Subscribe to Gizbot

ಶಿಯೋಮಿ ಮಿ ಫ್ಯಾನ್ ಫೆಸ್ಟಿವಲ್: ರೆಡ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ..!

Written By:

ಶಿಯೋಮಿ ದೇಶದ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದ್ದು, ಸ್ಮಾರ್ಟ್‌ಫೋನಿನಲ್ಲಿ ಹಲವು ಮಾದರಿಗಳನ್ನು ಲಾಂಚ್ ಮಾಡಿದ ಮಾದರಿಯಲ್ಲಿಯೇ, ಹಲವು ಸ್ಮಾರ್ಟ್‌ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಇದೇ ಹಿನ್ನಲೆಯಲ್ಲಿ ದೇಶದಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಅಭಿಮಾನಿಗಳಿಗಾಗಿಯೇ ಫೆಸ್ಟಿವಲ್ ಆಯೋಜನೆ ಮಾಡಿದ್ದು, ತನ್ನ ಉತ್ಪನ್ನಗಳ ಖರೀದಿಯ ಮೇಲೆ ಆಫರ್ ಗಳನ್ನು ನೀಡಲು ಮುಂದಾಗಿದೆ.

ಶಿಯೋಮಿ ಫೆಸ್ಟಿವಲ್: ರೆಡ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ..!

ಈ ಸಂದರ್ಭದಲ್ಲಿ ಮಿ ಅಭಿಮಾನಿಗಳು ಸ್ಮಾರ್ಟ್‌ ಬ್ಯಾಂಡ್, ಸ್ಮಾರ್ಟ್‌ಫೋನ್ , ಸ್ಮಾರ್ಟ್‌ ಟಿವಿ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ ಪಡೆಯಬಹುದಾಗಿದ್ದು, ಇದರೊಂದಿಗೆ ಮಿ ಮಿಕ್ಸ್ 2 ಸ್ಮಾರ್ಟ್‌ಫೋನ್‌ ಅನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದಾಗಿದೆ. ಇದಲ್ಲದೇ ಮ್ಯೂಸಿಕಲಿ ಆಪ್ ಬಳಕೆ ಮಾಡಿಕೊಂಡು ಈ ಕಾರ್ಯಕ್ರಮದಲ್ಲಿ ಶಿಯೋಮಿ ಫ್ಯಾನ್ಸ್‌ಗಳು ಭಾಗಿಯಾಗಬಹುದಾಗಿದೆ. ಏಪ್ರಿಲ್ 6ರ ವರೆಗೂ ಈ ಫೆಸ್ಟಿವಲ್ ನಡೆಯಲಿದೆ.

ಇದಲ್ಲದೇ ವಿಶೇಷವಾಗಿ ಮಿ ಫ್ಯಾನ್ ಫೆಸ್ಟಿವಲ್ ನಲ್ಲಿ ರೆಡ್‌ಮಿ ನೋಟ್ 5, ರೆಡ್‌ಮಿ ಮತ್ತು ಮಿ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಕಾಣಬಹುದಾಗಿದೆ. ಇದಕ್ಕಾಗಿ ಗ್ರಾಹಕರು ಮೊದಲು ಕ್ಯಾಪೆನಿಂಗ್‌ನಲ್ಲಿರುವ ವಸ್ತುಗಳನ್ನು ಲೈಕ್ ಮಾಡಬೇಕಾಗಿದೆ. ಅಲ್ಲದೇ ಸ್ಮೇಹಿತರನ್ನು ಇನ್‌ವೈಟ್ ಮಾಡಬೇಕಾಗಿದೆ. ಹೀಗೆ ಮಾಡಿದರೆ ಮಾತ್ರವೇ ರಿಯಾಯಿತಿಯೂ ಹೆಚ್ಚುವರಿಯಾಗಿ ದೊರೆಯಲಿದೆ. ಈ ಆಫರ್ ಏಪ್ರಿಲ್ 4ರ ವರೆಗೆ ಮಾತ್ರವೇ ಲಭ್ಯವಿದೆ.

ಶಿಯೋಮಿ ಫೆಸ್ಟಿವಲ್: ರೆಡ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ..!

ಇದಲ್ಲದೇ ಈ ಬಾರಿ ಶಿಯೋಮಿ ರೂ. 4 ಮಿಲಿಯನ್ ಮೌಲ್ಯದ ಕೂಪನ್‌ಗಳನ್ನು ಅಭಿಮಾನಿಗಳಿಗೆ ನೀಡಲು ಮುಂದಾಗಿದೆ. ರೂ.300 ಕೂಪನ್ ಪಡೆಯುವ ಸಲುವಾಗಿ ಇಬ್ಬರು ಸ್ನೇಹಿತರನ್ನು ಇನ್‌ವೈಟ್ ಮಾಡಬೇಕಾಗಿದೆ. ಈ ಕೂಪನ್‌ಗಳು ಸಹ ಏಪ್ರಿಲ್ 4ರ ವರೆಗೆ ದೊರೆಯಲಿದೆ.

ಇದಲ್ಲದೇ ಏಪ್ರಿಲ್ 5 ರಿಂದ ಏಪ್ರಿಲ್ 6 ವರೆಗೂ ಬೈ ಸ್ಮಾಲ್‌ ಗೈಟ್ ಬಿಗ್ ಫ್ರಿ ಆಫರ್ ಅನ್ನು ನೀಡಲಿದ್ದು, ಇದಲ್ಲದೇ ನೋಟ್ ಪ್ರೋ ಖರೀದಿಸಿದವರಿಗೆ ಇಯರ್ ಫೋನ್ ಅನ್ನು ಉಚಿತವಾಗಿ ನೀಡಲಿದೆ. ಅಲ್ಲದೇ ಇದರೊಂದಿಗೆ ಇನ್ನು ಹಲವು ಆಫರ್‌ಗಳು ಮಿ ಅಭಿಮಾನಿಗಳಿಗೆ ಲಭ್ಯವಿದೆ. ಈ ಮೂಲಕ ತನ್ನ ವೆಬ್‌ ಮತ್ತು ಆಪ್ ಬಳಕೆಯನ್ನು ಹೆಚ್ಚಿಸುವ ಕಾರ್ಯವನ್ನು ಶಿಯೋಮಿ ಮಾಡುತ್ತಿದೆ. ಈ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ಮುಂದಾಗಿದೆ.

English summary
Xiaomi Mi Fan Festival goes live with discounts on smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot