ಯೂಟ್ಯೂಬ್ ನಿಂದ ಬ್ರೇಕಿಂಗ್ ನ್ಯೂಸ್ ಸೇವೆ: ವಿಶೇಷತೆ ಏನು..?

Written By: Lekhaka

ಜಿಯೋ ದೇಶಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಯೂಟ್ಯೂಬ್ ವಿಡಿಯೋ ಸ್ಟ್ರೀಮಿಂಗ್ ನಾಟಕೀಯವಾಗಿ ಬೆಳವಣಿಗೆಯನ್ನು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಯೂಟ್ಯೂಬ್ ಹೊಸ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇಷ್ಟು ದಿನ ಮನೋರಂಜನೆಯ ತಾಣವಾಗಿದ್ದ ಯೂಟ್ಯೂನ್ ಈ ಬಾರಿ ನ್ಯೂಸ್ ಸೋರ್ಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯೂಟ್ಯೂಬ್ ನಿಂದ ಬ್ರೇಕಿಂಗ್ ನ್ಯೂಸ್ ಸೇವೆ: ವಿಶೇಷತೆ ಏನು..?

ಇನ್ನು ಮುಂದೆ ಪ್ರತಿ ವಿಷಯದ ಕುರಿತ ನ್ಯೂಸ್ ಗಳನ್ನು ಆರಂಭಿಸಲು ವೇದಿಕೆಯನ್ನು ಸಿದ್ಧಪಡಿಸಲು ಮುಂದಾಗಿದೆ. ಇದಕ್ಕಾಗಿ ಬ್ರೇಕಿಂಗ್ ನ್ಯೂಸ್ ಸೆಕ್ಷನ್ ಅನ್ನು ನೀಡಲು ಮುಂದಾಗಿದೆ. ಇಲ್ಲಿ ಬಳಕೆದಾರರಿಗೆ ವಿವಿಧ ವಿಷಯಗಳ ಇತ್ತೀಚಿನ ಮಾಹಿತಿಗಳನ್ನು ಪಡೆದುಕೊಳ್ಳುವ ಅವಕಾಶವು ದೊರೆಯಲಿದೆ.

ಈ ಆಯ್ಕೆಯೂ ಚಾನಲ್ ಗಳ ಹೋಮ್ ಪೇಜ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಮೊಬೈಲ್ ಆಪ್ ನಲ್ಲಿ ಸೆಜೆಸ್ಟ್ ವಿಡಿಯೋ ವಿಭಾಗದಲ್ಲಿ ಇರಲ್ಲಿದೆ ಎನ್ನಲಾಗಿದೆ. ಇದಲ್ಲದೇ ಯೂಟ್ಯೂಬಿನಲ್ಲಿ ವಿಡಿಯೋ ಆಯ್ಕೆಗಳನ್ನು ಇಷ್ಟ ಬಂದ ರೀತಿಯಲ್ಲಿ ಜೋಡಿಸುವ ಆಯ್ಕೆಯನ್ನು ಮಾಡಿಕೊಡಲಿದೆ.

ಇದಲ್ಲದೇ 3 ಸೆಕೆಂಡ್ ಗಳ ವಿಡಿಯೋ ಫ್ರಿವ್ಯೂವನ್ನು ನೀಡಲು ಯೂಟ್ಯೂಬ್ ಮುಂದಾಗಿದ್ದು, ಇದು ವಿಡಿಯೋ ನೋಡುವ ಮುನ್ನವೇ ತಿಳಿದುಕೊಳ್ಳಲು ಸಹಾಯಕಾರಿಯಾಗಿದೆ. ಗೂಗಲ್ ನಲ್ಲಿ ಇರುವ ಆಯ್ಕೆಗಳನ್ನು ಯೂಟ್ಯೂಬ್ ನಲ್ಲಿಯೂ ನೀಡುವ ಪ್ರಯತ್ನ ಇದಾಗಿದೆ.

ಫೋನ್ ಸ್ಕ್ರೀನ್ ಗುಣಮಟ್ಟವನ್ನು ಪರಿಶೀಲಿಸುವುದು ಹೇಗೆ

Read more about:
English summary
YouTube has added a new section to its web platform which gives access to the latest news to users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot