ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!

|

ಮನರಂಜನೆಗೆ ಮ್ಯೂಸಿಕ್‌ ಮತ್ತು ವಿಡಿಯೊ ಬೆಸ್ಟ್‌ ಎನಿಸಿದ್ದು, ಈ ನಿಟ್ಟಿನಲ್ಲಿ ಇತ್ತೀಚಿಗಂತು ಹಲವು ಆಪ್‌ಗಳ ಸ್ಟ್ರೀಮಿಂಗ್‌ ಸೇವೆಗಳು ಗ್ರಾಹಕರಿಗೆ ಲಭ್ಯವಾಗಿವೆ. ಅವುಗಳಲ್ಲಿ ಯೂಟ್ಯೂಬ್‌ ಸಹ ಮ್ಯೂಸಿಕ್‌ ಮತ್ತು ವಿಡಿಯೊ ಸೇವೆಯನ್ನು ಆರಂಭಿಸಿದ್ದು, ಬಾರಿ ಜನಪ್ರಿಯತೆಗಳಿಸಿದೆ. ಇದೀಗ ಕಂಪನಿಯು ಸ್ಟೂಡೆಂಟ್‌ಗಳಿಗೆ ಭರ್ಜರಿ ಆಫರ್‌ ನೀಡಲು ಮುಂದಾಗಿದ್ದು, ಚಂದಾದಾರರಾಗಲು ಹೊಸ ರಿಯಾಯಿತಿ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!

ಹೌದು, ಯೂಟ್ಯೂಬ್‌ ತನ್ನ ಸ್ಟ್ರೀಮಿಂಗ್‌ ಸೇವೆಯ ಚಂದಾದಾರತ್ವದ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್‌ ನೀಡಿದ್ದು, ಆರಂಭಿಕ ಪ್ಲ್ಯಾನ್‌ ತಿಂಗಳಿಗೆ ಕೇವಲ 59ರೂ ಆಗಿದೆ. ಕಂಪನಿಯ 'ಯೂಟ್ಯೂಬ್‌ ಮ್ಯೂಸಿಕ್' ಮತ್ತು 'ಯೂಬ್ಯೂಬ್‌ ಪ್ರೀಮಿಯಮ್‌' ಸ್ಟ್ರೀಮಿಂಗ್‌ ಸೇವೆಗಳು ಗ್ರಾಹಕರಿಗೆ ಆಡಿಯೊ ಮತ್ತು ವಿಡಿಯೊ ಮನರಂಜನೆಗಳನ್ನು ಹೂರಣವನ್ನು ಒದಗಿಸಲಿವೆ. ಹಾಗಾದರೇ ಯೂಟ್ಯೂಬ್‌ ಸ್ಟ್ರೀಮಿಂಗ್‌ ಸೇವೆಯ ಚಂದಾದಾರತ್ವದ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ.

ಓದಿರಿ : '5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?ಓದಿರಿ : '5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?

59ರೂ ಪ್ಲ್ಯಾನ್‌

59ರೂ ಪ್ಲ್ಯಾನ್‌

ಯೂಟ್ಯೂಬ್‌ ಸ್ಟ್ರೀಮಿಂಗ್‌ ಸೇವೆಗಳ ಚಂದಾದಾರತ್ವ ಹೊಂದಲು ಆರಂಭಿಕ 59ರೂ.ಗಳ ಪ್ಲ್ಯಾನ್‌ ಅನ್ನು ಕಂಪನಿಯು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಕೇವಲ ಯೂಟ್ಯೂಬ್‌ ಮ್ಯೂಸಿಕ್‌ ಸೇವೆ ಮಾತ್ರ ಲಭ್ಯ ಇರಲಿದೆ. ಒಂದು ತಿಂಗಳ ವ್ಯಾಲಿಡಿಟಿಯನ್ನು ಒಳಗೊಂಡಿರಲಿದ್ದು, ವಾಯ್ದೆ ಮುಗಿಯುವವರೆಗೂ ಅನಿಯಮಿತವಾಗಿ ಮನರಂಜನೆ ಪಡೆದುಕೊಳ್ಳಬಹುದು.

79ರೂ.ಪ್ಲ್ಯಾನ್‌

79ರೂ.ಪ್ಲ್ಯಾನ್‌

ಸ್ಟೂಡೆಂಟ್‌ ಡಿಸ್ಕೌಂಟ್‌ ಆಫರ್‌ನಡಿ ಕೇವಲ 79ರೂ.ಗಳ ಶುಲ್ಕ ಪಾವತಿಸಿ ಯೂಟ್ಯೂಬ್‌ ಪ್ರೀಮಿಯಮ್ ವಿಡಿಯೊ ಸ್ಟ್ರೀಮಿಂಗ್‌ ಸೇವೆಯ ಚಂದಾದಾರರಾಗಬಹುದು. ಗ್ರಾಹಕರು ಈ ಸೇವೆಯಲ್ಲಿ ಸಂಪೂರ್ಣ ವಿಡಿಯೊಗಳ ಮನರಂಜನೆಯನ್ನು ಪಡೆಯಬಹುದಾಗಿದ್ದು, ಒಂದು ತಿಂಗಳ ವ್ಯಾಲಿಟಿಡಿಯನ್ನು ಹೊಂದಿದೆ. ಅವಧಿ ಮುಗಿಯುವವರೆಗೂ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಜನರಲ್ ಪ್ಲ್ಯಾನ್‌

