ಭಾರತದಲ್ಲಿ ಶಿಯೋಮಿ ಕಂಪೆನಿಯ ಈ ಸೇವೆಗಳು ಇನ್ಮುಂದೆ ಲಭ್ಯವಾಗುವುದಿಲ್ಲ!

|

ಭಾರತದಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಎನಿಸಿಕೊಂಡಿರುವ ಶಿಯೋಮಿ ಕಂಪೆನಿ ಅನೇಕ ವಿಚಾರಗಳಿಗೆ ಸುದ್ದಿಯಾಗ್ತಿದೆ. ಇತ್ತೀಚಿಗಷ್ಟೇ ಭಾರತ ಸರ್ಕಾರದ ಇಡಿಯಿಂದ ವಿಚಾರಣೆಯನ್ನು ಎದುರಿಸಿದ್ದ ಶಿಯೋಮಿ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದೆ. ಜನಪ್ರಿಯ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದ್ದರೂ ಹಣಕಾಸು ವಹಿವಾಟಿನ ವಿಚಾರದಲ್ಲಿ ವಿಚಾರಣೆಯನ್ನು ಎದುರಿಸುತ್ತಿದೆ. ಇದೇ ಕಾರಣಕ್ಕೆ ಇದೀಗ ಭಾರತದಲ್ಲಿ ತನ್ನ ಹಣಕಸು ಸೇವೆಗಳನ್ನು ಸ್ಟಾಪ್‌ ಮಾಡಿದೆ ಎಂದು ವರದಿಯಾಗಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ತನ್ನ ಜನಪ್ರಿಯ ಹಣಕಾಸು ಸೇವೆಗಳಾದ ಮಿ ಪೇ ಮತ್ತು ಮಿ ಕ್ರೆಡಿಟ್ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡಿದೆ. ಈ ಮೂಲಕ ಹಣಕಾಸು ಸೇವೆಗಳನ್ನು ಭಾರತದಲ್ಲಿ ಸ್ಟಾಪ್‌ ಮಾಡಿದೆ ಎನ್ನಲಾಗಿದೆ. ಇದರಿಂದ ಮಿ ಪೇ ಅಪ್ಲಿಕೇಶನ್‌ ಇನ್ಮುಂದೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಹಾಗಾದ್ರೆ ಶಿಯೋಮಿ ಕಂಪೆನಿಯ ಈ ನಡೆಗೆ ಅಸಲಿ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಯೋಮಿ

ಶಿಯೋಮಿ ಭಾರತದಲ್ಲಿ ಮಿ ಪೇ ಮತ್ತು ಮಿ ಕ್ರೆಡಿಟ್‌ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡಿದೆ. ಅಷ್ಟೇ ಅಲ್ಲ Mi Pay ಅನ್ನು ಇನ್ನು ಮುಂದೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಾನ್ಯತೆ ಪಡೆದ UPI ಅಪ್ಲಿಕೇಶನ್‌ ಸಾಲಿನಲ್ಲಿ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಈ ಮೂಲಕ 2019ರಲ್ಲಿ ಭಾರತದಲ್ಲಿ ಪ್ರಾರಂಭವಾಗಿದ್ದ ಮಿ ಪೇ ಸೇವೆ ಇದೀಗ ಸ್ಟಾಪ್‌ ಆಗಿದೆ. ಅಲ್ಲದೆ ಡಿಜಿಟಲ್‌ ಲೆಂಡಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ಮಿ ಕ್ರೆಡಿಟ್‌ ಕೂಡ ಸ್ಟಾಪ್‌ ಆಗಿದೆ.

ಮಿ ಪೇ ಅಪ್ಲಿಕೇಶನ್‌ ವಿಶೇಷತೆ ಏನು?

ಮಿ ಪೇ ಅಪ್ಲಿಕೇಶನ್‌ ವಿಶೇಷತೆ ಏನು?

ಮಿ ಪೇ ಅಪ್ಲಿಕೇಶನ್ NPCI ಯ UPI ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ಯುಪಿಐ ಪಾವತಿ ಅಪ್ಲಿಕೇಶನ್‌ ಆಗಿದ್ದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ಅಪ್ಲಿಕೇಶನ್‌ NPCI ಅನುಮೋದಿತ ಅಪ್ಲಿಕೇಶನ್ ICICI ಬ್ಯಾಂಕ್‌ನಿಂದ ಚಾಲಿತವಾಗಿದೆ. ಮಿ ಪೇ ಮೂಲಕ ನೀವು ಶಾಪಿಂಗ್‌ ಮಾಡುವುದಕ್ಕೆ, ಹಣಕಸು ವಹಿವಾಟು ನಡೆಸುವುದಕ್ಕೆ ಅವಕಾಶ ನೀಡುತ್ತಿತ್ತು. ಆದರೆ ಇನ್ಮುಂದೆ ಈ ಅಪ್ಲಿಕೇಶನ್‌ ಸೇವೆ ಸ್ಟಾಪ್‌ ಆಗಲಿದೆ ಎಂದು ವರದಿಯಾಗಿದೆ.

ಮಿ ಕ್ರೆಡಿಟ್‌ ಅಪ್ಲಿಕೇಶನ್‌!

ಮಿ ಕ್ರೆಡಿಟ್‌ ಅಪ್ಲಿಕೇಶನ್‌!

ಮಿ ಕ್ರೆಡಿಟ್ ಅಪ್ಲಿಕೇಶನ್ ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದು ಅರ್ಹ ಬಳಕೆದಾರರಿಗೆ ಕಡಿಮೆ ಬಡ್ಡಿದರದಲ್ಲಿ 5,000ರೂ. ಗಳಿಂದ 1,00,000 ಲಕ್ಷ ರೂ.ಗಳ ನಡುವೆ ಸಾಲ ನೀಡಲಿದೆ. ಇದಕ್ಕಾಗಿ ಶಿಯೋಮಿ ಕಂಪೆನಿ ಆದಿತ್ಯ ಬಿರ್ಲಾ ಫೈನಾನ್ಸ್, ZestMoney, CreditVidya, Money View ಮತ್ತು EarlySalary ಸೇರಿದಂತೆ ಸ್ಥಳೀಯ ಸ್ಟಾರ್ಟ್‌ಅಪ್‌ಗಳೊಂದಿಗೆ ಪಾಲುದಾರಿಕೆಯನ್ನು ಕೂಡ ಹೊಂದಿದೆ.

ಮಿ ಕ್ರೆಡಿಟ್

ಮಿ ಕ್ರೆಡಿಟ್ ಅಪ್ಲಿಕೇಶನ್‌ ಮೂಲಕ ಸಾಲ ಪಡೆದುಕೊಂಡು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ. ಇದರಲ್ಲಿ ಬಳಕೆದಾರರ ಪಠ್ಯ ಸಂದೇಶಗಳು ಮತ್ತು ಕರೆ ಲಾಗ್‌ಗಳ ಮೂಲಕ ಅಪ್ಲಿಕೇಶನ್ ಸ್ಕ್ಯಾನ್ ಮಾಡಲಾಗಿದೆ. ಇನ್ನು ಇದರಲ್ಲಿ ನೀವು ಸಾಲ ಪಡೆಯಬೇಕಾದರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ನ ಅವಶ್ಯಕತೆ ಬಹಳ ಮುಖ್ಯವಾಗಿದೆ. ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿದ್ದರೆ ನಿಮಗೆ ಅಗತ್ಯವಿರುವ ಸಾಲವನ್ನು ತ್ವರಿತವಾಗಿ ಅನುಮೋದಿಸುತ್ತದೆ.

ಅಪ್ಲಿಕೇಶನ್‌ಗಳು

ಇನ್ನು ಈ ಎರಡೂ ಅಪ್ಲಿಕೇಶನ್‌ಗಳು ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಿ ಲೋಡ್‌ ಆಗಿವೆ. ಅಲ್ಲದೆ ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಾಗುತ್ತಿತ್ತು. ಆದರೆ ಪ್ರಸ್ತುತ ವರದಿ ಪ್ರಕಾರ ಈ ಎರಡೂ ಅಪ್ಲಿಕೇಶನ್‌ಗಳು ಇನ್ನು ಮುಂದೆ ಭಾರತದಲ್ಲಿ ಲಭ್ಯವಿಲ್ಲ ಎಂದು ಹೇಳಲಾಗಿದೆ. ಭಾರತದಲ್ಲಿ ಶಿಯೋಮಿ ಕಂಪೆನಿ ಹಣಕಾಸಿನ ವಿಚಾರವಾಗಿ ಸರ್ಕಾರಿ ಏಜಿನ್ಸಿಗಳಿಂದ ತೀವ್ರವಾದ ವಿಚಾರಣೆ ಎದುರಿಸುತ್ತಿದೆ. ಇದೇ ಕಾರಣಕ್ಕೆ ತನ್ನ ಹಣಕಾಸು ವಹವಾಟುಗಳನ್ನು ಶಿಯೋಮಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

Best Mobiles in India

English summary
Xiaomi shutdown its financial services business in India: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X