ಶಿಯೋಮಿ ಸಂಸ್ಥೆಯ ಅತ್ಯಂತ ಚಿಕ್ಕ ಸ್ಕ್ರೀನಿನ ಕೊನೆಯ ಸ್ಮಾರ್ಟ್ ಫೋನ್ ಶಿಯೋಮಿ ಎಂಐ9 ಎಸ್ಇ

By Gizbot Bureau
|

ಶಿಯೋಮಿಯ ಅಧ್ಯಕ್ಷ ಲಿನ್ ಬಿನ್ ಹೇಳಿರುವಂತೆ ಸಣ್ಣ ಸ್ಕ್ರೀನಿನ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಕೆಲಸವನ್ನು ಶಿಯೋಮಿ ಇನ್ನು ಮುಂದೆ ನಿಲ್ಲಿಸುವ ಸಾಧ್ಯತೆ ಇದೆ ಮತ್ತು ಎಂಐ 9 ಬಹುಶ್ಯಃ ಈ ಕಂಪೆನಿಯ ಕೊನೆಯ ಅತೀ ಸಣ್ಣ ಸ್ಕ್ರೀನಿನ ಸ್ಮಾರ್ಟ್ ಫೋನ್ ಆಗಿರಲಿದೆ.

ಅಧಿಕೃತ ಹೇಳಿಕೆ:

ಅಧಿಕೃತ ಹೇಳಿಕೆ:

ಚೀನಾದ ಮೈಕ್ರೋ ಬ್ಲಾಗಿಂಗ್ ವೆಬ್ ಸೈಟ್ ಆಗಿರುವ ವೈಬೋ ಪೋಸ್ಟ್ ನಲ್ಲಿ , ಲಿನ್ ಬಿನ್ ಸಣ್ಣ ಸ್ಕ್ರೀನಿನ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವುದು ಬಹಳ ಕಷ್ಟಕರವಾಗಿರುವ ಕೆಲಸವಾಗಿದೆ. ಇತ್ತೀಚೆಗೆ ಹೈ ಎಂಡ್ ಫೋನ್ ಗಳನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ದೊಡ್ಡ ಸೈಜಿನ ಡಿಸ್ಪ್ಲೇ, ಬ್ಯಾಟರಿ, ಪ್ರದರ್ಶನ,ಫೋಟೋಗ್ರಫಿ ಮತ್ತು ಇತ್ಯಾದಿ ಹಲವು ಅಂಶಗಳನ್ನು ಜನರು ಬೇಡುತ್ತಿದ್ದಾರೆ. ಹಾಗಾಗಿ ಸಣ್ಣ ಸ್ಕ್ರೀನಿನ ಫೋನ್ ಗಳ ಅಗತ್ಯತೆ ಮಾರುಕಟ್ಟೆಯಲ್ಲಿ ಕಾಣುತ್ತಿಲ್ಲ ಎಂದಿದ್ದಾರೆ.

ಬೆಲೆ ಮತ್ತು ಎಂಐ 9ಎಸ್ ನ ವೈಶಿಷ್ಟ್ಯತೆ:

ಬೆಲೆ ಮತ್ತು ಎಂಐ 9ಎಸ್ ನ ವೈಶಿಷ್ಟ್ಯತೆ:

ಶಿಯೋಮಿ ಎಂಐ 9ಎಸ್ ಇ 5.97 ಇಂಚಿನ ಸ್ಯಾಮ್ ಸಂಗ್ AMOLED ಡಿಸ್ಪ್ಲೇ ಮತ್ತು ಎರಡು ಸ್ಟೋರೇಜ್ ವೇರಿಯಂಟ್ ನ್ನು ಹೊಂದಿದೆ. ಎಂಐ 9ಎಸ್ಇ ಬೇಸ್ ವೇರಿಯಂಟ್ ಅಂದರೆ 64ಜಿಬಿ ಸ್ಟೋರೇಜ್ ವೇರಿಯಂಟ್ ನ ಬೆಲೆ CNY 1,999 (ಅಂದಾಜು Rs 21,200).128GB ವೇರಿಯಂಟ್ ನ ಬೆಲಂ CNY 2,299 (ಅಂದಾಜು Rs 24,350).

ಅಧ್ಯಕ್ಷರ ವೀಡಿಯೋ ಬಿಡುಗಡೆ:

ಅಧ್ಯಕ್ಷರ ವೀಡಿಯೋ ಬಿಡುಗಡೆ:

ಸಣ್ಣ ಸ್ಕ್ರೀನಿನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳನ್ನು ನಿಲ್ಲಿಸುತ್ತಿದ್ದೇವೆ ಎಂದು ಹೇಳುವ ಮೂಲಕ ತನ್ನದೇ ಸ್ವಂತ ಮಡಚುವ ಸ್ಮಾರ್ಟ್ ಫೋನ್ ಗಳನ್ನು ಕಂಪೆನಿಯು ಟೀಸ್ ಮಾಡಿದಂತೆ ಕಾಣುತ್ತಿದೆ. ಕಂಪೆನಿಯ ಅಧ್ಯಕ್ಷ ಲಿನ್ ಬಿನ್ ಇತ್ತೀಚೆಗೆ ಫುಲ್ ಗ್ಲೋರಿಯಾಗಿರುವ ಡಿವೈಸ್ ವೊಂದರ ವೀಡಿಯೋವೊಂದನ್ನು ಚೀನಾದ ಮೈಕ್ರೋಬ್ಲಾಗಿಂಗ್ ವೆಬ್ ಸೈಟ್ ವೈಬೋದಲ್ಲಿ ಹಂಚಿಕೊಂಡಿದ್ದಾರೆ.

