ಯುಟ್ಯೂಬ್‌ ಪ್ಲಾಟ್‌ಫಾರ್ಮ್‌ ಸೇರಿದ ಅಚ್ಚರಿಯ ಫೀಚರ್ಸ್‌! ವಿಶೇಷತೆ ಏನು ಗೊತ್ತಾ?

|

ಗೂಗಲ್‌ ಒಡೆತನದ ಯೂಟ್ಯೂಬ್‌ ಬಳಕೆದಾರರ ನೆಚ್ಚಿನ ವೀಡಿಯೊ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಮ್ಯೂಸಿಕ್‌ ಮತ್ತು ವಿಡಿಯೋ ಎರಡನ್ನು ಕೂಡ ಯೂಟ್ಯೂಬ್‌ ನಲ್ಲಿ ಅನುಭವಿಸಬಹುದಾಗಿದೆ. ಅಲ್ಲದೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೂ ಯೂಟ್ಯೂಬ್‌ನಲ್ಲಿ ಪಡೆದುಕೊಳ್ಳಬಹುದು. ಇದೇ ಕಾರಣಕ್ಕೆ ಯೂಟ್ಯೂಬ್‌ ಕೂಡ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ತನ್ನ ಆಟೋ ಲೈವ್‌ಸ್ಟ್ರೀಮ್‌ ಕ್ಯಾಪ್ಶನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಯೂಟ್ಯೂಬ್

ಹೌದು, ಯೂಟ್ಯೂಬ್ ತನ್ನ ಆಟೋ ಲೈವ್‌ಸ್ಟ್ರೀಮ್ ಕ್ಯಾಪ್ಶನ್‌ ಫೀಚರ್ಸ್‌ ಅನ್ನು ಎಲ್ಲಾ ವೀಡಿಯೊ ಕ್ರಿಯೆಟರ್ಸ್‌ಗಳಿಗೂ ಪರಿಚಯಿಸಿದೆ. ಇದಕ್ಕಾಗಿ ಯೂಟ್ಯೂಬ್‌ ಹೊಸ ಅಪ್ಡೇಟ್‌ಗಳನ್ನು ಘೋಷಣೆ ಮಾಡಿದೆ. ಈ ಹೊಸ ಫೀಚರ್ಸ್‌ನಿಂದ ಬಳಕೆದಾರರಿಗೆ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಸುಲಭವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಲೈವ್‌ ಆಟೋ ಕ್ಯಾಪ್ಶನ್‌ ಇಂಗ್ಲಿಷ್‌ ಮಾತ್ರವಲ್ಲದೆ 12 ಭಾಷೆಗಳಲ್ಲಿ ಲಭ್ಯವಾಗಲಿದೆ ಅನ್ನೊದನ್ನ ಯುಟ್ಯೂಬ್‌ ಕೂಡ ದೃಡಪಡಿಸಿದೆ. ಹಾಗಾದ್ರೆ ಯೂಟ್ಯೂಬ್‌ನ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯೂಟ್ಯೂಬ್‌

ಯೂಟ್ಯೂಬ್‌ ಆಟೋ ಲೈವ್‌ಸ್ಟ್ರೀಮ್‌ ಕ್ಯಾಪ್ಶನ್‌ ಫೀಚರ್ಸ್‌ ಇದೀಗ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ. ಇನ್ನು ಈ ಫೀಚರ್ಸ್‌ ಇದೀಗ ಕೇವಲ ಇಂಗ್ಲಿಷ್ ಬದಲಿಗೆ 12 ಭಾಷೆಗಳಲ್ಲಿ ಲಭ್ಯವಿರುವುದನ್ನು ಕಂಪನಿ ದೃಡಪಡಿಸಿದೆ. ಇದರಲ್ಲಿ ಇತರ ಅಪ್ಡೇಟ್‌ಗಳು, ಮಲ್ಟಿ ಲ್ಯಾಂಗ್ವೇಜ್‌ ಬೆಂಬಲಿಸಲು ವೀಡಿಯೊಗೆ ಮಲ್ಟಿ ಆಡಿಯೋ ಟ್ರ್ಯಾಕ್‌ಗಳನ್ನು ಸೇರಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.

