ಯೂಟ್ಯೂಬ್‌ನಲ್ಲಿ ಎಷ್ಟು ಸಮಯ ವಿಡಿಯೋ ನೋಡಿದ್ದಿರಿ ಎಂಬುದು ಗೊತ್ತಾಗಬೇಕಾ..? ಬಂದಿದೆ ಹೊಸ ಆಯ್ಕೆ..!

By GizBot Bureau
|

ಭಾರತೀಯ ಮಾರುಕಟ್ಟೆಯಲ್ಲಿ ಗೂಗಲ್ ಒಡೆತನದ ವಿಡಿಯೋ ಸ್ಟ್ರೀಮಿಂಗ್ ತಾಣ ಯೂಟ್ಯೂಬ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ವಿಶ್ವದಲ್ಲಿಯೇ ಭಾರತೀಯರು ಅತೀ ಹೆಚ್ಚಿನ ಸಮಯ ಮೊಬೈಲ್ ನಲ್ಲಿ ಆನ್ ಲೈನ್ ವಿಡಿಯೋ ಗಳನ್ನು ನೋಡುತ್ತಾರೆ ಎನ್ನಲಾಗಿದೆ. ಇದರಲ್ಲಿ ಯೂಟ್ಯೂಬ್ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ.

ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಸಹಾಯವಾಗುವಂತೆ ಹಲವಾರು ಹೊಸ ಮಾದರಿಯ ಸೇವೆಯಗಳನ್ನು ನೀಡುತ್ತಿದೆ. ಇದರಲ್ಲಿ ಸದ್ಯ ಪ್ರಮುಖವಾದ ಆಯ್ಕೆ ಎಂದರೆ ಬಳಕೆದಾರರು ಎಷ್ಟು ಸಮಯ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿದ್ದಾರೆ ಎನ್ನುವುದಾಗಿದೆ.

ಯೂಟ್ಯೂಬ್‌ನಲ್ಲಿ ಎಷ್ಟು ಸಮಯ ವಿಡಿಯೋ ನೋಡಿದ್ದಿರಿ ಎಂಬುದು ಗೊತ್ತಾಗಬೇಕಾ..?

ಇದಕ್ಕದಾಗಿ ಯೂಟ್ಯೂಬ್ ಹೊಸದಾಗಿ ಟೈಮ್ ವಾಚಡ್ ಎನ್ನುವ ಆಯ್ಕೆಯೊಂದನ್ನು ನೀಡಿದೆ. ಇದರಲ್ಲಿ ಬಳಕೆದಾರರು ಎಷ್ಟು ಸಮಯ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ನೋಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಒಂದು ವಾರದ ಡೇಟಾವನ್ನು ತೋರಿಸಲಿದೆ. ಈ ಆಯ್ಕೆಯಲ್ಲಿ ಬಳಕೆದಾರರಿಗೆ ದೊರೆಯುವ ಸೇವೆಯ ಕುರಿತು ಯೂಟ್ಯೂಬ್ ತನ್ನ ಬ್ಲಾಗ್ ನಲ್ಲಿ ಮಾಹಿತಿಯನ್ನು ನೀಡಿದ್ದು 'ಈ ಪ್ರೋಫೈಲ್ ನಲ್ಲಿ ಹಿಂದಿನ ದಿನ ಮತ್ತು ಕಳೆದ 7 ದಿನಗಳಲ್ಲಿ ಎಷ್ಟು ಸಮಯ ವಿಡಿಯೋವನ್ನು ನೋಡಲಾಗಿದೆ ಎಂಬುದನ್ನು ತಿಳಿಯಬಹುದಾಗಿದೆ’ ಎಂದು ಬರೆದಿದೆ.

ಇನ್ನು ಕೆಲವೇ ದಿನಗಳಲ್ಲಿ ಈ ಹೊಸ ಆಯ್ಕೆಯೂ ಬಳಕೆದಾರರಿಗೆ ಮುಕ್ತವಾಗಲಿದೆ. ವಿಶ್ವದ ಯಾವ ರಾಷ್ಟಗಳಲ್ಲಿ ಯೂಟ್ಯೂಬ್ ಸೇವೆ ಇದೆಯೋ ಅಲ್ಲೆಲ್ಲ ಈ ಹೊಸ ಟೈಮ್ ವಾಚಡ್ ಆಯ್ಕೆಯನ್ನು ಬಳಕೆಗೆ ಮುಕ್ತವಾಗಿಸಲಿದೆ.

ಈ ಹೊಸ ಆಯ್ಕೆಯಿಂದಾಗಿ ಇಂಟರ್ನೆಟ್ ಬಳಕೆದಾರರಿಗೆ ತಮ್ಮ ಡಿಜಿಟಲ್ ಹ್ಯಾಬಿಟ್ ಯಾವ ರೀತಿಯಲ್ಲಿ ಇದೇ ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗಲಿದೆ. ಸದ್ಯ ಯುಟ್ಯೂಬ್ ನಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ಆಯ್ಕಯೂ ಗೂಗಲ್ ನ ಬೇರೆ ಸೇವೆಯಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ದಿನೇ ದಿನೇ ಜಾಗತಿಕವಾಗಿ ಡಿಜಿಟಲ್ ಜೀವನ ಹೆಚ್ಚಾಗುತ್ತಿದೆ. ಇದು ಕಡಿಮೆ ಆದರೂ ತಪ್ಪು ಹಾಗೆಯೇ ಹೆಚ್ಚಾದರು ಅಪಾಯ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅದನ್ನು ಸಮತೋಲನದಲ್ಲಿ ಇಟ್ಟುಕೋಳ್ಳಲು ಈ ಕ್ರಮವು ಸಹಾಯವನ್ನು ಮಾಡಲಿದೆ.

ಯೂಟ್ಯೂಬ್‌ನಲ್ಲಿ ಎಷ್ಟು ಸಮಯ ವಿಡಿಯೋ ನೋಡಿದ್ದಿರಿ ಎಂಬುದು ಗೊತ್ತಾಗಬೇಕಾ..?

ಇದಕ್ಕಾಗಿ ಗೂಗಲ್ ಈ ಹೊಸ ಸೇವೆಗೆ ಡಿಜಿಟಲ್ ವೆಲ್ ಬಿಯಿಂಗ್ ಎಂದು ನಾಮಕರಣವನ್ನು ಮಾಡಿದೆ ಎನ್ನಲಾಗಿದೆ. ಈ ಮಾದರಿಯ ಸೇವೆಯೂ ಮುಂದಿನ ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾಗಿದ್ದು, ಆಂಡ್ರಾಯ್ಡ್ ಪೇ ನಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯವನ್ನು ಮಾಡಲು ಮುಂದಾಗಿದೆ.
Best Mobiles in India

English summary
YouTube expands Digital WellBeing feature to track time spent on videos. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X