ಈ ವರ್ಷವೂ ಶಿಯೋಮಿಯೇ ಫಸ್ಟ್..ಆದರೆ, ಸ್ಯಾಮ್‌ಸಂಗ್ ಬೆಸ್ಟ್!..ಒಪ್ಪೊ,ವಿವೊ ಲಾಸ್ಟ್!!

|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕಳೆದ ಆರು ತಿಂಗಳಿನಿಂದಲೂ ಮೊದಲ ಸ್ಥಾನವನ್ನೇ ಅಲಂಕರಿಸುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಈ ವರ್ಷದ ಆರಂಭದಲ್ಲಿಯೂ ತನ್ನ ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ. ಶಿಯೋಮಿಯಿಂದಾಗಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಸ್ಯಾಮ್‌ಸಂಗ್ ಕೂಡ ತನ್ನ ಮಾರುಕಟ್ಟೆ ವಿಸ್ತಾರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.!!

ಹೌದು, 2018ನೇ ವರ್ಷದ ಭಾರತದ ಮೊಬೈಲ್ ಮಾರುಕಟ್ಟೆಯ ಮೊದಲ ತ್ರೈಮಾಸಿಕ ವರದಿಯು ಇದೀಗ ಬಿಡುಗಡೆಯಾಗಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಬಾರೀ ಬದಲಾವಣೆಗಳಾಗಿವೆ.! ಕಳೆದ ವರ್ಷ ಹೆಚ್ಚು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದ ಒಪ್ಪೊ ಮತ್ತು ವಿವೊ ಮೊಬೈಲ್ ಕಂಪೆನಿಗಳು ಈ ಬಾರಿ ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ಮುಂದೆ ಮಂಡಿಯೂರಿವೆ.!

ಈ ವರ್ಷವೂ ಶಿಯೋಮಿಯೇ ಫಸ್ಟ್..ಆದರೆ, ಸ್ಯಾಮ್‌ಸಂಗ್ ಬೆಸ್ಟ್!..ಒಪ್ಪೊ,ವಿವೊ ಲಾಸ್ಟ್!

ಇನ್ನು ವಿಶ್ವದಲ್ಲಿ ಹೆಚ್ಚು ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿರುವ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ ಹುವಾವೆ ಈ ವರ್ಷದ ಆರಂಭದಲ್ಲಿ ಭಾರತದ ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದೆ. ಹಾಗಾದರೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯ ಚಿತ್ರಣ ಹೇಗಿದೆ? ಏನೆಲ್ಲಾ ಬದಲಾವನೆಯಾಗಿದೆ ಎಂಬುದನ್ನು ಮುಂದೆ ತಿಳಿಯಿರಿ.

ಶಿಯೋಮಿ ಈಗಲೂ ಫಸ್ಟ್

ಶಿಯೋಮಿ ಈಗಲೂ ಫಸ್ಟ್

ಕಳೆದ ವರ್ಷ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿದ ಶಿಯೋಮಿ ಈ ವರ್ಷವೂ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಕಳೆದ ವರ್ಷ ಕೇಲವ 13.1 ಪರ್ಸೆಂಟ್ ಮೊಬೈಲ್ ಮಾರುಕಟ್ಟೆ ಪಾಲನ್ನು ಹೊಂದಿದ್ದ ಶಿಯೋಮಿ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿಮಾರುಕಟ್ಟೆಯ ಶೇ. 31.1ರಷ್ಟು ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು ಮಾರುಕಟ್ಟೆಯ ದಿಗ್ಗಜನಾಗಿ ಹೊರಹೊಮ್ಮಿದೆ.!

ಶಿಯೋಮಿ ಫಸ್ಟ್. ಆದರೆ,ಸ್ಯಾಮ್‌ಸಂಗ್ ಬೆಸ್ಟ್!

ಶಿಯೋಮಿ ಫಸ್ಟ್. ಆದರೆ,ಸ್ಯಾಮ್‌ಸಂಗ್ ಬೆಸ್ಟ್!

ಭಾರತದ ಮೊಬೈಲ್ ಮಾರುಕಟ್ಟೆಯನ್ನು ಶಿಯೋಮಿ ಆಕ್ರಮಿಸಿಕೊಂಡ ನಂತರ ಸ್ಯಾಮ್‌ಸಂಗ್ ಮೊಬೈಲ್ ಕಂಪೆನಿ ಕಥೆ ಮುಗಿಯಿತು ಎಂದು ಹೇಳುತ್ತಿದ್ದವರಿಗೆ ಸ್ಯಾಮ್‌ಸಂಗ್ ಈ ವರ್ಷ ತಕ್ಕ ಉತ್ತರ ನೀಡಿದೆ. ಕಳೆದ ವರ್ಷ ಇದೇ ಅವದಿಯಲ್ಲಿ 25.9ರಷ್ಟು ಮೊಬೈಲ್ ಮಾರುಕಟ್ಟೆ ಪಾಲನ್ನು ಹೊಂದಿದ್ದ ಸ್ಯಾಮ್‌ಸಂಗ್, ಈ ವರ್ಷ 26.2 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಹುವಾವೆಗೆ ಹೊಸ ಮಾರುಕಟ್ಟೆ!

ಹುವಾವೆಗೆ ಹೊಸ ಮಾರುಕಟ್ಟೆ!

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ ಹುವಾವೆ ಈ ವರ್ಷ ಭಾರತದಲ್ಲಿ ಶುಭಾರಂಭ ಮಾಡಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯ ಶೇ. 3.4 ರಷ್ಟು ಪಾಲನ್ನು ಗಳಿಸಿಕೊಂಡಿದೆ. ಕಳೆದ ವರ್ಷ ಹುವಾವೆ ಕಂಪೆನಿ ಪಾಲು ಶೇ. 1.4 ಪರ್ಸೆಂಟ್‌ನಷ್ಟಿತ್ತು.!

ಒಪ್ಪೊ,ವಿವೊ ಲಾಸ್ಟ್

ಒಪ್ಪೊ,ವಿವೊ ಲಾಸ್ಟ್

ಕಳೆದ ವರ್ಷ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಹೆಸರುಗಳಿಸಿದ್ದ ಒಪ್ಪೊ,ವಿವೊ ಮೊಬೈಲ್ ಕಂಪೆನಿಗಳು ಈ ರ್ಷ ಮುಗ್ಗರಿಸಿವೆ. ಕಳೆದ ವರ್ಷ ಮೊಬೈಲ್ ಮಾರುಕಟ್ಟೆಯ ಶೇ. 11.9ರಷ್ಟು ಪಾಲನ್ನು ಹೊಂದಿದ್ದ ವಿವೊ ಈ ವರ್ಷ ಶೇ. 5.8ಕ್ಕೆ ಇಳಿಕೆಯಾಗಿದೆ. ಇದೇ ವೇಳೆಯಲ್ಲಿ ಒಪ್ಪೊ 9.9 ರಷ್ಟು ಪಾಲಿನಿಂದ 5.6 ರಷ್ಟು ಪಾಲಿಗೆ ತೃಪ್ತಿಯಾಗಿದೆ.

How To Link Aadhaar With EPF Account Without Login (KANNADA)
ಜಿಯೋ ಫೋನ್ ಹವಾ!!

ಜಿಯೋ ಫೋನ್ ಹವಾ!!

ಸ್ಮಾರ್ಟ್‌ಫೋನ್‌ಗಳ ಕಥೆ ಇದಾದರೆ, ಭಾರತದ ಫೀಚರ್ ಫೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಹೆಮ್ಮರವಾಗಿ ಬೆಳೆದುನಿಂತಿದೆ. ಕಳೆದ ವರ್ಷದ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ಜಿಯೋ ಫೋನ್, ಈ ವರ್ಷ ಶೇ 35.8 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇನ್ನು ಎರಡನೇ ಸ್ಥಾನವನ್ನು ಸ್ಯಾಮ್‌ಸಂಗ್ (9.8%) ಪಡೆದುಕೊಂಡಿದೆ.!

Best Mobiles in India

English summary
Xiaomi on top, Huawei makes gains in India smartphone market, Vivo and Oppo lose: Counterpoint. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X