Subscribe to Gizbot

ತಪ್ಪಾದ ಫೋನ್ ಚಾರ್ಜಿಂಗ್ ವಿಧಾನಗಳು ನೀವೂ ಮಾಡುತ್ತಿರಬಹುದು

Written By:

ನಾವು ವೃದ್ಧರಾಗುತ್ತಿದ್ದಂತೆ ಕೆಲಸ ಮಾಡುವ ನಮ್ಮ ಶಕ್ತಿ ಕುಂದಿ ಹೋಗುತ್ತದೆ. ಅಂತೆಯೇ ಸ್ಮಾರ್ಟ್‌ಫೋನ್‌ಗಳು ಕೂಡ ಬ್ಯಾಟರಿ ಕಡಿಮೆ ಆದ ಸಂದರ್ಭದಲ್ಲಿ ತಮ್ಮ ಕೆಲಸ ಮಾಡುವ ಕಾರ್ಯದಲ್ಲಿ ಕುಂದುತ್ತಾ ಹೋಗುತ್ತದೆ. ನಿಮ್ಮ ಫೋನ್ ಬ್ಯಾಟರಿ ಶಕ್ತಿಯನ್ನು ಉಳಿಸಿಕೊಳ್ಳುತ್ತಿಲ್ಲ ಎಂದಾದಲ್ಲಿ ಫೋನ್ ಬದಲಾಯಿಸುವುದು ಅಥವಾ ಬ್ಯಾಟರಿ ಬದಲಾಯಿಸುವುದು ಇದಕ್ಕೆ ಪರಿಹಾರವಲ್ಲ ಬದಲಾಗಿ ನೀವು ಫೋನ್ ಚಾರ್ಜಿಂಗ್ ಮಾಡುವಾಗ ನಿರ್ವಹಿಸುತ್ತಿರುವ ಕೆಲವು ದೋಷಗಳು ಇದಕ್ಕೆ ಕಾರಣವಾಗಿರಬಹುದು

ಈ ತಪ್ಪುಗಳು ಏನು ಎಂಬುದನ್ನು ನೀವು ಪತ್ತೆಹಚ್ಚಿದಲ್ಲಿ ನಿಮ್ಮ ಸ್ಮಾರ್ಟ್ಫೋನ್‌ನ ಬ್ಯಾಟರಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಅದು ಏನು ಎಂಬುದನ್ನು ಕಂಡುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾತ್ರಿ ಪೂರ್ತಿ ಫೋನ್ ಚಾರ್ಜ್

100 % ಬ್ಯಾಟರಿ ಚಾರ್ಜಿಂಗ್

ಎಂದಿಗೂ ಫೋನ್‌ನಲ್ಲಿ 100% ಚಾರ್ಜ್ ಇರಬೇಕು ಎಂಬುದನ್ನು ಬಯಸದಿರಿ. ನಿಮ್ಮ ಫೋನ್ ಬ್ಯಾಟರಿಯನ್ನು ಸುದೃಢವಾಗಿಸುವುದು ಕೇವಲ ಪೂರ್ಣ ಚಾರ್ಜ್ ಎಂಬ ಭ್ರಮೆಯನ್ನು ನಿಮ್ಮ ತಲೆಯಿಂದ ದೂರವಿರಿಸಿ. ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡುವುದನ್ನು ಬಿಡಿ. ಆಗಾಗ್ಗೆ ಫೋನ್ ಚಾರ್ಜಿಂಗ್ ಬೇಡ.

ಲಿಥಿಯಮ್ ಇಯಾನ್ ಬ್ಯಾಟರಿ

ಫೋನ್ ಡ್ರೈ ಆಗಲು ಬಿಡಬೇಡಿ

ಲಿಥಿಯಮ್ ಇಯಾನ್ ಬ್ಯಾಟರಿಗಳಲ್ಲಿ ಬ್ಯಾಟರಿ ಕಡಿಮೆಯಾದಾಗ 'ಲೊ ಬ್ಯಾಟರಿ' ಎಂಬ ಅಂಶವನ್ನು ಅದು ನಿಮಗೆ ತೋರಿಸುತ್ತದೆ. ಪೂರ್ಣ ಚಾರ್ಜ್ ಪ್ರತೀ ಬಾರಿ ನಿಮ್ಮ ಫೋನ್ ಬ್ಯಾಟರಿಯನ್ನು ಕಡಿಮೆಗೊಳಿಸುತ್ತದೆ.

ಹೆಚ್ಚು ಉಷ್ಣತೆ ಮತ್ತು ಶೀತ ಕೂಡ

ಬ್ಯಾಟರಿ ಓವರ್ ಹೀಟ್

ಹೆಚ್ಚು ಬಿಸಿಲಲ್ಲಿ ನಿಮ್ಮ ಫೋನ್ ಇಡುವ ತಪ್ಪನ್ನು ಎಂದೂ ಮಾಡದಿರಿ. ಹೆಚ್ಚು ಉಷ್ಣತೆ ಮತ್ತು ಶೀತ ಕೂಡ ಫೋನ್ ಅನ್ನು ಹಾಳುಮಾಡಬಹುದು.

ವೈರ್‌ಲೆಸ್ ಚಾರ್ಜರ್

ವೈರ್‌ಲೆಸ್ ಚಾರ್ಜರ್ ಅನ್ನು ಹೆಚ್ಚು ಬಳಸುವುದು

ವೈರ್‌ಲೆಸ್ ಚಾರ್ಜರ್ ಅನ್ನು ಹೆಚ್ಚು ಬಳಸುವುದು ನಿಮ್ಮ ಡಿವೈಸ್‌ಗೆ ಹಾನಿಯನ್ನುಂಟು ಮಾಡಬಹುದು. ಓವರ್ ಹೀಟ್ ಕಡಿಮೆ ಮಾಡಲು ಪೋರ್ಟೇಬಲ್ ಪವರ್ ಸೋರ್ಸ್ ಅನ್ನು ಬಳಸಿ.

ಕೇಸ್ ಬಿಡುವುದು

ಚಾರ್ಜ್ ಮಾಡುವಾಗ ಕೇಸ್ ಬಿಡುವುದು

ಫೋನ್ ಚಾರ್ಜ್‌ನಲ್ಲಿರುವಾಗ ತುಂಬಾ ಬಿಸಿಯಾಗಿದೆ ಎಂದು ನಿಮಗನಿಸಬಹುದು. ನಿಮ್ಮ ಫ್ಯಾನ್ಸಿ ಕೇಸ್ ಚಾರ್ಜ್‌ ಮಾಡುವಾಗ ಫೋನ್‌ಗೆ ಬಿಸಿಯನ್ನುಂಟು ಮಾಡುತ್ತಿರಬಹುದು.

ಫೋನ್ ಬ್ಯಾಕಪ್ ಅನ್ನು ಸಂಗ್ರಹಿಸುತ್ತಿರುವುದು

ಚಾರ್ಜ್ ಇಲ್ಲದೆಯೇ ಫೋನ್ ಬ್ಯಾಕಪ್ ಅನ್ನು ಸಂಗ್ರಹಿಸುತ್ತಿರುವುದು

ಎಂದಿಗೂ ಅರ್ಧದಷ್ಟು ಫೋನ್ ಚಾರ್ಜ್ ಮಾಡುವುದು ಉತ್ತಮ ಉಪಾಯವಾಗಿದ್ದು ಎಂದೂ ಪೂರ್ಣ ಚಾರ್ಜ್ ಅನ್ನೇ ಗುರಿಯಾಗಿಸದಿರಿ. ಆಗಾಗ್ಗೆ ಫೋನ್ ಅನ್ನು ಪೂರ್ಣ ಚಾರ್ಜ್ ಮಾಡುವುದೂ ಕೂಡ ಕೆಲವೊಂದು ಅಪಾಯಗಳನ್ನು ಉಂಟುಮಾಡಬಹುದು.

ಉತ್ತಮ ಗುಣಮಟ್ಟದ ಚಾರ್ಜರ್

ತಪ್ಪಾದ ಚಾರ್ಜರ್ ಬಳಕೆ

ಇನ್ನು ಫೋನ್ ಚಾರ್ಜ್ ಮಾಡುವಾಗ ಆದಷ್ಟು ತಪ್ಪಾದ ಚಾರ್ಜರ್ ಬಳಕೆಯನ್ನು ಮಾಡದಿರಿ. ಉತ್ತಮ ಗುಣಮಟ್ಟದ ಚಾರ್ಜರ್ ಬಳಕೆಯಿಂದ ನಿಮ್ಮ ಫೋನ್‌ಗೆ ಹಾನಿಯಾಗುವುದಿಲ್ಲ ಮತ್ತು ಬಿಸಿಯಾಗುವುದನ್ನೂ ತಪ್ಪಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Much like old humans, old Phones have a tough time holding their juice -- and part of the reason why is how you charge them.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot