ಡಿಸೆಂಬರ್ 19 ರಿಂದ ಶಿಯೋಮಿ ನಂಬರ್ 1 ಎಂಐ ಫ್ಯಾನ್ ಸೇಲ್ ಆರಂಭ!!

|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಶಿಯೋಮಿ ಡಿಸೆಂಬರ್ 19 ರಿಂದ ಡಿಸೆಂಬರ್ 21 ರ ವರೆಗೆ “ನಂಬರ್ 1 ಎಂಐ ಫ್ಯಾನ್ ಸೇಲ್” ನ್ನು ಆರಂಭಿಸಿದೆ. ಈ ಸೇಲ್ ನಲ್ಲಿ ಗ್ರಾಹಕರಿಗೆ ಪೇಟಿಎಂ, ಗೂಗಲ್ ಪೇ, ಮೊಬಿಕ್ ವಿಕ್ ಮೂಲಕ ಹಲವು ರಿಯಾಯಿತಿಗಳು ಲಭ್ಯವಾಗಲಿದೆ. ಪೇಟಿಎಂನಲ್ಲಿ 300 ರುಪಾಯಿಯ ಫ್ಲ್ಯಾಟ್ ಕ್ಯಾಷ್ ಬ್ಯಾಕ್ ಆಫರ್ ಇದೆ. ಗೂಗಲ್ ಪೇ ನಲ್ಲಿ ಪೇ ಎಂಡ್ ಅರ್ನ್ ರಿವಾರ್ಡ್ಸ್ ಗಳು 500 ರುಪಾಯಿವರೆಗೆ ಲಭ್ಯವಾಗುತ್ತದೆ ಮತ್ತು ಮೊಬಿಕ್ ವಿಕ್ ನಲ್ಲಿ 1000ರುಪಾಯಿವರೆಗೆ 10% ಇನ್ಸೆಂಟ್ ಸೂಪರ್ ಕ್ಯಾಷ್ ಸೌಲಭ್ಯವು ವಿಭಿನ್ನ ಪ್ರೊಡಕ್ಟ್ ಗಳ ಕೆಟಗರಿಯಲ್ಲಿ ಲಭ್ಯವಾಗುತ್ತದೆ.

ಸ್ಮಾರ್ಟ್ ಫೋನ್, ಟಿವಿ ಮತ್ತು ಆಕ್ಸಸರೀಸ್ ಗಳ ಬೆಲೆ ಇಳಿಕೆ

ಸ್ಮಾರ್ಟ್ ಫೋನ್, ಟಿವಿ ಮತ್ತು ಆಕ್ಸಸರೀಸ್ ಗಳ ಬೆಲೆ ಇಳಿಕೆ

ಪೇಟಿಎಂನ 300 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯದ ಅಡಿಯಲ್ಲಿ ಶಿಯೋಮಿ ರೆಡ್ಮಿ ವೈ2 8,999 ರುಪಾಯಿ ಬೆಲೆಗೆ ಲಭ್ಯವಾಗಲಿದ್ದು 3,000 ರುಪಾಯಿವರೆಗೆ ರಿಯಾಯಿತಿ ಸಿಗುತ್ತದೆ. ರೆಡ್ಮಿ ನೋಟ್ 6 ಪ್ರೋ 13,999, ಎಂಐ ಎ2 ಗೆ 14,999 , ಪೋಕೋ ಎಫ್ 1 ಗೆ 19,999 ಮತ್ತು ರೆಡ್ಮಿ 6 ಸ್ಮಾರ್ಟ್ ಫೋನ್ ಬೆಲೆ 8,499 ಆಗಿದೆ. ರೆಡ್ಮಿ 6 ಪ್ರೋ ಸ್ಮಾರ್ಟ್ ಫೋನ್ 10,999 ಕ್ಕೆ ಮತ್ತು ರೆಡ್ಮಿ ನೋಟ್ 5 ಪ್ರೋ 12,999 ರುಪಾಯಿ ಬೆಲೆಗೆ ಸಿಗುತ್ತದೆ.

ಫ್ಲ್ಯಾಶ್ ಸೇಲ್:

ಫ್ಲ್ಯಾಶ್ ಸೇಲ್:

ರೆಡ್ಮಿ 6ಎ ಪ್ರತಿ ದಿನ 12ಪಿಎಂ ಗೆ ಡಿಸೆಂಬರ್ 19,20,21 ನೇ ತಾರೀಕಿನಂದು ಸೇಲ್ ನಡೆಯಲಿದ್ದು ಅದರ ಬೆಲೆ 5,999 ರುಪಾಯಿ ಆಗಿರಲಿದೆ.

ಟಿವಿಗಳ ಬೆಲೆ :

ಟಿವಿಗಳ ಬೆಲೆ :

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ ಪ್ರೋ (49) ಮತ್ತು ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಸಿ ಪ್ರೋ (32) ಬೆಲೆ ರುಪಾಯಿ 2000 ರಿಯಾಯಿತಿಯ ನಂತರ ಕ್ರಮವಾಗಿ 30,999 ಮತ್ತು 14,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.

ಎಂಐ ಎಲ್ಇಡಿ ಸ್ಮಾರ್ಟ್ ಟಿವಿ 4ಎ 43 4,000ರುಪಾಯಿ ರಿಯಾಯಿತಿಯ ನಂತರ 21,999 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಆಕ್ಸಸರೀಸ್ ಗಳಿಗೆ ವಿಭಿನ್ನ ರಿಯಾಯಿತಿ:

ಆಕ್ಸಸರೀಸ್ ಗಳಿಗೆ ವಿಭಿನ್ನ ರಿಯಾಯಿತಿ:

ಕಂಪೆನಿಯ ಆಕ್ಸಸರೀಸ್ ಗಳಿಗೂ ಕೂಡ ಬೆಲೆ ಇಳಿಕೆ ಮಾಡಲಾಗಿದೆ. ಎಂಐ ಇಯರ್ ಫೋನ್ ಬೇಸಿಕ್ ಬ್ಲಾಕ್/ರೆಡ್ ನ ಬೆಲೆ ರುಪಾಯಿ 399, ಎಂಐ ಇಯರ್ ಫೋನ್ ಸಿಲ್ವರ್/ಬ್ಲಾಕ್ ನ ಬೆಲೆ 699 ರುಪಾಯಿ, ಎಂಐ ಪವರ್ ಬ್ಯಾಂಕ್(10000ಎಂಎಹೆಚ್) ನ ಬೆಲೆ 899 ರುಪಾಯಿ, ಎಂಐ ಬಾಡಿ ಕಾಂಪೋಸಿಷನ್ ಸ್ಕೇಲ್ ನ ಬೆಲೆ 1,799 ರುಪಾಯಿ ಗಳು ಮತ್ತು ಎಂಐ ಕಾಂಪ್ಯಾಕ್ಟ್ ಸ್ಪೀಕರ್ ನ ಬೆಲೆ ರುಪಾಯಿ 799 ಆಗಿದೆ. ಇನ್ನು ಎಂಐ ಲಗ್ಗೇಜ್ ಸಿರೀಸ್ ನ ಬೆಲೆ 2,999 ರುಪಾಯಿ ಆಗಿರುತ್ತದೆ.

ಕ್ರಿಸ್ ಮಸ್ ಗಾಗಿ ಕಲರ್ ವೇರಿಯಂಟ್ ಸ್ಮಾರ್ಟ್ ಫೋನ್ ಗೆ ರಿಯಾಯಿತಿ:

ಕ್ರಿಸ್ ಮಸ್ ಗಾಗಿ ಕಲರ್ ವೇರಿಯಂಟ್ ಸ್ಮಾರ್ಟ್ ಫೋನ್ ಗೆ ರಿಯಾಯಿತಿ:

ಕ್ರಿಸ್ ಮಸ್ ನ ಕಲರ್ ಫುಲ್ ಕಾರ್ಯಕ್ರಮದ ಅಂಗವಾಗಿ ಕೆಲವು ಸ್ಮಾರ್ಟ್ ಫೋನ್ ಗಳನ್ನು ಪೇಟಿಎಂ ನಲ್ಲಿ ಕ್ಯಾಷ್ ಬ್ಯಾಕ್ ಆಫರ್ ನಲ್ಲಿ ನೀಡಲಾಗುತ್ತಿದ್ದು 300 ರುಪಾಯಿ ಕ್ಯಾಷ್ ಬ್ಯಾಕ್ ನ್ನು ನೀಡಲಾಗುತ್ತಿದೆ. ಪೋಕೋ ಎಫ್1 ರೋಸ್ಸೋ ರೆಡ್ ನ್ನು 19,999 ರುಪಾಯಿ, ರೆಡ್ಮಿ 6 ಪ್ರೋ ಗೋಲ್ಡ್ ಗೆ 10,999 ರುಪಾಯಿ, ಎಂಐ ಎ2 ಗೋಲ್ಡ್ ಕಲರ್ ವೇರಿಯಂಟ್ ಗೆ 14,999 ರುಪಯಿ ಮತ್ತು ರೆಡ್ಮಿ ನೋಟ್ 6 ಪ್ರೋ ರೆಡ್ ಗೆ 13,999 ರುಪಾಯಿ ಬೆಲೆಗೆ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಗಳ ಕಲರ್ ವೇರಿಯಂಟ್ ಗೆ ವಿಶೇಷ ರಿಯಾಯಿತಿ ಮಾರಾಟ ನಡೆಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ನೀವು ಶಿಯೋಮಿಯ ಅಧಿಕೃತ ವೆಬ್ ಸೈಟ್ ಪೇಜ್ ಗೆ ತೆರಳಿ.

Most Read Articles
Best Mobiles in India

English summary
Xiaomi’s No. 1 Mi Fan Sale to begin from December 19: Discounts, offers and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X