ಶಿಯೋಮಿ ಟಾಪ್ ಎಂಡ್ ಫೋನಿನಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್....!

By Precilla Dias
|

ವಿಶ್ವದಲ್ಲಿಯೇ ಮೊದಲ ಬಾರಿಗೆ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್ಫೋನ್ ಎನ್ನುವ ಖ್ಯಾತಿಗೆ ವಿವೋ X20 ಪಾತ್ರವಾಗಿದ್ದು, ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಹಲವು ಹೊಸ ಸ್ಮಾರ್ಟ್ ಫೋನ್ ಗಳು ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿವೆ. ಇದೇ ಸಾಲಿನಲ್ಲಿ ಶಿಯೋಮಿಯ ಟಾಪ್ ಎಂಡ್ ಫೋನ್ ವೊಂದು ಕಾಣಿಸಿಕೊಂಡಿದೆ.

ಶಿಯೋಮಿ ಟಾಪ್ ಎಂಡ್ ಫೋನಿನಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್....!

ಈಗಾಗಲೇ ಮಾರುಕಟ್ಟೆಗೆ ಬರಲು ತಯಾರಿಯನ್ನು ನಡೆಸಿರುವ ಶಿಯೋಮಿ ಮಿ 7 ಸ್ಮಾರ್ಟ್ ಫೋನಿನಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನುಕಾಣಬಹುದಾಗಿದೆ. ಈಗಾಗಲೇ ಲೀಕ್ ಆಗಿರುವ ಸ್ಮಾರ್ಟ್ ಫೋನ್ ಫೋಟೋಗಳಲ್ಲಿ ಈ ಹೊಸ ಆಯ್ಕೆಯನ್ನು ಕಾಣಬಹುದಾಗಿದೆ.

ಶಿಯೋಮಿ ಮಿ 7 ಮತ್ತು ಮಿ 7 ಪ್ಲಸ್ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದು ಟಾಪ್ ಎಂಡ್ ಆವೃತ್ತಿಯಾಗಿದ್ದು, ಉತ್ತಮವಾದ ವಿಶೇಷತೆಗಳನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಮಾರುಕಟ್ಟೆಯಲ್ಲಿ ವೇಗವಾದ ಪ್ರೋಸೆಸರ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸ್ನಾಪ್ಡ್ರಾಗನ್ 845ಅನ್ನು ಒಳಗೊಂಡಿದೆ ಎನ್ನಲಾಗಿದೆ.

ಇದಲ್ಲದೇ ಐಪೋನ್ X ಮಾದರಿಯಲ್ಲಿ ಡಿಸ್ ಪ್ಲೇ ನೋಚ್ ಅನ್ನು ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ಕೃತಕ ಬುದ್ದಿಮತ್ತೆಯ ಸಹಾಯದಿಂದ ಫೇಷಿಯಲ್ ರೆಕಗ್ನೇಷನ್ ಆಯ್ಕೆಯನ್ನು ಹೊಂದಿರಲಿದೆ. ಅಲ್ಲದೇ ಹಿಂಭಾಗದಲ್ಲಿ 16 ಎಂಪಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. ಇದರೊಂದಿಗೆ ಸೆಲ್ಫಿಗಾಗಿ ಉತ್ತಮವಾದ ಕ್ಯಾಮೆರಾವನ್ನು ಮುಂಭಾಗದಲ್ಲಿ ನೀಡಲಾಗಿದೆ.

ನೋಕಿಯಾ 5 ಮತ್ತು ನೋಕಿಯಾ 6 ಗೆ ಲಭಿಸಿದೆ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್!ನೋಕಿಯಾ 5 ಮತ್ತು ನೋಕಿಯಾ 6 ಗೆ ಲಭಿಸಿದೆ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್!

ಇದಲ್ಲದೇ ಮಿ 7 ಸ್ಮಾರ್ಟ್ ಫೋನಿನಲ್ಲಿ 3400mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಇದರೊಂದಿಗೆ ವೈರ್ ಲೈಸ್ ಚಾರ್ಜರ್ ಅನ್ನು ಶಿಯೋಮಿ ನೀಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್ ಎಂಡ್ ಫೋನ್ ಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಶಿಯೋಮಿ ಪರಿಚಯಿಸಲಿದೆ.

Best Mobiles in India

Read more about:
English summary
Xiaomi Mi 7 will arrive with an under-display fingerprint sensor. The same has been confirmed by the company’s CEO Lei Jun in reply to a Weibo user’s comment. This way, Xiaomi will follow the footprints of Vivo and Huawei.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X