ಹೊಸ ಡೌನ್‌ಲೋಡ್‌ ಶಾರ್ಟ್‌ಕಟ್‌ ಪರಿಚಯಿಸಿದ ಯೂಟ್ಯೂಬ್‌ ಮ್ಯೂಸಿಕ್‌!

|

ಗೂಗಲ್‌ ಒಡೆತನದ ಯೂಟ್ಯೂಬ್‌ ಜನಪ್ರಿಯ ವೀಡಿಯೋ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಯಾವುದೇ ವಿಷಯದ ಮಾಹಿತಿ ಬೇಕಿದ್ದರೂ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಯೂಟ್ಯೂಬ್‌ನಲ್ಲಿ ವೀಡಿಯೋ ಮಾತ್ರವಲ್ಲದೆ ಆಡಿಯೋ ಕೂಡ ಲಭ್ಯವಾಗಲಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಯೂಟ್ಯೂಬ್‌ ಅಪ್ಲಿಕೇಶನ್‌ ಅನ್ನು ಬಳಸುತ್ತಾರೆ. ಇನ್ನು ಯೂಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಯೂಟ್ಯೂಬ್‌ ಮ್ಯೂಸಿಕ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಹೊಸ ಶಾರ್ಟ್‌ಕಟ್‌ ಅನ್ನು ಪರಿಚಯಿಸಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ ಮ್ಯೂಸಿಕ್‌ ಅಂಡ್ರಾಯ್ಡ್‌ ಅಪ್ಲಿಕೇಶನ್‌ ಹೊಸ ಡೌನ್‌ಲೋಡ್‌ ಶಾರ್ಟ್‌ಕಟ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಅಪ್ಲಿಕೇಶನ್‌ನ ಸ್ಮಾರ್ಟ್ ಡೌನ್‌ಲೋಡ್ ಫೀಚರ್ಸ್‌ನಿಂದ ಕ್ರಿಯೆಟ್‌ ಮಾಡಲಾದ ಪ್ಲೇ ಲಿಸ್ಟ್‌ನಲ್ಲಿರುವ ಹಾಡುಗಳನ್ನು ತ್ವರಿತವಾಗಿ ಪ್ಲೇ ಮಾಡಲು ಅನುಮತಿಸುತ್ತದೆ. ಇನ್ನು ಈ ಹೊಸ ಶಾರ್ಟ್‌ಕರ್ಟ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಿದೆ. ಇನ್ನುಳಿದಂತೆ ಯೂಟ್ಯೂಬ್‌ ಪರಿಚಯಿಸಿರುವ ಹೊಸ ಶಾರ್ಟ್‌ಕಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮ್ಯೂಸಿಕ್‌

ಯೂಟ್ಯೂಬ್‌ ಮ್ಯೂಸಿಕ್‌ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಡೌನ್‌ಲೋಡ್‌ ಶಾರ್ಟ್‌ಕಟ್‌ ಅನ್ನು ಸೇರಿಸಲಾಗಿದೆ. ಇದರಿಂದ ನೀವು ಆಫಲೈನ್‌ನಿಲ್ಲಿದ್ದಾಗಲೂ ಡೌನ್‌ಲೋಡ್‌ ಮಾಡಿದ ವೀಡಿಯೋಗಳನ್ನು ತ್ವರಿತವಾಗಿ ಪ್ಲೇ ಮಾಡುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಅಪ್ಲಿಕೇಶನ್‌ನಲ್ಲಿ ಶಫಲ್ ಮಾಡಿದ ಮ್ಯೂಸಿಕ್‌ ಅನ್ನು ಪ್ಲೇ ಮಾಡಲು ಇದು ವೇಗವಾದ ಮಾರ್ಗವನ್ನು ನೀಡುತ್ತದೆ. ಅಲ್ಲದೆ ಡೌನ್‌ಲೋಡ್ ಮಾಡಿದ ಮ್ಯೂಸಿಕ್‌ ಅನ್ನು ಕೇವಲ ಒಂದು ಟ್ಯಾಪ್‌ನಲ್ಲಿ ಪ್ಲೇ ಮಾಡಬಹುದು. ಇದನ್ನು ಹೋಮ್‌ಸ್ಕ್ರೀನ್‌ನಲ್ಲಿ ಕೂಡ ಡ್ರ್ಯಾಗ್ ಮಾಡಬಹುದು.

ಡೌನ್‌ಲೋಡ್

ಇನ್ನು ಈ ಶಾರ್ಟ್‌ಕಟ್‌ನಿಂದ ಡೌನ್‌ಲೋಡ್ ಮಾಡಿದ ಹಾಡುಗಳನ್ನು ಸುಲಭವಾಗಿ ಆಲಿಸಬಹುದು. ಯೂಟ್ಯೂಬ್ ಮ್ಯೂಸಿಕ್‌ನ ಸ್ಮಾರ್ಟ್ ಡೌನ್‌ಲೋಡ್ ಫೀಚರ್ಸ್‌ನಿಂದ ಡೌನ್‌ಲೋಡ್ ಮಾಡಲಾದ ಹಾಡುಗಳನ್ನು ಪ್ಲೇ ಮಾಡಲು ಆಂಡ್ರಾಯ್ಡ್‌ನಲ್ಲಿ ಯೂಟ್ಯೂಬ್‌ ಮ್ಯೂಸಿಕ್‌ ಅಪ್ಲಿಕೇಶನ್ ಐಕಾನ್ ಅನ್ನು ಲಾಂಗ್‌ಪ್ರೆಸ್‌ ಟ್ಯಾಪ್ ಮಾಡಬೇಕಾಗುತ್ತದೆ. ಇದು ಎರಡು ಶಾರ್ಟ್‌ಕಟ್‌ಗಳನ್ನು ಹೊಂದಿದೆ. ಇದರಲ್ಲಿ ಡೌನ್‌ಲೋಡ್‌ ಮತ್ತು ಸರ್ಚ್‌ ಸೇರಿವೆ. ಡೌನ್‌ಲೋಡ್‌ಗಳ ಆಯ್ಕೆಯನ್ನು ಟ್ಯಾಪ್ ಮಾಡಿದಾಗ ಆಫ್‌ಲೈನ್ ಮಿಕ್ಸ್‌ಟೇಪ್ ನಿಂದ ಡೌನ್‌ಲೋಡ್ ಮಾಡಿದ ಟ್ರ್ಯಾಕ್‌ಗಳಿಂದ ಹಾಡುಗಳನ್ನು ಪ್ಲೇ ಮಾಡಲು ಪ್ರಾರಂಭಿಸುತ್ತದೆ. ಈ ಹೊಸ ಶಾರ್ಟ್‌ಕಟ್‌ನಿಂದಾಗಿ ಹಾಡುಗಳನ್ನು ಪ್ಲೇ ಮಾಡಲು ಬಳಕೆದಾರರು ಡೌನ್‌ಲೋಡ್‌ಗಳ ಪುಟಕ್ಕೆ ನ್ಯಾವಿಗೇಟ್ ಮಾಡುವ ಅಗತ್ಯವಿಲ್ಲ.

ಯೂಟ್ಯೂಬ್‌

ಇದಲ್ಲದೆ ಯೂಟ್ಯೂಬ್‌ ಇತ್ತೀಚಿಗೆ ತನ್ನ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ಗಳಲ್ಲಿ ಹೊಸ ವೀಡಿಯೊ ಪ್ಲೇಯರ್ ಪರಿಚಯಿಸಿದೆ. ತನ್ನ ವೀಡಿಯೊ ಪ್ಲೇಯರ್‌ನಲ್ಲಿ ಯೂಸರ್‌ ಇಂಟರ್ಫೇಸ್ (UI) ಬಟನ್‌ ಸೇರಿಸುತ್ತಿದೆ. ಇದರಿಂದ ಫುಲ್‌ ಸ್ಕ್ರೀನ್‌ಮೋಡ್‌ನಲ್ಲಿಯೂ ಕೂಡ ಹಲವು ಆಯ್ಕೆಯ ಬಟನ್‌ಗಳನ್ನು ಕಾಣಬಹುದಾಗಿದೆ. ಹೊಸ ಯೂಸರ್‌ ಇಂಟರ್‌ಫೇಸ್‌ ನ ಬಟನ್‌ಗಳು ಯೂಟ್ಯೂಬ್‌ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಫುಲ್‌ ಸ್ಕ್ರೀನ್‌ ಮೋಡ್‌ನಲ್ಲಿ ಗೋಚರಿಸುತ್ತವೆ. ಇದರಲ್ಲಿ ಲೈಕ್‌ ಅಥವಾ ಡಿಸ್‌ಲೈಕ್‌, ಕಾಮೆಂಟ್‌ಗಳನ್ನು ಸೇರಿಸಲು ಬಟನ್‌ಗಳು ಸೇರಿವೆ.

ವೀಡಿಯೋ

ಯೂಟ್ಯೂಬ್‌ ತನ್ನ ವೀಡಿಯೋ ಪ್ಲೇಯರ್‌ ವಿಂಡೋದಲ್ಲಿ ಹೊಸ ಯೂಸರ್‌ ಇಂಟರ್‌ಫೇಸ್‌ ಬಟನ್‌ಗಳನ್ನು ಪರಿಚಯಿಸಿದೆ. ಈ ಬಟನ್‌ಗಳು ನಿಮ್ಮ ವೀಡಿಯೋ ವೀಕ್ಷಣೆಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಜೊತೆಗೆ ವೀಡಿಯೊಗಳೊಂದಿಗೆ ಸಂವಹನವನ್ನು ಮೊದಲಿಗಿಂತ ಸುಲಭವಾಗಿಸಲಿದೆ. ಇನ್ನು ಈ ಹೊಸ ಬಟನ್‌ಗಳಲ್ಲಿ ಲೈಕ್ಸ್‌, ಡಿಸ್‌ಲೈಕ್ಸ್‌, ಕಾಮೆಂಟ್‌ಗಳು, ಪ್ಲೇ ಲಿಸ್ಟ್‌ನಲ್ಲಿ ಸೇವ್‌ ಮಾಡಲು ಮತ್ತು ಶೇರ್‌ಮಾಡುವುದಕ್ಕೆ ಶಾರ್ಟ್‌ಕಟ್‌ಗಳನ್ನು ಒಳಗೊಂಡಿವೆ. ಜೊತೆಗೆ ಈ ಬಟನ್‌ಗಳು ಫುಲ್‌ ಸ್ಕ್ರೀನ್‌ ಮೋಡ್‌ನಲ್ಲಿ ವೀಡಿಯೊ ಪ್ಲೇಯರ್‌ನ ಕೆಳಗಿನ ಎಡ ಮೂಲೆಯಲ್ಲಿ ಗೋಚರಿಸುತ್ತವೆ.

Best Mobiles in India

English summary
YouTube Music Gets ‘Downloads’ Shortcut on Android App to Quickly Play Songs Offline

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X