ಜನರಲ್ ಪ್ಲ್ಯಾನ್‌

ಆಂಡ್ರಾಯ್ಡ್‌ ಓಎಸ್‌ ಗ್ರಾಹಕರಿಗೆ ಯೂಟ್ಯೂಬ್‌ ಮ್ಯೂಸಿಕ್‌ ಸೇವೆಗೆ 99ರೂ ಮತ್ತು ವಿಡಿಯೊ ಸ್ಟ್ರೀಮಿಂಗ್‌ ಸೇವೆಗೆ 129ರೂ ಚಂದಾದಾರತ್ವ ಶುಲ್ಕ ನಿಗದಿಮಾಡಲಾಗಿದೆ. ಹಾಗೆಯೇ ಐಓಎಸ್‌ ಗ್ರಾಹಕರಿಗೆ 129ರೂ.ಗೆ ಯೂಟ್ಯೂಬ್‌ ಮ್ಯೂಸಿಕ್‌ ಸೇವೆ ಮತ್ತು 169ರೂ.ಗೆ ವಿಡಿಯೊ ಸ್ಟ್ರೀಮಿಂಗ್‌ ಸೇವೆಯ ಚಂದಾದಾರತ್ವ ಪಡೆಯಬಹುದಾಗಿದೆ.

ಟಫ್‌ ಪೈಪೋಟಿ

ಟಫ್‌ ಪೈಪೋಟಿ

ಮ್ಯೂಸಿಕ್‌ ಮತ್ತು ವಿಡಿಯೊ ಸ್ಟ್ರೀಮಿಂಗ್‌ ಸೇವೆ ಒದಗಿಸುವ ಕಂಪನಿಗಳ ನಡುವೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದೆ. ಮಾರುಕಟ್ಟೆಯಲ್ಲಿ ಸದ್ಯ ಸ್ಪಾಟಿಫೈ, ಗಾನಾ, ಸಾವನ್‌, ಅಮೆಜಾನ್‌ ಪ್ರೈಮ್‌, ಆಪಲ್‌ ಮ್ಯೂಸಿಕ್‌ ಸೇರಿದಂತೆ ಹಲವು ಕಂಪನಿಗಳು ಸೇವೆ ಒದಗಿಸುತ್ತಿವೆ. ಪ್ರಸ್ತುತ ಗೂಗಲ್‌ ಒಡೆತನದ ಯೂಟ್ಯೂಬ್‌ ಸಹ ಈ ಪೈಪೋಟಿಗೆ ಇಳಿಯುವಂತಾಗಿದೆ.

ಫ್ಯಾಮಿಲಿ ಪ್ಲ್ಯಾನ್‌ ಸಹ ಇದೆ

ಫ್ಯಾಮಿಲಿ ಪ್ಲ್ಯಾನ್‌ ಸಹ ಇದೆ

ಸದ್ಯ ಯೂಟ್ಯೂಬ್‌ ಆಫರ್‌ ನೀಡಿರುವುದು ವಿದ್ಯಾರ್ಥಿಗಳಿಗೆ ಮಾತ್ರ(ಸಿಂಗಲ್‌ ಸಬ್‌ಸ್ಕ್ರಿಪ್ಶನ್‌). ಒಂದು ವೇಳೆ ಕುಟುಂಬದ ಎಲ್ಲ ಸದಸ್ಯರಿಗೂ ಯೂಟ್ಯೂಬ್‌ ಸ್ಟ್ರೀಮಿಂಗ್‌ ಲಭ್ಯವಾಗಬೇಕಿದ್ದರೇ ಫ್ಯಾಮಿಲಿ ಪ್ಲ್ಯಾನ್‌ ಪಡೆಯಬಹುದು. 6 ಸದಸ್ಯರ ಕುಟುಂಬಕ್ಕೆ ಯೂಟ್ಯೂಬ್‌ ಮ್ಯೂಸಿಕ್‌ ಶುಲ್ಕ 149ರೂ. ಮತ್ತು ವಿಡಿಯೊ ಸೇವೆಗೆ 189ರೂ.ಗಳು ಆಗಿದೆ.(ಆಂಡ್ರಾಯ್ಡ್‌ ಓಎಸ್‌).

ಓದಿರಿ : ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?ಓದಿರಿ : ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?

Best Mobiles in India

English summary
YouTube has introduced student discount plans in India for its subscription based streaming services, YouTube Music and YouTube Premium. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X