ಶಾಕಿಂಗ್ ನ್ಯೂಸ್‌ ಕೇಳಲು ಸಿದ್ಧರಾಗಿ!..ಉಚಿತ ಸಿಮ್, ಇನ್‌ಕಮಿಂಗ್ ಕರೆ ಸೇವೆ ಸ್ಥಗಿತ?!

|

ಜಿಯೋಯಿಂದ ಬೇಸತ್ತಿರುವ ಇತರೆ ಟೆಲಿಕಾಂ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ ಇನ್‌ಕಮಿಂಗ್ ಕಾಲ್‌ಗಳಿಗೂ ದರ ವಿಧಿಸುವ ಕುರಿತು ಚಿಂತನೆ ನಡೆಸುತ್ತಿವೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ಶೀಘ್ರದಲ್ಲೇ ಹಲವು ಟೆಲಿಕಾಂ ಕಂಪೆನಿಗಳು ಈ ಬದಲಾವಣೆಯನ್ನು ತರಲಿವೆ ಎಂದು ಹೇಳಲಾಗಿದೆ.

ಭಾರತದ ಟೆಲಿಕಾಂ ಕ್ಷೇತ್ರಕ್ಕೆ ರಿಲಾಯನ್ಸ್ ಜಿಯೋ ಆಗಮನದೊಂದಿಗೆ ಬಹುತೇಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ನಷ್ಟದ ಸುಳಿಯಲ್ಲಿ ಸಿಲುಕಿವೆ. ಜಿಯೋಗೆ ಪೈಪೋಟಿ ನೀಡುವ ಸಲುವಾಗಿ ಅದಕ್ಕೆ ಸರಿಸಮನಾಗಿ ಆಫರ್‌ಗಳನ್ನು ಘೋಷಣೆ ಮಾಡುತ್ತಿವೆಯಾದರೂ, ಅವುಗಳಿಗೆ ನಿರೀಕ್ಷಿತ ಮಟ್ಟದ ಲಾಭಾಂಶ ಬರುತ್ತಿಲ್ಲ. ಇದರಿಂದ ಈ ನಿರ್ಧಾರಕ್ಕೆ ಬರುತ್ತಿವೆ ಎಂದು ವರದಿ ಹೇಳಿದೆ.

ಶಾಕಿಂಗ್ ನ್ಯೂಸ್‌ ಕೇಳಲು ಸಿದ್ಧರಾಗಿ!..ಉಚಿತ ಇನ್‌ಕಮಿಂಗ್ ಕರೆ ಸೇವೆ ಸ್ಥಗಿತ?!

ಬಹುತೇಕ ಕಂಪೆನಿಗಳಿಗೆ ಕನಿಷ್ಠ ಹಾಕಿದ ಬಂಡವಾಳ ಕೂಡ ವಾಪಸ್ ಬರುತ್ತಿಲ್ಲ. ಇದರಿಂದ ಕಂಗೆಟ್ಟಿರುವ ಕಂಪೆನಿಗಳು ಜಿಯೋ ವಿರುದ್ಧ ಒಗ್ಗಟ್ಟಾಗಿ ಈ ಹೊಸ ಪ್ಲಾನ್ ಮಾಡಿಕೊಂಡಿವೆ ಎಂದು ಹೇಳಲಾಗಿದೆ. ಹಾಗಾದರೆ, ಟೆಲಿಕಾಂ ಕಂಪೆನಿಗಳು ಇನ್‌ಕಮಿಂಗ್ ಕಾಲ್‌ಗಳಿಗೆ ದರ ವಿಧಿಸಲಾಗುತ್ತದೆಯೇ? ನಿಜಕ್ಕೂ ಇದು ಸಾಧ್ಯವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಜಿಯೋ ವಿರುದ್ಧ ಒಗ್ಗಟ್ಟು!

ಜಿಯೋ ವಿರುದ್ಧ ಒಗ್ಗಟ್ಟು!

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆನೆ ತುಳಿದ ದಾರಿಯಂತೆ ಮುನ್ನೆಡೆಯುತ್ತಿರುವ ಅಂಬಾನಿ ಒಡೆತನದ ಜಿಯೋ ಕಂಪೆನಿಯನ್ನು ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಜಿಯೋ ವಿರುದ್ಧವಾಗಿ ದೇಶದ ಬಹುಪಾಲು ಟೆಲಿಕಾಂ ಕಂಪೆನಿಗಳು ಸೇರಿ ಕತ್ತಿ ಮಸೆಯುತ್ತಿವೆ. ಇದಕ್ಕಾಗಿ ಒಗ್ಗೂಡಿರುವ ಬಹುತೇಕ ಕಂಪೆನಿಗಳು ಹಲವು ಪ್ಲಾನ್ ಮಾಡಿಕೊಂಡಿವೆ ಎಂದು ಹೇಳಲಾಗಿದೆ.

ಜಿಯೋಗೆ ತಿರುಗೇಟು ನೀಡಲು ಸಜ್ಜು!

ಜಿಯೋಗೆ ತಿರುಗೇಟು ನೀಡಲು ಸಜ್ಜು!

ಜಿಯೋಯಿಂದ ಕಳೆದುಕೊಂಡಿರುವ ಮಾರುಕಟ್ಟೆಯನ್ನು ವಾಪಸ್ ಪಡೆಯಲು ಟೆಲಿಕಾಂ ಸಂಸ್ಥೆಗಳು ಮಾಸ್ಟರ್ ಪ್ಲಾನ್ ರೂಪಿಸುತ್ತಿವೆ ಎನ್ನಲಾಗಿದೆ. ಉಚಿತ ಇನ್ ಕಮಿಂಗ್ ಕಾಲ್ ಗಳ ಸೇವೆ ಸ್ಥಗಿತಗೊಳಿಸಿ ಇನ್ ಕಮಿಂಗ್ ಕಾಲ್ ಗಳಿಗೂ ನಿಗದಿತ ದರ ವಿಧಿಸಲು ಮುಂದಾಗಿವೆ. ಇದಕ್ಕೆ ಪ್ರಖ್ಯಾತ ಟೆಲಿಕಾಂ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್ ಮುಂದಡಿ ಇಟ್ಟಿದೆ ಎಂದು ಹೇಳಲಾಗಿದೆ.

ಜಿಯೋ ಉಚಿತ ಕರೆಗೆ ಎದುರೇಟು?

ಜಿಯೋ ಉಚಿತ ಕರೆಗೆ ಎದುರೇಟು?

ಭಾರತದ ಗ್ರಾಮೀಣ ಗ್ರಾಹಕರು ಉಚಿತ ಔಟ್‌ಗೋಯಿಂದ ಸೇವೆಗಳಿಗಾಗಿಯೇ ಜಿಯೋ ಮೊಬೈಲ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಜಿಯೋವಿನ ಮೂರು ತಿಂಗಳ ಉಚಿತ ಕರೆಗಳನ್ನು ಇಷ್ಟಪಡುತ್ತಿದ್ದಾರೆ. ಇದರಿಂದ ಇನ್‌ಕಮಿಂಗ್ ಕರೆಗಳಿಗೆ ದರವನ್ನು ವಿಧಿಸಿ ಜಿಯೋಗೆ ಟಾಂಗ್ ನೀಡುವ ಯೋಚನೆಯನ್ನು ಕೆಲ ಟೆಲಿಕಾಂ ಕಂಪೆನಿಗಳು ಹೊಂದಿವೆ ಎಂದು ಹೇಳಲಾಗಿದೆ.

ಉಚಿತ ಸಿಮ್ ಕಾರ್ಡ್ ಕ್ಯಾನ್ಸಲ್?

ಉಚಿತ ಸಿಮ್ ಕಾರ್ಡ್ ಕ್ಯಾನ್ಸಲ್?

ಮೊಬೈಲ್‌ ರಿಚಾರ್ಜ್‌ಗಿಂತಲೂ ಸುಲಭವಾಗಿ ಹಾಗೂ ಉಚಿತವಾಗಿ ಸಿಮ್‌ಕಾರ್ಡ್ಗಳು ದೊರೆಯುತ್ತಿರುವುದರಿಂದ ಗ್ರಾಹಕರು ರಿಚಾರ್ಜ್ಗಿಂತ ಹೊಸ ಸಿಮ್ ಕಾರ್ಡ್‌ಗಳನ್ನೇ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಫುಲ್‌ಸ್ಟಾಪ್ ಹಾಕಿ ಸಿಮ್‌ಗಳ ಮೇಲೆ ಹೆಚ್ಚು ದರವನ್ನು ನಿಗದಿಪಡಿಸುವ ಆಲೋಚನೆಯನ್ನು ಒಗ್ಗೂಡಿರುವ ಟೆಲಿಕಾಂ ಕಂಪೆನಿಗಳಿಗೆ ಇದೆಯಂತೆ.

ರಿಚಾರ್ಜ್ ಮಾಡಿಸಿದರೆ ಮಾತ್ರ ಚಾಲನೆ?

ರಿಚಾರ್ಜ್ ಮಾಡಿಸಿದರೆ ಮಾತ್ರ ಚಾಲನೆ?

