ವೀಡಿಯೋ ಲೈಕ್‌ ಮಾಡಿ ಹಣ ಗಳಿಸಿ! ಲಿಂಕ್‌ ಕ್ಲಿಕ್‌ ಮಾಡುವ ಮುನ್ನ ಇರಲಿ ಎಚ್ಚರ!

|

ನೀವು ಮನೆಯಲ್ಲಿಯೇ ಕುಳಿತು ಸುಲಭವಾಗಿ ಹಣಗಳಿಸಿ. ಆನ್‌ಲೈನ್‌ನಲ್ಲಿಯೇ ಹಣಗಳಿಸಲು ಹೀಗೆ ಮಾಡಿ, ಈ ರೀತಿ ಜನರನ್ನು ಸುಲಭವಾಗಿ ಯಾಮಾರಿಸುವ ಹಾಗೂ ಸೆಳೆಯುವ ಅನೇಕ ಸಂದೇಶಗಳನ್ನು ಸಾಮಾನ್ಯವಾಗಿ ಕಾಣಬಹುದು. ಇದೀಗ ಯುಟ್ಯೂಬ್‌ ಲಿಂಕ್‌ಗಳನ್ನು ಶೇರ್‌ ಮಾಡಿ ಸುಲಭವಾಗ ಹಣಗಳಿಸಿ ಎನ್ನುವ ಹೊಸ ಸ್ಕ್ಯಾಮ್‌ ಸೇರ್ಪಡೆಯಾಗಿದೆ. ವಾಟ್ಸಾಪ್‌ ಮೂಲಕ ಯುಟ್ಯೂಬ್‌ ಲಿಂಕ್‌ಗಳನ್ನು ಸೆಂಡ್‌ ಮಾಡುವ ವಂಚಕರು ಹಣ ಗಳಿಸುವುದಕ್ಕೆ ಅವಕಾಶ ಎಂದು ಹೇಳಿ ವಂಚನೆ ಮಾಡುತ್ತಿದ್ದಾರೆ.

ಯೂಟ್ಯೂಬ್‌

ಹೌದು, ವಾಟ್ಸಾಪ್‌ನಲ್ಲಿ ಯೂಟ್ಯೂಬ್‌ ಲಿಂಕ್‌ಗಳನ್ನು ಶೇರ್‌ ಮಾಡಿ ಹಣ ಗಳಿಸಿ ಎನ್ನುವ ಹೊಸ ಸ್ಕ್ಯಾಮ್‌ ಶುರುವಾಗಿದೆ. ಮನೆಯಲ್ಲಿಯೇ ಕುಳಿತಿರುವವರನ್ನೇ ಟಾರ್ಗೆಟ್‌ ಮಾಡುವ ವಂಚಕರು ಮನೆಯಿಂದಲೇ ಹಣ ಸಂಪಾದಿಸಲು ಅವಕಾಶ ಎಂಬಂತೆ ಬಿಂಬಿಸುತ್ತಾರೆ. ಇದಕ್ಕಾಗಿ ನೀವು ನಮ್ಮ ಯೂಟ್ಯೂಬ್‌ ಲಿಂಕ್‌ಗಳನ್ನು ಬೇರೆವರಿಗೆ ಶೇರ್‌ ಮಾಡ ಎಂದು ಹೇಳುತ್ತಾರೆ. ಹೀಗೆ ಮಾಡಿದರೆ ನಿಮಗೆ ಇಂತಿಷ್ಟು ಹಣ ನೀಡುತ್ತಿವೆ ಎನ್ನುವ ಆಸೆ ತೋರಿಸಿ ವಂಚಿಸುತ್ತಿದ್ದಾರೆ. ಹಾಗಾದ್ರೆ ವಾಟ್ಸಾಪ್‌ ಮೂಲಕ ಯೂಟ್ಯೂಬ್‌ ಲಿಂಕ್‌ ಕಳುಹಿಸಿ ಹೇಗೆ ವಂಚಿಸುತ್ತಿದ್ದಾರೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂಟ್ಯೂಬ್‌

ವಾಟ್ಸಾಪ್‌ನಲ್ಲಿ ಯೂಟ್ಯೂಬ್‌ ಲಿಂಕ್‌ ಕಳುಹಿಸುವ ವಂಚಕರು ಇದನ್ನು ಬೇರಯವರಿಗೆ ಶೇರ್‌ ಮಾಡಿ ಹಣ ಪಡೆಯಿರಿ ಎಂದು ಹೇಳುತ್ತಾರೆ. ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಯೂಟ್ಯೂಬ್‌ ಲಿಂಕ್‌ಗಳನ್ನು ಶೇರ್‌ ಮಾಡುವ ಬಳಕೆದಾರರು ನಂತರದ ಹಣಗಳಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಬಳಕೆದಾರರು ಯೂಟ್ಯೂಬ್‌ ವೀಡಿಯೊಗಳನ್ನು ಲೈಕ್‌ ಮಾಡಿದರೆ ಹಣ ನೀಡುವುದಾಗಿ ಹೇಳುತ್ತಾರೆ. ಅಲ್ಲದೆ ಪ್ರತಿ ಲೈಕ್‌ಗೆ 50 ರೂಪಾಯಿಗಳನ್ನು ನೀಡುವುದಾಗಿ ಆಮಿಷ ನೀಡುತ್ತಾರೆ. ಇದರಿಂದ ದಿನಕ್ಕೆ 5000ರೂ. ವರೆಗೆ ಹೆಚ್ಚುವರಿ ಆದಾಯವನ್ನು ಪಡೆಯಬಹುದು ಎಂದು ಆಸೆ ಹೆಚ್ಚಿಸುತ್ತಾರೆ.

ಜನರಿಗೆ

ಹೀಗೆ ಜನರಿಗೆ ಸುಲಭವಾಗಿ ಹಣಗಳಿಸುವ ಆಸೆ ಹುಟ್ಟಿಸುವ ವಂಚಕರು ನಂತರ ನಿಮ್ಮ ಅಕೌಂಟ್‌ಗೆ ಹಣ ಹಾಕುವುದಕ್ಕೆ ಮಾಹಿತಿ ಕೇಳುತ್ತಾರೆ. ನೀವು ನಿಮ್ಮ ಬ್ಯಾಂಕ್‌ ಖಾತೆಯ ವಿವರಗಳನ್ನು ಸಲ್ಲಿಸುತ್ತಿದ್ದ ಹಾಗೇ ನಿಮ್ಮ ಅಕೌಂಟ್‌ಗೆ ಪ್ರವೇಶ ಪಡೆದುಕೊಂಡು ನಿಮ್ಮ ಹಣವನ್ನು ಎಗರಿಸುತ್ತಾರೆ. ಕೆಲವು ಸಂದರ್ಭದಲ್ಲಿ ನಿಮ್ಮನ್ನು ದಾರಿ ತಪ್ಪಿಸುವ ಸಲುವಾಗಿ ಸ್ವಲ್ಪ ಮಟ್ಟಿಗಿನ ಹಣವನ್ನು ಕೂಡ ಪಾವತಿಸುತ್ತಾರೆ. ನಿಮ್ಮ ನಂಬಿಕೆಯನ್ನು ಗಳಿಸಿಕೊಂಡ ನಂತರ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಕಬಳಿಸುತ್ತಾರೆ ಎಂದು ವರದಿಯಾಗಿದೆ.

ಯೂಟ್ಯೂಬ್‌

ನೀವು ಯೂಟ್ಯೂಬ್‌ ವೀಡಿಯೋಗಳನ್ನು ಲೈಕ್‌ ಮಾಡಲು ಶುರುಮಾಡಿದ ಪ್ರಾರಂಭದಲ್ಲಿ ಸಣ್ಣ ಮೊತ್ತವನ್ನು ಕಳುಹಿಸುತ್ತಾರೆ. ನಂತರ ಹೆಚ್ಚಿನ ಮೊತ್ತದ ಹಣವನ್ನು ಪಾವತಿಸಲು ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡುವಂತೆ ಕೇಳುತ್ತಾರೆ. ಇಲ್ಲಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡ್ತಿದ್ದ ಹಾಗೇ ನಿಮ್ಮ ಸ್ಮಾರ್ಟ್‌ಫೋನ್ ಟ್ರೋಜನ್ ಅಥವಾ ಮಾಲ್‌ವೇರ್‌ ಸೋಂಕಿಗೆ ಒಳಗಾಗುತ್ತದೆ. ನಂತರ ನಿಮ್ಮ ಖಾತೆಯಿಂದ ಪರಿಶೀಲನೆಗಾಗಿ ಒಂದು ರೂ ಹಣ ಕಳುಹಿಸಲು ಕೇಳುತ್ತಾರೆ. ನೀವು ಹಣ ವರ್ಗಾವಣೆ ಮಾಡ್ತಿದ್ದ ಹಾಗೇ ನಿಮ್ಮ ಎಲ್ಲಾ ಡೇಟಾ ಮಾಹಿತಿಯನ್ನು ಕದಿಯುತ್ತಾರೆ.

ಅಲ್ಲದೆ

ಅಲ್ಲದೆ ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ ಪಡೆದ ನಂತರ ಅವರ ಅಕೌಂಟ್‌ ಅನ್ನು ಡಿಲೀಟ್‌ ಮಾಡಿಕೊಳ್ಳುವ ಮೂಲಕ ನಿಮ್ಮ ದಾರಿ ತಪ್ಪಿಸುತ್ತಾರೆ. ಹೀಗೆ ನಕಲಿ ಲಿಂಕ್‌ಗಳನ್ನು ಸೆಂಡ್‌ ಮಾಡುವ ಮೂಲಕ ಹಣ ವಂಚಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರಿಂದ ವಾಟ್ಸಾಪ್‌ನಲ್ಲಿ ಶೇರ್‌ ಆಗುವ ವೀಡಿಯೊ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಜೊತೆಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಲಿಂಕ್‌ಗಳನ್ನು ನಿರ್ಲಕ್ಷಿಸುವುದು ಸೂಕ್ತವಾಗಿದೆ. ಹಣದ ಆಸೆಗೆ ಬಿದ್ದು ಲಿಂಕ್‌ ಕ್ಲಿಕ್‌ ಮಾಡಿದರೆ ಭಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Best Mobiles in India

English summary
YouTube Likes Scams on WhatsApp; Beware!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X