ಯೂಟ್ಯೂಬ್‌ನಲ್ಲಿ ಹೊಸ ಫೀಚರ್ಸ್: ಪ್ರೈಮ್‌ಟೈಮ್ ಚಾನೆಲ್ಸ್‌ ಬಗ್ಗೆ ಇಲ್ಲಿದೆ ವಿವರ!

|

ಉಚಿತ ವಿಡಿಯೋ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್‌ ಈಗಾಗಲೇ ಹಲವು ರೀತಿಯ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ. ಬಳಕೆದಾರರಿಗೆ ಉತ್ತಮ ವೀಕ್ಷಣೆ ಅನುಭವ ನೀಡುವ ಉದ್ದೇಶದಿಂದ ಯೂಟ್ಯೂಬ್‌ ಕಾಲಕಾಲಕ್ಕೆ ಕೆಲವು ನವೀಕರಣ ಮಾಡುತ್ತಾ ಬರುತ್ತಿದ್ದು, ಇದರ ಬೆನ್ನಲ್ಲೇ ಹೊಸ ಫೀಚರ್ಸ್‌ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಆಪ್‌ನಲ್ಲಿ ಪ್ರೈಮ್‌ಟೈಮ್ ಚಾನೆಲ್‌ಗಳೊಂದಿಗೆ ಸ್ಟ್ರೀಮಿಂಗ್ ಸೇವೆ ಪಡೆಯಬಹುದಾಗಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ನಲ್ಲಿ ಮಾಹಿತಿ, ಮನರಂಜನೆ ಜೊತೆಗೆ ವಿವಿಧ ರೀತಿಯ ವಿಡಿಯೋ ನೋಡಲು ಅವಕಾಶ ಇದೆ. ಈಗ, ವಿಡಿಯೋ ಸ್ಟ್ರೀಮಿಂಗ್ ದೈತ್ಯ ಯಟ್ಯೂಬ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅದುವೇ ಯೂಟ್ಯೂಬ್ ಆಪ್‌ನಲ್ಲಿ ಹೊಸ ಸ್ಟ್ರೀಮಿಂಗ್ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವ 'ಪ್ರೈಮ್‌ಟೈಮ್ ಚಾನೆಲ್ಸ್‌' ಈ ಮೂಲಕ ಆಪ್‌ನಲ್ಲಿ ಟಿವಿ ಶೋಗಳು, ಚಲನಚಿತ್ರಗಳು, ಲೈವ್ ಟೆಲಿಕಾಸ್ಟ್‌ಗಾಗಿ ಸೈನ್ ಅಪ್ ಮಾಡಬಹುದು.

30 ಕ್ಕೂ ಹೆಚ್ಚು ಚಾನೆಲ್‌ ವೀಕ್ಷಿಸಬಹುದು

30 ಕ್ಕೂ ಹೆಚ್ಚು ಚಾನೆಲ್‌ ವೀಕ್ಷಿಸಬಹುದು

ಈ ಪ್ರೈಮ್‌ಟೈಮ್ ಚಾನೆಲ್‌ಗಳ ಮೂಲಕ ಬಳಕೆದಾರರು 30 ಕ್ಕೂ ಹೆಚ್ಚು ಚಾನೆಲ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇದರಲ್ಲಿ ಶೋಟೈಮ್, ಸ್ಟಾರ್ಜ್, ಪ್ಯಾರಾಮೌಂಟ್ +, ವಿಕ್ಸ್ +, ಟೆಸ್ಟ್‌‌ಮೇಡ್ + ಹಾಗೂ ಎಎಮ್‌ಸಿ + ಸೇರಿದಂತೆ ಇನ್ನಿತರೆ ಚಾನಲ್‌ ಗಳನ್ನು ನೀವು ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಈ ಚಾನಲ್‌ಗೆ ಯೂಟ್ಯೂಬ್‌ನಿಂದ ನೇರವಾಗಿ ಚಂದಾದಾರಿಕೆ ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ. ನಂತರ ಈ ಚಾನಲ್‌ಗಳು ಆಪ್‌ನ ಇಂಟರ್ಫೇಸ್‌ನ ಭಾಗವಾಗಿ ಲಭ್ಯವಿರುತ್ತವೆ ಎಂದು ಕಂಪೆನಿಯು ಅಧಿಕೃತವಾಗಿ ಮಾಹಿತಿ ನೀಡಿದೆ.

ಆಕರ್ಷಕ ಪೇಜ್

ಆಕರ್ಷಕ ಪೇಜ್

ಆಪ್‌ನಲ್ಲಿ ಪ್ರೈಮ್‌ಟೈಮ್ ಚಾನೆಲ್‌ಗೆ ಎಂಟ್ರಿಯಾದಾಗ ಅಲ್ಲಿ ನಿಮಗೆ ಅತ್ಯುತ್ತಮ ಅನುಭವ ಸಿಗಲಿದೆ. ಹಾಗೆಯೇ ಪ್ರೈಮ್‌ಟೈಮ್ ಚಾನೆಲ್ ಮೇನ್‌ ಪೇಜ್‌ನಲ್ಲಿ ಕ್ಯುರೇಟೆಡ್ ಟ್ರೇಲರ್‌ಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ಯಾವುದಾದರೂ ಕಂಟೆಟ್‌ ವಿಷಯದ ಕಡೆ ನೀವು ಗಮನಹರಿಸಿದರೆ ಅದರ ತೆರೆಮರೆಯ ದೃಶ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂದರ್ಶನಗಳು ಅಲ್ಲಿ ಡಿಸ್‌ಪ್ಲೇ ಆಗುತ್ತವೆ ಎಂದು ಯೂಟ್ಯೂಬ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಎನ್‌ಬಿಎ ಲೀಗ್ ಪಾಸ್

