ಶಿಯೋಮಿ ನೋಟ್‌ಬುಕ್ ಪ್ರೊ 120 ಸರಣಿ ಲಾಂಚ್‌! ಪ್ರೊಸೆಸರ್‌ ಯಾವುದು?

|

ಶಿಯೋಮಿ ಕಂಪೆನಿ ತನ್ನ ಹೊಸ ನೋಟ್‌ಬುಕ್‌ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಭಾರತದಲ್ಲಿ ಪರಿಚಯಿಸಿದೆ. ಇವುಗಳನ್ನು ಶಿಯೋಮಿ ನೋಟ್‌ಬುಕ್‌ ಪ್ರೊ 120G ಮತ್ತು ಶಿಯೋಮಿ ನೋಟ್‌ಬುಕ್‌ ಪ್ರೊ 120 ಎಂದು ಹೆಸರಿಸಲಾಗಿದೆ. ಇನ್ನು ಶಿಯೋಮಿ ನೋಟ್‌ಬುಕ್ ಪ್ರೊ 120 ಸರಣಿಯು 12 ನೇ ತಲೆಮಾರಿನ ಇಂಟೆಲ್‌ ಕೋರ್‌ i5 H- ಸರಣಿಯ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಂಡೋಸ್‌ 11ನಲ್ಲಿ ರನ್‌ ಆಗಲಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ನೋಟ್‌ಬುಕ್ ಪ್ರೊ 120 ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಶಿಯೋಮಿ ನೋಟ್‌ಬುಕ್‌ ಪ್ರೊ 120G ಎನ್‌ವಿಡಿಯಾ ಜಿಪೋರ್ಸ್‌ MX550 GPU ಗ್ರಾಫಿಕ್ಸ್‌ ಹೊಂದಿದೆ. ಆದರೆ ಶಿಯೋಮಿ ನೋಟ್‌ಬುಕ್ Pro 120 ಇಂಟೆಲ್ UHD ಗ್ರಾಫಿಕ್ಸ್ ಅನ್ನು ಹೊಂದಿರಲಿದೆ. ಇನ್ನು ಈ ಸರಣಿಯು 120Hz ವರೆಗೆ ರಿಫ್ರೆಶ್ ರೇಟ್‌ ಬೆಂಬಲಿಸುವ 14 ಇಂಚಿನ ಮಿ-ಟ್ರೂಲೈಫ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ನೋಟ್‌ಬುಕ್ ಪ್ರೊ 120 ಸರಣಿ ವಿಶೇಷತೆ

ಶಿಯೋಮಿ ನೋಟ್‌ಬುಕ್ ಪ್ರೊ 120 ಸರಣಿ ವಿಶೇಷತೆ

ಶಿಯೋಮಿ ನೋಟ್‌ಬುಕ್‌ ಪ್ರೊ 120G ಮತ್ತು ನೋಟ್‌ಬುಕ್‌ ಪ್ರೊ 120 ಲ್ಯಾಪ್‌ಟಾಪ್‌ಗಳು 14 ಇಂಚಿನ ಮಿ-ಟ್ರೂಲೈಫ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, ಮತ್ತು 100% sRGB ಕವರೇಜ್ ಅನ್ನು ಹೊಂದಿರಲಿದೆ. ಇನ್ನು ಈ ಡಿಸ್‌ಪ್ಲೇ ಡಿಸಿ ಡಿಮ್ಮಿಂಗ್ ಬೆಂಬಲದೊಂದಿಗೆ TÜV ರೈನ್‌ಲ್ಯಾಂಡ್ ಕಡಿಮೆ ನೀಲಿ ಬೆಳಕಿನ ಪ್ರಮಾಣೀಕರಣವನ್ನು ಸಹ ಹೊಂದಿದೆ. ಜೊತೆಗೆ ಡಿಸ್‌ಪ್ಲೇ ರಚನೆಯ ಅನುಪಾತ 16:10 ಹೊಂದಿದೆ.

ಪ್ರೊಸೆಸರ್‌

ಈ ಎರಡೂ ಮಾದರಿಗಳು ಕೂಡ 12 ನೇ ತಲೆಮಾರಿನ ಇಂಟೆಲ್ ಕೋರ್ i5-12450H CPU ಪ್ರೊಸೆಸರ್‌ ಅನ್ನು ಹೊಂದಿವೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿವೆ. ಇದರಲ್ಲಿ ಶಿಯೋಮಿ ನೋಟ್‌ಬುಕ್‌ ಪ್ರೊ 120G ಮಾದರಿಯು ಎನ್‌ವಿಡಿಯಾ ಜಿಪೋರ್ಸ್‌ MX550 GPU ಅನ್ನು ಹೊಂದಿದೆ. ಅಲ್ಲದೆ ಶಿಯೋಮಿ ನೋಟ್‌ಬುಕ್‌ ಪ್ರೊ 120 ಇಂಟಿಗ್ರೇಟೆಡ್ ಇಂಟೆಲ್ UHD ಗ್ರಾಫಿಕ್ಸ್ ಅನ್ನು ಹೊಂದಿದೆ.

ನೋಟ್‌ಬುಕ್‌

ಶಿಯೋಮಿ ನೋಟ್‌ಬುಕ್‌ ಪ್ರೊ 120 ಸರಣಿಯು 56Whr ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 100W ಅಡಾಪ್ಟರ್‌ನೊಂದಿಗೆ USB ಟೈಪ್-ಸಿ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ Wi-Fi 6, ಬ್ಲೂಟೂತ್ v5.2, ಥಂಡರ್ಬೋಲ್ಟ್ 4 ಪೋರ್ಟ್, HDMI 2.0 ಪೋರ್ಟ್, USB 3.2 Gen 2 ಟೈಪ್-C ಪೋರ್ಟ್, USB 3.1 Gen 1 ಟೈಪ್-A ಪೋರ್ಟ್ ಹೊಂದಿದೆ. ಹಾಗೆಯೇ 3.5mm ಕಾಂಬೊ ಜ್ಯಾಕ್. ಆಡಿಯೊವನ್ನು DTS ಆಡಿಯೊ ಪ್ರಕ್ರಿಯೆಯೊಂದಿಗೆ ಎರಡು 2W ಸ್ಟಿರಿಯೊ ಸ್ಪೀಕರ್‌ಗಳು ನಿರ್ವಹಿಸುತ್ತವೆ. ಇದಲ್ಲದೆ HD (720p) ವೆಬ್‌ಕ್ಯಾಮ್ ಮತ್ತು ಮೈಕ್ರೊಫೋನ್ ಅನ್ನು ಸಹ ಒಳಗೊಂಡಿರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಶಿಯೋಮಿ ನೋಟ್‌ಬುಕ್‌ ಪ್ರೊ 120G ಬೆಲೆ 74,999ರೂ. ಆಗಿದೆ. ಆದರೆ ಶಿಯೋಮಿ ನೋಟ್‌ಬುಕ್‌ ಪ್ರೊ 120 ಬೆಲೆ 69,999ರೂ.ಆಗಿದೆ. ಇನ್ನು ಈ ಎರಡೂ ಮಾದರಿಗಳು ಸೆಪ್ಟೆಂಬರ್ 20 ರಿಂದ ಮಾರಾಟವಾಗಲಿದೆ. ಈ ಎರಡು ಲ್ಯಾಪ್‌ಟಾಪ್‌ಗಳು Mi.com, Mi ಹೋಮ್ಸ್ ಮತ್ತು ಅಮೆಜಾನ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಶಿಯೋಮಿ

ಇದಲ್ಲದೆ ಶಿಯೋಮಿ ಕಂಪೆನಿ ಭಾರತದಲ್ಲಿ ಹೊಸ ಶಿಯೋಮಿ ಸ್ಮಾರ್ಟ್‌ಟಿವಿ X ಸರಣಿಯನ್ನು ಪರಿಚಯಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೊ, DTS-HD ಜೊತೆಗೆ DTS: ವರ್ಚುವಲ್ X ಟೆಕ್ನಾಲಜಿ ಹೊಂದಿರುವ 30W ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ನೀವು 15 ಕ್ಕೂ ಹೆಚ್ಚು ಭಾಷೆಗಳು, ಯುನಿವರ್ಸಲ್ ಸರ್ಚ್‌, ಕಿಡ್ಸ್ ಮೋಡ್ ಮತ್ತು ಯುಟ್ಯೂಬ್‌ ಇಂಟಿಗ್ರೇಷನ್ ಅನ್ನು ಹೊಂದಿದೆ. ಸ್ಮಾರ್ಟ್ ಟಿವಿ X ಸರಣಿ ಮೂರು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಟಿವಿಗಳು 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ MEMC ಎಂಜಿನ್, ಡಾಲ್ಬಿ ವಿಷನ್ ಮತ್ತು HDR10 ಮತ್ತು HLG ಗೆ ಬೆಂಬಲವನ್ನು ನೀಡಲಿದೆ.

Best Mobiles in India

English summary
The Xiaomi NoteBook Pro 120 series laptops feature an aluminium alloy body and pack a 56Whr battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X