ರಷ್ಯಾದಲ್ಲಿ ಚಂದಾದಾರಿಕೆ ಸೇವೆಯನ್ನು ನಿಲ್ಲಿಸಿದ ಯೂಟ್ಯೂಬ್‌!

|

ರಷ್ಯಾ ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧ ಇನ್ನು ಕೂಡ ಮುಂದುವರೆದಿದೆ. ರಷ್ಯಾ ಸೈನಿಕರ ಆರ್ಭಟಕ್ಕೆ ಈಗಾಗಲೇ ಉಕ್ರೇನ್‌ ರಾಷ್ಟ್ರ ನಲುಗಿಹೋಗಿದೆ. ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ವಿಶ್ವದ ಅನೇಕ ರಾಷ್ಟ್ರಗಳು ಖಂಡಿಸುತ್ತಿವೆ. ಅಲ್ಲದೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆ. ಇದರ ನಡುವೆ ಟೆಕ್‌ ವಲಯದ ಅನೇಕ ಕಂಪೆನಿಗಳು ಕೂಡ ರಷ್ಯಾದಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿವೆ. ಇದೇ ಸಾಲಿಗೆ ಇದೀಗ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಯೂಟ್ಯೂಬ್‌ ಕೂಡ ಸೇರಿವೆ.

ಗೂಗಲ್‌

ಹೌದು, ಗೂಗಲ್‌ ತನ್ನ ಒಡೆತನದ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಯೂಟ್ಯೂಬ್‌ ಸೇವೆಯನ್ನು ರಷ್ಯಾದಲ್ಲಿ ಸ್ಥಗಿತಗೊಳಿಸುವುದಾಗಿ ಹೇಳಿದೆ. ಯೂಟ್ಯೂಬ್ ಮತ್ತು ಗೂಗಲ್ ಪ್ಲೇ ಸ್ಟೋರ್ ಚಂದಾದಾರಿಕೆಗಳನ್ನು ಒಳಗೊಂಡಂತೆ ರಷ್ಯಾದಲ್ಲಿ ಎಲ್ಲಾ ಪಾವತಿ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಈಗಾಗಲೇ ಅನೇಕ ಕಂಪೆನಿಗಳು ಇದೇ ಹಾದಿಯನ್ನು ಅನುಸರಿಸಿದ್ದು, ಗೂಗಲ್‌ ಹೊಸದಾಗಿ ಸೇರ್ಪಡೆಯಾಗಿದೆ. ಹಾಗಾದ್ರೆ ರಷ್ಯಾದಲ್ಲಿ ಗೂಗಲ್ ಮತ್ತು ಯೂಟ್ಯೂಬ್‌ನ ಯಾವೆಲ್ಲಾ ಸೇವೆಗಳು ಸ್ಥಗಿತಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ತನ್ನ ಪ್ಲೇ ಸ್ಟೋರ್‌ ಮತ್ತು ಯೂಟ್ಯೂಬ್‌ನ ಚಂದಾದಾರಿಕೆ ಸೇವೆಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿದೆ. ಇದರಿಂದ ರಷ್ಯಾದಲ್ಲಿ ವೀಕ್ಷಕರಿಗೆ ಯೂಟ್ಯೂಬ್‌ ಪ್ರೀಮಿಯಂ, ಚಾನೆಲ್ ಸದಸ್ಯತ್ವಗಳು, ಸೂಪರ್ ಚಾಟ್ ಮತ್ತು ಮರ್ಚಂಡೈಸ್ ಸೇರಿದಂತೆ ಅನೇಕ ಸೇವೆಗಳು ಸ್ಟಾಪ್‌ ಆಗಲಿವೆ. ಇದಲ್ಲದೆ ರಷ್ಯಾದ ಯೂಟ್ಯೂಬ್‌ ಚಾನಲ್‌ಗಳು ಇನ್ನೂ ರಷ್ಯಾದ ಹೊರಗಿನ ವೀಕ್ಷಕರಿಂದ ಜಾಹೀರಾತುಗಳು ಮತ್ತು ಪಾವತಿಸಿದ ಫೀಚರ್ಸ್‌ಗಳ ಮೂಲಕ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಸೂಪರ್ ಚಾಟ್ ಮತ್ತು ವ್ಯಾಪಾರದ ಸೇಲ್‌ಗಳು ಸೇರಿವೆ.

ಗೂಗಲ್‌

ಇನ್ನು ಗೂಗಲ್‌ ಪ್ಲೇ ನಲ್ಲಿ ಲಭ್ಯವಾಗುವ ಉಚಿತ ಅಪ್ಲಿಕೇಶನ್‌ಗಳು ರಷ್ಯಾದಲ್ಲಿ ಲಭ್ಯವಾಗಲಿವೆ. ತನ್ನ ಸುದ್ದಿ-ಸಂಬಂಧಿತ ಫೀಚರ್ಸ್‌ಗಳಿಂದ ರಷ್ಯಾದ ರಾಜ್ಯದ ಪ್ರಕಾಶಕರನ್ನು ತೆಗೆದುಹಾಕುವ ಹಿಂದಿನ ಕ್ರಮಕ್ಕೆ ಅನುಗುಣವಾಗಿ, ತನ್ನ ಪ್ಲೇ ಸ್ಟೋರ್‌ನಿಂದ ಆರ್‌ಟಿ ಮತ್ತು ಸ್ಪುಟ್ನಿಕ್‌ಗೆ ಸಂಪರ್ಕಗೊಂಡಿರುವ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ ಎಂದು ಗೂಗಲ್ ಈ ಹಿಂದೆ ಹೇಳಿದೆ. ಇದರಿಂದ ಗೂಗಲ್‌ನ ಚಂದದಾರಿಕೆಯ ಸೇವೆಗಳು ಹಾಗೂ ಯೂಟ್ಯೂಬ್‌ನ ಸೇವೆಗಳು ರಷ್ಯಾದಲ್ಲಿ ಸ್ಟಾಪ್‌ ಆಗಲಿವೆ.

ಹಲವಾರು

ಇದಲ್ಲದೆ ಈಗಾಗಲೇ ಹಲವಾರು ಟೆಕ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಸ್ಟಾಪ್‌ ಮಾಡುತ್ತಿವೆ. ಉಕ್ರೇನ್‌ ಮೇಲಿನ ರಷ್ಯಾ ಅಕ್ರಮಣವನ್ನು ವಿರೋದಿಸುವುದಕ್ಕಾಗಿ ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ. ಇದಲ್ಲದೆ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಕೂಡ ತಮ್ಮ ಅಗತ್ಯ ಸೇವೆಗಳಲ್ಲಿ ಕೆಲವು ಸೇವೆಗಳನ್ನು ಸ್ಟಾಪ್‌ ಮಾಡಿವೆ. ಇದರಲ್ಲಿ ಸ್ನ್ಯಾಪ್‌ಚಾಟ್‌ ತನ್ನ ಹೀಟ್‌ಮ್ಯಾಪ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡಿರುವುದು ಗಮನಿಸಬಹುದಾಗಿದೆ.

ಸ್ನ್ಯಾಪ್

ಸ್ನ್ಯಾಪ್ ಚಾಟ್‌ ತನ್ನ ಸ್ನ್ಯಾಪ್‌ ಮ್ಯಾಪ್‌ ಮೂಲಕ ಒಂದು ಪ್ರದೇಶದಲ್ಲಿ ಎಷ್ಟು ಜನರು ಸಾರ್ವಜನಿಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಲು ಬಣ್ಣದ ಕೋಡ್ ಅನ್ನು ಪ್ರದರ್ಶಿಸುತ್ತದೆ. ಪ್ರಾಯೋಗಿಕವಾಗಿ, ಸ್ನ್ಯಾಪ್‌ಚಾಟ್ ಬಳಕೆದಾರರು ಎಲ್ಲಿ ಕೇಂದ್ರೀಕೃತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆಯಬಹುದು. ಉಕ್ರೇನಿಯನ್ನರ ಚಲನವಲನಗಳನ್ನು ರಷ್ಯಾ ಸೈನಿಕರು ಪತ್ತೆಹಚ್ಚಲು ಕಷ್ಟವಾಗುವಂತೆ ಮಾಡಲು ಈಗಾಗಲೇ ಅನೇಕ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ನಿರ್ಧಾರ ತೆಗೆದುಕೊಂಡಿವೆ. ಇದೀಗ ಸ್ನ್ಯಾಪ್‌ಚಾಟ್‌ ಕೂಡ ಇಂತಹ ನಿರ್ಧಾರ ತೆಗೆದುಕೊಂಡಿದೆ.

ಡೇಟಾವು

ಸಾರ್ವಜನಿಕವಾಗಿ ಲಭ್ಯವಿರುವ ಈ ಡೇಟಾವು ಸಾಮಾನ್ಯವಾಗಿ ಅರ್ಥಪೂರ್ಣವಾಗಿಲ್ಲದಿದ್ದರೂ, ಯುದ್ಧಕಾಲದ ಸನ್ನಿವೇಶದಲ್ಲಿ ರಷ್ಯಾ ಸೈನಿಕರಿಗೆ ನಾಗರಿಕರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಅನುಕೂಲವಾಗಬಹುದು. ಇದೇ ಕಾರಣಕ್ಕೆ ಈ ವೈಶಿಷ್ಟ್ಯವನ್ನು ಆಫ್ ಮಾಡಿರುವುದು ಉತ್ತಮವಾಗಿದೆ ಎಂದು ವರದಿ ಹೇಳಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಸ್ನ್ಯಾಪ್‌ಚಾಟ್‌ ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದೆ.

Best Mobiles in India

Read more about:
English summary
YouTube, Google Play Store Suspend Payment-Based Services in Russia

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X