ಯೂಟ್ಯೂಬ್‌ನಲ್ಲಿ ದುಡ್ಡು ಮಾಡುತ್ತಿದ್ದವರಿಗೆ ಬಿಗ್ ಶಾಕ್!..ಇನ್ಮುಂದೆ ಹಣ ಮಾಡಲು ಏನೆಲ್ಲಾ ಮಾಡ್ಬೇಕು!?

ಲೊಗನ್ ಪೌಲ್ ವಿವಾದದ ನಂತರ ಯೂಟ್ಯೂಬ್ ನಲ್ಲಿ ಹಣಗಳಿಕೆ ಮಾಡುವ ಚಾನೆಲ್‌ಗಳ ಮೇಲೆ ಹೆಚ್ಚು ನಿರ್ಬಂಧವನ್ನು ಹೇರಲು ಗೂಗಲ್ ನಿರ್ಧರಿಸಿದೆ.!!

|

ಜಪಾನ್‌ ದೇಶದ ಅಯೋಗಿಗರಾ ಅರಣ್ಯ ಪ್ರದೇಶದಲ್ಲಿ ಯುವಕನೊಬ್ಬನ ಆತ್ಮಹತ್ಯೆಯ ವಿಡಿಯೊವೊಂದನ್ನು ಯೂಟ್ಯೂಬ್ ನಲ್ಲಿ ಹರಿಯಬಿಟ್ಟು ಭಾರೀ ವಿವಾದಕ್ಕೆ ಕಾರಣವಾಗಿದ್ದ ಲೊಗನ್ ಪೌಲ್ ವಿವಾದದ ನಂತರ ಯೂಟ್ಯೂಬ್ ನಲ್ಲಿ ಹಣಗಳಿಕೆ ಮಾಡುವ ಚಾನೆಲ್‌ಗಳ ಮೇಲೆ ಹೆಚ್ಚು ನಿರ್ಬಂಧವನ್ನು ಹೇರಲು ಗೂಗಲ್ ನಿರ್ಧರಿಸಿದೆ.!!

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಈ ಮೊದಲು ಇದ್ದ 10 ಸಾವಿರ ವೀಕ್ಷಣೆ ಬದಲು ವರ್ಷಕ್ಕೆ 4,000 ಗಂಟೆಗಳಷ್ಟು ಕಾಲ ವಿಡಿಯೊ ವೀಕ್ಷಣೆ ಮಾಡಿದರೆ ಮಾತ್ರ ಯೂಟ್ಯೂಬ್ ವಿಡಿಯೊ ಮೂಲಕ ಹಣ ಗಳಿಸುವ ಆಯ್ಕೆಯನ್ನು ತರಲು ಗೂಗಲ್ ಮುಂದಾಗಿದೆ.!

ಯೂಟ್ಯೂಬ್‌ನಲ್ಲಿ ದುಡ್ಡು ಮಾಡುತ್ತಿದ್ದವರಿಗೆ ಬಿಗ್ ಶಾಕ್!!

ಪ್ರತಿವರ್ಷ ಯೂಟ್ಯೂಬ್ ಪಾರ್ಟ್ನರ್ ಪ್ರೊಗ್ರಾಂ ಮೂಲಕ ಹಣ ಸಂಪಾದಿಸುತ್ತಿದ್ದವರಿಗೆ ಈ ಸುದ್ದಿ ಶಾಕ್ ನೀಡಿದೆ. ಹಾಗಾದರೆ, ಯೂಟ್ಯೂಬ್ ನಲ್ಲಿ ಹಣಗಳಿಕೆ ಮಾಡಲು ಪ್ರಸ್ತುತ ಇರುವ ನಿಯಮಗಳು ಯಾವುವು? ಯಾವ ಯಾವ ವಿಡಿಯೊಗಳ ಮೂಲಕ ಹಣ ಗಳಿಸಬಹುದು ಎಂದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ!!

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ!!

ಪ್ರತಿವರ್ಷ ಯೂಟ್ಯೂಬ್‌ನ ಪಾರ್ಟ್ನರ್ ಪ್ರೊಗ್ರಾಂ ಮೂಲಕ ಲಕ್ಷಾಂತರ ಜನರು ಹಣ ಸಂಪಾದಿಸುತ್ತಿದ್ದಾರೆ. ಗೂಗಲ್ ಯೂಟ್ಯೂಬ್ ಚಾನಲ್ ಹೊಂದಿರುವವರ ಜೊತೆ ಗೂಗಲ್ ಸಹಯೋಗ ಹೊಂದಿದೆ.! ಮೊದಮೊದಲು ಯೂಟ್ಯೂಬ್ ಸ್ಟಾರ್‌ಗಳಿಗೆ ಬಹಳ ಸುಲಭವಾಗಿ ಹಣ ತಂದುಕೊಡುತ್ತಿದ್ದ ಯೂಟ್ಯೂಬ್ ಇದೀಗ ಕಬ್ಬಿಣದ ಕಡಲೆಯಾಗುತ್ತಿದೆ.!!

ವೀಕ್ಷಣೆ ನಿಗದಿ ಪಟ್ಟಿಗೆ ಕೊನೆ.!!

