ಹಣ ಮಾಡುತ್ತಿದ್ದ ಯೂಟ್ಯೂಬರ್‌ಗಳಿಗೆ ಬಿಗ್ ಶಾಕ್ ನೀಡಿತು ಯೂಟ್ಯೂಬ್!

|

ಹಣ ಮಾಡುವ ಸಲುವಾಗಿ ಜನರ ದಾರಿತಪ್ಪಿಸುತ್ತಿದ್ದ ಯೂಟ್ಯೂಬರ್‌ಗಳಿಗೆ ಯುಟ್ಯೂಬ್ ಸಂಸ್ಥೆ ಬಿಗ್ ಶಾಕ್ ನೀಡಿದೆ. ಯುಟ್ಯೂಬ್ ಮಾಧ್ಯಮದಲ್ಲಿ ಅತಿರಂಜಿತ ಮತ್ತು ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ಯೂಟ್ಯೂಬ್ ಈಗ ಒಂದು ಘೋಷಣೆ ಮಾಡಿದೆ. ಈ ಮೂಲಕ ಇನ್ಮುಂದೆ ಒಳಸಂಚಿನ ಅಥವಾ ತಪ್ಪು ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ನೀಡುವ ವಿಡಿಯೋಗಳನ್ನು ಅದು ಇನ್ನು ಮುಂದೆ ತನ್ನ ಬಳಕೆದಾರರಿಗೆ ರೆಕಮಂಡ್ ಮಾಡುವುದಿಲ್ಲ ಎಂದು ಹೇಳಿದೆ.

ಹೌದು, ಒಳಸಂಚಿನ ಅಥವಾ ತಪ್ಪು ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ನೀಡುವ ವಿಡಿಯೋಗಳನ್ನು ಅದು ಇನ್ನು ಮುಂದೆ ತನ್ನ ಬಳಕೆದಾರರಿಗೆ ರೆಕಮಂಡ್ ಮಾಡುವುದಿಲ್ಲ. ಭೂಮಿ ಚಪ್ಪಟೆಯಾಗಿದೆ, ಚಂದ್ರನ ಮೇಲೆ ಮನುಷ್ಯ ನಡೆದೇ ಇಲ್ಲ, ಇದೊಂದು ಎಲೆಯನ್ನು ತಿಂದರೆ ಎಲ್ಲಾ ಕ್ಯಾನ್ಸರ್ ವಾಸಿಯಾಗುತ್ತದೆ, ಈ ಶಿಲ್ಪಕಲಾಕೃತಿ 50 ಸಾವಿರ ವರ್ಷ ಹಿಂದಿನದು ಮೊದಲಾದ ಅತಿರಂಜಿತ ವಿಡಿಯೋಗಳನ್ನು ಇನ್ನು ಮುಂದೆ ಯುಟ್ಯೂಬ್ ರೆಕಮಂಡ್ ಮಾಡುವುದಿಲ್ಲ ಎಂದು ಹೇಳಿದೆ.

ಹಣ ಮಾಡುತ್ತಿದ್ದ ಯೂಟ್ಯೂಬರ್‌ಗಳಿಗೆ ಬಿಗ್ ಶಾಕ್ ನೀಡಿತು ಯೂಟ್ಯೂಬ್!

ಇಲ್ಲಿಯವರೆಗೂ ಒಬ್ಬ ಬಳಕೆದಾರ ಒಂದು ವಿಡಿಯೋವನ್ನು ನೋಡಿದರೆ, ಅದನ್ನು ಹೋಲುವ ಇತರ ವಿಡಿಯೋಗಳನ್ನು ಯೂಟ್ಯೂಬ್ ಅವರಿಗೆ ರೆಕಮಂಡ್ ಮಾಡುತ್ತಿತ್ತು ಅಥವಾ ಬಲಭಾಗದ ಪಟ್ಟಿಯಲ್ಲಿ ನ್ಯೂಸ್ ಫೀಡ್ ರೀತಿ ಕಾಣಿಸಿಕೊಳ್ಳುವಂತೆ ಮಾಡುತ್ತಿತ್ತು. ಆದರೆ, ಇನ್ನು ಇಂತಹ ಗಾಳಿ ಸುದ್ದಿಯಂತಹ ಸುದ್ದಿಗಳ ಕುರಿತು ಯೂಟ್ಯೂಬ್ ಶಿಫರಸು ಮಾಡುವುದಿಲ್ಲ. ಇದರಿಂದಾಗಿ ಸುಳ್ಳು ಸುದ್ದಿಯು ಬೇಗನೆ ಹರಡುವ ಕಡಿಮೆಯಾಗುತ್ತದೆ ಎಂದು ಯೂಟ್ಯೂಬ್ ಹೇಳಿಕೊಂಡಿದೆ.

ಯೂಟ್ಯೂಬ್ ರೆಕಮೆಂಡ್ ಮಾಡದೇ ಇದ್ದರೂ ಅಂತಹ ವಿಡಿಯೋಗಳು ಟ್ಯೂಬ್ ನಲ್ಲಿ ಇದ್ದೇ ಇರುತ್ತವೆ ಮತ್ತು ಬಳಕೆದಾರರು ಅದನ್ನು ತಮ್ಮ ವಿವೇಚನೆಯಂತೆ ಆಯ್ದುಕೊಂಡು ನೋಡಬಹುದಾಗಿದ್ದು, ವೈಜ್ಞಾನಿಕ ಚಿಂತನೆಗೆ ಸ್ವಲ್ಪ ಮಟ್ಟಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಬಳಕೆದಾರರು ತಮ್ಮ ವಿವೇಚನೆಯನ್ನು ಉಪಯೋಗಿಸಿ ತಮಗೆ ಇಷ್ಟ ಬೆಳೆಸುವ ವಿಡಿಯೋ ಗಳನ್ನು ನೋಡಲು ಅನುವು ಮಾಡಿಕೊಡುತ್ತದೆ ಎಂದು ಯೂಟ್ಯೂಬ್ ಮಾಹಿತಿ ನೀಡಿದೆ.

ಹಣ ಮಾಡುತ್ತಿದ್ದ ಯೂಟ್ಯೂಬರ್‌ಗಳಿಗೆ ಬಿಗ್ ಶಾಕ್ ನೀಡಿತು ಯೂಟ್ಯೂಬ್!

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪುಂಖಾನುಪುಂಕವಾಗಿ ಬರುತ್ತಿರುವ ಆರೋಗ್ಯದ ಸಂಬಂಧಿಸಿದ ವಿಡಿಯೋಗಳು, ಶಕ್ತಿ ವರ್ಧನೆಯ ವಿಡಿಯೋಗಳು, ಪ್ರೀತಿಗೆ ಸಂಬಂಧಿಸಿದ ವಿಡಿಯೋಗಳು, ಇತಿಹಾಸದ ಫೋಟೊಗಳ ವಿಡಿಯೊಗಳು ಹಸಿ ಹಸಿ ಸುಳ್ಳುಗಳನ್ನು ಸಹ ಹೊತ್ತು ಬರುತ್ತಿವೆ. ಅಂತಹ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಸಹ ಅವಕಾಶ ಇದೆ, ಏಕೆಂದರೆ ಅದನ್ನು ಒಂದು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತದೆ ಆನ್ಲೈನ್ ಮಾಧ್ಯಮ ಯೂಟ್ಯೂಬ್.

Best Mobiles in India

English summary
YouTube will no longer recommend videos “claiming the earth is flat, or making blatantly false claims about historic events like 9/11. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X