ಭಾರತದಲ್ಲಿ ಶಿಯೋಮಿ ಸ್ಮಾರ್ಟ್ ಟಿವಿ X ಸರಣಿ ಬಿಡುಗಡೆ! ಬೆಲೆ ಎಷ್ಟಿದೆ?

|

ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತನ್ನ ಭಿನ್ನ ಶ್ರೇಣಿಯ ಟೆಕ್‌ ಗ್ಯಾಜೆಟ್ಸ್‌ಗಳ ಮೂಲಕ ಗ್ರಾಹಕರ ಗಮನಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಟಿವಿ X ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಒಟ್ಟು ಮೂರು ಗಾತ್ರದ ಆಯ್ಕೆಗಳಲ್ಲಿ ಬರುತ್ತವೆ. ಇದಲ್ಲದೆ ಬಳಕೆದಾರರಿಗೆ ತಲ್ಲಿನಗೊಳಿಸುವ ವೀಕ್ಷಣೆಯ ಅನುಭವಕ್ಕಾಗಿ ವಿವಿಡ್ ಪಿಕ್ಚರ್ ಎಂಜಿನ್ ಟೆಕ್ನಾಲಜಿಯಿಂದ ಚಾಲಿತವಾಗಿದೆ.

ಶಿಯೋಮಿ

ಹೌದು, ಶಿಯೋಮಿ ಕಂಪೆನಿ ಭಾರತದಲ್ಲಿ ಹೊಸ ಶಿಯೋಮಿ ಸ್ಮಾರ್ಟ್‌ಟಿವಿ X ಸರಣಿಯನ್ನು ಪರಿಚಯಿಸಿದೆ. ಈ ಸರಣಿಯ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೊ, DTS-HD ಜೊತೆಗೆ DTS: ವರ್ಚುವಲ್ X ಟೆಕ್ನಾಲಜಿ ಹೊಂದಿರುವ 30W ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ ನೀವು 15 ಕ್ಕೂ ಹೆಚ್ಚು ಭಾಷೆಗಳು, ಯುನಿವರ್ಸಲ್ ಸರ್ಚ್‌, ಕಿಡ್ಸ್ ಮೋಡ್ ಮತ್ತು ಯುಟ್ಯೂಬ್‌ ಇಂಟಿಗ್ರೇಷನ್ ಅನ್ನು ಹೊಂದಿದೆ. ಇನ್ನಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್

ಶಿಯೋಮಿ ಸ್ಮಾರ್ಟ್ ಟಿವಿ X ಸರಣಿ ಮೂರು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಟಿವಿಗಳು 3,840x2,160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ MEMC ಎಂಜಿನ್, ಡಾಲ್ಬಿ ವಿಷನ್ ಮತ್ತು HDR10 ಮತ್ತು HLG ಗೆ ಬೆಂಬಲವನ್ನು ನೀಡಲಿದೆ. ಇನ್ನು ಡಿಸ್‌ಪ್ಲೇ DCI-P3 ಬಣ್ಣದ ಹರವು ಶ್ರೇಣಿಯ 94% ಅನ್ನು ಒಳಗೊಂಡಿದೆ. ಜೊತೆಗೆ ಉತ್ತಮ ಚಿತ್ರ ಗುಣಮಟ್ಟಕ್ಕಾಗಿ ಶಿಯೋಮಿ ಇಂಟರ್‌ನಲ್‌ ವಿವಿಡ್ ಪಿಕ್ಚರ್ ಎಂಜಿನ್ (VPE) ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಶಿಯೋಮಿ

ಇನ್ನು ಶಿಯೋಮಿ ಸ್ಮಾರ್ಟ್ ಟಿವಿ X ಸರಣಿಯು ಕ್ವಾಡ್-ಕೋರ್ A55 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮಾಲಿ G52 MC1 GPU ಸಪೋರ್ಟ್‌ ಅನ್ನು ಪಡೆದಿದೆ. ಹಾಗೆಯೇ 2GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿವೆ. ಇದಲ್ಲದೆ ಆಂಡ್ರಾಯ್ಡ್‌ TV 10 ಆಧಾರಿತ ಪ್ಯಾಚ್‌ವಾಲ್ 4 ನಲ್ಲಿ ರನ್ ಆಗುತ್ತದೆ. ಸ್ಮಾರ್ಟ್‌ಟಿವಿಯಲ್ಲಿರುವ 2 ಸ್ಪೀಕರ್‌ಗಳು 30W ಔಟ್‌ಪುಟ್ ಅನ್ನು ನೀಡುತ್ತವೆ ಎಂದು ಹೇಳಲಾಗಿದೆ. ಈ ಸ್ಪೀಕರ್‌ಗಳು ಡಾಲ್ಬಿ ಆಡಿಯೊ, ಡಿಟಿಎಸ್-ಎಚ್‌ಡಿ ಮತ್ತು ಡಿಟಿಎಸ್ ವರ್ಚುವಲ್: ಎಕ್ಸ್ ಆಡಿಯೊ ಟೆಕ್ನಾಲಜಿಯನ್ನು ಒಳಗೊಂಡಿದೆ.

ಶಿಯೋಮಿ

ಶಿಯೋಮಿ ಸ್ಮಾರ್ಟ್‌ಟಿವಿ X ಸರಣಿಯ ಟಿವಿಗಳು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು HDMI 2.1, ಎರಡು USB ಪೋರ್ಟ್‌ಗಳು ಮತ್ತು AVI ಇನ್‌ಪುಟ್, 3.5mm ಆಡಿಯೊ ಜ್ಯಾಕ್ ಮತ್ತು ಎತರ್ನೆಟ್ ಪೋರ್ಟ್ ಅನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.0 ಕನೆಕ್ಟಿವಿಟಿಯನ್ನು ಸಹ ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ಕ್ರೋಮಾಕಾಸ್ಟ್‌ ಜೊತೆಗೆ ಕ್ವಿಕ್ ಮ್ಯೂಟ್, ಕ್ವಿಕ್ ಸೆಟ್ಟಿಂಗ್‌ಗಳು ಮತ್ತು ಕ್ವಿಕ್ ವೇಕ್‌ನೊಂದಿಗೆ ರಿಮೋಟ್ ಅನ್ನು ಒಳಗೊಂಡಿವೆ. ಇದರಲ್ಲಿ ನೀವು 15ಕ್ಕೂ ಹೆಚ್ಚು ಭಾಷೆಗಳು, ಯುನಿವರ್ಸಲ್ ಸರ್ಚ್‌, ಕಿಡ್ಸ್ ಮೋಡ್ ಮತ್ತು ಯುಟ್ಯೂಬ್‌ ಏಕೀಕರಣದಿಂದ ವಿಷಯವನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಟಿವಿ X ಸರಣಿಯ ಬೆಲೆ 43 ಇಂಚಿನ ಮಾದರಿಗೆ 28,999ರೂ. ಆಗಿದೆ. ಇನ್ನು 50 ಇಂಚಿನ ಮಾದರಿಯ ಸ್ಮಾರ್ಟ್‌ಟಿವಿ ಬೆಲೆ 34,999ರೂ. ಆಗಿದೆ. ಆದರೆ 55 ಇಂಚಿನ ಮಾದರಿಯ ಬೆಲೆ 39,999ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಇದೇ ಸೆಪ್ಟೆಂಬರ್ 14 ರಿಂದ Mi.com, Mi Homes, Flipkart ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

ಶಿಯೋಮಿ

ಇದಲ್ಲದೆ ಶಿಯೋಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತನ್ನ ಹೊಸ ಶಿಯೋಮಿ 5A ಪ್ರೊ 32 ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಬಜೆಟ್‌ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ ಆಗಿದೆ. ಇದು 24W ಸ್ಪೀಕರ್ ಸೆಟಪ್ ಮತ್ತು ಡಾಲ್ಬಿ ಆಡಿಯೋ ಹಾಗೂ DTS:X ತಂತ್ರಜ್ಞಾನವನ್ನು ಬೆಂಬಲಿಸುವ ಡ್ಯುಯಲ್‌ ಸ್ಪೀಕರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ಶಿಯೋಮಿಯ ಕಂಟೆಂಟ್ ಅಗ್ರಿಗೇಟರ್ ಪ್ಯಾಚ್‌ವಾಲ್ UI ಅನ್ನು ಹೊಂದಿದೆ.

Best Mobiles in India

Read more about:
English summary
Xiaomi Smart TV X Series With Android TV 10 Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X