ಯೂಟ್ಯೂಬ್

ಇದಲ್ಲದೆ ಹೆಚ್ಚುವರಿಯಾಗಿ, ಸ್ಮಾರ್ಟ್‌ಫೋನ್‌ಗಳಲ್ಲಿ ಯೂಟ್ಯೂಬ್ ಈಗ ಆಟೋ-ಟ್ರಾನ್ಸ್‌ಲೇಶನ್‌ ಕ್ಯಾಪ್ಶನ್‌ ಫೀಚರ್ಸ್‌ ಅನ್ನು ಸಹ ಬೆಂಬಲಿಸಲಿದೆ. ಅಲ್ಲದೆ ಮುಂದಿನ ಕೆಲವು ತಿಂಗಳಲ್ಲಿ ಲೈವ್ ಮತ್ತು ಆಟೋ-ಟ್ರಾನ್ಸ್‌ಲೇಶನ್ ಕ್ಯಾಪ್ಶನ್‌ಗಳಿಗೆ ವಿಸ್ತರಿಸಿದ ಭಾಷಾ ಬೆಂಬಲವು ಇರಲಿದೆ ಎಂದು ಯೂಟ್ಯೂಬ್‌ ದೃಡಪಡಿಸಿದೆ. ಹಾಗೆಯೇ ಯೂಟ್ಯೂಬ್ ಮಲ್ಟಿಪಲ್ ಆಡಿಯೋ ಟ್ರ್ಯಾಕ್‌ಗಳ ಫೀಚರ್ಸ್‌ "ಮುಂಬರುವ ತ್ರೈಮಾಸಿಕಗಳಲ್ಲಿ" ಹೆಚ್ಚು ವ್ಯಾಪಕವಾಗಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಇನ್ನು ಮೊಬೈಲ್ ಡಿವೈಸ್‌ಗಳಲ್ಲಿ ವೀಡಿಯೋ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಹುಡುಕಲು ಬಳಕೆದಾರರಿಗೆ ಅವಕಾಶ ನೀಡುವ ಮೂಲಕ "ಎಕ್ಸ್ ಪೆರಿಮೆಂಟ್" ಮಾಡಲು ಯೋಜಿಸಲಾಗಿದೆ ಎಂದು ಯೂಟ್ಯೂಬ್‌ ಘೋಷಿಸಿದೆ.

ಯೂಟ್ಯೂಬ್

ಇನ್ನು ಯೂಟ್ಯೂಬ್ ಸಬ್‌ಟೈಟಲ್ ಎಡಿಟರ್ ಪರ್ಮಿಶನ್ ಫೀಚರ್‌ನಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ. ಇದು ಕ್ರಿಯೆಟರ್ಸ್‌ಗಳು ತಮ್ಮ ವೀಡಿಯೊಗಳಿಗೆ ಸಬ್‌ಟೈಟಲ್‌ಗಳನ್ನು ಸೇರಿಸಲು ಅನುಮತಿಸಲಿದೆ. ಅಷ್ಟೇ ಅಲ್ಲ ಇತರ ಬಳಕೆದಾರರನ್ನು ಗೊತ್ತುಪಡಿಸಲು ಅನುವು ಮಾಡಿಕೊಡುತ್ತದೆ. ಯೂಟ್ಯೂಬ್‌ನಿಂದ ತೆಗೆದುಹಾಕಲಾದ ಕಮ್ಯೂನಿಟಿ ಕ್ಯಾಪ್ಶನ್‌ಗಳ ಫೀಚರ್ಸ್‌ ಅನ್ನು ಈ ಫೀಚರ್ಸ್‌ ಬದಲಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ಯುಟ್ಯೂಬ್ ತನ್ನ ವರ್ಷಾಂತ್ಯದ 'ರಿವೈಂಡ್' ವೀಡಿಯೋಗಳನ್ನು ಕ್ರಿಯೆಟ್‌ ಮಾಡುವ ಸಂಪ್ರದಾಯವನ್ನು ಕೊನೆಗೊಳಿಸಲು ನಿರ್ಧರಿಸಿದೆ.

ಯೂಟ್ಯೂಬ್‌

ಇದಲ್ಲದೆ ಇತ್ತೀಚಿಗಷ್ಟೇ ಯೂಟ್ಯೂಬ್‌ ಬಳಕೆದಾರರರಿಗೆ ಕಂಟಿನ್ಯೂ ವಾಚಿಂಗ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಒಂದು ನಿಫ್ಟಿ ಫೀಚರ್‌ ಆಗಿದೆ. ನೀವು ಅರ್ಧಕ್ಕೆ ನಿಲ್ಲಿಸಿರುವ ವೀಡಿಯೋವನ್ನು ಮಿನಿ ಪ್ಲೇಯರ್‌ನಲ್ಲಿ ತೋರಿಸುವ ಕೆಲಸವನ್ನು ಇದು ಮಾಡಲಿದೆ. ವೀಡಿಯೋ ವೀಕ್ಷಣೆ ನಂತರ ಪಟ್ಟಿಗೆ ಹಸ್ತಚಾಲಿತವಾಗಿ ವೀಡಿಯೊವನ್ನು ಸೇರಿಸುವುದಕ್ಕಿಂತ ಅಥವಾ YouTube ವೆಬ್‌ಸೈಟ್‌ನಲ್ಲಿ ಇತಿಹಾಸ ವಿಭಾಗಕ್ಕೆ ಹೋಗುವುದಕ್ಕಿಂತ ಇದು ಉತ್ತಮವಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ 'ಕಂಟಿನ್ಯೂ ವೀಕ್ಷಣೆ' ಫೀಚರ್ಸ್‌ ಅನ್ನು ಹೊರತರಲು ಆರಂಭಿಸಿದೆ. ಇದು ಯೂಟ್ಯೂಬ್ ಮೊಬೈಲ್ ಆಪ್ ನಲ್ಲಿ ನೀವು ನೋಡಲು ಆರಂಭಿಸಿದ ಆದರೆ ಅದನ್ನು ಮಧ್ಯದಲ್ಲಿ ಬಿಟ್ಟಿರುವ ವೀಡಿಯೋಗಾಗಿ ಮಿನಿ-ಪ್ಲೇಯರ್ ತೋರಿಸಲಿದೆ.

ಯೂಟ್ಯೂಬ್

ಇನ್ನು ಕೆಲದಇನಗಳ ಹಿಂದೆಯಷ್ಟೇ ಯೂಟ್ಯೂಬ್ ತಾಣವು ನೂತನವಾಗಿ ನಿಫ್ಟಿ ಫೀಚರ್ ಪರಿಚಯಿಸಿದೆ. ಬಳಕೆದಾರರು ಈ ಆಯ್ಕೆಯ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ 100 ಕ್ಕೂ ಹೆಚ್ಚು ವಿವಿಧ ಭಾಷೆಗಳ ಕಾಮೆಂಟ್‌ಗಳನ್ನು ಭಾಷಾಂತರಿಸಲು ಅನುಮತಿಸುತ್ತದೆ. ಇನ್ನು ಈ ವಿಶೇಷ ಫೀಚರ್ ಐಒಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಯೂಟ್ಯೂಬ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಯೂಟ್ಯೂಬ್ ಇತ್ತೀಚೆಗೆ ಅಧಿಕೃತ ಟ್ವಿಟ್ ಮೂಲಕ ಈ ಫೀಚರ್‌ ಅನ್ನು ಘೋಷಿಸಿತು. ಆದರೆ ಕಾಮೆಂಟ್ ಅನುವಾದವು ಈಗ ಪ್ರಾಯೋಗಿಕ ಹಂತದಲ್ಲಿದೆ. ಈಗ, ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೋಗಳನ್ನು ಬ್ರೌಸ್ ಮಾಡುವಾಗ ನೀವು ಬಯಸಿದ ಭಾಷೆಯಲ್ಲದೇ ಬೇರೆ ಭಾಷೆಯಲ್ಲಿರುವ ಒಂದು ಕಾಮೆಂಟ್ ನಿಮಗೆ ಬಂದರೆ, ಯೂಟ್ಯೂಬ್ ಈಗ ಆ ಕಾಮೆಂಟ್‌ಗಾಗಿ ಹೊಸ (Translate to [your language]) ನಿಮ್ಮ ಭಾಷೆಗೆ ಭಾಷಾಂತರಿಸಿ ಬಟನ್ ಆಯ್ಕೆ ಅನ್ನು ತೋರಿಸಲಿದೆ

Best Mobiles in India

English summary
YouTube's automatic livestream captions will now be available for all video creators on the platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X