ವೀಕ್ಷಣೆ ನಿಗದಿ ಪಟ್ಟಿಗೆ ಕೊನೆ.!!

ಕಳೆದ ಏಪ್ರಿಲ್ ತಿಂಗಳಲ್ಲಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (ವೈಪಿಪಿ) ನಲ್ಲಿ ಕೊನೆಯ ಸಾರಿ ಬದಲಾವಣೆ ಮಾಡಲಾಗಿತ್ತು. ಚಾನೆಲ್‌ಗೆ 10 ಸಾವಿರ ವೀಕ್ಷಣೆ ಬರುವವರೆಗೆ ವಿಡಿಯೋ ಹಾಕಿರುವವರಿಗೆ ಹಣ ಸಂಪಾದನೆ ಮಾಡಲು ಸಾಧ್ಯವಾಗದ ನಿಯಮ ಇಲ್ಲಿಯವರೆಗೂ ಇತ್ತು. ಆದರೆ ಇದೀಗ ನಿಯಮವನ್ನು ಬದಲಾಯಿಸಲಾಗಿದೆ.!!

ಪಾರ್ಟ್ನರ್ ಪ್ರೋಗ್ರಾಂ ನೂತನ ನಿಯಮ?

ಪಾರ್ಟ್ನರ್ ಪ್ರೋಗ್ರಾಂ ನೂತನ ನಿಯಮ?

ಯೂಟ್ಯೂಬ್‌ನಲ್ಲಿನ ಒಂದು ವಿಡಿಯೊ ಒಂದು ವರ್ಷದೊಳಗೆ ಒಟ್ಟಾರೆ 4,000 ಗಂಟೆಗಳು ವೀಕ್ಷಣೆಯಾಗಿದ್ದರೆ ಮತ್ತು ವಿಡಿಯೋ ಹಾಕಿರುವ ಚಾನೆಲ್‌ಗೆ 1,000ಕ್ಕಿಂತ ಹೆಚ್ಚು ಲೈಕ್ ಗಳು ಬಂದರೆ ಮಾತ್ರ ವಿಡಿಯೊ ಸೃಷ್ಟಿ ಮಾಡಿ ಹರಿಬಿಟ್ಟವರು ಹಣ ಗಳಿಸಬಹುದು ಎಂಬ ನೂತನ ನಿಯಮ ಜಾರಿಗೆ ಬರುತ್ತಿದೆ.!!

ನೂತನ ನಿಯಮ ಬಂದಿದ್ದೇಕೆ?

ನೂತನ ನಿಯಮ ಬಂದಿದ್ದೇಕೆ?

ಕೆಲವು ವಿಡಿಯೊ ಸೃಷ್ಟಿಕರ್ತರು ಗೂಗಲ್ ಕಂಪೆನಿಯ ನಿಯಮಗಳನ್ನು ಪಾಲಿಸದೆ ಇರುವುದನ್ನು ತಡೆಯಲು ಈ ಹೊಸ ನಿಯಮವನ್ನು ತರಲಾಗಿದೆ.! ಪೇಜ್ ಇಷ್ಟಪಡದ ಹಾಗೂ ಜನರ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ವಿಡಿಯೊಗಳನ್ನು ಪೋಸ್ಟ್ ಮಾಡುವಂತಹ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.!!

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?
ನಿಯಮ ಪಾಲಿಸದೇ ಹಣವಿಲ್ಲ.!!

ನಿಯಮ ಪಾಲಿಸದೇ ಹಣವಿಲ್ಲ.!!

ಯೂಟ್ಯೂಬ್ ನಲ್ಲಿ ವಿಡಿಯೊ ಮೂಲಕ ಹಣಗಳಿಕೆಯ ಹೊಸ ನಿಯಮ ಫೆಬ್ರವರಿ 20ರಿಂದ ಜಾರಿಗೆ ಬರಲಿದೆ. ಕೆಟ್ಟ ಸೃಷ್ಟಿಸುವವರನ್ನು ಪತ್ತೆಹಚ್ಚಲು ಕೂಡ ಈ ನಿಯಮ ಸಹಾಯವಾಗಲಿದೆ ಎಂದು ಗೂಗಲ್ ಕಂಪೆನಿ ಹೇಳಿದೆ. ಇನ್ನು ಹೊಸ ನಿಯಮವನ್ನು ಪಾಲಿಸದಿದ್ದವರು ಇನ್ನು ಮುಂದೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ತಿಳಿಸಿದೆ.!

ಪೇಟಿಎಂ ನೀಡುತ್ತಿದೆ ಎಟಿಎಂ!..ಕಾರ್ಡ್‌ ಪಡೆಯುವುದು ಹೇಗೆ ಗೊತ್ತಾ!?ಪೇಟಿಎಂ ನೀಡುತ್ತಿದೆ ಎಟಿಎಂ!..ಕಾರ್ಡ್‌ ಪಡೆಯುವುದು ಹೇಗೆ ಗೊತ್ತಾ!?

Best Mobiles in India

English summary
YouTube changes eligibility of monetisation from 10,000 lifetime views to 4,000hours. According to YouTube, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X