Subscribe to Gizbot

ಚೀನಾ ಫೋನ್ ಖರೀದಿಸುವ ಮುನ್ನ ಎಚ್ಚರ: ಯುವಕನ ಜೇಬಿನಲ್ಲೇ ಹತ್ತಿ ಉರಿದ ನೋಟ್ ಸ್ಮಾರ್ಟ್‌ಫೋನ್.!!

Written By:

ಮೊನ್ನೇ ತಾನೇ ಬೆಂಗಳೂರಿನಲ್ಲಿ ಚೀನಾ ಮೂಲದ ಶಿಯೋಮಿ ಸ್ಮಾರ್ಟ್‌ಫೋನ್ ಸ್ಫೋಟಗೊಂಡ ಘಟನೆ ಮಾಸುವ ಮನ್ನವೇ ಮತ್ತೊಂದು ಸ್ಮಾರ್ಟ್‌ಫೋನ್ ಬ್ಲಾಸ್‌ ಆಗಿದ್ದು, ಅದುವೇ ಶಿಯೋಮಿ ಕಂಪನಿಯ ನೋಟ್ 4 ಸ್ಮಾರ್ಟ್‌ಫೋನ್ ಎಂದು ತಿಳಿದು ಬಂದಿದ್ದು, ಯುವಕನೋರ್ವನ ಪ್ಯಾಂಟಿನಲ್ಲಿಯೇ ಈ ಫೋನ್ ಹತ್ತಿ ಉರಿದಿದೆ ಎನ್ನಲಾಗಿದೆ.

ಈ ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ, ಯುವಕನೋರ್ವನ ಜೇಬಿನಲ್ಲಿ ಸ್ಫೋಟಗೊಂಡ ಶಿಯೋಮಿ ಕಂಪನಿಯ ನೋಟ್ 4 ಸ್ಮಾರ್ಟ್‌ಫೋನ್, ಅಲ್ಲಯೇ ಹತ್ತಿ ಉರಿದಿದೆ. ಜೇಬಿನಲ್ಲಿ ಸ್ಟೋಟ ಗೊಂಡ ಪರಿಣಾಮ ಯುವಕ ತೊಡೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಇಲ್ಲಿದೇ ನೋಡಿ ವಿಡಿಯೋ:

ಶಿಯೋಮಿ ಕಂಪನಿಯ ನೋಟ್ 4 ಸ್ಮಾರ್ಟ್‌ಫೋನ್ ಹತ್ತಿ ಉರಿಯುತ್ತಿರುವ ವಿಡಿಯೋವನ್ನು ಸ್ಥಳೀಯ ಮಾದ್ಯಮವೊಂದು ವರದಿ ಮಾಡಿದ್ದು, ವಿಡಿಯೋದಲ್ಲಿ ಮೊಬೈಲ್ ಉರಿಯುತ್ತಿರುವುದನ್ನು ನೀವು ನೋಡಬಹುದು. ಅಲ್ಲದೇ ಫೋನಿನ ಬಾಕ್ಸ್ ಮುಂತಾದವನ್ನು ವಿಡಿಯೋ ದಲ್ಲಿ ಕಾಣಬಹುದಾಗಿದೆ.

ಗ್ಯಾಲೆಕ್ಸಿ ಫೋನ್ ಸಗ ಬ್ಲಾಸ್ಟ್ ಆಗಿತ್ತು:

ಗ್ಯಾಲೆಕ್ಸಿ ಫೋನ್ ಸಗ ಬ್ಲಾಸ್ಟ್ ಆಗಿತ್ತು:

ಈ ಹಿಂದೆ ಸ್ಯಾಮ್‌ಸಂಗ್ ಕಂಪನಿಯ ಸ್ಮಾರ್ಟ್‌ಫೋನ್ ಇದೇ ಮಾದರಿಯಲ್ಲಿ ಸರಣಿ ಬ್ಲಾಸ್ಟ್ ಆಗಿದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬಹುದು. ಒಮ್ಮೆಗೆ ವಿವಿಧ ದೇಶಗಲ್ಲಿ ಗ್ಯಾಲೆಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗಿತ್ತು. ಈ ಕಾರಣಕ್ಕಾಗಿ ಕಂಪನಿ ಆ ಸ್ಮಾರ್ಟ್‌ಫೋನ್‌ಗಳನ್ನು ಹಿಂದಕ್ಕೆ ಪಡೆದಿತ್ತು.

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
ನೋಟ್ 4 ಸ್ಟೋಟಗಳ ಸರಣಿ:

ನೋಟ್ 4 ಸ್ಟೋಟಗಳ ಸರಣಿ:

ಈಗ ಇದೇ ಮಾದರಿಯಲ್ಲಿ ಶಿಯೋಮಿ ಕಂಪನಿಯ ನೋಟ್ 4 ಸ್ಮಾರ್ಟ್‌ಫೋನ್‌ ಗಳು ಒಂದರ ಹಿಂದೆ ಸ್ಟೋಟಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕಂಪನಿಯೂ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎನ್ನುವುದನ್ನು ನೋಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Just as we put behind the Samsung Galaxy Note 7 nightmare, news of a Xiaomi Redmi Note 4 smartphone exploding has filtered. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot