ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಶಿಯೋಮಿಯ ಹೊಸ ಲ್ಯಾಪ್‌ಟಾಪ್‌!

|

ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗಾಗಲೇ ತನ್ನ ಭಿನ್ನ ಶ್ರೇಣಿಯ ಟೆಕ್‌ ಗ್ಯಾಜೆಟ್ಸ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ನೋಟ್‌ಬುಕ್‌ ಮತ್ತು ಸ್ಮಾರ್ಟ್‌ಟಿವಿಯನ್ನು ಲಾಂಚ್‌ ಮಾಡಲು ಸಿದ್ಧತೆ ನಡೆಸಿದೆ. ಇದೇ ತಿಂಗಳ ಕೊನೆಯಲ್ಲಿ ಈ ಎರಡು ಡಿವೈಸ್‌ಗಳ ಲಾಂಚ್‌ ಈವೆಂಟ್‌ ನಡೆಯುವುದು ಪಕ್ಕಾ ಆಗಿದೆ. ಶಿಯೋಮಿ ಕಂಪೆನಿಯು ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಲಾಂಚ್‌ ಈವೆಂಟ್‌ ಬಗ್ಗೆ ಅಧಿಕೃತಗೊಳಿಸಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ಹೊಸ ಶಿಯೋಮಿ ನೋಟ್‌ಬುಕ್‌ ಪ್ರೊ 120G ಮತ್ತು ಶಿಯೋಮಿ ಸ್ಮಾರ್ಟ್‌ ಟಿವಿ X ಸರಣಿ 4K ಬಿಡುಗಡೆ ಮಾಡಲು ಪ್ಲಾನ್‌ ಮಾಡಿದೆ. ಸದ್ಯ ಈ ಎರಡು ಡಿವೈಸ್‌ ಫೀಚರ್ಸ್‌ಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲವಾದರೂ, ಶಿಯೋಮಿ ನೋಟ್‌ಬುಕ್ ಪ್ರೊ 120G ಹೇಗಿರಲಿದೆ ಎಂಬುದರ ಬಗ್ಗೆ ಟೀಸರ್‌ನಲ್ಲಿ ಕಾಣಬಹುದಾಗಿದೆ. ಹಾಗಾದ್ರೆ ಶಿಯೋಮಿ ಕಂಪೆನಿ ಸದ್ಯದಲ್ಲೇ ಲಾಂಚ್‌ ಮಾಡಲಿರುವ ಡಿವೈಸ್‌ಗಳ ವಿಶೇಷತೆ ಏನಿರಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ ನೋಟ್‌ಬುಕ್‌ ಪ್ರೊ 120G

ಶಿಯೋಮಿ ನೋಟ್‌ಬುಕ್‌ ಪ್ರೊ 120G

ಶಿಯೋಮಿ ನೋಟ್‌ಬುಕ್‌ ಪ್ರೊ 120G 14 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದು 2.5K ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 16:10 ರಚನೆಯ ಅನುಪಾತವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ. ಇದು 11 ನೇ ತಲೆಮಾರಿನ ಇಂಟೆಲ್‌ ಕೋರ್‌ i7 ಅಥವಾ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜಿಪೋರ್ಸ್‌ MX450 GPU ಗ್ರಾಫಿಕ್ಸ್‌ ಕಾರ್ಡ್‌ ಹೊಂದಿರಲಿದೆ.

ನೋಟ್‌ಬುಕ್‌

ಶಿಯೋಮಿ ನೋಟ್‌ಬುಕ್‌ ಪ್ರೊ 120G 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದು 56Whr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ನೋಟ್‌ಬುಕ್‌ ಸಿಂಗಲ್‌ ಥಂಡರ್‌ಬೋಲ್ಟ್ 4 ಪೋರ್ಟ್ ಅನ್ನು ಹೊಂದಿದೆ. ಇದು ಬ್ಲೂಟೂತ್ ಮತ್ತು ವೈ-ಫೈ ಸಂಪರ್ಕಕ್ಕೆ ಬೆಂಬಲವನ್ನು ಹೊಂದಿದೆ. ಈ ಡಿವೈಸ್‌ ಚಾಸಿಸ್ 6-ಸರಣಿ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು,1.5 ಕೆಜಿ ತೂಕವನ್ನು ಹೊಂದಿದೆ.

ಶಿಯೋಮಿ

ಇನ್ನು ಶಿಯೋಮಿ ಸ್ಮಾರ್ಟ್ ಟಿವಿ X ಸರಣಿ 4K ವಿಶೇಷತೆ ಏನು ಎಂಬುದು ಇನ್ನು ಬಹಿರಂಗವಾಗಿಲ್ಲ. ಆದರೆ ಇದನ್ನು 'ನಯವಾದ ಮತ್ತು ತಡೆರಹಿತ' ಎಂದು ಹೇಳಲಾಗಿದೆ. ಅಂದರೆ ಶಿಯೋಮಿಯ ಈ ಸ್ಮಾರ್ಟ್‌ಟಿವಿ ಸ್ಲಿಮ್ ಫಾರ್ಮ್ ಫ್ಯಾಕ್ಟರ್ ಮತ್ತು ತೆಳುವಾದ ಬೆಜೆಲ್‌ಗಳನ್ನು ಒಳಗೊಂಡಿದೆ. ಸದ್ಯ ಶಿಯೋಮಿ ನೋಟ್‌ಬುಕ್‌ ಪ್ರೊ 120G ಮತ್ತು ಶಿಯೋಮಿ ಸ್ಮಾರ್ಟ್‌ TV 4K ಸರಣಿಯ 4K ಭಾರತದಲ್ಲಿ ಇದೇ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಶಿಯೋಮಿ

ಇದಲ್ಲದೆ ಶಿಯೋಮಿ ಕಂಪೆನಿ ಇತ್ತೀಚಿಗೆ ಭಾರತದ ಮಾರುಕಟ್ಟೆಯಲ್ಲಿ ಹೊಸ ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಬಜೆಟ್‌ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ ಆಗಿದೆ. ಇದು 24W ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಆಡಿಯೋ ಹಾಗೂ DTS:X ತಂತ್ರಜ್ಞಾನವನ್ನು ಬೆಂಬಲಿಸುವ ಡ್ಯುಯಲ್‌ ಸ್ಪೀಕರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ಶಿಯೋಮಿಯ ಕಂಟೆಂಟ್ ಅಗ್ರಿಗೇಟರ್ ಪ್ಯಾಚ್‌ವಾಲ್ UI ಅನ್ನು ಹೊಂದಿದೆ. ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪ್ರೀಮಿಯಂ ಮೆಟಾಲಿಕ್ ಕೇಸಿಂಗ್ ಮತ್ತು ಬೆಜೆಲ್-ಲೆಸ್ ಡಿಸ್‌ಪ್ಲೇ ಆಗಿದೆ.

ಪ್ರೊಸೆಸರ್‌

ಇದು ಕ್ವಾಡ್-ಕೋರ್ ಕಾರ್ಟೆಕ್ಸ್ A55 CPU ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 1.5GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ 24W ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಆಡಿಯೋ ಮತ್ತು DTS:Xಟೆಕ್ನಾಲಜಿ ಬೆಂಬಲದೊಂದಿಗೆ ಡ್ಯುಯಕ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ ಟಿವಿ 11 ಬೆಂಬಲದೊಂದಿಗೆ ರನ್‌ ಆಗಲಿದ್ದು, ಶಿಯೋಮಿಯ ಕಂಟೆಂಟ್ ಅಗ್ರಿಗೇಟರ್ ಪ್ಯಾಚ್‌ವಾಲ್ UI (ಆವೃತ್ತಿ 4) ಸಹ ಸ್ವತಂತ್ರ ಸ್ಕಿನ್ ಆಗಿ ಲಭ್ಯವಿದೆ.

Best Mobiles in India

Read more about:
English summary
Xiaomi NoteBook Pro 120G India launch date announced

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X