ಶಿಯೋಮಿಯಿಂದ ಹೊಸ ಸ್ಮಾರ್ಟ್‌ಟಿವಿ ಲಾಂಚ್! ಮಲ್ಟಿ ಪಾರ್ಟಿಶನ್ ಬ್ಯಾಕ್‌ಲೈಟಿಂಗ್ ವಿಶೇಷ!
ಶಿಯೋಮಿ ಕಂಪೆನಿ ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾಗಿದೆ. ತನ್ನ ಆಕರ್ಷಕ ವಿನ್ಯಾಸ ಹಾಗೂ ನವೀನ ತಂತ್ರಜ್ಞಾನದ ಕಾರಣಕ್ಕೆ ಸಾಕಷ್ಟು ಗಮನಸೆಳೆದಿವೆ. ಸದ್ಯ ಇದೀಗ ಶಿಯೋಮಿ ಕಂಪೆನಿ ಹೊಸ ಶಿಯೋಮಿ ಮಿ ಟಿವಿ ES70 ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಟಿವಿ 70 ಇಂಚಿನ 4K ಡಿಸ್‌ಪ್ಲೇ ಹೊಂದಿದ್ದು, ಮಲ್ಟಿ-ಪಾರ್ಟಿಶನ್ ಬ್ಯಾಕ್‌ಲೈಟಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಟಿವಿ MEMC ಚಲನೆಯ ಪೂರಕ ಫ್ರೇಮ್ ಅನ್ನು ಬೆಂಬಲಿಸುತ್ತದೆ.

ಹೌದು, ಶಿಯೋಮಿ ಕಂಪೆನಿ ಹೊಸ ಮಿ ಟಿವಿ ES70 ಬಿಡುಗಡೆ ಮಾಡಿದೆ. ಇದು ಮೀಡಿಯಾಟೆಕ್ MT9638 A55 ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿ ಡ್ಯುಯಲ್ ಬ್ಯಾಂಡ್ 2,4GHz/5GHz Wi-Fi ಅನ್ನು ಬೆಂಬಲಿಸುತ್ತದೆ ಮತ್ತು ಡಾಲ್ಬಿ ಮತ್ತು DTS ಡ್ಯುಯಲ್ ಡಿಕೋಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಡ್ಯುಯಲ್ ಏರ್ ಡಕ್ಟ್ ವಿನ್ಯಾಸವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ಮಿ ಟಿವಿ ES70 ಸ್ಮಾರ್ಟ್‌ಟಿವಿ 70 ಇಂಚಿನ 4K ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ ನ 97.8% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಒಳಗೊಂಡಿದೆ. ಇದು ಯೋಗ್ಯವಾದ ವೃತ್ತಿಪರ ಪ್ರದರ್ಶನ-ಮಟ್ಟದ ಬಣ್ಣದ ನಿಖರತೆ ಮತ್ತು DCI-P3 94% ವೈಡ್ ಕಲರ್ ಗ್ಯಾಮಟ್ ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ 1.07 ಶತಕೋಟಿ ಕಲರ್ ಡಿಸ್‌ಪ್ಲೇ ಮತ್ತು MEMC ಮೋಷನ್ ಸಂಪ್ಲಿಮೆಂಟರಿ ಫ್ರೇಮ್ ಅನ್ನು ಬೆಂಬಲಿಸುತ್ತದೆ.

ಇನ್ನು ಈ ಸ್ಮಾರ್ಟ್‌ಟಿವಿಯ ವಿಶೇಷತೆ ಎಂದರೆ ಮಲ್ಟಿ ಪಾರ್ಟಿಶನ್ ಬ್ಯಾಕ್‌ಲೈಟ್ ಟೆಕ್ನಾಲಜಿಯನ್ನು ಹೊಂದಿರುವುದು. ಇದು 700 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದ್ದು, 4,096-ಲೆವೆಲ್ ಡಿಮ್ಮಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಇದರ ಎಂಬೆಡೆಡ್ ಸೂಪರ್-ರೆಸಲ್ಯೂಶನ್ ಅಲ್ಗಾರಿದಮ್ ಇಮೇಜ್ ಅನ್ನು ರಿಯಲ್ ಟೈಂನಲ್ಲಿ ವಿಶ್ಲೇಷಿಸಲು ಮತ್ತು ನಾಯ್ಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಇದಲ್ಲದೆ ಲೋ-ರೆಸಲ್ಯೂಶನ್ ಚಲನಚಿತ್ರವನ್ನು ನೋಡುವಾಗಲೂ ಈ ಸ್ಮಾರ್ಟ್‌ಟಿವಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಶಿಯೋಮಿ ಮಿ ಟಿವಿ ES70 ಸ್ಮಾರ್ಟ್‌ಟಿವಿ ಮೀಡಿಯಾಟೆಕ್ MT9638 A55 ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 2GB+32GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಟಿವಿಯಲ್ಲಿ ಶಿಯೋ Ai ಅನ್ನು ಬಳಸಿಕೊಂಡು ಲಾಂಗ್-ಫಿಲ್ಡ್ ವಾಯ್ಸ್ ಕಂಟ್ರೋಲ್ ಅನ್ನು ಸಹ ಬೆಂಬಲಿಸಲಾಗುತ್ತದೆ. ಇದನ್ನು ಶಿಯೋಮಿ ಸ್ಮಾರ್ಟ್ ಇಕೋಸಿಸ್ಟಮ್‌ಗೆ ಲಿಂಕ್ ಮಾಡಬಹುದು. ಜೊತೆಗೆ ಸ್ಕ್ರೀನ್ ಪ್ರೊಜೆಕ್ಷನ್‌ಗಾಗಿ ಆಂಡ್ರಾಯ್ಡ್, iOS, ವಿಂಡೋಸ್ ಮತ್ತು ಮ್ಯಾಕ್‌ನೊಂದಿಗೆ ಹೊಂದಿಕೊಳ್ಳುತ್ತದೆ.

ಇನ್ನು ಈ ಸ್ಮಾರ್ಟ್‌ಟಿವಿ ಡ್ಯುಯಲ್-ಬ್ಯಾಂಡ್ 2,4GHz/5GHz Wi-Fi ಅನ್ನು ಬೆಂಬಲಿಸುತ್ತದೆ. ಅಲ್ಲದೆ ಡಾಲ್ಬಿ ಮತ್ತು DTS ಡ್ಯುಯಲ್ ಡಿಕೋಡಿಂಗ್ ಅನ್ನು ಬೆಂಬಲಿಸುತ್ತದೆ. ಇದು ಎರಡು 12.5W ಹೈ-ಪವರ್ ಆಡಿಯೊ ಸಿಸ್ಟಮ್‌ಗಳೊಂದಿಗೆ ಡ್ಯುಯಲ್ ಏರ್ ಡಕ್ಟ್ ವಿನ್ಯಾಸವನ್ನು ಕೂಡ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೂರು HDMI ಇಂಟರ್‌ಫೇಸ್‌ಗಳು, ಎರಡು USB ಪೋರ್ಟ್‌ಗಳು, AV ಇನ್‌ಪುಟ್, ನೆಟ್‌ವರ್ಕ್ ಪೋರ್ಟ್ ಮತ್ತು ಆಂಟೆನಾ ಇಂಟರ್‌ಫೇಸ್ ಅನ್ನು ಹೊಂದಿದೆ.

ಪ್ರಸ್ತುತ ಈ ಸ್ಮಾರ್ಟ್‌ಟಿವಿ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಇದು ಚೀನಾದಲ್ಲಿ 4,499 ಯುವಾನ್ (ಅಂದಾಜು 51,046ರೂ) ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಟಿವಿ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