ಒಂದು ನಿಮಿಷದ ವೀಡಿಯೋದಲ್ಲಿ ಏನಿದೆ?

ಒಂದು ನಿಮಿಷದ ವೀಡಿಯೋದಲ್ಲಿ ಏನಿದೆ?

ಒಂದು ನಿಮಿಷದ ಈ ವೀಡಿಯೋದಲ್ಲಿ ಕೇವಲ ಇಂಜಿನಿಯರಿಂಗ್ ಮಾಡೆಲ್ ನ್ನು ತಿಳಿಸಿದ್ದು ಡಿವೈಸ್ ಗೆ ಇನ್ನೂ ಹೆಸರಿಟ್ಟಿಲ್ಲ ಎಂಬುದನ್ನು ತಿಳಿಸಿದ್ದಾರೆ. ಶಿಯೋಮಿ ಡುಯಲ್ ಫ್ಲೆಕ್ಸ್ ಅಥವಾ ಶಿಯೋಮಿ ಮಿಕ್ಸ್ ಪ್ಲಸ್ ಎಂದು ಹೆಸರಿಸುವ ಸಾಧ್ಯತೆ ಇದೆ ಎಂಬುದನ್ನೂ ಕೂಡ ಈ ವೀಡಿಯೋದಲ್ಲಿ ಅವರು ತಿಳಿಸಿದ್ದಾರೆ.ಅಷ್ಟೇ ಅಲ್ಲದೆ ಏನೆಂದು ಹೆಸರಿಸಬಹುದು ಸಲಹೆ ನೀಡಿ ಎಂಬುದಾಗಿ ಕೂಡ ಅವರು ಕೇಳಿಕೊಂಡಿದ್ದಾರೆ. ಟೆಸ್ಟಿಂಗ್ ಫೇಸ್ ನಲ್ಲಿರುವ ಈ ಡಿವೈಸ್ ನ್ನು ಈ ವರ್ಷದಲ್ಲೇ ಬಿಡುಗಡೆಗೊಳಿಸುವ ಗುರಿ ಇದೆ ಎಂಬುದನ್ನು ಕೂಡ ವೀಡಿಯೋದಲ್ಲಿ ಅವರು ತಿಳಿಸಿದ್ದಾರೆ. ಬಳಕೆದಾರರಲ್ಲಿ ಒಂದು ವೇಳೆ ಮಡಚುವ ಫೋನ್ ಬಗ್ಗೆ ಆಸಕ್ತಿ ಹೆಚ್ಚಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಫೋನಿನ ತಯಾರಿಕೆಯನ್ನು ಮಾಡಲಾಗುತ್ತದೆ ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.

ತಾಂತ್ರಿಕ ಸವಾಲುಗಳು:

ತಾಂತ್ರಿಕ ಸವಾಲುಗಳು:

ಫ್ಲೆಕ್ಸಿಬಲ್ ಫೋಲ್ಡಿಂಗ್ ಸ್ಕ್ರೀನ್ ತಂತ್ರಜ್ಞಾನ, ಫೋರ್-ವೀಲ್ ಡ್ರೈವ್ ಫೋಲ್ಡಿಂಗ್ ಸ್ಟಾಫ್ ತಂತ್ರಗಾರಿಕೆ, ಫ್ಲೆಕ್ಸಿಬಲ್ ಕವರ್ ತಂತ್ರಜ್ಞಾನ ಮತ್ತು ಎಂಐಯುಐ ಅಪಾಡ್ಬೇಷನ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಈ ಫೋನಿನ ತಯಾರಿಕೆಯಲ್ಲಿ ಎದುರಿಸುತ್ತಿದ್ದೇವೆ ಎಂಬುದನ್ನು ಕೂಡ ಬಿನ್ ತಿಳಿಸಿದ್ದಾರೆ. ಅಂದರೆ ಕಂಪೆನಿಯ ಸ್ವಂತ ಸಾಫ್ಟ್ ವೇರ್ ಎಂಐಯುಐ ನಲ್ಲಿ ಈ ಫೋಲ್ಡೇಬಲ್ ಫೋನ್ ರನ್ ಆಗುತ್ತದೆ ಎಂಬುದು ಖಾತ್ರಿಯಾಗಿದ್ದು ಸ್ವಯಂಚಾಲಿತವಾಗಿ ಡಿವೈಸ್ ಸ್ಕ್ರೀನ್ ನ್ನು ಟ್ಯಾಬ್ಲೆಟ್ ಮೋಡ್ ನಿಂದ ಫೋನ್ ಮೋಡ್ ಗೆ ವರ್ಗಾಯಿಸುವುದಕ್ಕೆ ಇದು ನೆರವು ನೀಡುತ್ತದೆ ಎಂಬುದು ತಿಳಿದಂತಾಗಿದೆ.

Best Mobiles in India

Read more about:
English summary
Xiaomi Mi 9 SE may be company's last 'small screen' smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X