ಯುಟ್ಯೂಬ್‌ ಪ್ಲಾಟ್‌ಫಾರ್ಮ್‌ ಸೇರಿದ ಉಪಯುಕ್ತ ಫೀಚರ್ಸ್‌! ವಿಶೇಷತೆ ಏನು?

|

ಗೂಗಲ್‌ ಒಡೆತನದ ಯೂಟ್ಯೂಬ್‌ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ವೀಡಿಯೋ ಮಾತ್ರವಲ್ಲದೆ ಮ್ಯೂಸಿಕ್‌ ಅನ್ನು ಒಳಗೊಂಡಿರುವ ಯೂಟ್ಯೂಬ್‌ ಬಳಕೆದಾರರ ನೆಚ್ಚಿನ ಮನರಂಜನೆಯ ತಾಣವಾಗಿದೆ. ಯೂಟ್ಯೂಬ್‌ನಲ್ಲಿ ಎಲ್ಲಾ ವಿಷಯಗಳ ವೀಡಿಯೊಗಳು ಲಭ್ಯವಾಗುತ್ತವೆ. ಇದೇ ಕಾರಣಕ್ಕೆ ಯೂಟ್ಯೂಬ್‌ ಕೂಡ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಹೊಸ ಆರೋಗ್ಯ-ಕೇಂದ್ರಿತ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಭಾರತದಲ್ಲಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಆರೋಗ್ಯ ಕೇಂದ್ರಿತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ತಾನು ನೀಡುವ ಆರೋಗ್ಯ ಮಾಹಿತಿಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಯೂಟ್ಯೂಬ್‌ಗೆ ಸಾಧ್ಯವಾಗಲಿದೆ. ಇದು ವಿಶ್ವಾಸಾರ್ಹ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರಿ ಘಟಕಗಳಿಂದ ವೀಡಿಯೊಗಳನ್ನು ಲೇಬಲ್ ಮಾಡುತ್ತದೆ ಎನ್ನಲಾಗಿದೆ. ಇದಲ್ಲದೆ ಬಳಕೆದಾರರು ಪರಿಶೀಲಿಸಿದ ಮೂಲಗಳಿಂದ ಡೇಟಾವನ್ನು ಗುರುತಿಸಬಹುದಾಗಿದೆ. ಹಾಗಾದ್ರೆ ಯೂಟ್ಯೂಬ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೂಟ್ಯೂಬ್‌

ಯೂಟ್ಯೂಬ್‌ ಪರಿಚಯಿಸಿರುವ ಹೊಸ ಆರೋಗ್ಯ ಕೇಂದ್ರಿತ ಫೀಚರ್ಸ್‌ಗಳು ವಿಶ್ವಾಸಾರ್ಹ ಮಾಹಿತಿಯನ್ನು ಲೇಬಲ್‌ ಮಾಡಲಿವೆ. ಇದಲ್ಲದೆ ಹೆಚ್ಚುವರಿಯಾಗಿ, ಸರ್ಚ್‌ ರಿಸಲ್ಟ್‌ ನಲ್ಲಿ ಅಧಿಕೃತ ಮೂಲಗಳಿಂದ ಬರುವ ವೀಡಿಯೊಗಳನ್ನು ಹೈಲೈಟ್ ಮಾಡುವ ಹೊಸ ಆರೋಗ್ಯ ವಿಷಯದ ಕಪಾಟನ್ನು ಕೂಡ ಸೇರಿಸಿ೯ದೆ. ಈ ಎರಡೂ ಹೊಸ ಫೀಚರ್ಸ್‌ಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಾಗಲಿವೆ. ಇನ್ನು ಭಾರತದಲ್ಲಿ ಹೊಸ ಆರೋಗ್ಯ ಮೂಲ ಮಾಹಿತಿ ಫಲಕಗಳು ಮತ್ತು ಆರೋಗ್ಯ ವಿಷಯದ ಶೆಲ್ಫ್‌ಗಳನ್ನು ಪ್ರಾರಂಭಿಸುವುದಾಗಿಯೂ ಕೂಡ ಯೂಟ್ಯೂಬ್‌ ಹೇಳಿಕೊಂಡಿದೆ.

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ಆರೋಗ್ಯ ಮೂಲ ಮಾಹಿತಿ ಪ್ಯಾನಲ್‌ ಫೀಚರ್ಸ್‌ ಅಧಿಕೃತ ಮೂಲಗಳಿಂದ ವೀಡಿಯೊಗಳನ್ನು ಗುರುತಿಸುತ್ತದೆ ಮತ್ತು ಅವುಗಳನ್ನು ಲೇಬಲ್ ಮಾಡುತ್ತದೆ. ಇದರಿಂದ ಯೂಟ್ಯೂಬ್‌ನಲ್ಲಿ ಆರೋಗ್ಯ-ಸಂಬಂಧಿತ ವಿಷಯವನ್ನು ಹುಡುಕುವ ಬಳಕೆದಾರರು ವಿಶ್ವಾಸಾರ್ಹ ವೀಡಿಯೊಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ. ಇದರಲ್ಲಿ ಮಾನ್ಯತೆ ಪಡೆದ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರಿ ಘಟಕಗಳಿಂದ ತಕ್ಷಣವೇ ವೀಡಿಯೊಗಳನ್ನು ತೆಗೆದುಕೊಳ್ಳುವಂತೆ ಮಾಡುವುದು ಯೂಟ್ಯೂಬ್‌ನ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಮಾನ್ಯತೆ ಪಡೆದ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ವೀಡಿಯೊಗಳು ಈ ಶೆಲ್ಫ್‌ಗಳಿಗೆ ಅರ್ಹವಾಗಿವೆ ಎನ್ನಲಾಗಿದೆ.

ಯೂಟ್ಯೂಬ್‌

ಇನ್ನು ಈ ಎರಡು ಹೊಸ ಆರೋಗ್ಯ-ಕೇಂದ್ರಿತ ಫೀಚರ್ಸ್‌ಗಳಿಗಾಗಿ US ನ್ಯಾಷನಲ್ ಅಕಾಡೆಮಿ ಆಫ್ ಮೆಡಿಸಿನ್ (NAM) ಮೂಲಕ ಸಂಯೋಜಿತ ತಜ್ಞರ ಸಮಿತಿಯು ಅಭಿವೃದ್ಧಿಪಡಿಸಿದ ತತ್ವಗಳನ್ನು ಬಳಸುತ್ತಿದೆ ಎಂದು ಯೂಟ್ಯೂಬ್‌ ಹೇಳಿದೆ. ಅಲ್ಲದೆ COVID-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಯೂಟ್ಯೂಬ್‌ ಮಾಹಿತಿಯ ವಿಶ್ವಾಸಾರ್ಹ ಮೂಲವಾಗಿದೆ ಎಂದು 69% ಬಳಕೆದಾರರು ಹೇಳಿದ್ದಾರೆ. ಇದೇ ಕಾರಣಕ್ಕೆ ಇನ್ನಷ್ಟು ವಿಶ್ವಾಸಾರ್ಹ ಮೂಲಗಳ ವೀಡಿಯೊಗಳನ್ನು ನೀಡಲು ಯೂಟ್ಯೂಬ್‌ ಮುಂದಾಗಿದೆ.

ಯೂಟ್ಯೂಬ್‌

ಇದಲ್ಲದೆ ಯೂಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಕಾರ್ಯನಿರ್ವಹಿಸುತ್ತಲೇ ಬಂದಿದೆ. ಈಗಾಗಲೇ ಈ ವರ್ಷದ ಆರಂಭದಲ್ಲಿ, ಹೊಸ ಸ್ಮಾರ್ಟ್ ಡೌನ್‌ಲೋಡ್‌ಗಳ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿರುವುದು ಕಂಡುಬಂದಿದೆ. ಈ ಸ್ಮಾರ್ಟ್ ಡೌನ್‌ಲೋಡ್‌ ಫೀಚರ್ಸ್‌ ಮೂಲಕ ವಾರಕ್ಕೆ 20 ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಇದು ಸೀಮಿತ ಚಂದಾದಾರರಿಗೆ ಸೀಮಿತ ಅವಧಿಗೆ ಪ್ರಾಯೋಗಿಕ ಲಭ್ಯವಿದೆ ಎಂದು ವರದಿಯಾಗಿದೆ. ಇನ್ನು ಯೂಟ್ಯೂಬ್‌ ಇದೇ ರೀತಿಯ ಬೆಳವಣಿಗೆಯಲ್ಲಿ, ಆಂಡ್ರಾಯ್ಡ್‌ ಮತ್ತು ಐಒಎಸ್‌ ನಲ್ಲಿ ಪ್ರೀಮಿಯಂ ಬಳಕೆದಾರರಿಗಾಗಿ ಯೂಟ್ಯೂಬ್‌ ಲಿಸನಿಂಗ್‌ ಕಂಟ್ರೋಲ್ಸ್‌ ಫೀಚರ್ಸ್‌ ಅನ್ನು ಹೊರತರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗ್ತಿದೆ. ಈ ಹೊಸ ಫೀಚರ್ಸ್‌ ಮೂಲಕ ಯೂಟ್ಯೂಬ್‌ನಲ್ಲಿ ಮ್ಯೂಸಿಕ್‌ ಆಲಿಸುವಾಗ ಬಳಕೆದಾರರಿಗೆ ಹೆಚ್ಚುವರಿ ಕಂಟ್ರೋಲ್ಸ್‌ ಅನ್ನು ನೀಡಲಿದೆ.

Best Mobiles in India

Read more about:
English summary
YouTube is bringing two new health-focused features to ensure the credibility of health information on its platform in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X