ಸದ್ಯದಲ್ಲೇ ಫೋನ್‌ ಬಳಕೆದಾರರಿಗಾಗಿ ಯೂಟ್ಯೂಬ್‌ನಿಂದ ಎರಡು ಹೊಸ ಫೀಚರ್!

By Gizbot Bureau
|

ವೀಡಿಯೋ ನೋಡುವುದಕ್ಕೆ ಹೆಚ್ಚಿನವರು ಬಳಸುವ ಪ್ರಸಿದ್ಧ ಆಪ್ ಎಂದರೆ ಯುಟ್ಯೂಬ್. ದಿನದಿಂದ ದಿನಕ್ಕೆ ಯುಟ್ಯೂಬ್ ತನ್ನ ಪ್ರಸಿದ್ಧತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಆಗಾಗ ಯುಟ್ಯೂಬ್ ನೀಡುವ ಹೊಸ ಹೊಸ ಫೀಚರ್ ಗಳು ಕೂಡ ಇದಕ್ಕೆ ಕಾರಣ. ಇತ್ತೀಚೆಗಷ್ಟೆ ಕೆಲವು ಫೀಚರ್ ಗಳನ್ನು ನೀಡಿದ್ದ ಯುಟ್ಯೂಬ್ ಇದೀಗ ಮತ್ತೆರಡು ಹೊಸ ಫೀಚರ್ ನ್ನು ಬಳಕೆದಾರರಿಗಾಗಿ ನೀಡಿದೆ.

ಸದ್ಯದಲ್ಲೇ ಫೋನ್‌ ಬಳಕೆದಾರರಿಗಾಗಿ ಯೂಟ್ಯೂಬ್‌ನಿಂದ ಎರಡು ಹೊಸ ಫೀಚರ್!

ಹೌದು,ಗೂಗಲ್ ಮಾಲೀಕತ್ವದ ವೀಡಿಯೋ ಸ್ಟ್ರೀಮಿಂಗ್ ಆಪ್ ಆಗಿರುವ ಯುಟ್ಯೂಬ್ ಹೊಸ ಎರಡು ಫೀಚರ್ ಗಳನ್ನು ಸೇರಿಸುತ್ತಿದೆ. ಆ ಮೂಲಕ ವೀಡಿಯೋ ನೋಡುವಾಗ ಬಳಕೆದಾರರು ಆಪ್ ನ್ನು ಕಂಟ್ರೋಲ್ ಮಾಡುವುದಕ್ಕೆ ಹೊಸ ಎರಡು ಫೀಚರ್ ಗಳು ಲಭ್ಯವಾಗುತ್ತಿದೆ.

ಲೂಪ್ ನಲ್ಲಿ ವೀಡಿಯೋ ನೋಡಿ

ಮೊದಲ ಫೀಚರ್ ಏನು ಅಂದ್ರೆ ಲೂಪ್ ನಲ್ಲಿ ವೀಡಿಯೋಗಳನ್ನು ಪ್ಲೇ ಮಾಡುವುದಕ್ಕೆ ಯುಟ್ಯೂಬ್ ನಲ್ಲಿ ಅವಕಾಶವಿರುತ್ತದೆ.ಈ ಅವಕಾಶವು ಈಗಾಗಲೇ ಡೆಸ್ಕ್ ಟಾಪ್ ನಲ್ಲಿ ಲಭ್ಯವಿದೆ.ಆದರೆ ಮೊಬೈಲ್ ನಲ್ಲಿ ನೇರ ಕಮಾಂಡ್ ಸಪೋರ್ಟ್ ನ್ನು ಇನ್ನು ಕೂಡ ಒದಗಿಸಿಲ್ಲ. ಕೆಲವೇ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.ಆಂಡ್ರಾಯ್ಡ್ ಬಳಕೆದಾರರು ಮೆನು ಬಟನ್ ನಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡುವ ಮೂಲಕ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ವೀಡಿಯೋ ಕ್ಲಿಪ್ ಮಾಡುವುದಕ್ಕೆ ಅವಕಾಶ

ಎರಡನೇ ಪ್ರಮುಖ ಫೀಚರ್ ಯುಟ್ಯೂಬ್ ಬಳಕೆದಾರರಿಗೆ ಆಂಡ್ರಾಯ್ಡ್ ಫೋನ್ ಗಳಲ್ಲಿ ಲಭ್ಯವಾಗುತ್ತಿರುವುದು ಯಾವುದೆಂದರೆ ವೀಡಿಯೋ ಕ್ಲಿಪ್ ಗಳು.ಈ ಫೀಚರ್ ಮೂಲಕ ನೋಡುಗರ ತಾವು ನೋಡುವ ಯುಟ್ಯೂಬ್ ವೀಡಿಯೋದಲ್ಲಿ 60 ಸೆಕೆಂಡ್ ನ ವೀಡಿಯೋವನ್ನು ಕಟ್ ಮಾಡಿ ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ ಎಂದು ಹೇಳಲಾಗಿದೆ. ಬಳಕೆದಾರರು ಕತ್ತರಿಯ ಐಕಾನ್ ನ್ನು ತಮ್ಮ ಯುಟ್ಯೂಬ್ ನಲ್ಲಿ ನೋಡಿದಾಗ ಅವರು ಈ ಫೀಚರ್ ನ್ನು ಬಳಸಬಹುದಾಗಿದೆ.

ಕಳೆದ ಎಪ್ರಿಲ್ ನಲ್ಲಿ ಯುಟ್ಯೂಬ್ ತನ್ನ ಬಳಕೆದಾರರಿಗೆ ಯಾವ ಕ್ವಾಲಿಟಿಯಲ್ಲಿ ನೀವು ವೀಡಿಯೋ ನೋಡಲು ಇಚ್ಛಿಸುತ್ತೀರಿ ಎಂಬ ಆಯ್ಕೆಯನ್ನು ನೀಡುವ ಹೊಸ ಫೀಚರ್ ನ್ನು ಬಿಡುಗಡೆಗೊಳಿಸಿತ್ತು.

ಇದನ್ನು ಸರ್ವರ್ ವಿಭಾಗದ ಅಪ್ ಡೇಟ್ ಆಗಿ ಮೊಬೈಲ್ ಆಪ್ ಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.ವೀಡಿಯೋ ನೋಡುವಾಗ ಬಳಕೆದಾರರಿಗೆ ಯಾವ ರೆಸಲ್ಯೂಷನ್ ನಲ್ಲಿ ವೀಡಿಯೋ ನೋಡಲು ಬಯಸುತ್ತೀರಿ ಎಂದು ಕೇಳುವ ಮೂಲಕ ಆಯ್ಕೆ ಮಾಡುವುದಕ್ಕೆ ಅವಕಾಶ ನೀಡುವ ಹೊಸ ಆಪ್ಶನ್ ಇದಾಗಿತ್ತು.

ಸದ್ಯ ಯುಟ್ಯೂಬ್ ನಾಲ್ಕು ಆಯ್ಕೆಗಳನ್ನು ನೀಡುತ್ತದೆ.ಆಟೋ(ರೆಕಮೆಂಡೆಂಡ್),ಅತ್ಯಧಿಕ ಪಿಕ್ಚರ್ ಕ್ವಾಲಿಟಿ,ಡಾಟಾ ಸೇವರ್ ಮತ್ತು ಅಡ್ವಾನ್ಸ್ಡ್.

ಈ ನಾಲ್ಕು ಆಯ್ಕೆಗಳು ಕೆಲಸ ಮಾಡುವುದು ಹೇಗೆ?

ಆಟೋ ಆಯ್ಕೆ ಡೀಫಾಲ್ಟ್ ಆಗಿರುತ್ತದೆ. ಈ ಆಯ್ಕೆಯು ಬ್ಯಾಂಡ್ ವಿಡ್ತ್ ವೇಗಕ್ಕೆ ಅನುಗುಣವಾಗಿ ಈ ಡೀಫಾಲ್ಟ್ ಆಯ್ಕೆಯು ನೇರ ಸಂಬಂಧವನ್ನು ಹೊಂದಿರುತ್ತದೆ. ಹೈಯರ್ ಪಿಕ್ಚರ್ ಕ್ವಾಲಿಟಿ – ಹೆಸರೇ ಸೂಚಿಸುವಂತೆ ಇದು ಹೆಚ್ಚಿನ ರೆಸಲ್ಯೂಷನ್ ನ್ನು ಹೊಂದಿರುತ್ತದೆ ಅದಕ್ಕಾಗಿ ಹೆಚ್ಚು ಡಾಟಾವನ್ನು ಬಳಸುತ್ತದೆ. ಡಾಟಾ ಸೇವರ್ ಮೋಡ್ ಸಂಪೂರ್ಣ ವಿರುದ್ಧವಾಗಿರುವುದಾಗಿದ್ದು ಅತೀ ಕಡಿಮೆ ಡಾಟಾವನ್ನು ಬಳಸಿ ವೀಡಿಯೋ ಪ್ಲೇ ಆಗುವಂತೆ ಮಾಡುತ್ತದೆ. ಕಡಿಮೆ ರೆಸಲ್ಯೂಷನ್ ಕೂಡ ಹೊಂದಿರುತ್ತದೆ.ಅಡ್ವಾನ್ಸ್ಡ್ ಆಯ್ಕೆಯಲ್ಲಿ ನೀವು ಯಾವ ರೆಸಲ್ಯೂಷನ್ನಿನ ವೀಡಿಯೋ ಸ್ಟ್ರೀಮ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ.

Most Read Articles
Best Mobiles in India

Read more about:
English summary
YouTube App New Features Coming Soon: Everything You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X