ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಶಿಯೋಮಿ ರೆಡ್ ಮಿ 6 ಪ್ಲಸ್

|

ಶಿಯೋಮಿ ಕಂಪೆನಿಯು ಎಂಐ ಮತ್ತು ರೆಡ್ ಮಿ ಸರಣಿಯ ಹಲವು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಕಂಡಿದೆ. ಈ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನ ಶಿಯೋಮಿ ರೆಡ್ ಮಿ 6 ಪ್ಲಸ್. ಹೌದು ಆಪಲ್ ಐಫೋನ್ –X ನಂತೆ ಕಾಣುವ ಶಿಯೋಮಿ ರೆಡ್ ಮಿ 6 ಪ್ಲಸ್ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಇದರಲ್ಲೂ ಕೂಡ ಆಪಲ್ ಐಫೋನ್ ಎಕ್ಸ್ ನಂತೆ ನಾಚ್ ಇರಲಿದೆ ಎಂದು ಚೀನಾದ TENAA ವೆಬ್ ಸೈಟ್ ವರದಿ ಮಾಡಿದೆ. ಶಿಯೋಮಿ ರೆಡ್ ಮಿ 6 ಪ್ಲಸ್ ಅನ್ನು ರೆಡಿ ಮಿ 6 ಪ್ರೋ ಎಂದು ಕೂಡ ಕರೆಯಬಹುದು. ಹಾಗಾದ್ರೆ ಈ ಫೋನ್ ಹೇಗಿರುತ್ತೆ ಎಂಬ ಮಾಹಿತಿಗಾಗಿ ಮುಂದೆ ಓದಿ..

ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ  ಶಿಯೋಮಿ ರೆಡ್ ಮಿ 6 ಪ್ಲಸ್


. ವೈಶಿಷ್ಟ್ಯತೆಗಳ ಪಟ್ಟಿ ಇಲ್ಲಿದೆ ನೋಡಿ..

ಒಂದು ಮಾಹಿತಿಯ ಪ್ರಕಾರ ಶಿಯೋಮಿ ರೆಡ್ಮಿ 6 ಪ್ಲಸ್ ಅಥವಾ ಪ್ರೋ ನಲ್ಲಿ ಹಿಂಭಾಗದಲ್ಲಿ 12 ಎಂಪಿ ಡುಯಲ್ ಲೆನ್ಸ್ ಕ್ಯಾಮರಾ ಸೆಟ್ ಅಪ್ ವರ್ಟಿಕಲ್ ಆಗಿ ಜೋಡಿಸಲಾಗಿರುತ್ತದೆ. ಜೊತೆಗೆ 5ಎಂಪಿ ಮುಂಭಾಗದ ಕ್ಯಾಮರಾ ಇದ್ದು ಸೆಲ್ಫೀ ತೆಗೆದುಕೊಳ್ಳಲು ನೆರವಾಗಲಿದೆ.ಇದರಲ್ಲಿ 5.84 ಇಂಚಿನ ಫುಲ್ ಹೆಚ್ ಡಿ+ಡಿಸ್ಪ್ಲೇಯು 19:9 ಅನುಪಾತದಲ್ಲಿರಲಿದೆ.2GHz octa-coreಪ್ರೊಸೆಸರ್ ನ್ನು ಇದು ಒಳಗೊಂಡಿದೆ.

ಮೂರು ವಿಧದ ಸ್ಟೋರೇಜ್ ವರ್ಷನ್ ನಲ್ಲಿ ಮೊಬೈಲ್ ನಿಮ್ಮ ಕೈಗೆ ಸಿಗಲಿದ್ದು, ನೀವು ನಿಮ್ಮ ಅಗತ್ಯತೆಗೆ ತಕ್ಕಂತೆ ಆಯ್ಕೆ ಮಾಡಕೊಳ್ಳಬಹುದು.2ಜಿಬಿ RAM/ 16ಜಿಬಿ ಸ್ಟೋರೇಜ್ ,3ಜಿಬಿ RAM/ 32ಜಿಬಿ ಸ್ಟೋರೇಜ್ ಮತ್ತು 4ಜಿಬಿ RAM/ 64ಜಿಬಿ ಸ್ಟೋರೇಜ್ ನ್ನು ಇರುತ್ತೆ. ಈ ಫೋನ್ ರನ್ ಆಗುವುದು ಆಂಡ್ರಾಯ್ಡ್ 8.1 ಓರಿಯೋ ಬೇಸ್ಡ್MIUI 10,ಸದ್ಯದಲ್ಲೇ ಇದು ಬಿಡುಗಡೆಗೊಳ್ಳಲಿದೆ. ಶಿಯೋಮಿ ರೆಡ್ಮಿ 6 ಪ್ರೋ ಅಥವಾ ಪ್ಲಸ್ ಎಲ್ಲಾ ವೇರಿಯಂಟ್ ಮೊಬೈಲ್ ಗಳಲ್ಲೂ ಕೂಡ 4000mAh ಬ್ಯಾಟರಿ ಸೌಲಭ್ಯವಿದ್ದು 178 ಗ್ರಾಮ್ಸ್ ತೂಕ ಇರುತ್ತೆ.

ಸರ್ಟಿಫಿಕೇಷನ್ ವೆಬ್ ಸೈಟ್ ಟೀನಾದ ಮಾಹಿತಿಯಂತೆ ಹೇಳುವುದಾದರೆ ರೆಡ್ಮಿ 6 ನಲ್ಲಿ 5.45 ಇಂಚಿನ ಡಿಸ್ಪ್ಲೇ ಇರುತ್ತೆ. 720x1440 ಪಿಕ್ಸಲ್ ರೆಸೊಲ್ಯೂಷನ್ ನ್ನು ಇದು ಹೊಂದಿದ್ದು 18:9 ಅನುಪಾತದ ಡಿಸ್ಪ್ಲೇ ಹೊಂದಿದೆ. 2 GHz octa-core Qualcomm Snapdragon 625 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 8.1ಓರಿಯೋ ಆಪರೇಟಿಂಗ್ ಸಿಸ್ಟಮ್ ನ್ನು ಇದು ಒಳಗೊಂಡಿದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?

3000mAh ಬ್ಯಾಟರಿಯನ್ನು ಹೊಂದಿದೆ. ಶಿಯೋಮಿಯು ತನ್ನ 8 ನೇ ವಾರ್ಷಿಕೋರ್ಷವ ಆಚರಣೆಯ ಹಿನ್ನೆಲೆಯಲ್ಲಿ ಟಿಕೆಟ್ ಸಹಿತ ಒಂದು ದೊಡ್ಡ ಕಾರ್ಯಕ್ರಮವನ್ನು ಚೀನಾದಲ್ಲಿ ಆಯೋಜಿಸಿದೆ. ಅಂದು ತನ್ನ ಹೊಸ ಸ್ಮಾರ್ಟ್ ಫೋನ್ ಗಳಾದ Mi 8, Xiaomi ಯ ಹೊಸ ವರ್ಷನ್ ಗಳನ್ನು ಮತ್ತು MIUI interface—MIUI 10 ಮತ್ತು Mi Band 3 ಫಿಟ್ನೆಸ್ ಟ್ರ್ಯಾಕರ್ ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ಜಿಯೋಗೆ ಹುಚ್ಚು ಹಿಡಿಸಿದ ಏರ್‌ಟೆಲ್: ರೂ.3799ಕ್ಕೆ ನೋಕಿಯಾ 6.1 ಸ್ಮಾರ್ಟ್‌ಫೋನ್ ಮಾರಾಟ...!ಜಿಯೋಗೆ ಹುಚ್ಚು ಹಿಡಿಸಿದ ಏರ್‌ಟೆಲ್: ರೂ.3799ಕ್ಕೆ ನೋಕಿಯಾ 6.1 ಸ್ಮಾರ್ಟ್‌ಫೋನ್ ಮಾರಾಟ...!

Best Mobiles in India

Read more about:
English summary
Xiaomi Redmi 6 Plus launching soon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X