ಯಾವುದೇ ಗ್ರಾಹಕರ ರೀಚಾರ್ಜ್ ಮಾಡಿಸಿದ ವ್ಯಾಲಿಡಿಟಿ ಒಳಗಾಗಿ ರಿಚಾರ್ಜ್ ಮಾಡಿಸಿದರೆ ಮಾತ್ರ ಆ ಮೊಬೈಲ್ ಸಂಖ್ಯೆ ಚಾಲನೆಯಲ್ಲಿರುವಂತೆ ಮಾಡಲು ಟೆಲಿಕಾಂ ಕಂಪೆನಿಗಳು ಮುಂದಾಗಿವೆಯಂತೆ. ಇದರಿಂದ ತನ್ನ ಸೇವೆಯನ್ನು ಬಳಸುತ್ತಿರುವ ಗ್ರಾಹಕರು ಕೇವಲ ಇನ್‌ಕಮಿಂಗ್ ಕರೆಗಳಿಗೆ ಮಾತ್ರ ಬಳಸುವುದು ತಪ್ಪುತ್ತದೆ ಎಂದು ಕಂಪೆನಿಗಳ ಪ್ಲಾನ್ ಆಗಿದೆಯಂತೆ.

ಟ್ರಾಯ್‌ ಹಣಿಯಲು ಪ್ಲಾನ್!

ಟ್ರಾಯ್‌ ಹಣಿಯಲು ಪ್ಲಾನ್!

ಜಿಯೋಗೆ ಪೂರಕವಾಗಿರುವ ವ್ಯವಸ್ಥೆಗೆ ಸಹಾಯಕವಾಗಿರುವ ಭಾರತದ ಟೆಲಿಕಾಂ ನಿಯಂತ್ರಣ ಮಂಡಳಿಯನ್ನು ನಿಯಂತ್ರಿಸಲು ಈ ಒಕ್ಕೂಟ ಟೆಲಿಕಾಂ ಕಂಪೆನಿಗಳು ಯೋಚಿಸಿವೆಯಂತೆ. ನಿಯಮಗಳಂತೆಯೇ ಜಿಯೋವನ್ನು ಕಟ್ಟಿಹಾಕುವ ಸಲುವಾಗಿ ಕನಿಷ್ಟ ರಿಚಾರ್ಜ್, ಉಚಿತ ಸಿಮ್ ಕಾರ್ಡ್, ಇನ್‌ಕಮಿಂಗ್ ಕಾಲ್‌ಗಳಿಗೆ ಬ್ರೇಕ್ ಹಾಕಲು ಮುಂದಾಗಿವೆ ಎಂದು ಹೇಳಲಾಗಿದೆ.

ಜಿಯೋ ಹಣಿಯಲು ಸಾಧ್ಯವೇ?

ಜಿಯೋ ಹಣಿಯಲು ಸಾಧ್ಯವೇ?

ಒಂದು ವೇಳೆ ಟೆಲಿಕಾಂ ಕಂಪೆನಿಗಳ ಈ ಯೋಜನೆಗಳು ಎಲ್ಲವೂ ಜಾರಿಯಾದರೆ ಜಿಯೋಗೆ ಹೊಡೆತ ಬೀಳುವುದು ಖಂಡಿತ ಎನ್ನುತ್ತಿವೆ ವರದಿಗಳು. ಕೇವಲ ದೇಶದ 20 ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಜಿಯೋ ಮೇಲೆ ಶೇ.80 ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಕಂಪೆನಿಗಳು ಸುಲಭವಾಗಿ ಸವಾರಿ ಮಾಡಬಹುದು ಎನ್ನುವುದು ತಜ್ಞರ ಲೆಕ್ಕಾಚಾರ.!

ಜಿಯೋಗೇ ಒಳ್ಳೆಯದು!

ಜಿಯೋಗೇ ಒಳ್ಳೆಯದು!

ಟೆಲಿಕಾಂ ಕಂಪೆನಿಗಳ ಈ ಖತರ್ನಾಕ್ ಆಟ ಜಿಯೋಗೂ ಒಳ್ಳೆಯದಾಗುವ ಸಾಧ್ಯತೆಗಳು ಸಹ ಇವೆ. ಒಂದು ವೇಳೆ ಈ ಒಕ್ಕೂಟ ಕಂಪೆನಿಗಳ ಪ್ಲಾನ್ ತಲೆಕೆಳಗಾದರೆ, ಜಿಯೋಗೆ ಸಹಕಾರಿಯಾಗಲಿದೆ. ಏಕೆಂದರೆ, ಇತರೆ ಟೆಲಿಕಾಂ ಕಂಪೆನಿಗಳ ಗ್ರಾಹಕರು ಜಿಯೋ ಡಿವೈಸ್ ಹಾಗೂ ಸಿಮ್‌ಗಳನ್ನೇ ಖರೀದಿಸಲು ಮುಂದಾದರೆ ಜಿಯೋ ಮಾರುಕಟ್ಟೆಯೇ ಹೆಚ್ಚಲಿದೆ.

Best Mobiles in India

English summary
One thing that the public has got free from telcos are free incoming calls. Shockingly, now, that is all set to stop and mobile phone users will have to pay through their nose!. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X