ಜೂನ್ 7ರಂದು ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ತಯಾರಾಗಿದೆ ಶಿಯೋಮಿ!!

|

ಶಿಯೋಮಿ ಗುರುವಾರ ಮಾಧ್ಯಮ ಆಮಂತ್ರಣ ಕಳುಹಿಸಿದ್ದು,ಜೂನ್ 7 ರಂದು ಹೊಸ ಸ್ಮಾರ್ಟ್ ಫೋನ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.ಈ ತಿಂಗಳಲ್ಲಿ ಟ್ವೀಟರ್ ನಲ್ಲಿ ಟೀಸರ್ ಬಿಡುಗಡೆಗೊಳಿಸಿದ್ದ ಶಿಯೋಮಿ ತನ್ನ ಸ್ಮಾರ್ಟ್ ಫೋನನ್ನು ಭಾರತಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಸಮಾರಂಭವೊಂದನ್ನು ಏರ್ಪಡಿಸಿದೆ.

ಜೂನ್ 7ರಂದು ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ತಯಾರಾಗಿದೆ ಶಿಯೋಮಿ!!

ಈ ಅಧಿಕೃತ ಆಮಂತ್ರಣವು ನವದೆಹಲಿಯಲ್ಲಿ ಜೂನ್ 7 ನೇ ತಾರೀಕು ಬೀಜಿಂಗ್ ನಲ್ಲಿರುವ ಸಂಸ್ಥೆಯಾಗಿರುವ ಶಿಯೋಮಿ ತನ್ನ ಹೊಸ ಪ್ರೊಡಕ್ಟ್ ನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸಮಾರಂಭವೊಂದನ್ನು ಆಯೋಜಿಸಿದೆ.

ಟ್ವೀಟರ್ ಟೀಸರ್ ನಲ್ಲಿ ಹ್ಯಾಷ್ ಟ್ಯಾಗ್ ನ ಜೊತೆಗೆ ಅಂದರೆ #FindYourSelfie ಮತ್ತು #RealYou ಎಂದು ನಮೂದಿಸಲಾಗಿತ್ತು. ಇಲ್ಲಿ Y ಅಕ್ಷರವನ್ನು ಹೈಲೆಟ್ ಮಾಡಲಾಗಿತ್ತು. ಇದರ ಅರ್ಥ ರೆಡ್ಮಿ Y ಸೀರೀಸ್ ಬರುತ್ತಿದೆ ಎಂಬುದಾಗಿತ್ತು.ಕಂಪೆನಿಯ ಟ್ವೀಟರ್ ಟೀಸರ್ ಬಿಡುಗಡೆಗೊಂಡ ಸಂದರ್ಬದಲ್ಲಿ ನಾವು ಹೇಳಿರುವಂತೆ, ಲೆನ್ಸ್ ಕ್ಯಾಮರಾಗಳಿಗೂ ಸೆಡ್ಡು ಹೊಡೆಯುವಂತ ಕ್ಯಾಮರಾ ವೈಶಿಷ್ಟ್ಯವನ್ನು ಇದು ಹೊಂದಿರುವ ಸಾಧ್ಯತೆ ಇದೆ.

ಅಷ್ಟೇ ಅಲ್ಲ, ಭಾರತದಲ್ಲಿ ಬಿಡುಗಡೆಗೊಂಡಿರುವ ರೆಡ್ಮಿ ಎಸ್ 2 ಗೆ ಕಾಂಪಿಟೇಷನ್ ನೀಡುವ ಉದ್ದೇಶ ಹೊಂದಿರುವ ಸಾಧ್ಯತೆ ಇದೆ. ಕಳೆದ ವರ್ಷದ ಪ್ರಸಿದ್ಧ ರೆಡ್ಮಿ ವೈ 1 ಮತ್ತು ಭಾರತದಲ್ಲಿ ಲಾಂಚ್ ಆಗಿರುವ ರೆಡ್ಮಿ ವೈ 2 ಗೆ ಸೆಡ್ಡು ಹೊಡೆಯುವ ಕೆಲವು ಅಧ್ಬುತ ವೈಶಿಷ್ಟ್ಯಗಳು ಇದರಲ್ಲಿ ಇರುವ ಸಾಧ್ಯತೆ ಇದೆ.

ಈಗಲೇ ಯಾವುದೇ ಮಾಹಿತಿ ಬಿಟ್ಟುಕೊಡದ ಕಂಪೆನಿಯು, ಅಧಿಕೃತ ಆಮಂತ್ರಣದಲ್ಲಿ ಮನುಷ್ಯನ ಮುಖದ ಸ್ಕೆಚ್ ಒಂದು ಕಡೆ , ಇನ್ನೊಂದು ಕಡೆ ಕ್ಯಾಮರಾ ಸೆನ್ಸರ್ ಚಿತ್ರವನ್ನು ಹಾಕಲಾಗಿದೆ. ಇದು ಸೆಲ್ಫೀ ಕ್ಯಾಮರಾದ ಜೊತೆಗೆ AI powered ವೈಶಿಷ್ಟ್ಯವನ್ನು ಇದು ಹೊಂದಿರುವುದನ್ನು ಸೂಚಿಸುತ್ತಿದೆ.

ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಗೆ ಸೇರಲಿದೆ 5 ಹೊಸ ವೈಶಿಷ್ಟ್ಯಗಳುಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಗೆ ಸೇರಲಿದೆ 5 ಹೊಸ ವೈಶಿಷ್ಟ್ಯಗಳು

ಶಿಯೋಮಿ ಫೋನಿನ ಬೆಲೆಯ ಬಗ್ಗೆ ಜೂನ್ 7 ರ ಕಾರ್ಯಕ್ರಮದಲ್ಲಿ ಮಾಹಿತಿ ಸಿಗಲಿದೆ. ಆದರೆ , ರೆಡ್ಮಿ ಎಸ್2 ಬೆಲೆ ಭಾರತೀಯ ಮಾರುಕಟ್ಟೆಯ ಬೆಲೆಯನ್ನು ಆಧರಿಸಿ, ಅದಕ್ಕೆ ಕಾಂಪಿಟೇಷನ್ ಕೊಡುವ ಫೋನ್ ಆಗಿರುವುದರಿಂದಾಗಿ ಇದರ ಬೆಲೆಯೂ ಕೂಡ 15,000ದ ಒಳಗೆ ಇರುವ ಸಾಧ್ಯತೆ ಇದೆ.

• ರೆಡ್ಮಿ ಎಸ್ 2 ಬೆಲೆ ..

ರೆಡ್ಮಿ ಎಸ್ 2 3GB RAM ಮತ್ತು 32GB ಸ್ಟೋರೇಜ್ ಇರುವ ಫೋನಿನ ಬೆಲೆಯು CNY 999 (ಹೆಚ್ಚುಕಡಿಮೆ Rs. 10,600), ಅದೇ ನೀವು 4GB RAM/ 64GB storage ನ ಬೆಲೆಯು CNY 1,299( ಅಂದಾಜು Rs. 13,700) ಆಗಿರಲಿದೆ. ಗೋಲ್ಡ್, ಪ್ಲಾಟಿನಂ ಸಿಲ್ವರ್ ಮತ್ತು ರೋಸ್ ಗೋಲ್ಡ್ ಕಲರ್ ನ ಫೋನ್ ಗಳು ಈಗಾಗಲೇ ಚೀನಾದಲ್ಲಿ ಲಭ್ಯವಿದೆ.

• ರೆಡ್ಮಿ ಎಸ್ 2 ವೈಶಿಷ್ಟ್ಯಗಳು

ಇದರಲ್ಲಿ ಎರಡು ಸಿಮ್ ಕಾರ್ಡ್ ಬಳಸಬಹುದು..ರೆಡ್ಮಿ ಎಸ್ 2 Android-based MIUI 9 ನಿಂದ ರನ್ ಆಗುತ್ತೆ. ಮತ್ತು a 5.99-inch HD+ (720x1440 pixels)ನ ಡಿಸ್ಪ್ಲೇಯನ್ನು ಹೊಂದಿದೆ. Snapdragon 625 SoCನ್ನು ಒಳಗೊಂಡಿದೆ. 4GB ಯ RAM ಮತ್ತು ಡೂಯಲ್ rear camera ಸೆಟ್ ಅಪ್ ಇದ್ದು, 12-ಮೆಗಾಪಿಕ್ಸಲ್ ಪ್ರೈಮರಿ ಸೆನ್ಸರ್ ಇದೆ ಮತ್ತು 5 ಮೆಗಾಪಿಕ್ಸಲ್ ಸೆಕೆಂಡರಿ ಸೆನ್ಸರ್ ಕೂಡ ಇದೆ. ಮುಂಭಾಗದಲ್ಲಿ 16-ಮೆಗಾಪಿಕ್ಸಲ್ ಸೆನ್ಸರ್ ಜೊತೆಗೆ AI Portrait Modeನ ವೈಶಿಷ್ಟ್ಯವು ಇದೆ.

AI Smart Beauty, Front HDR, ಮತ್ತು Face Unlock ಕೂಡ ಇದೆ. ಫ್ಲ್ಯಾಶ್ ಲೈಟ್ ಮಾಡ್ಯೂಲ್ ಕೂಡ ಇದೆ. ಇದರಲ್ಲಿ ಎರಡು ಸ್ಟೋರೇಜ್ ಅವಕಾಶ ಇದೆ. 32GB ಮತ್ತು 64GB ಎರಡೂ ಕೂಡ ಮೈಕ್ರೋ ಎಸ್ಡಿ ಕಾರ್ಡ್ 256GB ವರೆಗೆ ಹೆಚ್ಚಿಸಿಕೊಳ್ಳಬಹುದು. Redmi S2 ನಲ್ಲಿ 4G VoLTE, Wi-Fi 802.11 b/g/n, ಬ್ಲೂಟೂತ್ v4.2, ಜಿಪಿಎಸ್/ ಎ-ಜಿಪಿಎಸ್, 3.5ಎಂಎಂ ಹೆಡ್ ಫೋನ್ ಜ್ಯಾಕ್ ಮತ್ತು ಮೈಕ್ರೋ –ಯುಎಸ್ ಬಿ ಪೋರ್ಟ್ ಮತ್ತು 3080mAh ಬ್ಯಾಟರಿಯನ್ನು ಒಳಗೊಂಡಿರುತ್ತೆ.

Best Mobiles in India

Read more about:
English summary
Xiaomi is all set to host an event in India on June 7 and there are claims that the Redmi S2 could be launched in the country. This is an affordable selfie camera, which was unveiled recently in the company’s home market Chennai.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X