ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ವಿಡಿಯೋಗಳಿಗೆ ಯೂಟ್ಯೂಬ್‌ನಿಂದ ಸ್ಪರ್ಧೆ

By GizBot Bureau
|

ಭಾರತದಲ್ಲಿ ಒರಿಜಿನಲ್ ವೀಡಿಯೋಗಳನ್ನ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲರೂ ಹೆಚ್ ಡಿ ವೀಡಿಯೋ ಪ್ರಿಯರಾಗಿದ್ದಾರೆ. ಆ ನಿಟ್ಟಿನಲ್ಲಿ ಅಮೇಜಾನ್ ವೀಡಿಯೋ ಮತ್ತು ನೆಟ್ ಫ್ಲಿಕ್ಸ್ ಗಳು ಗ್ರಾಹಕರ ಬೇಡಿಕೆ ತಕ್ಕಂತೆ ಇವೆ. ಹಾಗಾಗಿ ಯುಟ್ಯೂಬ್ ನ‌ ಜನಪ್ರೀಯತೆ ಮೇಲೆ ಪೆಟ್ಟು ಬೀಳುತ್ತಿದೆ. ಹಾಗಾಗಿ ಈ ಸಮಸ್ಯೆಯಿಂದ ಪಾರಾಗಲು ಯುಟ್ಯೂಬ್ ಯೋಚಿಸುತ್ತಿರುವಂತೆ ಕಾಣುತ್ತಿದೆ.

ಮೂಲ ಪ್ರೋಗ್ರಾಮಿಂಗ್ ನ‌ ಜಾಗತಿಕ‌ ಮುಖ್ಯಸ್ಥ ರಾಗಿರುವ ಸುಸೇನ್ ಡೇನಿಯಲ್ ಶುಕ್ರವಾರ ಸಂದರ್ಶನದಲ್ಲಿ ಮಾತನಾಡಿದ್ದಾರೆ ಮತ್ತು ಹಾಡುಗಳು, ಡಾಕ್ಯುಮೆಂಟರಿಗಳು, ರಿಯಾಲಿಟಿ ಶೋಗಳು, ನಾಟಕಗಳು, ಟಾಕ್ ಶೋ ಗಳು ಇತ್ಯಾದಿಗಳೆಲ್ಲವು ಯುಟ್ಯೂಬ್ ನ ಈ ಕಾರ್ಯಕ್ರಮದಲ್ಲಿ ಒಳಪಡುತ್ತದೆ ಎಂದು ತಿಳಿಸಿದ್ದಾರೆ.

ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ವಿಡಿಯೋಗಳಿಗೆ  ಯೂಟ್ಯೂಬ್‌ನಿಂದ ಸ್ಪರ್ಧೆ

ಯುಟ್ಯೂಬ್ ಕೇವಲ ಭಾರತದಲ್ಲಿ ಮಾತ್ರವಲ್ಲ ಇತರೆ ದೇಶಗಳಲ್ಲೂ ಕೂಡ ಇದೇ ರೀತಿಯ ಕೋರ್ಸ್ ಮಾಡಲು ಯೋಚಿಸುತ್ತಿದೆ.ಫ್ರಾನ್ಸ್, ಜರ್ಮನ್, ಮೆಕ್ಸಿಕೋ ಗಳಲ್ಲೂ ಯುಟ್ಯೂಬ್ ಹೊಸ ಪ್ರೊಗ್ರಾಮಿಂಗ್ ಮಾಡುವ ಆಲೋಚನೆ ಮಾಡಿದೆ. ಯುಟ್ಯೂಬ್ ಮಾಡುವ ಕೆಲವು ಪ್ರೊಗ್ರಾಮಿಂಗ್ ಗಳು ಯುಟ್ಯೂಬ್ ಚಂದಾದಾರರ ಫ್ಲಾಟ್ ಫಾರ್ಮ್ ಯುಟ್ಯೂಬ್ ಪ್ರೀಮಿಯಂನಲ್ಲೂ ( ಯುಟ್ಯೂಬ್ ರೆಡ್) ಕಾಣಿಸುತ್ತದೆ.

ಇತರೆ ಕಟೆಂಟ್ ಗಳು ಯುಟ್ಯೂಬ್ ನ ಉಚಿತ ಸೇವೆಗಳಲ್ಲಿ ಲಭ್ಯವಾಗುತ್ತದೆ ಜೊತೆಗೆ ಜಾಹಿರಾತು ಗಳಲ್ಲೂ ಇರಲಿವೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.
ಜಾಗತಿಕವಾಗಿ ಕಂಪೆನಿಯ ಮೂಲ ಕಂಟೆಂಟ್ ಗಳು ಯುಟ್ಯೂಬ್ ನ ಮೂಲ ಬ್ಯಾನರ್ ನಲ್ಲೆ ಸಿಗುತ್ತದೆ ಮತ್ತು ಉಳಿದಂತೆ ಕೆಲವು ಯುಟ್ಯೂಬ್ ಪ್ರೀಮಿಯಂನಲ್ಲಿ ಲಭ್ಯವಾಗುತ್ತದೆ.

ಸದ್ಯ ಇದು ಭಾರತದಲ್ಲಿ ಲಭ್ಯವಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.ಈ ಕಾರ್ಯಕ್ರಮಗಳು ಶ್ರೇಷ್ಠ ಯೂಟ್ಯೂಬ್ ಸೃಷ್ಟಿಕರ್ತರು ಮತ್ತು ಜನಪ್ರಿಯ ಕಲಾವಿದರನ್ನು ಒಳಗೊಂಡ ಸಾಕ್ಷ್ಯಚಿತ್ರಗಳೊಂದಿಗೆ ಜೊತೆಗೆ ಹಾಸ್ಯಪ್ರಸಾರ ಮತ್ತು ಪ್ರಶಸ್ತಿ-ವಿಜೇತ ನಟರನ್ನು ಒಳಗೊಂಡ ನಾಟಕಗಳಿಂದ ಕೂಡಿರುತ್ತದೆ.

ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ ವಿಡಿಯೋಗಳಿಗೆ  ಯೂಟ್ಯೂಬ್‌ನಿಂದ ಸ್ಪರ್ಧೆ

ಈಗಾಗಲೇ ವಿಶೇಷ ಪ್ರೋಗ್ರಾಮಿಂಗ್ ಮಾದರಿಯ ವೀಡೀಯೋಗಳನ್ನ ಯೂಟ್ಯೂಬ್ ಹಿಂದಿಯ ಕ್ರೀಡೆಯ ಕಾರ್ಯಕ್ರವಾಗಿರುವ "ಅನ್- ಕ್ರಿಕೆಟ್" ನಲ್ಲಿ ಪರೀಕ್ಷೆ ಮಾಡಿದೆ ಮತ್ತು ಅದು ಅತ್ಯದ್ಭುತ ಯಶಸ್ಸು ಗಳಿಸಿದೆ ಎಂದು ಡೇನಿಯಲ್‌ ತಿಳಿಸಿದ್ದಾರೆ.ದಕ್ಷಿಣ ಕೊರಿಯಾದ ಮೂಲ ಪ್ರೋಗ್ರಾಮಿಂಗ್ನಲ್ಲಿ ಕಂಪೆನಿಯು ಈಗಾಗಲೇ ಭಾಗವಹಿಸಿದೆ ಮತ್ತು ದಕ್ಷಿಣ ಕೊರಿಯಾದ ಪಾಪ್ ಬ್ಯಾಂಡ್ ಬ್ಯಾಗ್ ಬ್ಯಾಂಗ್ ರಿಯಾಲಿಟಿ ಶೋ ವೇದಿಕೆಯಿಂದಾಗಿ ಸಾಕಷ್ಟು ಚಂದಾದಾರಿಕೆಗಳನ್ನು ಕಂಪೆನಿ ಹೆಚ್ಚಿಸಿಕೊಂಡಿದೆ.

ಕೆ-ಪಾಪ್ ವಿದ್ಯಮಾನವು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿರುವುದರಿಂದ, 50 ಪ್ರತಿಶತದಷ್ಟು ಹೊಸ ಗ್ರಾಹಕರು ದೇಶದ ಹೊರಗಿನಿಂದಲೂ ಬಂದಿದ್ದಾರೆ ಎಂದು ಡೇನಿಯಲ್ಸ್ ಹೇಳಿದ್ದಾರೆ. ಒಟ್ಟಾರೆ ಯುಟ್ಯೂಬ್ ಹೊಸ ಕೆಲಸಕ್ಕೆ ಮುಂದಾಗಿದೆ. ಆದರೆ ಇದರ ರೂಪುರೇಷೆ ಭಾರತದಲ್ಲಿ ಹೇಗಿರಲಿದೆ ಎಂಬ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಬಹುದು.

Best Mobiles in India

English summary
YouTube Plans Original Video Content in India to Take on Netflix, Amazon Prime. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X