ಮಾರ್ಚ್ ನಲ್ಲಿ ಟಾಪ್ ಎಂಡ್ ಶಿಯೋಮಿ Mi 7 ಮತ್ತು Mi7 ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್..!

By Lekhaka
|

ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಕಳೆದ ವಾರ ಬಿಡುಗಡೆ ಗೊಂಡಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಈ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳು ಈ ಹೊಸ ಚಿಪ್ ಸೆಟ್ ಅಳವಡಿಕೆಗೆ ಸಿದ್ಧತೆಯನ್ನು ನಡೆಸಿವೆ.

ಮಾರ್ಚ್ ನಲ್ಲಿ ಟಾಪ್ ಎಂಡ್ ಶಿಯೋಮಿ Mi 7 ಮತ್ತು Mi7 ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್

ಮುಂದಿನ ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿರುವ ಶಿಯೋಮಿ ಟಾಪ್ ಎಂಡ್ ಸ್ಮಾರ್ಟ್ ಫೋನ್ Mi 7 ಮತ್ತು Mi7 ಪ್ಲಸ್ ಸ್ಮಾರ್ಟ್ ಫೋನ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದ್ದು, ಈ ಕುರಿತು ಶಿಯೋಮಿಯ ಅಧಿಕೃತ ಮೂಲಗಳೇ ಮಾಹಿತಿಯನ್ನು ನೀಡಿವೆ.

Mi 7 ಸ್ಮಾರ್ಟ್ ಫೋನಿನಲ್ಲಿ 5.65 ಇಂಚಿನ ಡಿಸ್ ಪ್ಲೇಯನ್ನು ಕಂಡರೆ ಇದಕ್ಕಿಂತ ಸ್ವಲ್ಪ ದೊಡ್ಡ ಮಟ್ಟದ ಅಂದರೆ 6.01 ಇಂಚಿನ ಡಿಸ್ ಪ್ಲೇಯನ್ನು ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ. ಈ ಎರಡು ಫೋನ್ ಗಳು ಫುಲ್ ಸ್ಕ್ರಿನ್ ಡಿಸೈನ್ ಹೊಂದಿರಲಿದ್ದು, 18:9 ಅನುಪಾತದಲ್ಲಿರಲಿದೆ. ಅಲ್ಲದೇ Mi 7 ಸ್ಮಾರ್ಟ್ ಫೋನಿನಲ್ಲಿ 3200mAh ಬ್ಯಾಟರಿಯನ್ನು ಹಾಗೂ Mi 7 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 3500mAh ಬ್ಯಾಟರಿಯನ್ನು ಕಾಣಬಹುದಾಗಿದೆ.

ಈ ಎರಡು ಸ್ಮಾರ್ಟ್ ಫೋನ್ ಗಳು ಮೇಟಲ್ ಮತ್ತು ಗ್ಲಾಸ್ ಬಾಡಿಯನ್ನು ಹೊಂದಿರಲಿದ್ದು ಪ್ರೀಮಿಯಮ್ ಲುಕ್ ಹೊಂದಿರಲಿದೆ. ಅಲ್ಲದೇ ಹೊಸದಾಗಿ ಈ ಸ್ಮಾರ್ಟ್ ಫೋನ್ ನೊಂದಿಗೆ ಶಿಯೋಮಿ ತನ್ನ ವೈರ್ ಲೇಸ್ ಚಾರ್ಜರ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ.

ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ?!ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ?!

Best Mobiles in India

Read more about:
English summary
Xiaomi Mi 7 and Mi 7 Plus are expected to be launched at the same time in March next year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X