸುಕ್ಕು ಕೂಡ ಕಾಣದಂತೆ ಮಾಡಲಿದೆ. ಈ ಮೆಷಿನ್‌ ಎಂಬೆಡೆಡ್ ಹಿಡನ್‌ ಇನ್‌ಸ್ಟಾಲೇಶನ್‌ ಅನ್ನು ಬೆಂಬಲಿಸಲಿದೆ. ಆದರಿಂದ ನೀವು ಬಳಸದ ಸಮಯದಲ್ಲಿ ಇದನ್ನು ಮಡಿಸಿದ ನಂತರ ಸೀಲಿಂಗ್‌ನಲ್ಲಿ ಸಂಪೂರ್ಣವಾಗಿ ಹೈಡ್‌ ಮಾಡಬಹುದು.

ಮೆಷಿನ್‌

ಇನ್ನು ಈ ಮೆಷಿನ್‌ 9.8cm ದಪ್ಪದ ಬಟ್ಟೆಗಳನ್ನು ಒಣಗಿಸುವ ಕಂಬದೊಂದಿಗೆ ಬರುತ್ತದೆ. ಅಲ್ಲದೆ ಬ್ರೈಟ್‌ನೆಸ್‌ ಅನ್ನು ಸರಿ ಮಾಡಲು MIJIA ಅಪ್ಲಿಕೇಶನ್‌ಗೆ ಸಂಪರ್ಕಿಸಬಹುದಾದ ಬಾಗಿದ LED ಲೈಟ್ ಬೋರ್ಡ್ ಅನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಪ್ರೊ 16 ಕ್ಲಿಪ್‌ಗಳು, ಡ್ರೈಯಿಂಗ್ ರಾಡ್‌ಗಳು, 4 ಅಡ್ಡಲಾಗಿರುವ ರಾಡ್‌ಗಳು ಮತ್ತು 42 ಹ್ಯಾಂಗಿಂಗ್ ರಂಧ್ರಗಳನ್ನು ಹೊಂದಿದೆ. ಇದರಲ್ಲಿರುವ ರಾಡ್‌ಗಳನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸೆಟ್‌ ಮಾಡಿಕೊಳ್ಳಬಹುದಾಗಿದೆ.

ಅಪ್ಲಿಕೇಶನ್

ಈ ಮೆಷಿನ್‌ ಅನ್ನು ನೀವು ಶಿಯೋ AI ವಾಯ್ಸ್, MIJIA ಅಪ್ಲಿಕೇಶನ್, ರಿಮೋಟ್ ಕಂಟ್ರೋಲ್ ಮತ್ತು ಹೋಮ್ ಸ್ಕ್ರೀನ್ ಸೇರಿದಂತೆ ಮಲ್ಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಸದ್ಯ ಸಣ್ಣ ಫ್ಲಾಟ್‌ಗಳಿಗೆ ಈ ಯಂತ್ರವು ಪರಿಪೂರ್ಣವಾಗಿದೆ ಎಂದು ಶೀಯೋಮಿ ಕಂಪೆನಿ ಹೇಳಿಕೊಂಡಿದೆ. ಏಕೆಂದರೆ ಈ ಡ್ರೈಯರ್ ಅನ್ನು ವಿವಿಧ ಛಾವಣಿಗಳಲ್ಲಿ ಅಳವಡಿಸಬಹುದಾಗಿದೆ. ಮನೆಯ ಬಾಲ್ಕನಿಯಲ್ಲಿ, ಲಿವಿಂಗ್ ರೂಮ್ ಅಥವಾ ಮಲಗುವ ಕೋಣೆಯಲ್ಲಿ ಕೂಡ ಬಳಸಬಹುದಾಗಿದೆ. ಅಲ್ಲದೆ ಮರ, ಕಾಂಕ್ರೀಟ್, ಜಿಪ್ಸಮ್ ಮತ್ತು ಸೀಲಿಂಗ್‌ ಛಾವಣಿಗಳಲ್ಲಿಯೂ ಸಹ ಇದನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.

ಸ್ಮಾರ್ಟ್

ಪ್ರಸ್ತುತ MIJIA ಸ್ಮಾರ್ಟ್ ಕ್ಲೋತ್ಸ್ ಡ್ರೈಯರ್ ಪ್ರೊ ಕ್ರೌಡ್‌ಸೋರ್ಸಿಂಗ್ ಕ್ಯಾಂಪೇನ್ ಅಧಿಕೃತವಾಗಿ 1,199 ಯುವಾನ್‌ ಬೆಲೆ ಯನ್ನು ಹೊಂದಿದೆ. ಅಂದರೆ ಅಂದಾಜು 14,000ರೂ. ಬೆಲೆಯಲ್ಲಿ ಬರಲಿದೆ. ಇನ್ನು ಈ ಡಿವೈಸ್‌ ಅನ್ನು ಭಾರತದಲ್ಲಿ ಯಾವಾಗ ಲಾಂಚ್‌ ಮಾಡಲಾಗುತ್ತದೆ ಅನ್ನೊದರ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಶಿಯೋಮಿ ಕಂಪನಿಯು ಈಗಾಗಲೇ ದೇಶದಲ್ಲಿ ಸ್ಮಾರ್ಟ್ ಹೋಮ್ ಅಪ್ಲೈಯನ್ಸ್‌ಗಳ ಶ್ರೇಣಿಯನ್ನು ಪರಿಚಯಿಸಿರುವುದರಿಂದ ಇದು ಕೂಡ ಸದ್ಯದಲ್ಲೇ ಬಿಡುಗಡೆಯಾಗುವ ಸಾದ್ಯತೆಯಿದೆ.

Best Mobiles in India

English summary
Xiaomi has launched a clothes-drying machine: specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X