ಈ ಸೇವೆಗಳನ್ನು ನೀಡುವುದರ ಜೊತೆಗೆ ಇನ್ನಷ್ಟು ಫೀಚರ್ಸ್‌ ಅನ್ನು ಸೇರಿಸಲು ಯೂಟ್ಯೂಬ್‌ ಮುಂದಾಗಿದೆ. ಇದರ ಭಾಗವಾಗಿ ಎನ್‌ಬಿಎ ಲೀಗ್ ಪಾಸ್(NBA League Pass) ಮತ್ತು ಇನ್ನಿತರೆ ಹೆಚ್ಚಿನ ಸ್ಟ್ರೀಮಿಂಗ್ ಸೇವೆಗಳನ್ನು ಶೀಘ್ರದಲ್ಲೇ ಇದಕ್ಕೆ ಸೇರಿಸುವುದಾಗಿ ಕಂಪನಿ ಮಾಹಿತಿ ನೀಡಿದೆ.

ಚಂದಾದಾರಿಕೆ ಪಡೆಯುವುದು ಹೇಗೆ?

ಚಂದಾದಾರಿಕೆ ಪಡೆಯುವುದು ಹೇಗೆ?

ಯೂಟ್ಯೂಬ್‌ ಪರಿಚಯಿಸಿರುವ ಪ್ರೈಮ್‌ಟೈಮ್ ಚಾನೆಲ್‌ಗೆ ಭೇಟಿ ನೀಡಿದ ನಂತರ ಅಲ್ಲಿ ಚಲನಚಿತ್ರಗಳು ಹಾಗೂ ಟಿವಿ ಹಬ್‌ ಪುಟಕ್ಕೆ ಭೇಟಿ ನೀಡಬೇಕು. ಈ ವಿಭಾಗದಲ್ಲಿ ಯಾವ ಸ್ಟ್ರೀಮಿಂಗ್‌ ವಿಭಾಗಕ್ಕೆ ಎಷ್ಟು ಪಾವತಿ ಮಾಡಬೇಕು ಎಂಬ ಮಾಹಿತಿ ಲಭ್ಯವಾಗುತ್ತದೆ. ಅದರಂತೆ ನಿಮಗೆ ಬೇಕಾದ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು.

ಅಮೆಜಾನ್

ಇದರ ಹೊರತಾಗಿಯೂ ಪ್ರೈಮ್‌ಟೈಮ್ ಚಾನೆಲ್‌ನಲ್ಲಿ ಬಳಕೆದಾರರು ಅಮೆಜಾನ್ ಪ್ರೈಮ್ ವಿಡಿಯೋ ಸ್ಟೋರ್‌ನಲ್ಲಿ ಇತರ ಚಾನಲ್‌ಗಳಿಂದ ಚಲನಚಿತ್ರಗಳು ಮತ್ತು ಇನ್ನಿತರೆ ವಿಡಿಯೋಗಳನ್ನು ಪಾವತಿ ಮಾಡಿ ಪಡೆದುಕೊಳ್ಳುವ ಹಾಗೆಯೇ ಇಲ್ಲೂ ಸಹ ಪಾವತಿ ಮಾಡಿದ ವಿಡಿಯೋಗಳನ್ನು ಇತರೆ ಚಾನಲ್‌ಗಳಿಂದ ಪಡೆದುಕೊಂಡು ವೀಕ್ಷಣೆ ಮಾಡಬಹುದಾಗಿದೆ. ಈ ಕಾರ್ಯವನ್ನು ಕೇವಲ ಪ್ರೈಮ್‌ಟೈಮ್‌ ಚಾನಲ್‌ ಆಯ್ಕೆಯಲ್ಲಿ ಮಾತ್ರ ನಡೆಸಬಹುದಾಗಿದೆ.

ಯುಎಸ್‌ನಲ್ಲಿ ಮಾತ್ರ ಲಭ್ಯ

ಯುಎಸ್‌ನಲ್ಲಿ ಮಾತ್ರ ಲಭ್ಯ

ಇನ್ನು ಈ ಪ್ರೈಮ್‌ಟೈಮ್ ಚಾನೆಲ್‌ ಫೀಚರ್ಸ್‌ ಪ್ರಸ್ತುತ ಯುಎಸ್‌ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿನ ಬಳಕೆದಾರರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಇದರ ಹೊರತಾಗಿ ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಎಲ್ಲಾ ರಾಷ್ಟ್ರಗಳಿಗೂ ನೀಡುವ ಬಗ್ಗೆ ಯೂಟ್ಯೂಬ್‌ ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

Best Mobiles in India

English summary
YouTube being a free video platform has already received many updates. In between, a feature called Primetime Channel has been introduced.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X